ವಿಶ್ವ ಭೂ ದಿನ

Update: 2018-04-21 18:56 GMT

1906: 10ನೇ ಒಲಿಂಪಿಕ್ಸ್ ಕ್ರೀಡೆಗಳು ಗ್ರೀಸ್‌ನ ರಾಜಧಾನಿ ಅಥೆನ್ಸ್‌ನಲ್ಲಿ ಆರಂಭಗೊಂಡವು.

1915: ಯುದ್ಧದಲ್ಲಿ ಮೊದಲ ಬಾರಿಗೆ ವಿಷಾನಿಲದ ಪ್ರಯೋಗ ನಡೆಯಿತು. ಪ್ರಥಮ ಮಹಾಯುದ್ಧದಲ್ಲಿ ಜರ್ಮನಿಯು ಕ್ಲೋರಿನ್ ಅನ್ನು ವಿಷಾನಿಲ ವಾಗಿ ತನ್ನ ವಿರೋಧಿ ರಾಷ್ಟ್ರದ ಮೇಲೆ ಉಪಯೋಗಿಸಿತು.

1926: ಪರ್ಷಿಯಾ, ಟರ್ಕಿ ಮತ್ತು ಅಫ್ಘಾನಿಸ್ತಾನ್ ಪರಸ್ಪರ ಭದ್ರತಾ ಒಪ್ಪಂದಗಳಿಗೆ ಸಹಿ ಹಾಕಿದವು.

1930: ಬಂಗಾಳದ ಚಿತ್ತಗಾಂಗ್ ಜಲಾಲಾಬಾದ್ ಬೆಟ್ಟ ಗುಡ್ಡಗಾಡು ಪ್ರದೇಶದಲ್ಲಿ ಸ್ವಾತಂತ್ರ ಸಂಗ್ರಾಮದ ಕ್ರಾಂತಿಕಾರಿಗಳು ಹಾಗೂ ಬ್ರಿಟಿಷ್ ಸೈನ್ಯದ ಮಧ್ಯೆ ನಡೆದ ಕದನದಲ್ಲಿ 80 ಬ್ರಿಟಿಷ್‌ಸೈನಿಕರು ಹಾಗೂ 12 ಕ್ರಾಂತಿಕಾರಿಗಳು ಸಾವನ್ನಪ್ಪಿದರು. ಇದನ್ನು ಚಿತ್ತಗಾಂಗ್ ಶಸ್ತ್ರ ಬಂಡಾಯ ಎಂದು ಕರೆಯಲಾಗಿದೆ. ಶಾಲಾ ಶಿಕ್ಷಕ ಸೂರ್ಯಸೇನ್ ಈ ದಂಗೆಯ ನೇತೃತ್ವ ವಹಿಸಿದ್ದರು.

1930: ಬ್ರಿಟನ್, ಅಮೆರಿಕ, ಮತ್ತು ಜಪಾನ್ ಲಂಡನ್‌ನಲ್ಲಿ ನೌಕಾ ಒಪ್ಪಂದಕ್ಕೆ ಸಹಿ ಹಾಕಿದವು.

1954: ಸೋವಿಯತ್ ರಶ್ಯಾ ಯುನೆಸ್ಕೋ ಸಂಘಟನೆಗೆ ಸೇರಿತು.

1967: ಗ್ರೀಸ್‌ನಲ್ಲಿ ಸೈನ್ಯಾಡಳಿತ ಜಾರಿಗೆ ಬಂದಿತು.

1970: ಇಂದು ವಿಶ್ವದೆಲ್ಲೆಡೆ ಭೂ ದಿನವನ್ನು ಆಚರಣೆ ಮಾಡಲಾಗುತ್ತದೆ. ಪರಿಸರ ಸಂರಕ್ಷಣೆ ಕುರಿತು ವಿಶ್ವದಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. 1970ರಲ್ಲಿ ಮೊದಲ ಬಾರಿಗೆ ಈ ದಿನವನ್ನು 193ಕ್ಕಿಂತ ಅಧಿಕ ರಾಷ್ಟ್ರಗಳು ಆಚರಿಸಿದವು. 2016ರಲ್ಲಿ ಅಮೆರಿಕ, ಚೀನಾ ಸೇರಿದಂತೆ ಸುಮಾರು 120 ರಾಷ್ಟ್ರಗಳು ಎ.22ರಂದು ಭೂ ದಿನದ ಅಂಗವಾಗಿ ಪ್ಯಾರಿಸ್‌ನಲ್ಲಿ ಹವಾಗುಣ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದವು.

1987: ಎಲ್‌ಟಿಟಿಇ ನೆಲೆಗಳ ಮೇಲೆ ವಾಯು ದಾಳಿ ನಡೆಸಿ ಶ್ರೀಲಂಕಾ ಸೇನೆಯು 100 ಜನ ಉಗ್ರರನ್ನು ಹತ್ಯೆಗೈಯಿತು.

1997: ಪೆರುವಿನ ಲಿಮಾದಲ್ಲಿ ಸೃಷ್ಟಿಯಾಗಿದ್ದ ಜಪಾನ್‌ನ ರಾಯಭಾರಿ ಒತ್ತೆಯಾಳುಗಳ ಬಿಕ್ಕಟ್ಟು ಈ ದಿನ ಅಂತ್ಯ ಕಂಡಿತು.

2004: ಉತ್ತರ ಕೊರಿಯದ ರ್ಯಾಂಗ್ಚನ್ ಎಂಬಲ್ಲಿ ಎರಡು ರೈಲುಗಳ ಮಧ್ಯೆ ಪರಸ್ಪರ ಢಿಕ್ಕಿ ಸಂಭವಿಸಿ 150 ಜನ ಮೃತಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