ದಿಲ್ಲಿ ಮಾಲಿನ್ಯ ಮಟ್ಟ ಗಂಭೀರ ಸ್ಥಿತಿಯಲ್ಲೇ ಮುಂದುವರಿಕೆ
Update: 2018-06-16 14:28 GMT
ಹೊಸದಿಲ್ಲಿ, ಜೂ.16: ದಿಲ್ಲಿಯಲ್ಲಿ ಮಾಲಿನ್ಯ ಮಟ್ಟ ಶನಿವಾರ ಸ್ವಲ್ಪ ಕಡಿಮೆಯಾದರೂ ಇನ್ನೂ ಗಂಭೀರ ಹಂತದಲ್ಲೇ ಮುಂದುವರಿದಿದೆ ಎಂದು ವರದಿಯಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ(ಸಿಪಿಸಿಬಿ)ಯ ಪ್ರಕಾರ ಶನಿವಾರ ದಿಲ್ಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಪಿಎಂ 10 ಪ್ರಮಾಣ 522 ಹಾಗೂ ದಿಲ್ಲಿಯಲ್ಲಿ 529 ದಾಖಲಾಗಿತ್ತು. ಬುಧವಾರ ಈ ಪ್ರಮಾಣ 778 (ದಿಲ್ಲಿ -ರಾಷ್ಟ್ರೀಯ ರಾಜಧಾನಿ) ಮತ್ತು 824 (ದಿಲ್ಲಿ) ನಷ್ಟು ಹೆಚ್ಚಾಗಿತ್ತು. ಈ ಮಧ್ಯೆ ದಿಲ್ಲಿಯಲ್ಲಿ ಶನಿವಾರದವರೆಗೆ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ.
ಪಶ್ಚಿಮ ಭಾರತದ ಕಡೆಯಿಂದ ಬೀಸಿದ ಧೂಳಿನ ಬಿರುಗಾಳಿಯಿಂದ ದಿಲ್ಲಿಯ ವಾಯು ಗುಣಮಟ್ಟದಲ್ಲಿ ಮಂಗಳವಾರ ಭಾರೀ ಕುಸಿತ ಕಂಡುಬಂದಿತ್ತು.