ಮಾರ್ಕ್ಸ್ ಮತ್ತು ಮಾರ್ಕ್ಸ್ ವಾದ
ಮಾರ್ಕ್ಸ್‌ನ ಚಿಂತನೆಗಳನ್ನು ಒಂದು ಭೌತಿಕವಾದದ ಸೂತ್ರದಲ್ಲಿ ಮಾತ್ರ ಅಳೆಯುತ್ತ ಅದನ್ನು ನೇರವಾಗಿ ವರ್ಗ ಸಂಘರ್ಷಕ್ಕೆ ಅನ್ವಯಿಸಿಕೊಂಡು ಮಾಲಕ-ಕಾರ್ಮಿಕ ನಡುವಿನ ಹೋರಾಟಗಳಿಗೆ ಸೀಮಿತಗೊಳಿಸಿಕೊಂಡಿರುವುದು ನಮ್ಮ ಎಡಪಂಥೀಯರ ಅದರಲ್ಲೂ ಕಮ್ಯುನಿಸ್ಟ್ ಪಕ್ಷಗಳ ಅರಿವಿನ ಮಿತಿಯನ್ನು ತೋರಿಸುತ್ತದೆ. ಮನುಷ್ಯನ ವರ್ತನೆಗಳು ಐಹಿಕ ಪ್ರವೃತ್ತಿ ಯದಾಗಿರುತ್ತದೆ, ಪ್ರಾಪಂಚಿಕ ಹಿತಾಸಕ್ತಿ ಯನ್ನು ಮಾತ್ರ ಅವಲಂಬಿಸಿರುತ್ತದೆ ಎಂದು ಮಾರ್ಕ್ಸ್ ವಾದವನ್ನು ಸರಳೀಕರಿಸಿಕೊಂಡಿರುವುದರ ಅಪಾಯವನ್ನು ಇಂದು ನಾವು ನೋಡುತ್ತಿದ್ದೇವೆ.
There is little difference in people, but that little difference makes a big difference. The little difference is attitude and big difference is whether it is positive or negative -W.Clement stone
ಗ್ರಾಮ್ಸಿ
ವೋಲ್ಟೆರ್
ಈ ಮೇ 5, 2018ಕ್ಕೆ ಕಾರ್ಲ್‌ಮಾರ್ಕ್ಸ್‌ಗೆ 200 ವರ್ಷ ತುಂಬಿದೆ. ಸಮತಾ ವಾದ, ಸಮಾಜವಾದ, ಸಮತೆಯ ಹಣತೆ ಹಚ್ಚಿದ ಮಾರ್ಕ್ಸ್‌ನನ್ನು ಇಂದು ಎರಡು ಶತಮಾನಗಳ ನಂತರ ಹೇಗೆ ವಿಶ್ಲೇಷಿಸುವುದು? ಈ ಕಾಲಘಟ್ಟದಲ್ಲಿ ಜಾಗತಿಕ ರಾಜಕೀಯ- ಆರ್ಥಿಕ ವಲಯಗಳಲ್ಲಿ ಮಾರ್ಕ್ಸ್ ವಾದವು ತುಂಬಾ ಪ್ರಭಾವ ಬೀರಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಮಾರ್ಕ್ಸಿಸಂ ಪೂರ್ವ ದೇಶಗಳ ರಾಜಕೀಯ ಚಿತ್ರಣವನ್ನೇ ಬದಲಿಸಿದೆ. ಅಂತರ್‌ರಾಷ್ಟ್ರೀಯ ಅಕಾಡಮಿಕ್, ಬೌದ್ಧಿಕ ವಲಯವು ಎಡಪಂಥೀಯ ಎಂದೇ ಪ್ರತ್ಯೇಕಗೊಂಡು ಮಾರ್ಕ್ಸ್‌ವಾದವನ್ನು ಜೀವನ್ಮರಣದ ಪ್ರಶ್ನೆ ಯನ್ನಾಗಿಸಿಕೊಂಡಿದೆ. ಇದು ಎಷ್ಟರ ಮಟ್ಟಿಗೆ ಸಫಲಗೊಂಡಿದೆ ಎನ್ನುವುದು ಚರ್ಚೆಗೆ ಒಳಪಡಬೇಕು. ಇಂಡಿಯಾದ ಕಮ್ಯುನಿಸ್ಟರು ಮಾರ್ಕ್ಸ್‌ನನ್ನು ಇಲ್ಲಿನ ಬದುಕಿಗೆ, ಸಮಾಜೋ-ಸಾಂಸ್ಕೃತಿಕ-ಆರ್ಥಿಕ ವ್ಯವಸ್ಥೆಗೆ, ಜಾತಿಪದ್ಧತಿಗೆ ಪ್ರಸ್ತುತಗೊಳಿಸಿಕೊಳ್ಳುವಲ್ಲಿ ವಿಫಲ ಗೊಂಡಿದ್ದಾರೆ ಎಂದು ಚರ್ಚಿಸುವುದು ಸಹ ಅವಶ್ಯಕವಾಗಿದೆ. ಪ್ರೊ.