ಅವರು ಬಂದರು, ಮಾತನಾಡಿದರು, ಆರೆಸ್ಸೆಸ್ ಗೆದ್ದಿತು

Update: 2018-06-11 18:33 GMT

 ಭಾಗ-1

ಆರೆಸ್ಸೆಸ್‌ನ ಪಾಲಿಗೆ ಪರಿಪೂರ್ಣ, ಸಾರ್ಥಕ ಚಿತ್ರ ಇದು. ನಾಗರಿಕತೆ ಹೊಂದಿದ್ದ ಜನ ತನ್ನನ್ನು ದೂರ ಮಾಡುತ್ತಿಲ್ಲ ಎಂದು ಸಾಬೀತುಪಡಿಸಲು ಅದಕ್ಕೆ ಒಂದಲ್ಲ ಹಲವಾರು ಚಿತ್ರಗಳು ಲಭಿಸಿದವು. ಮುಂದಿನ ತಲೆಮಾರುಗಳಿಗೆ ತೋರಿಸಲು ಅದಕ್ಕೆ ದೊರಕಿದ ಚಿತ್ರಗಳಿವು. ಆರೆಸ್ಸೆಸ್‌ನ ಸ್ಥಾಪಕ ಹೆಡಗೇವಾರ್ ಅವರ ಜನ್ಮಸ್ಥಳದ ಬಾಲ್ಕನಿಯಲ್ಲಿ ನಿಂತಿರುವ ಪ್ರಣಬ್ ಮುಖರ್ಜಿ, ಹೆಡಗೇವಾರ್ ಅವರ ಪ್ರತಿಮೆಗೆ ಹಾರ ಹಾಕುವ ಮುಖರ್ಜಿ, ಸಂದರ್ಶಕರ ಪುಸ್ತಕದಲ್ಲಿ ಮುಖರ್ಜಿ ಬರೆದ ಸಾಲು: ‘‘ನಾನು ಭಾರತದ ಓರ್ವ ಶ್ರೇಷ್ಠ ಪುತ್ರನಿಗೆ ನನ್ನ ಗೌರವ ಸಲ್ಲಿಸಲು ಇಲ್ಲಿಗೆ ಬಂದೆ.’’

ಕೆ.ಬಿ.ಹೆಡಗೇವಾರ್ ಅವರ ಜನ್ಮಸ್ಥಳ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘವೆಂಬ ಒಂದು ಅರೆ ರಹಸ್ಯ ಸಂಘಟನೆಯ ಕಚೇರಿಗೆ ಮಾಜಿ ರಾಷ್ಟ್ರಪತಿಯೊಬ್ಬರು ಭೇಟಿ ನೀಡುವುದನ್ನು ನೋಡಲು ಇಡೀ ರಾಷ್ಟ್ರವೇ ಟಿವಿ ಸೆಟ್‌ಗಳ ಮುಂದೆ ಕುಳಿತುಕೊಂಡಿತು ಎಂಬುದು ನಮ್ಮ ಕಾಲದ ಬಗ್ಗೆ ಏನನ್ನೋ ಹೇಳುತ್ತದೆ.

