ಬೋಫೋರ್ಸ್ ಹಗರಣ ಚರ್ಚೆಗೆ ಸಿಗದ ಒಪ್ಪಿಗೆ: ವಿಪಕ್ಷ ಸದಸ್ಯರ ರಾಜೀನಾಮೆ

Update: 2018-06-23 18:40 GMT

1763: ಬಂಗಾಳದ ಮುರ್ಶಿದಾಬಾದ್‌ನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಈ ದಿನ ವಶಪಡಿಸಿಕೊಂಡಿತು. ಅಲ್ಲದೆ ಮೀರ್ ಜಾಫರ್‌ನನ್ನು ನವಾಬನೆಂದು ಘೋಷಿಸಲಾಯಿತು.

1812: ಫ್ರಾನ್ಸ್‌ನ ನೆಪೋಲಿಯನ್ ಬೋನಾ ಪಾರ್ಟೆ ನೇಮಾನ್ ನದಿಯನ್ನು ದಾಟಿ ರಶ್ಯಾದ ಮೇಲೆ ದಾಳಿ ಮಾಡಿದನು.

1901: ಖ್ಯಾತ ಚಿತ್ರಕಲಾವಿದ ಪ್ಯಾಬ್ಲೊ ಪಿಕಾಸೋರ ಕಲಾಕೃತಿಗಳ ಪ್ರಥಮ ಪ್ರದರ್ಶನ ಪ್ಯಾರಿಸ್‌ನಲ್ಲಿ ಈ ದಿನ ನಡೆಯಿತು.

1961: ಪ್ರಥಮ ಬಾರಿಗೆ ಭಾರತ ಸರಕಾರವು ಎಫ್‌ಎಚ್ 24 ಸೂಪರ್‌ಸಾನಿಕ್ ಯುದ್ಧ ವಿಮಾನವನ್ನು ಅಭಿವೃದ್ಧಿಪಡಿಸಿತು.

1989: ಬೋಫೋರ್ಸ್ ಶಸ್ತ್ರಾಸ್ತ್ರ ಹಗರಣ ಕುರಿತು ಲೋಕಸಭೆಯಲ್ಲಿ ಸಿಎಜಿ ಸಲ್ಲಿಸಿದ ವರದಿಯ ಮೇಲೆ ಚರ್ಚೆ ಕೈಗೆತ್ತಿಕೊಳ್ಳಬೇಕೆಂದು ಪ್ರತಿಪಕ್ಷಗಳಿಂದ ಒತ್ತಾಯ ಕೇಳಿಬಂದಿತು. ಆದರೆ ಒಪ್ಪಿಗೆ ಸಿಗದಿದ್ದಾಗ ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿ ವಿರೋಧ ಪಕ್ಷಗಳ ಬಹುತೇಕ ಸದಸ್ಯರು ರಾಜೀನಾಮೆ ನೀಡಿದರು.

1990: ಭಾರತದ ರಕ್ಷಣಾ ವಿಜ್ಞಾನಿಗಳು ಪ್ರಥಮ ಮೂರನೇ ಜನರೇಶನ್‌ನ ಯುದ್ಧ ಟ್ಯಾಂಕ್ ಪ್ರತಿರೋಧಕ ಕ್ಷಿಪಣಿಯನ್ನು ಪರೀಕ್ಷಿಸಿದರು.

2017: ಐರೋಪ್ಯ ಒಕ್ಕೂಟ ತೊರೆಯುವ ಪರವಾಗಿ ಇಂಗ್ಲೆೆಂಡ್ ಜನರು ಮತ ಚಲಾಯಿಸಿದ ಬಳಿಕ ಪ್ರಧಾನಿ ಸ್ಥಾನಕ್ಕೆ ಡೇವಿಡ್ ಕ್ಯಾಮರೂನ್ ರಾಜೀನಾಮೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