ಅಮರ್ತ್ಯ ಸೇನ್ ಅವರು ಮಾರ್ಕ್ಸ್‌ನದ್ದು ಅಸಲು ರೂಪದ ಸ್ವೋಪಜ್ಞ ಚಿಂತನೆಗಳು ಎನ್ನುವ ಕಾರಣಕ್ಕೆ ಮಾತ್ರ ಮಾರ್ಕ್ಸಿಸಂ ವಿಶ್ಲೇಷಣೆ ಮಾಡಬೇಕಿಲ್ಲ. ಆದರೆ ಇದೇ ಮಾರ್ಕ್ಸ್ ವಾದದ ಪರಂಪರೆಯಲ್ಲಿ, ಮಾರ್ಕ್ಸಿಸಂನ ಮೂಸೆಯಲ್ಲಿ ಗ್ರಾಮ್ಶಿ, ರೋಸ ಲುಕ್ಸೆಂಬರ್ಗ್, ಸಾರ್ತೆ, ಬ್ರೆಕ್ಟ್, ಪಿಯೆರೋ ಶ್ರಪ್ಫ, ಎರಿಕ್ ಹೋಬ್ಸವರಿಯರಂತಹ ಅಸಾಧಾರಣ ಇತಿಹಾಸಕಾರರು, ಚಿಂತಕರು, ಸಮಾಜಶಾಸ್ತ್ರಜ್ಞರು ರೂಪುಗೊಂಡಿದ್ದಾರೆ. ಮಾರ್ಕ್ಸ್ ನ ಚಿಂತನೆಗಳನ್ನು ಅರಿಯಲು ನಾವು ಮಾರ್ಕ್ಸ್‌ವಾದಿಗಳಾಗುವ ಅವಶ್ಯಕತೆ ಇಲ್ಲ ಎಂದು ಬರೆಯುತ್ತಾರೆ
ಟೆರಿ ಈಗಲ್ಟನ್ ಮಾರ್ಕ್ಸ್‌ವಾದದ ಕುರಿತಾಗಿ ಪ್ರಮುಖ ಟೀಕೆಯೆಂದರೆ ಮಾರ್ಕ್ಸಿಸಂ ಒಂದು ನಿರ್ದಿಷ್ಟ ದೃಷ್ಟಿಕೋನಕ್ಕೆ ಮಾತ್ರ ಬದ್ಧವಾಗಿರುತ್ತದೆ. ಅದು ಹೆಣ್ಣು ಮತ್ತು ಗಂಡನ್ನು ಇತಿಹಾಸದ ಒಂದು ಕೈಗೊಂಬೆಯನ್ನಾಗಿ ಮಾತ್ರ ಪರಿಭಾವಿಸುತ್ತದೆ ಮತ್ತು ಹೀಗೆ ಪರಿಭಾವಿಸುವ ಮೂಲಕ ಅವರ ಸ್ವಾತಂತ್ರದ, ವೈಯಕ್ತಿಕ ನೆಲೆಗಳ ಬದುಕನ್ನು ನಿರಾಕರಿಸುತ್ತದೆ. ಮಾನವ ಸಂತತಿಯು ಪ್ರತಿರೋಧಿಸಲಾರದಷ್ಟು ಕಟುವಾದ, ಕನಿಕರವಿಲ್ಲದ, ಅಪಾರವಾದ ಶಕ್ತಿಯನ್ನುಳ್ಳ ಒಂದು ಬಗೆಯ ಉಗ್ರವಾದ ಕಟ್ಟುನಿಟ್ಟ ನ್ನೊಳಗೊಂಡ ಇತಿಹಾಸದ ಕಾನೂನುಗಳನ್ನು ಮಾರ್ಕ್ಸ್ ನಂಬುತ್ತಾನೆ. ಆತನ ಪ್ರಕಾರ ಫ್ಯೂಡಲಿಸಂ ವ್ಯವಸ್ಥೆಯು ಬಂಡವಾಳಶಾಹಿಯ ಹುಟ್ಟಿಗೆ ಕಾರಣವಾಗುತ್ತದೆ, ಬಂಡವಾಳಶಾಹಿಯು ಮುಂದೆ ಸಮಾಜವಾದಕ್ಕೆ ದಾರಿ ಮಾಡಿಕೊಡುತ್ತದೆ. ಇತಿಹಾಸ ಕುರಿತಾದ ಮಾರ್ಕ್ಸ್‌ನ ಸಿದ್ಧಾಂತವು ವಿಧಿನಿಯಮ ನಂಬುಗೆಯ ಸೆಕ್ಯುಲರ್ ಅವತರಿಣಿಕೆಯಷ್ಟೆ. ಇದು ಮಾರ್ಕ್ಸ್‌ವಾದಿ ರಾಜ್ಯಗಳಂತೆಯೇ ಮನುಷ್ಯನ ಘನತೆ ಮತ್ತು ಸ್ವಾತಂತ್ರಕ್ಕೆ ಸದಾ ವಿರೋಧವಾಗಿರುತ್ತದೆ. ಎಂದು ಬರೆಯುತ್ತಾನೆ. ಮುಂದುವರಿದು ಟೆರಿ ಮಾರ್ಕ್ಸ್‌ವಾದವು ಕ್ರಾಂತಿಕಾರಿ ಸಿದ್ಧಾಂತ ವಂತೂ ಅಲ್ಲ. ಮಾರ್ಕ್ಸ್ ಸಮಾಜವಾದದ, ಕಮ್ಯುನಿಸಂನ ಹರಿಕಾರ ನಂತೂ ಅಲ್ಲವೇ ಅಲ್ಲ. ಮಾರ್ಕ್ಸ್ ಉದಾರವಾದಿಯಾಗಿದ್ದ, ಪ್ರಾರಂಭದ ದಿನಗಳಲ್ಲಿ ಯುರೋಪ್‌ನ ರಾಷ್ಟ್ರಗಳಲ್ಲಿನ ದುಡಿಯುವ ವರ್ಗಗಳ ಚಳವಳಿಗಳಾಗಲೇ ಸಮಾಜವಾದಿ ಚಿಂತನೆಗಳಿಗೆ ಒಗ್ಗಿಕೊಳ್ಳಲಾರಂಭಿ ಸಿದ್ದವು. ತಾನು ಸಮಾಜವಾದದ ಸಿದ್ಧಾಂತವನ್ನು ಬಿತ್ತಿದವನೆಂಬುದನ್ನು ಸ್ವತಃ ಮಾರ್ಕ್ಸ್‌ನೇ ನಿರಾಕರಿಸುತ್ತಾನೆ. ಆದರೆ ಮಾರ್ಕ್ಸ್ ಈ ಸಮಾಜ ವಾದ ಸಿದ್ಧಾಂತವನ್ನು ಮರು ರೂಪಿಸಿದ್ದಂತೂ ನಿಜ. ಮಾರ್ಕ್ಸ್‌ವಾದವು ಬಂಡವಾಳಶಾಹಿಯ ಬಲು ದೊಡ್ಡ ಟೀಕಾಕಾರ ಮತ್ತು ಬಂಡವಾಳ ಶಾಹಿಯ ಒಪ್ಪಿತ ಸಂಸ್ಕೃತಿಗೆ ಈ ಮಾರ್ಕ್ಸ್‌ವಾದವು