ಎಲ್ಲಾ ನ್ಯೂಸ್ ಚಾನಲ್‌ಗಳು ಆರೆಸ್ಸೆಸ್‌ನ ಸ್ವಯಂ ಸೇವಕರನ್ನು ಉದ್ದೇಶಿಸಿ ಪ್ರಣಬ್ ಮುಖರ್ಜಿ ಅವರು ಮಾಡಿದ ಭಾಷಣವಷ್ಟೆ ಅಲ್ಲ, ಅದರ ಮೊದಲು ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್ ಮಾಡಿದ ಭಾಷಣವನ್ನು ಕೂಡ ನೇರ ಪ್ರಸಾರ ಮಾಡಿದವು.
ಒಂದು ಸಾಮಾನ್ಯವಾದ ಆರೆಸ್ಸೆಸ್ ಕಾರ್ಯಕ್ರಮ ಒಂದು ರಾಷ್ಟ್ರೀಯ ಘಟನೆಯಾಯಿತು ಮತ್ತು ಭಾರತದ ಮಾಜಿ ರಾಷ್ಟ್ರಪತಿ ಅವರು ಅಲ್ಲಿ ಏನು ಮಾತಾಡುತ್ತಾರೆಂಬ ನಮ್ಮ ಕುತೂಹಲದಿಂದಾಗಿ ಸಂಘದ ಸಂದೇಶ ಭಾರತದ ಎಲ್ಲ ಮೂಲೆಗಳಿಗೂ ತಲುಪಿತ್ತು.
 ಆರೆಸ್ಸೆಸ್‌ನ ಪಾಲಿಗೆ ಪರಿಪೂರ್ಣ, ಸಾರ್ಥಕ ಚಿತ್ರ ಇದು. ನಾಗರಿಕತೆ ಹೊಂದಿದ್ದ ಜನ ತನ್ನನ್ನು ದೂರ ಮಾಡುತ್ತಿಲ್ಲ ಎಂದು ಸಾಬೀತುಪಡಿಸಲು ಅದಕ್ಕೆ ಒಂದಲ್ಲ ಹಲವಾರು ಚಿತ್ರಗಳು ಲಭಿಸಿದವು. ಮುಂದಿನ ತಲೆಮಾರುಗಳಿಗೆ ತೋರಿಸಲು ಅದಕ್ಕೆ ದೊರಕಿದ ಚಿತ್ರಗಳಿವು. ಆರೆಸ್ಸೆಸ್‌ನ ಸ್ಥಾಪಕ ಹೆಡಗೇವಾರ್ ಅವರ ಜನ್ಮಸ್ಥಳದ ಬಾಲ್ಕನಿಯಲ್ಲಿ ನಿಂತಿರುವ ಪ್ರಣಬ್ ಮುಖರ್ಜಿ, ಹೆಡಗೇವಾರ್ ಅವರ ಪ್ರತಿಮೆಗೆ ಹಾರ ಹಾಕುವ ಮುಖರ್ಜಿ, ಸಂದರ್ಶಕರ ಪುಸ್ತಕದಲ್ಲಿ ಮುಖರ್ಜಿ ಬರೆದ ಸಾಲು: ‘‘ನಾನು ಭಾರತದ ಓರ್ವ ಶ್ರೇಷ್ಠ ಪುತ್ರನಿಗೆ ನನ್ನ ಗೌರವ ಸಲ್ಲಿಸಲು ಇಲ್ಲಿಗೆ ಬಂದೆ.’’
ಮುಖರ್ಜಿಯವರು ಆರೆಸ್ಸೆಸ್‌ಗೆ ಈ ಭಾವಚಿತ್ರಗಳನ್ನು ನೀಡುತ್ತಿದ್ದಂತೆಯೇ ನಾನು ‘ಹೆಡಗೇವಾರ್ ವಿಚಾರ’ (ಹೆಡಗೇವಾರ್ ಥಾಟ್ಸ್)ಗಳ ಅಣಿಮುತ್ತುಗಳ ಒಂದು ಪಾಕೆಟ್ ಸೈಜ್ ಪುಸ್ತಕ ವಾಗಿರುವ ‘ಪಾಥೆ’ಯ ಪುಟಗಳ ಮೇಲೆ ಕಣ್ಣಾಡಿಸಿದೆ. ‘ದಿ ಟೆಲಿಗ್ರಾಫ್’ ಅಣಿಮುತ್ತುಗಳಲ್ಲಿ ಕೆಲವನ್ನು ನಮ್ಮ ಲಾಭಕ್ಕಾಗಿ, ನಮ್ಮ ಬೆನಿಫಿಟ್‌ಗಾಗಿ ಈ ಭಾರತ ಪುತ್ರನ ವಿಚಾರಧಾರೆಯ ಶ್ರೇಷ್ಠತೆಯನ್ನು ನಮಗೆ ತಿಳಿಸಿ ನಮಗೆ ಜ್ಞಾನೋದಯ ಮಾಡಿಸುವುದಕ್ಕಾಗಿ ಸಂಗ್ರಹಿಸಿ ಕೊಟ್ಟಿದೆ. ಅವುಗಳನ್ನು ಈಗ ಓದಿ:
