ದ.ಆಫ್ರಿಕ ಕ್ರಿಕೆಟ್ ತಂಡದ ಮೊದಲ ಬಿಳಿಯೇತರ ನಾಯಕನಾಗಿ ಹಾಶಿಮ್ ಆಮ್ಲ ಆಯ್ಕೆ
1818: ಮೂರನೇ ಆಂಗ್ಲೋ-ಮರಾಠಾ ಯುದ್ಧ ಇಂದು ಕೊನೆಗೊಳ್ಳುವ ಮೂಲಕ ಬ್ರಿಟಿಷ್ ಹಾಗೂ ಮರಾಠಾ ಸಂಸ್ಥಾನಗಳ ಮಧ್ಯೆ ನಡೆಯುತ್ತಿದ್ದ ಯುದ್ಧಗಳು ಅಂತ್ಯ ಕಂಡವು.
1921: ಅಮೆರಿಕದ ಕೊಲರಾಡೋದಲ್ಲಿ ತ್ವರಿತ ಮೇಘ ಸ್ಫೋಟ ಸಂಭವಿಸಿ 120 ಜನ ಸಾವಿಗೀಡಾದ ವರದಿಯಾಗಿದೆ.
1962: ಫ್ರಾನ್ಸ್‌ನ ಬೋಯಿಂಗ್ 707 ವಿಮಾನವು ಪ್ಯಾರಿಸ್‌ನ ಒರ್ಲಿ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆಗುವ ಸಂದರ್ಭದಲ್ಲಿ ಪತನಗೊಂಡಿತು. ಈ ವೇಳೆ 130 ಜನ ಮೃತಪಟ್ಟರು.
1965: ಅಮೆರಿಕದ ಎರಡನೇ ಮಾನವಸಹಿತ ಬಾಹ್ಯಾಕಾಶ ನೌಕೆ ಜೆಮಿನಿ-4 ಉಡಾವಣೆಗೊಂಡಿತು.
1989: ಸೋವಿಯತ್ ರಶ್ಯಾದ ಆಶಾ ಎಂಬಲ್ಲಿ ಎರಡು ರೈಲುಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 460 ಜನ ಸಾವಿಗೀಡಾದರು. ಇಂಧನ ಪೈಪ್‌ನ ಸೋರಿಕೆಯಿಂದಾಗಿ ಈ ಬೆಂಕಿ ಹೊತ್ತಿಕೊಂಡಿತ್ತು ಎಂದು ವರದಿಯಾಗಿದೆ.
1991: ಜಪಾನ್‌ನಲ್ಲಿ ವೌಂಟ್ ಉಂಝೆನ್ ಎಂಬ ಜ್ವಾಲಾಮುಖಿ ಸ್ಫೋಟ ಸಂಭವಿಸಿ ವಿಜ್ಞಾನಿಗಳು, ಪತ್ರಕರ್ತರು ಸೇರಿದಂತೆ ಸುಮಾರು 43 ಜನರು ಮೃತಪಟ್ಟರು. ಜಪಾನ್‌ನಲ್ಲಿ ಇದೊಂದು ಅತ್ಯಂತ ಮಾರಣಾಂತಿಕ ಜ್ವಾಲಾಮುಖಿ ಸ್ಫೋಟ ಎನ್ನಲಾಗಿದೆ.
1992: ವಿಶ್ವದ ಅತ್ಯಂತ ದೊಡ್ಡ ಪರಿಸರ ಸಮ್ಮೇಳನ ಬ್ರೆಝಿಲ್‌ನ ರಿಯೊ ಡಿ ಜನೈರೊನಲ್ಲಿ ಆರಂಭವಾಯಿತು. ವಿಶ್ವಸಂಸ್ಥೆ ಆಯೋಜಿಸಿದ್ದ ಈ ಸಮ್ಮೇಳನ ಜೂ.14ರವರೆಗೆ ನಡೆಯಿತು.
2006: ಮೊಂಟೆನಿಗ್ರೊ ಔಪಚಾರಿಕವಾಗಿ ಸ್ವಾತಂತ್ರ ಘೋಷಿಸಿಕೊಳ್ಳುವ ಮೂಲಕ ಸೆರ್ಬಿಯಾ ಹಾಗೂ ಮೊಂಟೆನಿಗ್ರೊ ನೇತೃತ್ವದ ಒಕ್ಕೂಟ ವ್ಯವಸ್ಥೆಯು ಮುರಿದುಬಿತ್ತು.
2012: ನೈಜೀರಿಯಾದ ಲಾಗೋಸ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ ವಿಮಾನದಲ್ಲಿದ್ದ 152 ಜನ ಹಾಗೂ ನೆಲದ ಮೇಲಿದ್ದ 40 ಜನ ಸಾವಿಗೀಡಾದರು.
2014: ದ.ಆಫ್ರಿಕ ರಾಷ್ಟ್ರೀಯ ಕ್ರಿಕೆಟ್ ತಂಡದ ಮೊದಲ ಬಿಳಿಯೇತರ ನಾಯಕನಾಗಿ ಭಾರತೀಯ ಮೂಲದ ಹಾಶಿಮ್ ಆಮ್ಲ ಆಯ್ಕೆ.
1924: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ನಾಯಕ ಎಂ.ಕರುಣಾನಿಧಿ ಜನ್ಮದಿನ.