ವಿರೋಧ ನೆಲೆಯ ಮತ್ತೊಂದು ಪ್ರತಿಸಂಸ್ಕೃತಿಯಾಗಿಯೇ ರೂಪಿತಗೊಂಡಿದೆ. ಎಲ್ಲಿಯವರೆಗೆ ಬಂಡವಾಳಶಾಹಿಯ ಸಂಸ್ಕೃತಿ ಇರುತ್ತದೆಯೋ ಅಲ್ಲಿಯವರೆಗೆ ಮಾರ್ಕ್ಸ್ ವಾದವೂ ಪ್ರಚಲಿತವಾಗಿರುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಮಾರ್ಕ್ಸ್‌ನ ವಿಮುಖನೀತಿಗಳು ಹೆಗೆಲ್‌ನಿಂದ ಪ್ರಭಾವಗೊಂಡಿದ್ದವು. ಸಹಕಾರ ತತ್ವದಡಿ ನಿರ್ಮಿತಗೊಳ್ಳುವ ಸಮಾಜವು ಶೋಷಣೆಯಿಂದ ಮುಕ್ತಗೊಂಡು ಸ್ವಾವಲಂಬನೆಯನ್ನು ಸಾಧಿಸಲು ಕ್ರಾಂತಿಕಾರಿ ಮಾರ್ಗ ವನ್ನು ಆರಿಸಿಕೊಳ್ಳುತ್ತದೆ ಎಂದು ಮಾರ್ಕ್ಸ್ ಪ್ರತಿಪಾದಿಸಿದ್ದ. ಒಕ್ಕೂಟ ವ್ಯವಸ್ಥೆಯಲ್ಲಿ ಆರ್ಥಿಕ ಪರಿಸ್ಥಿತಿಯೇ ಜೀವನದ ನಿರ್ಧಾರಕ ಅಂಶವಾಗಿ ರುತ್ತದೆ ಮತ್ತು ಇದಕ್ಕೆ ಪೂರಕವಾಗಿ ಇತಿಹಾಸದುದ್ದಕ್ಕೂ ಉತ್ಪಾದನಾ ಪದ್ಧತಿಗಳು ಬದಲಾವಣೆಗೊಳ್ಳಲ್ಪಡುತ್ತಿರುತ್ತವೆ ಎಂಬುದು ಮಾರ್ಕ್ಸ್‌ನ ಎರಡು ಪ್ರಮುಖ ಚಿಂತನೆಗಳು ಸಹ ಆತ ಅವಿಷ್ಕಾರ ಮಾಡಿದ್ದಲ್ಲ. ಅವು ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದ್ದವು. ಹಾಗಿದ್ದರೆ ಮಾರ್ಕ್ಸಿಸಂನ ವೈಶಿಷ್ಟತೆ ಇರುವುದು ವರ್ಗಕ್ಕಿಂತಲೂ ವರ್ಗ ಹೋರಾಟ ಮುಖ್ಯ ಎನ್ನುವ ನೀತಿಯಲ್ಲೇ? ಆದರೆ ಬಹಶಃ ಇದು ಕೂಡ ಹಳೆಯದು. ಉದಾಹರಣೆಗೆ ಒಲಿವರ್ ಗೋಲ್ಡ್ ಸ್ಮಿತ್‌ನ ಪಾಳುಬಿದ್ದ ಹಳ್ಳಿಯ ಕವನದಸಾಲುಗಳಲ್ಲಿ, ಜಾನ್ ಮಿಲ್ಟನ್‌ನ ಕಾಮೂಸ್ ಪದ್ಯದಲ್ಲಿ, ಶೇಕ್ಸಪಿಯರ್‌ನ ಕಿಂಗ್ ಲಿಯರ್ ನಾಟಕದಲ್ಲಿ ವರ್ಗ ಹೋರಾಟದ ಮಾತುಗಳು ಕಾಣಿಸಿಕೊ ಳ್ಳುತ್ತವೆ. ಬಡವರ ರಕ್ತವನ್ನು ಬಸಿದು ಸೌಧವನ್ನು ಕಟ್ಟಿದ ಜಮೀನ್ದಾರನ ಆಸ್ತಿಯೇ ಸಾಮಾಜಿಕ ಸಂಘರ್ಷದ ಕೇಂದ್ರವಾಗುತ್ತದೆ ಎಂದು ವಾಲ್ಟೇರ್ ಹೇಳುತ್ತಾನೆ. ಆದರೆ ಪ್ರಮುಖವಾದ ವ್ಯತ್ಯಾಸವೆಂದರೆ ಸಾವಯವವಾದ ಸಾಮೂಹಿಕ ಒಗ್ಗಟ್ಟಿನಲ್ಲಿ ಮಾನವ ನಾಗರಿ ಕತೆಯು ರೂಪುಗೊಳ್ಳುತ್ತದೆ ಎಂದು ಅನೇಕ ಸಾಮಾಜಿಕ ಚಿಂತಕರು ಪರಿಭಾ ವಿಸಿದರೆ ಮಾರ್ಕ್ಸ್ ಸಾಮೂಹಿಕ ಗುಂಪಿನ ಭಿನ್ನತೆಯಲ್ಲಿ ನಾಗರಿಕತೆಯುರೂಪುಗೊಳ್ಳುತ್ತದೆ ಎಂದು ಪ್ರತಿಪಾದಿ ಸುತ್ತಾನೆ. ಬಂಡವಾಳಗಾರನು ದುಡಿ ಯುವ ವರ್ಗಗಳ ದಿನಗೂಲಿಯನ್ನು ಕನಿಷ್ಠ ಮಟ್ಟದಲ್ಲಿ ಮುಂದುವರಿಸಿ ತನ್ನ ವ್ಯಾಪಾರದ ಹಿತಾಸಕ್ತಿಗಳನ್ನು ಮೇಲ್ಮಟ್ಟ ಕ್ಕೇರಿಸಿಕೊಳ್ಳಲು ಹವಣಿಸುತ್ತಾನೆ ಎನ್ನುವುದು ಮಾರ್ಕ್ಸ್‌ನ ವಾದ ಎಂದು ಬರೆಯುತ್ತಾನೆ.