♦ ವಾಸ್ತವಿಕವಾಗಿ ಸಂಘವು ಹಿಂದೂಗಳ ಹಿಂದೂಸ್ಥಾನವೆಂದು ಹೇಳ ಬಯಸುತ್ತದೆ. ಹಿಂದೂಸ್ಥಾನವು ಹಿಂದೂಗಳ ಒಂದು ದೇಶ. ಇತರ ಜನಸಮುದಾಯಗಳ ಇತರ ರಾಷ್ಟ್ರಗಳಂತೆ, (ಉದಾ: ಜರ್ಮನರ ಜರ್ಮನಿ) ಇದು ಹಿಂದೂ ಜನರ ಒಂದು ರಾಷ್ಟ್ರ.
♦ ಕೇವಲ ಭೂಮಿಯ ಒಂದು ತುಂಡನ್ನು ರಾಷ್ಟ್ರವೆಂದು ಕರೆಯಲು ಸಾಧ್ಯವಿಲ್ಲ. ಎಲ್ಲಿ ಒಂದು ವಿಚಾರ, ಒಂದು ಸಂಸ್ಕೃತಿ ಮತ್ತು ಒಂದು ಪರಂಪರೆಗೆ ಸೇರಿದ ಜನರು ಪ್ರಾಚೀನ ಕಾಲದಿಂದಲೂ ಒಟ್ಟಿಗೆ ಬದುಕುತ್ತಾರೋ ಅಲ್ಲಿ ಒಂದು ರಾಷ್ಟ್ರವು ಸೃಷ್ಟಿಯಾಗುತ್ತದೆ ಈ ಮೇಲಿನ ಕಾರಣಗಳಿಂದಾಗಿಯೇ ನಮ್ಮ ದೇಶಕ್ಕೆ ನೀಡಲಾದ ಹೆಸರು ಹಿಂದೂಸ್ಥಾನ ಮತ್ತು ಇದು ಹಿಂದೂಗಳ ಒಂದು ದೇಶ.
♦ ಇತರರಿಂದ ನೆರವನ್ನು ನಿರೀಕ್ಷಿಸುವುದು ಮತ್ತು ಇತರರ ಬಳಿ ನೆರವನ್ನು ಯಾಚಿಸುವುದು ದೌರ್ಬಲ್ಯದ ಒಂದು ಸ್ಪಷ್ಟ ಸಂಕೇತ. ಇದು ವರ್ತನೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ ಆದ್ದರಿಂದ ಸಂಘದ ಸ್ವಯಂಸೇವಕರು ಹಿಂದೂಗಳ ಹಿಂದೂಸ್ಥಾನವೆಂದು ಧೈರ್ಯದಿಂದ ಘೋಷಿಸಬೇಕು. ಎಲ್ಲಾ ಸಂಕುಚಿತ ಮನೋಭಾವವನ್ನು ಕಿತ್ತೊಗೆಯಿರಿ. ಇತರರು ಇಲ್ಲಿ ವಾಸಿಸಬಾರದೆಂದು ನಾವು ಹೇಳುವುದಿಲ್ಲ. ಆದರೆ ಅವರಿಗೆ ತಾವು ಹಿಂದೂಗಳ ವಾಸಸ್ಥಾನದಲ್ಲಿ ವಾಸಿಸುತ್ತಿದ್ದೇವೆ ಎಂಬ ಅರಿವು ಇರಬೇಕು ಇಲ್ಲಿ ಹಿಂದೂಗಳ ಹಕ್ಕುಗಳನ್ನು ಇತರರು ಹತ್ತಿಕ್ಕುವಂತಿಲ್ಲ.
