ಭಾರತಕ್ಕೆ ಸಮುದ್ರಮಾರ್ಗ ಕಂಡುಹಿಡಿದ ವಾಸ್ಕೋಡಗಾಮಾ

Update: 2018-05-19 18:31 GMT

1498: ಯುರೋಪಿಯನ್ನರು ಭಾರತಕ್ಕೆ ಬರಲು ಸಮುದ್ರ ಮಾರ್ಗ ಕಂಡುಹಿಡಿದ ದಿನ ಇಂದು. ಪೋರ್ಚುಗೀಸ್ ನಾವಿಕ ವಾಸ್ಕೋಡಗಾಮಾ ಈ ದಿನ ಭಾರತದ ಕಲ್ಲಿಕೋಟೆಗೆ ಬಂದಿಳಿದನು. ಆ ಮೂಲಕ ಭಾರತಕ್ಕೆ ತಲುಪಬೇಕೆನ್ನುವ ಹಲವು ದಶಕಗಳ ಯುರೋಪಿಯನ್ನರ ಕನಸಿಗೆ ವಾಸ್ಕೋಡಗಾಮಾ ದಾರಿ ಮಾಡಿಕೊಟ್ಟನು. ಈ ಮಾರ್ಗದಿಂದಲೇ ಬ್ರಿಟಿಷರು, ಡಚ್ಚರು, ಫ್ರೆಂಚರು ಭಾರತಕ್ಕೆ ಬಂದು ಇಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಲು ಆರಂಭಿಸಿದರು. ಇದೇ ಕಾರಣದಿಂದಲೇ ಭಾರತ ಮೂರುವರೆ ಶತಮಾನಗಳ ಕಾಲ ಬ್ರಿಟಿಷರ ಗುಲಾಮಗಿರಿಗೆ ಒಳಗಾಗುವಂತಾಯಿತು.

1609: ಮಹಾಕವಿ ಶೇಕ್ಸ್‌ಪಿಯರ್‌ನ ಸುನೀತಗಳು ಮೊದಲ ಬಾರಿಗೆ ಲಂಡನ್‌ನಲ್ಲಿ ಪ್ರಕಟವಾದವು. ಆದರೆ ಇವು ಥಾಮಸ್ ಥೋರ್ಪ್ ಎಂಬವರಿಂದ ಅಕ್ರಮವಾಗಿ ಪ್ರಕಟಗೊಂಡಿದ್ದವೆಂದು ಹೇಳಲಾಗಿದೆ.

1882: ಜರ್ಮನಿ, ಆಸ್ಟ್ರಿಯಾ-ಹಂಗೇರಿ ಹಾಗೂ ಫ್ರಾನ್ಸ್ ಮಧ್ಯೆ ಮೈತ್ರಿಕೂಟ ಏರ್ಪಟ್ಟಿತು.

1919: ಜಾವಾದಲ್ಲಿ ಕೆಲ್ಯುಟ್ ಎಂಬ ಜ್ವಾಲಾಮುಖಿ ಸ್ಫೋಟಗೊಂಡು 550 ಜನರ ಸಾವಿಗೆ ಕಾರಣವಾಯಿತು.

1965: ಪಾಕಿಸ್ತಾನಕ್ಕೆ ಸೇರಿದ ಬೋಯಿಂಗ್ 720-ಬಿ ವಿಮಾನವು ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಪತನಕ್ಕೀಡಾಯಿತು. ಈ ಸಂದರ್ಭದಲ್ಲಿ 121 ಜನ ಸಾವಿಗೀಡಾದರು. 1967: ವಿಯೆಟ್ನಾಂ ವಿರುದ್ಧ ಅಮೆರಿಕ ನಡೆಸುತ್ತಿದ್ದ ಯುದ್ಧವನ್ನು ವಿರೋಧಿಸಿ ಸುಮಾರು 10,000 ಜನರು ಅಮೆರಿಕದಲ್ಲಿ ಪ್ರತಿಭಟನೆ ನಡೆಸಿದರು.

1980: ಜಮೈಕಾದ ಕಿಂಗ್ಸ್‌ಟನ್‌ನಲ್ಲಿ ನರ್ಸಿಂಗ್ ಹೋಮ್ ವೊಂದಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಸುಮಾರು 157 ಜನರ ಸಾವಿನ ವರದಿಯಾಗಿದೆ.

1992: ಭಾರತವು ಎಸ್‌ಆರ್‌ಒಎಸ್‌ಎಸ್-ಸಿ ಎಂಬ ಉಪಗ್ರಹವನ್ನು ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ದಿನ ಉಡಾವಣೆ ಮಾಡಿತು. ಭಾರತ ಸ್ವತಂತ್ರವಾಗಿ ಉಡಾವಣೆ ಮಾಡಿದ ಪ್ರಥಮ ಉಪಗ್ರಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