Theses on Feuerbach’ನಲ್ಲಿ ತರುಣ ಮಾರ್ಕ್ಸ್‌ಮನುಷ್ಯರು ವ್ಯವಸ್ಥೆಯ, ಸಂದರ್ಭಗಳ, ಪಾಲನೆ ಮತ್ತು ಪೋಷಣೆಯ ಉತ್ಪನ್ನಗಳು ಹಾಗೂ ಅದರ ಶಿಶುಗಳು ಎನ್ನುವ ಜಡವಾದ ಭೌತಿಕವಾದದ ತತ್ವಗಳು ಈಗ ಕೊಂಚ ಬದಲಾಗಿ ಮನುಷ್ಯರು ಬೇರೊಂದು ವ್ಯವಸ್ಥೆಯ,ಬದಲಾವಣೆಗೊಂಡ ಪೋಷಣೆಯ ನೀತಿಗಳ ಉತ್ಪನ್ನಗಳು ಎಂದು ಹೇಳು ತ್ತಿದ್ದಾರೆ. ಆದರೆ ಇವರು ಮರೆತಿರುವುದೇನೆಂದರೆ ಈಗ ಮನುಷ್ಯರು ಈ ವ್ಯವಸ್ಥೆಯನ್ನು, ಸಂದರ್ಭಗಳನ್ನು ಬದಲಾಯಿಸುತ್ತಾರೆ, ಮತ್ತು ಶಿಕ್ಷಕನಿಗೆ ಶಿಕ್ಷಣ ಕೊಡುವುದು ಆವಶ್ಯಕವಾಗಿದೆ (ಮಾರ್ಕ್ಸ್ ಮತ್ತು ಎಂಗೆಲ್ಸ್,1978:144) ಎಂದು ಹೇಳುತ್ತಾನೆ. ಇದು ಬಹಳ ಮುಖ್ಯ.
ಆದರೆ ಮಾರ್ಕ್ಸ್‌ನ ಚಿಂತನೆಗಳನ್ನು ಒಂದು ಭೌತಿಕವಾದದ ಸೂತ್ರ ದಲ್ಲಿ ಮಾತ್ರ ಅಳೆಯುತ್ತ ಅದನ್ನು ನೇರವಾಗಿ ವರ್ಗ ಸಂಘರ್ಷಕ್ಕೆ ಅನ್ವಯಿಸಿಕೊಂಡು ಮಾಲಕ-ಕಾರ್ಮಿಕ ನಡುವಿನ ಹೋರಾಟಗಳಿಗೆ ಸೀಮಿತಗೊಳಿಸಿಕೊಂಡಿರುವುದು ನಮ್ಮ ಎಡಪಂಥೀಯರ ಅದರಲ್ಲೂ ಕಮ್ಯುನಿಸ್ಟ್ ಪಕ್ಷಗಳ ಅರಿವಿನ ಮಿತಿಯನ್ನು ತೋರಿಸುತ್ತದೆ. ಮನುಷ್ಯನ ವರ್ತನೆಗಳು ಐಹಿಕ ಪ್ರವೃತ್ತಿಯ ದಾಗಿರುತ್ತದೆ, ಪ್ರಾಪಂಚಿಕ ಹಿತಾಸಕ್ತಿ ಯನ್ನು ಮಾತ್ರ ಅವಲಂಬಿಸಿರುತ್ತದೆ ಎಂದು ಮಾರ್ಕ್ಸ್‌ವಾದವನ್ನು ಸರಳೀಕ ರಿಸಿಕೊಂಡಿರುವುದರ ಅಪಾಯವನ್ನು ಇಂದು ನಾವು ನೋಡುತ್ತಿದ್ದೇವೆ. ಅಂಬೇ ಡ್ಕರ್ ಅವರು ಮಾರ್ಕ್ಸ್‌ನ ಶ್ರಮಿಕರ ವಿಭಜನೆ ಯನ್ನು ಅರ್ಧಸತ್ಯ ಎಂದು ಕರೆದು ಅದು ಜಾತಿ ಪದ್ಧತಿ ಯ ಭಾರತದಲ್ಲಿ ಶ್ರಮಿಕರ ವಿಭಜನೆ ಎಂದು ವಿವರಿಸಿದರು. ಜಾತಿ ಪದ್ಧತಿಯನ್ನು ಕರಾರುವಾಕ್ಕಾಗಿ ಅರಿಯದಿರುವುದು ನಮ್ಮ ಎಡ ಪಕ್ಷಗಳ ಒಂದು ದೊಡ್ಡ ಮಿತಿಯೇ ಸರಿ. ನಿಜಕ್ಕೂ ಹೇಳಬೇಕೆಂದರೆ ಇಲ್ಲಿನ ಕಮ್ಯುನಿಸ್ಟ್ ಪಕ್ಷವು ಇಂಡಿಯಾದಲ್ಲಿ ಜಾತಿ ಪದ್ಧತಿ ಎನ್ನುವುದು ಇದೆ ಎನ್ನುವುದನ್ನು ಒಪ್ಪಿಕೊಂಡು ಮೂವತ್ನಾಲ್ಕು ವರ್ಷಗಳಾದವಷ್ಟೆ ಎಂದು ಲೇಖಕರು, ಪತ್ರಕರ್ತರು ಅಭಿಪ್ರಾಯ ಪಡುತ್ತಾರೆ. ವರ್ಷಗಳು ಹಿಂದು ಮುಂದಾದರೂ ಕಡೆಗೆ ಆ ಅಭಿಪ್ರಾಯ ಮಾತ್ರ ನಿಜ. ಎಲ್ಲಾ ಇತಿಹಾಸ ವೂ ವರ್ಗ ಸಂಘರ್ಷಗಳ ಇತಿಹಾಸವಾಗಿರುತ್ತದೆ ಎಂದು ಹೇಳಿದ ಮಾರ್ಕ್ಸ್ ನ ಮಾತಿನ ಅರ್ಥ ಇತಿಹಾಸವೆಲ್ಲವೂ ವರ್ಗ ಸಂಘರ್ಷವೇ ಎಂದಲ್ಲ, ಬದಲಾಗಿ ಮಾನವ ಇತಿಹಾಸದಲ್ಲಿ ವರ್ಗ ಸಂಘರ್ಷವೂ ಒಂದು ಪ್ರಮುಖ ಭಾಗವಾಗಿರುತ್ತದೆ ಎಂದರ್ಥ. ಸಂಪತ್ತು ಮತ್ತು ಶಕ್ತಿಯ ಅಸಮಾನ ಹಂಚಿಕೆಯನ್ನುಳ್ಳ ಸಮಾಜವು ಅನೈತಿಕ ಎಂದು ಮಾರ್ಕ್ಸ್ ದೃಢವಾಗಿ ನಂಬಿದ್ದ. ಇಂಡಿಯಾದ ಸಂದರ್ಭದಲ್ಲಿ ಆ ಅಸಮಾನತೆಯೆಂದರೆ ಜಾತಿ ಪದ್ಧತಿ ಮತ್ತು ವರ್ಣಾಶ್ರಮ ವ್ಯವಸ್ಥೆ. ಜಮೀನ್ದಾರನ ಬಳಿ ಜೀತಕ್ಕಿರುವ ವ್ಯಕ್ತಿ ಕೇವಲ ಬಡವ ಮಾತ್ರವಲ್ಲ ಜೊತೆಗೆ ದಮನಿತ ಜಾತಿಗೆ ಸೇರಿದವನಾಗಿರುತ್ತಾನೆ. ಆದರೆ ಇಂಡಿಯಾ ಸಮಾಜದ, ಜಾತಿ ವ್ಯವಸ್ಥೆಯ ಸಂಕೀರ್ಣ ಸ್ವರೂಪವನ್ನು, ವಾಸ್ತವವನ್ನು, ಜಾತಿ ಪದ್ಧತಿಯ ಕರಾಳತೆಯನ್ನು ನಮ್ಮ ಕಮ್ಯುನಿಸ್ಟರು ಅರಿಯದೇ ಹೋದರು ಮತ್ತು ಅರಿತುಕೊಂಡವರು ಅದನ್ನು ನಿರ್ಲಕ್ಷಿಸಿದರು. ತಮ್ಮ ಪಕ್ಷಗಳಲ್ಲಿ ಸದಸ್ಯರನ್ನು ನಾಮಕರಣ ಮಾಡುವಾಗ, ನಾಯಕ ರನ್ನು ಆರಿಸುವಾಗ ಸಾಮಾಜಿಕ ನ್ಯಾಯದ ಮೀಸಲಾತಿಯನ್ನು ಪರಿಗಣಿಸಲೇ ಇಲ್ಲ. ಹೀಗಾಗಿ ಅನೇಕ ದಶಕಗಳ ಕಾಲ ಬ್ರಾಹ್ಮಣರೇ ಎಡಪಂಥೀಯ ಚಳವಳಿ ಗಳ ನೇತೃತ್ವ ವಹಿಸಿರುವುದು ಸಾಮಾನ್ಯ ಸಂಗತಿಯಾಗಿತ್ತು. ಸಾಮಾಜಿಕ ನ್ಯಾಯ ದ ಚಳವಳಿಯ ಸಂದರ್ಭದಲ್ಲಿ ಇದು ಟೀಕೆಗೆ ಒಳಗಾಗಿದ್ದು ಸಹಜ ಮತ್ತು ನ್ಯಾಯಯುತವಾಗಿತ್ತು. ಇದಕ್ಕೆ ಮೂಲಭೂತ ಕಾರಣವೇನೆಂದರೆ ಮಾರ್ಕ್ಸ್ ಸಿದ್ಧಾಂತವನ್ನು ಗ್ರಹಿಸುವ ಕ್ರಮದಲ್ಲಿ, ಇಂಡಿಯಾದ ಜಾತಿ ಆಧಾ ರಿತ ಪ್ರತ್ಯೇಕತೆ ಮತ್ತು ತಾರತಮ್ಯದ ನೆಲೆಯಲ್ಲಿ ಮಾರ್ಕ್ಸ್‌ವಾದವನ್ನು ವ್ಯಕ್ತಿಪ್ರಜ್ಞೆ ಮತ್ತು ಸಾಮಾಜಿಕತೆಯನ್ನು ಇಲ್ಲಿನ ಶ್ರೇಣೀಕೃತ ವ್ಯವಸ್ಥೆಗೆ ಅನ್ವಯಿಸಿ ಹೋರಾಟ ಗಳನ್ನು ಕಟ್ಟುವುದರಲ್ಲಿ ನಮ್ಮ ಕಮ್ಯುನಿಸ್ಟ್ ಪಕ್ಷದವರು ತುಂಬಾ ಮುಗ್ಧರಾಗಿ ವರ್ತಿಸಿದರು ಮತ್ತು ಅದನ್ನು ಪ್ರಾತಿನಿಧಿಕವಾಗಿ ತೆಗೆದುಕೊಳ್ಳಲೇ ಇಲ್ಲ ಎಂದೆನಿಸುತ್ತದೆ.
ವರ್ಗಗಳಲ್ಲಿಯೂ ಜಾತಿಗಳಿರುತ್ತವೆ, ಅವು ಅಸಮಾನತೆಯ ನೆಲೆಯಲ್ಲಿರುತ್ತವೆ, ಇಲ್ಲಿ ಜಾತಿ ಆಧಾರಿತ ಶ್ರೇಷ್ಠತೆಯ ಪ್ರಶ್ನೆ ಬಂದಾಗಇದೇ ದುಡಿಯುವ ವರ್ಗಗಳು ಪ್ರೊಲೆ ಟರಿಯೇಟ್‌ನ ಸಿದ್ಧಾಂತಕ್ಕೆ antithesis ಆಗಿ ವರ್ತಿಸಲು ಶುರು ಮಾಡುತ್ತಾರೆ. ವರ್ಗವನ್ನಾ ಧರಿಸಿ ಕಟ್ಟಿದ ಯೂನಿಯನ್ನಿನ ಒಳಗೆ ವರ್ಣಾಶ್ರಮದ ಶ್ರೇಣಿಕೃತ ವ್ಯವಸ್ಥೆರೂಪುಗೊಂಡಿರುತ್ತದೆ, ಇಲ್ಲಿ ಮೇಲ್ಜಾತಿ ಯ ಕಾರ್ಮಿಕರು ಜಾತಿಯ ಪ್ರಶ್ನೆ ಬಂದಾಗ ಇವರು ತಮ್ಮ ತಳ ಸಮುದಾಯ ಗಳ ಕಾಮ್ರೇಡ್‌ಗಳನ್ನೂ ಧಿಕ್ಕರಿಸಿ ಜಾತಿಪದ್ಧತಿಗೆ ಮಣೆ ಹಾಕುತ್ತಾರೆ ಎನ್ನುವುದು ವಾಸ್ತವ. ಇದು ಇತಿಹಾಸವೂ ಹೌದು ಮತ್ತು ವರ್ತಮಾನವೂ ಹೌದು. ಆದರೆ ಈ ಜಾತಿ ಪದ್ಧತಿಯ ಈ ಕರಾಳ ವಾಸ್ತವಕ್ಕೆ ಕುರು ಡಾಗಿ ಕೇವಲ ಏಕರೂಪಿಯಾಗಿ ವರ್ಗಗಳನ್ನು ಮತ್ತು ವರ್ಗ ಸಂಘರ್ಷಗಳನ್ನು ತಮ್ಮ ಮೂಲಭೂತ ಹೋರಾಟವನ್ನಾಗಿ ಮಾಡಿಕೊಂಡರು ಇಂಡಿಯಾದ ಕಮ್ಯುನಿಸ್ಟರು.