♦ ಭಗವಾಧ್ವಜವನ್ನು ನೋಡುವಾಗ ರಾಷ್ಟ್ರದ ಸಮಗ್ರ ಇತಿಹಾಸ ಅದರ ಪರಂಪರೆ ಮತ್ತು ಸಂಸ್ಕೃತಿಯೊಂದಿಗೆ ನಮ್ಮ ಕಣ್ಣ ಮುಂದೆ ಬರುತ್ತದೆ. ಮನಸ್ಸು ಜಾಗೃತಗೊಂಡು ಅದರಲ್ಲಿ ವಿಶೇಷ ಪ್ರೇರಣೆ ಉಂಟಾಗುತ್ತದೆ. ಈ ಭಗವಾಧ್ವಜವನ್ನು ಮಾತ್ರ ನಾವು ನಮ್ಮ ಗುರು ಎಂದು, ನಮ್ಮ ತತ್ವದ ಸಂಕೇತವೆಂದು ಪರಿಗಣಿಸುತ್ತೇವೆ. ಯಾವುದೇ ನಿರ್ದಿಷ್ಟ ವ್ಯಕ್ತಿಗೆ ಬದಲಾಗಿ ಸಂಘವು ಅತ್ಯಂತ ಪವಿತ್ರವಾದ ಭಗವಾಧ್ವಜವನ್ನೇ ಗುರು ಎಂದು ಪರಿಗಣಿಸಿದೆ.
ಇದೇ ಹೆಡಗೇವಾರ್ ಅವರು ಮುಸ್ಲಿಮರನ್ನು ‘‘ಅವರು ಭಾರತದ ಮಾತೆಗೆ ಗೌರವ ಸಲ್ಲಿಸಲು ಹಿಂದು ಮುಂದು ನೋಡುವುದರಿಂದ ಅವರನ್ನು ಅನುಮಾನದಿಂದ ಕಾಣಬೇಕು’’ ಎಂದು ಹೇಳಿ ಅವರನ್ನು ‘ಯವನ ಹಾವುಗಳು’ ಎಂದು ಕರೆದಿದ್ದರು.
ಅವರ ಪ್ರತಿಯೊಂದು ಶಬ್ದ ಕೂಡ ಗಾಂಧಿ, ನೆಹರೂ, ಪಟೇಲ್, ರಾಜಗೋಪಾಲಾಚಾರಿ, ಆಝಾದ್ ಮತ್ತು ಸರೋಜಿನಿ ನಾಯ್ಡು ಅವರು ತಮ್ಮ ಹೋರಾಟಗಳ ಮೂಲಕ ರೂಪಿಸಿದ ಭಾರತದ ಪರಿಕಲ್ಪನೆಗೆ, ಐಡಿಯಾಕ್ಕೆ ವಿರುದ್ಧವಾಗಿದೆ ಮತ್ತು ಮುಖರ್ಜಿಯವರು ತನ್ನ ಭಾಷಣದಲ್ಲಿ ಹಾಡಿ ಹೊಗಳಿದ ಸೆಕ್ಯುಲರ್ ಭಾರತದ ಸೌಧವನ್ನು ಉರುಳಿಸುವುದಕ್ಕಾಗಿಯೇ ಅವರು (ಹೆಡಗೇವಾರ್) ಆರೆಸ್ಸೆಸ್ ಅನ್ನು ನಿರ್ಮಿಸಿದರು.
ಹೆಡಗೇವಾರ್‌ರವರು ಶ್ರೇಷ್ಠವಾದಲ್ಲಿ ಶ್ರೇಷ್ಟತೆಯ ಪರಿಕಲ್ಪನೆಯನ್ನೇ ನಾವು ಪರಿಷ್ಕರಿಸಬೇಕಾಗುತ್ತದೆ ಅಥವಾ ತಲೆಕೆಳಗಾಗಿಸಬೇಕಾಗುತ್ತದೆ ಒಬ್ಬ ಸೆಮಿಟಿಕ್ ವಿರೋಧಿ ಸಿದ್ಧಾಂತಿಯನ್ನು ತಿಳಿವಳಿಕೆಯುಳ್ಳ ಯಾವನೇ ಒಬ್ಬ ಜರ್ಮನ್ ರಾಜಕಾರಣಿ ಜರ್ಮನಿಯ ಓರ್ವ ಶ್ರೇಷ್ಠ ಪುತ್ರ ಎಂದು ಕರೆದಾನೇ?
ಇವಿಷ್ಟೇ ಅಲ್ಲದೆ ಕೇಸರಿ ಧ್ವಜ ಮೇಲೆರುವುದನ್ನು ನೋಡಲು ಸ್ವತಃ ಮುಖರ್ಜಿಯವರು ಅಟೆನ್ಷನ್‌ನಲ್ಲಿ ನಿಂತಿರುವ ಮತ್ತು ಲಾಠಿ ಹಿಡಿದಿರುವ ಸ್ವಯಂಸೇವಕರ ಚಿತ್ರವನ್ನು ಪಾರಿತೋಷಕಗಳೆಂದು ಆರೆಸ್ಸೆಸ್ ಎಲ್ಲೆಡೆ ಪ್ರದರ್ಶಿಸುತ್ತಿದೆ.
ಭಾಗವತ್ ಮತ್ತು ಮುಖರ್ಜಿ ಅವರ ಭಾಷಣಗಳು ಪರಸ್ಪರ ಪೂರಕವಾಗಿದ್ದವು (ಎರಡು ಭಾಷಣಗಳು ಒಂದೇ ವಿಷಯವನ್ನು ಎರಡು ಭಿನ್ನ ರೀತಿಯಲ್ಲಿ ಹೇಳಿದವು) ಎಂದು ಜಗತ್ತಿಗೆ ಡಂಗುರ ಸಾರಲು ಆರೆಸ್ಸೆಸ್‌ನ ವಕ್ತಾರರು ವಿಳಂಬ ಮಾಡಲಿಲ್ಲ. ಹೌದು ಆ ಎರಡೂ ಭಾಷಣಗಳು ಹಲವು ರೀತಿಯಲ್ಲಿ ಪರಸ್ಪರ ಪೂರಕವಾಗಿ ಇದ್ದವು. ಕಾಂಗ್ರೆಸ್ ಪಕ್ಷ ಮತ್ತು ರಾಜಕೀಯ ವೀಕ್ಷಕರ ಪಡೆ ಮುಖರ್ಜಿಯವರನ್ನು ಅವರು ಮಾಡಿದ ಶ್ರೇಷ್ಠ, ರಾಜಕೀಯ ಮುತ್ಸದ್ದಿ ಮಾಡಿದಂತಹ ಭಾಷಣಕ್ಕಾಗಿ ಹೊಗಳುತ್ತಿದೆ.
ವಿಶೇಷವಾಗಿ ಹಿಂದೂಗಳು ಭಾರತಕ್ಕೆ ಉತ್ತರದಾಯಿಗಳು ಎಂದು ತಮ್ಮ ನಿಜವಾದ ಸಂದೇಶದ ವೇಷ ಮರೆಸಲು ಭಾಗವತ್ ವಿವಿಧತೆಯಲ್ಲಿ ಏಕತೆ ಎಂಬ ಹೊದಿಕೆಯನ್ನು ಬಳಸಿದರು ಮತ್ತು ಮುಖರ್ಜಿ ಅವರು ಭಾರತದ ಶ್ರೇಷ್ಠ, ಪ್ರಾಚೀನ ಕಾಲದ, ಅದರ ಐದು ಸಾವಿರ ವರ್ಷಗಳ ಇತಿಹಾಸದ ಬಗ್ಗೆ ವಿವರವಾಗಿ, ದೀರ್ಘವಾಗಿ ಮಾತಾಡಿದರಾದರೂ, ತುಂಬಾ ಮುಖ್ಯವಾದ ಮಧ್ಯಯುಗವನ್ನು ಅವರು ಕೇವಲ ಎರಡು ವಾಕ್ಯಗಳಲ್ಲಿ ಮುಗಿಸಿಬಿಟ್ಟರು. ‘ಮುಸ್ಲಿಂ ದಾಳಿಕೋರರು’ ಬಂದು ಭಾರತವನ್ನು 600 ವರ್ಷಗಳ ಕಾಲ ಆಳಿದರು, ಆ ಬಳಿಕ ಈಸ್ಟ್ ಇಂಡಿಯಾ ಕಂಪೆನಿ ಭಾರತವನ್ನು ವಶಪಡಿಸಿಕೊಂಡಿತು ಎಂದು ಸ್ವಯಂಸೇವಕರ ಒಂದು ಶೋತೃವರ್ಗಕ್ಕೆ ಹೇಳುವುದೆಂದರೆ, ಆ ಸ್ವಯಂ ಸೇವಕರು ಓದಿರುವ ಇತಿಹಾಸದ ತಪ್ಪಾದ ಕೋಮುವಾದಿ ಇದನ್ನು ಯಾವ ಓದಿನಲ್ಲಿ ಅವರು ‘‘800 ವರ್ಷಗಳ ವಿದೇಶೀ ಆಳ್ವಿಕೆ’ಯ ಬಗ್ಗೆ ಮಾತಾಡುತ್ತಾರೋ ಆ ಓದನ್ನು ಅನುಮೋದಿಸಿದಂತೆಯೇ ಸರಿ.

