ನ್ಯಾ.ಲೋಯಾ ಸಾವು ಪ್ರಕರಣ: ನಿಜವಾಗಿ ಹಗರಣ ನಡೆದಿದ್ದು ಎಲ್ಲಿ ?
ನ್ಯಾಯಮೂರ್ತಿ ಲೋಯಾ ಶಂಕಾಸ್ಪದ ಸಾವಿನ ತನಿಖೆ ಏಕೆ ಒಂದು ಹಗರಣವಾಗಿದೆ ಎಂದು ನಿಮಗೆ ತಿಳಿಯಬೇಕಿದ್ದರೆ ಇದನ್ನು ಓದಿ:
1.ಸೊಹ್ರಾಬುದ್ದೀನ್ ಎನ್‍ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ವಕೀಲರಾಗಿದ್ದವರೇ ಲೋಯಾ ಸಾವಿನ ತನಿಖೆ ನಿಲ್ಲಿಸಲು ಮಹಾರಾಷ್ಟ್ರ ಸರಕಾರದ ವಕೀಲರಾಗಿದ್ದಾರೆ.
2. ಪ್ರಮುಖ ಬಿಜೆಪಿ ನಾಯಕರೊಬ್ಬರಿಗೆ ಹತ್ತಿರವಾಗಿದ್ದ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟಿನಲ್ಲಿ ಪಿಐಎಲ್ ದಾಖಲಿಸಿದ್ದರೂ ಅಷ್ಟರೊಳಗಾಗಿ ತಾವು ದಾಖಲಿಸಿದ್ದ ಪಿಐಎಲ್ ಅಂತೆಕಂತೆಗಳ ಹಾಗೂ ಮ್ಯಾಗಝಿನ್ ಒಂದರ ಲೇಖನದ ಆಧಾರವೆಂದು ಅವರ ಅರಿವಿಗೆ ಬಂದು ವಿಚಾರಣೆ ವೇಳೆ ಸಾವಿನ ಬಗ್ಗೆ ತನಿಖೆಗೆ ಆಗ್ರಹಿಸುವ ಬದಲು ತನಿಖೆ ನಿಲ್ಲಿಸುವಂತೆ ಅಪೀಲು ಸಲ್ಲಿಸುವವರಾಗಿ ಬಿಟ್ಟಿದ್ದರು.
3. ಬಾಂಬೆ ಲಾಯರ್ಸ್ ಆಸೋಸಿಯೇಶನ್ ಬಾಂಬೆ ಹೈಕೋರ್ಟಿನಲ್ಲಿ ದಾಖಲಿಸಿದ್ದ ಪಿಐಎಲ್ ಅನ್ನು ರಿಜಿಸ್ಟ್ರಿ ಹಲವಾರು ದಿನಗಳ ಕಾಲ ಬಾಕಿಯಿರಿಸಲಾಗಿತ್ತಲ್ಲದೆ, ಈತನ್ಮಧ್ಯೆ ಸುಪ್ರೀಂ ಕೋರ್ಟಿನಲ್ಲಿ ದಾಖಲಿಸಲ್ಪಟ್ಟಿದ್ದ ಎರಡು ಪಿಐಎಲ್ ಗಳು ಕೂಡಲೇ ಸ್ವೀಕರಿಸಲ್ಪಟ್ಟ ಕಾರಣ ಬಾಂಬೆ ಲಾಯರ್ಸ್ ಅಸೋಸಿಯೇಶನ್ ಗೆ ತನ್ನ ದಾವೆಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸುವುದು ಬಿಟ್ಟರೆ ಅನ್ಯ ಮಾರ್ಗವಿರಲಿಲ್ಲ.
4. ಸುಪ್ರೀಂ ಕೋರ್ಟಿನ ನಾಲ್ಕು ಮಂದಿ ಅತ್ಯಂತ ಹಿರಿಯ ನ್ಯಾಯಾಧೀಶರುಗಳು ತಮ್ಮ ಅಭೂತಪೂರ್ವ ಪತ್ರಿಕಾಗೋಷ್ಠಿಯಲ್ಲಿ ಸುಪ್ರೀಂ ಕೋರ್ಟ್ ಕಾರ್ಯನಿರ್ವಹಣೆ ಹಾಗೂ ಪ್ರಕರಣಗಳನ್ನು ಅನುಕೂಲಕರ ಆದೇಶ ನೀಡುವ ಪೀಠಗಳಿಗೆ ಹಸ್ತಾಂತರಿಸುವ ಕುರಿತು ಆಕ್ಷೇಪ ಸಲ್ಲಿಸಿದ್ದರು.
5. ಮಹಾರಾಷ್ಟ್ರ ಸರಕಾರ ಪೊಲೀಸ್ ಅಧಿಕಾರಿಯೊಬ್ಬರ ಮುಖಾಂತರ `ರಹಸ್ಯ ತನಿಖೆ' ನಡೆಸಿ ಅದನ್ನು ಕೆಲವೇ ದಿನಗಳಲ್ಲಿ ಪೂರೈಸಿ ಈ ವರದಿಯನ್ನೇ ಸುಪ್ರೀಂ ಕೋರ್ಟ್ ಪ್ರಮುಖವಾಗಿ ಅವಲಂಬಿಸಿತ್ತಲ್ಲದೆ, ಅಫಿದಾವತ್ ನಲ್ಲಿ ತನಿಖಾ ವರದಿ ಅಥವಾ ಈ ತನಿಖೆ ನಡೆಸಿದ ಪೊಲೀಸ್ ಅಧಿಕಾರಿ ವಿಚಾರಣೆ ನಡೆಸಿದವರ ಹೇಳಿಕೆಗಳಿರಲಿಲ್ಲ. ಅವರೆಲ್ಲಾ ಯಾವುದೇ ಪ್ರಮಾಣ ಮಾಡದೆ ಹೇಳಿಕೆ ನೀಡಿದ್ದರು. ಹಾಗಾದರೆ ಇನ್ನು ಎಲ್ಲಾ ನ್ಯಾಯಾಲಯಗಳು ಈ ರೀತಿಯಾದ ತನಿಖೆಗಳ ವಿಚಾರಣೆ ಸಂದರ್ಭ ನೀಡಲಾದ ಹೇಳಿಕೆಗಳನ್ನು ಅವಲಂಬಿಸುವವೇ ?
6. ಪೊಲೀಸ್ ಅಧಿಕಾರಿ ವಿಚಾರಣೆಗೊಳಪಡಿಸಿದ ಯಾರನ್ನು ಕೂಡಾ ನ್ಯಾಯಾಲಯಕ್ಕೆ ಹಾಜರುಪಡಿಸಿ ಪಾಟೀ ಸವಾಲಿಗೆ ಒಡ್ಡಲಾಗಿಲ್ಲ. ಈ ಬಗ್ಗೆ ಬಾಂಬೆ ಲಾಯರ್ಸ್ ಅಸೋಸಿಯೇಶನ್ ತನ್ನ ವಕೀಲ ದುಷ್ಯಂತ್ ದವೆ ಮೂಲಕ ಮಾಡಿದ ಅಪೀಲುಗಳು ಫಲ ನೀಡಿಲ್ಲ.
7. ಅಪೀಲುದಾರರಿಗೆ ಪೋಸ್ಟ್ ಮಾರ್ಟಂ ಮತ್ತು ಇಸಿಜಿ ವರದಿಗಳನ್ನು ನಿರಾಕರಿಸಲಾಗಿತ್ತು.
8.ಅವರು ಬಾಂಬೆ ಹೈಕೋರ್ಟಿನ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಧೀಶರಾಗಿದ್ದರು ಎಂಬ ಒಂದೇ ಒಂದು ಕಾರಣಕ್ಕಾಗಿ ಸುಪ್ರೀಂಕೋರ್ಟಿಗೆ ಬಂದು ಪ್ರಮಾಣ ಮಾಡಿ ಹೇಳಿಕೆ ನೀಡದೇ ಇದ್ದವರ ಕೆಲ ಮಾತುಗಳನ್ನು ಸುಪ್ರೀಂ ಕೋರ್ಟ್ ಅವಲಂಬಿಸಿತ್ತು.
ನ್ಯಾ. ಲೊಯಾ ಅವರ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅಪೀಲನ್ನು ತಿರಸ್ಕರಿಸಿರುವುದು ಆಧುನಿಕ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಕರಾಳ ಗಳಿಗೆಯಾಗಿದೆ. ನಮ್ಮ ಇಡೀ ನ್ಯಾಯಾಂಗ ವ್ಯವಸ್ಥೆ ಒಂದು ಹಗರಣವೆಂಬಂತೆ ಕಾಣುತ್ತಿದೆ. ಎಲ್ಲಾ ಸ್ಥಾಪಿತ ನ್ಯಾಯಾಂಗ ಪ್ರಕ್ರಿಯೆಗಳನ್ನು ಒಬ್ಬ ವ್ಯಕ್ತಿಯನ್ನು ರಕ್ಷಿಸುವ ಸಲುವಾಗಿ ಬದಿಗಿರಿಸಿ ಈ ಮೂಲಕ ನ್ಯಾಯ ನಿರಾಕರಿಸಲಾಗಿದೆ.
ಜನರು ಈ ಸತ್ಯಕ್ಕೆ ಎಚ್ಚೆತ್ತುಕೊಳ್ಳದೇ ಇದ್ದರೆ ಈ ದೇಶಕ್ಕೆ ಯಾವುದೇ ಆಶಾವಾದ ಬಾಕಿಯಿರುವುದಿಲ್ಲ.