ಮತ್ತೊಂದು ಕಡೆ ಕಮ್ಯುನಿಸ್ಟ್ ಪಕ್ಷದ ಯೂನಿಯನ್‌ನ ಅಡಿಯಲ್ಲಿ ಲಕ್ಷಾಂತರ ಕಾರ್ಮಿಕರು ಸದಸ್ಯರಾಗಿದ್ದಾರೆ. ಆದರೆ ಬಹುಪಾಲು ಕಾರ್ಮಿ ಕರಿಗೆ ಕಮ್ಯುನಿಸ್ಟ್ ಪಕ್ಷದ ಬಗ್ಗೆ ಇರುವ ಒಲವು ಮತ್ತು ಸಂಬಂಧಗಳು ಕೇವಲ ತಮ್ಮ ವೈಯಕ್ತಿಕ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಷ್ಟರ ಮಟ್ಟಿಗೆ ಅಷ್ಟೆ. ಆದರೆ ಕಮ್ಯುನಿಸ್ಟರ ಎಡಪಂಥೀಯ ಚಿಂತನೆಗಳಿಗೆ, ಸೆಕ್ಯುಲರ್ ತತ್ವಗಳಿಗೆ ಮುಕ್ಕಾಲು ಪಾಲು ಕಾರ್ಮಿಕರು ಯಾವುದೇ ಪ್ರಾಮುಖ್ಯತೆಯನ್ನೇ ನೀಡುವುದಿಲ್ಲ. ನಮ್ಮ ಕಮ್ಯುನಿಸ್ಟ್ ಪಕ್ಷಗಳು ಇಲ್ಲಿನ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಜಟಿಲತೆಗಳನ್ನು ವಾಸ್ತವ ನೆಲೆಗಟ್ಟಿನಿಂದ ನೋಡದೆ ಎಲ್ಲದಕ್ಕೂ ಆರ್ಥಿಕ ವ್ಯವಸ್ಥೆಯೇ ಅಡಿಪಾಯ ಎಂದು ಸರಳರೇಖೆಯಂತೆ ಹೊರಟಿದ್ದೇ ಈ ದುರಂತಕ್ಕೆ ಕಾರಣ. ಹೀಗಾಗಿ ಇವರ ಯೂನಿಯನ್ನಿನ ಲಕ್ಷಾಂತರ ಕಾರ್ಮಿಕರಿಗೆ ತಮ್ಮ ನೌಕರಿಯಲ್ಲಿನ ತೊಂದರೆಗಳಿಗೆ, ಇಂಕ್ರಿಮೆಂಟ್‌ಗಳಿಗೆ, ಬೋನಸ್‌ಗೆ ಮತ್ತು ಅಲ್ಲಿನ ವರ್ಗ ಅಸಮಾನತೆಯ ವಿರುದ್ಧ ಹೋರಾಡಲು ಮಾತ್ರ ಕಮ್ಯುನಿಸ್ಟ್ ಪಕ್ಷದ ಯೂನಿಯನ್‌ಗಳು ಬೇಕು, ಆದರೆ ರಾಜಕೀಯ ವಾಗಿ, ಸಾಂಸ್ಕೃತಿಕವಾಗಿ ನಿರ್ಣಯಗಳನ್ನು ನಿರ್ಧರಿಸುವಾಗ, ಮಾರ್ಕ್ಸ್‌ನಸಮತಾವಾದದ ಚಿಂತನೆಗಳನ್ನು ಅರ್ಥೈಸಿಕೊಳ್ಳುವಾಗ ಈ ಕಾರ್ಮಿ ಕರು ಸಂಪೂರ್ಣವಾಗಿ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಾರೆ. ಉತ್ಪಾದನಾ ಸಾಮರ್ಥ್ಯದ ವಿಕಸನವೆಂದರೆ ತಂತ್ರಜ್ಞಾನದ ವಿಕಸನವೂ ಹೌದು. ಇವೆರಡೂ ಪರಸ್ಪರ ಪೂರಕವಾಗಿ ಬೆಳೆಯತೊಡಗಿದಾಗ ಇಂಡಿಯಾ ದಂತಹ ಪ್ರತ್ಯೇಕತೆಯನ್ನೊಳಗೊಂಡ ಸಮಾಜದಲ್ಲಿ ಈ ಬೆಳವಣಿಗೆಯು ಕೇವಲ ಒಂದು ಸಮುದಾಯದ, ಮೇಲ್ಜಾತಿಗಳ, ಸವರ್ಣೀಯರ ಉನ್ನತಿಯಾಗಿರುತ್ತದೆ ಎಂದು ಅರ್ಥೈಸುವಲ್ಲಿ ನಮ್ಮ ಕಮ್ಯುನಿಸ್ಟರು ತುಂಬಾ ತಡ ಮಾಡಿದರು. ಏಕೆಂದರೆ ಸಾಮಾಜಿಕ ಸಂಬಂಧಗಳೇ ಸಮಾಜದ ವಿಕಸನದ ಶೈಲಿಯನ್ನು ನಿರ್ಧರಿಸುತ್ತವೆ ಎನ್ನುವ ಸತ್ಯ ನಮ್ಮ ಎಡಪಂಥೀಯ ಹೋರಾಟಗಾರರಿಗೆ ಸ್ಪಷ್ಟವಾಗಲಿಲ್ಲವೇ ಅಥವಾ ಅದನ್ನು ನಿರ್ಲಕ್ಷಿಸಿದರೇ? ಅಂದರೆ ಆಧುನಿಕ ವಿಜ್ಞಾನ ಮತ್ತು ಮಾನವನ ಸ್ವಾತಂತ್ರ ಮತ್ತು ಅಧ್ಯಾತ್ಮ ಮತ್ತು ಧಾರ್ಮಿಕತೆ ಮತ್ತು ಆದಿವಾಸಿ, ತಳಸಮುದಾಯಗಳ ಶ್ರೀಮಂತ ಅವೈದಿಕ ಸಾಂಸ್ಕೃತಿಕ ಜಗತ್ತು ಇವೆಲ್ಲದರ ನಡುವಿನ ಪರಸ್ಪರ ವಿರೋಧಾಭಾಸಗಳು ಮತ್ತು ಇವುಗಳ ನಡುವಿನ ಸಾಮಾಜಿಕ- ಸಾಂಸ್ಕೃತಿಕ-ಆರ್ಥಿಕ ಸಂರಚನೆಗಳನ್ನು ಅಧ್ಯಯನ ಮಾಡಲು ನಮ್ಮ ಕಮ್ಯು ನಿಸ್ಟರು ತೋರಿಸಿದ ನಿರಾಸಕ್ತಿಗಾಗಿ ಇಂದು ಅಪಾರ ಬೆಲೆ ತೆರಬೇಕಾಗಿ ಬಂದಿದೆ. ಈ ಅಪಾಯಗಳನ್ನು ಗ್ರಹಿಸಿಯೇ ಮಾರ್ಕ್ಸ್ ವಾದಿ ಚಿಂತಕ ಗ್ರಾಮ್ಷಿಯು ಸಾಂಸ್ಕೃತಿಕ ಸಂಘಟನೆಗಳು ಹೋರಾಟಗಳ ಮತ್ತು ವ್ಯವಸ್ಥೆಯ ಕೇಂದ್ರವಾಗಿರಬೇಕು ಮತ್ತು ರಾಜಕೀಯ ಹಾಗೂ ಆರ್ಥಿಕ ಸಂಘಟನೆಗಳು ಸಾಂಸ್ಕೃತಿಕ ಸಂಘಟನೆಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಪ್ರತಿ ಪಾದಿಸಿದ. ಬೌದ್ಧಿಕ ಪ್ರೇರಣೆಗಳ ಮೂಲಕ ಜನಸಾಮಾನ್ಯರೆಲ್ಲರೂ ಬುದ್ಧಿಜೀವಿಗಳಾಗಬೇಕೆಂದು ಆಶಿಸಿದ. ಏಕೆಂದರೆ ಒಮ್ಮೆ ಪ್ರಳಯಕ್ಕೆ ತುತ್ತಾಗಿ ಇಡೀ ವಿಶ್ವವೇ ನಾಶಗೊಂಡಾಗ ಮರಳಿ ಬೂದಿಯಿಂದ ನಾಗರಿಕತೆಯನ್ನು ಕಟ್ಟಬೇಕಾದಂತಹ ಸಂದರ್ಭದಲ್ಲಿ ಈ ಬುದ್ಧಿಜೀವಿ ಜನಸಾಮಾನ್ಯರ ಅವಶ್ಯಕತೆ ಬೇಕೇಬೇಕು.
ಆದರೆ ಇಂಡಿಯಾದ ಕಮ್ಯುನಿಸ್ಟ್ ಪಕ್ಷದ ಕುರಿತಾಗಿ ಮಾತನಾಡುವಾಗ ಈ ಎಲ್ಲ ಸಂಕೀರ್ಣ ತರ್ಕಗಳನ್ನು ಸರಳೀಕರಿಸಿ ಹೇಳುವುದೂ ತುಂಬಾ ಕಷ್ಟ. ಇಲ್ಲಿನ ಕಮ್ಯುನಿಸ್ಟರ ನಿಸ್ವಾರ್ಥ ಹೋರಾಟಗಳನ್ನು, ಸೆಕ್ಯುಲರಿಸಂ ಅನ್ನು, ಪ್ರಾಮಾಣಿಕತೆಯನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಕಡೆಗಣಿಸಿದ್ದೇ ಆದರೆ ಒಂದು ಪ್ರಾಮಾಣಿಕ, ಜನಪರ ಹೋರಾಟವನ್ನು ನಾವೇ ಕೈಯಾರೆ ಕೊಂದಂತೆ. ಇದರಿಂದಾಗುವ ಅಪಾಯವೇನೆಂದರೆ ಹೊಸ ತಲೆಮಾರಿನ ಹುಡುಗರಿಗೆ ಈ ಮೇಲ್ಪದರದ, ಗತಿ ತಪ್ಪಿದ ಹೇಳಿಕೆಗಳೇ ಸತ್ಯವಾಗಿ ಹೋಗುತ್ತದೆ. ಇಲ್ಲಿನ ಕಮ್ಯುನಿಸ್ಟರ ಆದರ್ಶಗಳು ಪ್ರಶ್ನಾತೀತವಾಗಿದ್ದವು, ತಾವು ನಂಬಿದ ತತ್ವಗಳಿಗೆ ಸಂಪೂರ್ಣ ಬದ್ಧರಾಗಿ, ಜನಸಾಮಾನ್ಯರ, ಬಡವರ ಪರವಾಗಿ, ನಿಸ್ವಾರ್ಥದಿಂದ ಸಾರ್ವಜನಿಕ ಜೀವನದಲ್ಲಿ ಸಂಘಟನೆಗಳಲ್ಲಿ ತೊಡಗಿಸಿಕೊಂಡ ಇಲ್ಲಿನ ಕಮ್ಯುನಿಸ್ಟರು ಮೂಢನಂಬಿಕೆಗಳ ವಿರುದ್ಧ, ಕೋಮುವಾದದ ವಿರುದ್ಧ ನಿರಂತರ ಸಂಘಟಿತ, ಚಳವಳಿಗಳನ್ನು ರೂಪಿಸಿದ್ದಾರೆ. ಬಂಡವಾಳಶಾಹಿಗಳ ಯಾಜ ಮಾನ್ಯವನ್ನು ದಿಟ್ಟತನದಿಂದ ಎದುರಿಸಿದ್ದಾರೆ. ಕಳೆದ ಎಂಬತ್ತೈದು ವರ್ಷಗಳ ಕಮ್ಯುನಿಸ್ಟ್ ಪಕ್ಷಗಳ ಹೋರಾಟಗಳನ್ನು ಆಳವಾಗಿ ಅಧ್ಯಯನ ಮಾಡಿದರೆ ಇಂಡಿಯಾದ ಸಂದರ್ಭದಲ್ಲಿ ಎಡ ಪಕ್ಷಗಳ ಹೋರಾಟವು ವರ್ಗ ಸಂಘರ್ಷವನ್ನು ಉತ್ಪಾದನಾ ಪದ್ಧತಿಯ ಸರಪಳಿಯೊಂದಿಗೆ ಬಂಧಿ ಸುವುದರ ಮೂಲಕ ಅಭೂತವೆನ್ನಬಹುದಾದಂತಹ ಸಂಘಟನೆಯನ್ನು ಹುಟ್ಟುಹಾಕಿರುವುದು ಇಂದು ನಮ್ಮ ಮುಂದಿದೆ. ಒಂದು ವರ್ಗವು ಉತ್ಪಾದನೆಯ ಜವಾಬ್ದಾರಿ ಮತ್ತು ನಿಯಂತ್ರಣವನ್ನು ತನ್ನದಾಗಿಸಿ ಕೊಂಡರೆ ದುರುಪಯೋಗಕ್ಕೆ ಒಳಪಟ್ಟಿದ್ದ ಮತ್ತೊಂದು ವರ್ಗದ ಪ್ರಾತಿನಿಧ್ಯ ವನ್ನು ವಹಿಸಿದ್ದ ಎಡಪಕ್ಷಗಳು ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವು.