ಮುಖರ್ಜಿಯವರು ಏನನ್ನು ಹೇಳಲಿಲ್ಲ?
ಇಡೀ ಘಟನೆ ತುಂಬಾ ಸಂಕೇತಗಳಿಂದ ಕೂಡಿತ್ತು. ಸಂಘದ ಮುಖಕ್ಕೆ ಕನ್ನಡಿ ಹಿಡಿಯುವ ಮೂಲಕ ಅದಕ್ಕೆ ಮುಜುಗುರ ಉಂಟು ಮಾಡದೆ ಮುಖರ್ಜಿಯವರು ಸಂಘಕ್ಕೆ ಮಹದುಪಕಾರ ಮಾಡಿದರು. ಅವರನ್ನು ಗಾಂಧಿವಾದಿ ಎಂದು ಕರೆದರೆ ನಮ್ಮನ್ನು ಕ್ಷಮಿಸಬಹುದು, ಆದರೆ ಅವರಿಗೆ ಗಾಂಧೀಜಿಯವರಿಗಿದ್ದ ಧೈರ್ಯ ಇಲ್ಲ ಎಂಬುದನ್ನು ಅವರ ಭಾಷಣ ತೋರಿಸಿಕೊಟ್ಟಿತು. ಮುಸ್ಲಿಂ-ವಿರೋಧಿ ಹಿಂಸೆಯಲ್ಲಿ ಸಂಘವು ಒಳಗೊಂಡಿತ್ತು ಎಂದು ತಿಳಿದಾಗ ತನಗೆ ಬೇಸರವಾಯಿತೆಂದು ಗಾಂಧೀಜಿ ಸಂಘದ ನಾಯಕರಿಗೆ ಸ್ಪಷ್ಟವಾಗಿಯೇ ಹೇಳಿದ್ದರು. ಅಥವಾ ಅಲ್ಪ ಸಂಖ್ಯಾತರ ವಿರುದ್ಧ ಹಿಂಸೆ ನಡೆಸುವುದರಲ್ಲಿ ಆರೆಸ್ಸೆಸ್‌ಗೆ ನಂಬಿಕೆ ಇಲ್ಲ ಎಂದು ಗೋಳ್ವಾಲ್ಕರ್ ಹೇಳುವಂತೆ ಮಾಡಿದಾಗ ಗಾಂಧೀಜಿ ಸ್ಪಷ್ಟ ಮಾತುಗಳಲ್ಲೇ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ನಿಜ; ಹಾಗೆ ಹೇಳಿದರೂ ಗೋಳ್ವಾಲ್ಕರ್, ನಿಜವಾದ ಓರ್ವ ಸಂಘಿಯ ಹಾಗೆ ನಿಜಾದ ಅರ್ಥದಲ್ಲಿ ಅದನ್ನು ಹೇಳಿರಲಿಲ್ಲ.
ಕೃಪೆ: thewire

Writer - ಅಪೂರ್ವಾನಂದ್

contributor

Editor - ಅಪೂರ್ವಾನಂದ್

contributor

Similar News

ಜಗದಗಲ
ಜಗ ದಗಲ