ಚಿತ್ತಗಾಂಗ್ ಚಂಡಮಾರುತಕ್ಕೆ ಲಕ್ಷಾಂತರ ಬಲಿ
1769: ಉಗಿಯಂತ್ರ (ಸ್ಟೀಮ್ ಇಂಜಿನ್) ಕಂಡು ಹಿಡಿದ ಸ್ಕಾಟ್ಲೆಂಡ್ ಇಂಜಿನಿಯರ್, ರಸಾಯನ ಶಾಸ್ತ್ರಜ್ಞ ಜೇಮ್ಸ್ ವ್ಯಾಟ್‌ಗೆ ಹಕ್ಕುಸ್ವಾಮ್ಯ ನೀಡಲಾಯಿತು.
1853: ಸಿ/1853 ಗಿ1 ಹೆಸರಿನ ಧೂಮಕೇತು ಭೂಮಿಗರ ಕೇವಲ 0.0839 ಆಂಪೀರಿಕಲ್ ಯುನಿಟ್‌ನಷ್ಟು ಸಮೀಪಕ್ಕೆ ಬಂದ ಪ್ರಕರಣ ದಾಖಲಾಯಿತು.
1916: ರಾಜಧಾನಿ ಡಬ್ಲಿನ್‌ನಲ್ಲಿ ವಶಪಡಿಸಿಕೊಂಡಿದ್ದ ಅಂಚೆ ಕಚೇರಿಯನ್ನು ಬಿಟ್ಟುಕೊಡುವುದರ ಮೂಲಕ ಐರ್ಲೆಂಡ್‌ನ ಪ್ರಜಾಪ್ರಭುತ್ವವಾದಿಗಳು ನಡೆಸಿದ್ದ ಈಸ್ತರ್ ದಂಗೆಯನ್ನು ಸಂಪೂರ್ಣ ಕೈಬಿಟ್ಟರು.
1975: ಇಥಿಯೋಪಿಯ ತನ್ನ ದೇಶದ ಎಲ್ಲ ಭೂಮಿಯನ್ನು ರಾಷ್ಟ್ರೀಕರಣಗೊಳಿಸಿತು.
1985: ನಾಸಾದ 17ನೇ ಬಾಹ್ಯಾಕಾಶ ನೌಕೆ ಚಾಲೆಂಜರ್ 7 ಈ ದಿನ ಉಡಾವಣೆಗೊಂಡಿತು.
1986: ಅಮೆರಿಕದ ಲಾಸ್ ಎಂಜಲೀಸ್‌ನ ಕೇಂದ್ರ ಗ್ರಂಥಾಲಯದಲ್ಲಿ ಆಕಸ್ಮಿಕ ಬೆಂಕಿ ಬಿದ್ದು ಸುಮಾರು 8,00,000 ಪುಸ್ತಕಗಳು ಭಸ್ಮಗೊಂಡವು.
1991: ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಬೀಸಿದ ಪ್ರಬಲ, ಮಾರಣಾಂತಿಕ ಚಂಡಮಾರುತಕ್ಕೆ ಸುಮಾರು 1,38,000 ಜನರು ಬಲಿಯಾದ ವರದಿಯಾಗಿದೆ. ಗಂಟೆಗೆ 250 ಕಿ.ಮೀ. ವೇಗದಲ್ಲಿದ್ದ ಗಾಳಿಗೆ ಲಕ್ಷಾಂತರ ಜನರು ನಿರಾಶ್ರಿತರಾದರು.
1991: ಕ್ರೋಯೆಷಿಯಾದಿಂದ ಸ್ವಾತಂತ್ರ ಘೋಷಣೆ.
1997: ರಾಸಾಯನಿಕ ಆಯುಧಗಳ ಉತ್ಪಾದನೆ, ಸಂಗ್ರಹಣೆ ಹಾಗೂ ಬಳಕೆಯ ಮೇಲೆ ನಿರ್ಬಂಧ ಹೇರುವ ಅಂತರ್‌ರಾಷ್ಟ್ರೀಯ ರಾಸಾಯನಿಕ ಆಯುಧ ಸಮ್ಮೇಳನ 1993ರ ನಿರ್ಣಯಗಳು ಈ ದಿನ ಜಾರಿಗೆ ಬಂದವು.
2013: ಅಫ್ಘಾನಿಸ್ತಾನದ ಬಾಗ್ರಮ್ ಎಂಬಲ್ಲಿ ಬೋಯಿಂಗ್ 747 ವಿಮಾನ ಪತನಗೊಂಡ ಪರಿಣಾಮ 7 ಜನ ಸಾವನ್ನಪ್ಪಿದರು.
2005: ಲೆಬನಾನನ್ನು 29 ವರ್ಷಗಳ ಕಾಲ ತನ್ನ ವಶದಲ್ಲಿರಿಸಿಕೊಂಡಿದ್ದ ಸಿರಿಯ ಈ ದಿನ ಲೆಬನಾನ್‌ನಿಂದ ಕಾಲ್ಕಿತ್ತಿತು.
1848: ತಿರುವಾಂಕೂರ್ ರಾಜನ ಆಸ್ಥಾನದಲ್ಲಿದ್ದ ಖ್ಯಾತ ಕಲಾವಿದ ರಾಜಾ ರವಿವರ್ಮರ ಜನ್ಮದಿನ.
1936: ಖ್ಯಾತ ಪಾಶ್ಚಿಮಾತ್ಯ ಸಂಗೀತ ಸಂಯೋಜಕ ಝುಬಿನ್ ಮೆಹ್ತಾ ಜನ್ಮದಿನ.