ಇಲ್ಲಿ ಉತ್ಪಾದನಾ ಶಕ್ತಿಗಳು ತಮ್ಮ ಅಭಿವೃದ್ಧಿಗೆ ಪೂರಕವಾ ಗುವಂತಹ ವರ್ಗಗಳನ್ನು ತಾವೇ ಸ್ವತಃ ಆಯ್ಕೆ ಮಾಡಿಕೊಂಡಾಗ ಆದರೆ ಮುಂದಿನ ದಿನಗಳಲ್ಲಿ ಈ ಬಳಸಲ್ಪಟ್ಟ ವರ್ಗಗಳೇ ಉತ್ಪಾದನಾ ಶಕ್ತಿಗಳಿಗೆ ತೊಡಕಾಗುವುದರ ಪ್ರಕ್ರಿಯೆಗೆ ಚಾಲನೆ ನೀಡಿದ ಕಮ್ಯುನಿಸ್ಟರು ಆ ಮೂಲಕ ವರ್ಗ ಸಂಘರ್ಷದ ಇತಿಹಾಸದಲ್ಲಿ ಒಂದು ರಾಜಕೀಯ ಕ್ರಾಂತಿಯನ್ನೇ ಸಾಧಿಸಿದರು. ಆದರೆ ಇಂದಿನ ನವಉದಾರೀಕರಣದ ಕಾಲಘಟ್ಟದಲ್ಲಿ, ಕೇಂದ್ರದಲ್ಲಿ ಬಿಜೆಪಿ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರದಲ್ಲಿರುವಂತಹ ಸಂದರ್ಭದಲ್ಲಿ, ಇಡೀ ಸರಕಾರಿ ಉದ್ದಿಮೆಗಳನ್ನು ಮುಂದಿನ ವರ್ಷಗಳಲ್ಲಿ ಕ್ರಮೇಣ ಖಾಸಗೀಕರಣಗೊಳಿಸುವ ಬೃಹತ್ ಯೋಜನೆಯ ಅನುಷ್ಠಾನದಲ್ಲಿರುವ ಮೋದಿಯ ರಾಜ್ಯಭಾರದಲ್ಲಿ ನಮ್ಮಲ್ಲಿನ ಎಡಪಂಥೀಯ ಪಕ್ಷಗಳು ಮತ್ತಷ್ಟು ತೀವ್ರತೆಯಿಂದ, ಈಗಿನ ಸವಕಲು ಮಾರ್ಗವನ್ನು ಕೈಬಿಟ್ಟು ವಿಭಿನ್ನ ಚಿಂತನೆಗಳಿಂದ ನಿರಂತರ ಹೋರಾಟಗಳನ್ನು ಕಟ್ಟುವ, ಮುಂದಿನ ದಶಕಕ್ಕೆ ಜನಪರ ರಾಜಕೀಯ ತಳಹದಿಯನ್ನು ರೂಪಿಸುವಂತಹ ವಿವಿಧ ಮಾಡೆಲ್‌ಗಳನ್ನು ಇಷ್ಟರಲ್ಲಾಗಲೇ ಕಟ್ಟಬೇಕಿತ್ತು. ತಮ್ಮ ಮಡಿವಂತಿಕೆಯನ್ನು ಬಿಟ್ಟು ಸಮಾನಮನಸ್ಕರೊಂದಿಗೆ ಒಳಗೊಳ್ಳುವ ಪ್ರಕ್ರಿಯೆ ಈಗಾಗಲೇ ಶುರುವಾಗಬೇಕಿತ್ತು. ಆದರೆ ಇದಾವುದೂ ಕಾಣುತ್ತಿಲ್ಲ. ಚುನಾವಣಾ ಸೋಲುಗಳಿಂದ ಸಂಪೂರ್ಣ ನಿಶ್ಯಕ್ತಿಗೊಂಡಂತೆ ಕಾಣುತ್ತಿರುವ ಇಲ್ಲಿನ ಎಡ ಪಕ್ಷಗಳು ಮರುಚೇತನ ಪಡೆದುಕೊಳ್ಳುವ ಯಾವ ಲಕ್ಷಣಗಳೂ ಸದ್ಯಕ್ಕಂತೂ ಕಾಣುತ್ತಿಲ್ಲ. ಈ ಹಿನ್ನಡೆಗಳೇ ನಮ್ಮಲ್ಲಿ ಪದೇ ಪದೇ ಎಡಪಕ್ಷಗಳ ಕುರಿತಾದ ಭ್ರಮನಿರಸನವನ್ನು ಮೂಡಿಸುತ್ತವೆ. ಈ ಎಡಪಂಥೀಯ ಪಕ್ಷಗಳ ಬಿ