ನೆಹರೂಗೆ ‘ಭಾರತ ರತ್ನ’
1898: ಕ್ಯಾಮಿಲೊ ಗೋಲ್ಗಿ ಎಂಬ ಇಟಾಲಿಯನ್ ವೈದ್ಯ ‘ಗೋಲ್ಗಿ’ ಭಾಗವನ್ನು ಕಂಡುಹಿಡಿದರು. ಇದು ಮನುಷ್ಯ ಶರೀರದ ಜೀವಕೋಶಗಳ ನಡುವೆ ಕೊಡು-ಕೊಳ್ಳುವಿಕೆಗೆ ಸಹಾಯ ಮಾಡುವ ಒಂದು ತೆಳುವಾದ ಜಾಲವಾಗಿದೆ. ಕ್ಯಾಮಿಲೊ ಅವರಿಗೆ 1906ರಲ್ಲಿ ವೈದ್ಯಶಾಸ್ತ್ರಕ್ಕೆ ನೊಬೆಲ್ ಪುರಸ್ಕಾರ ಸಂದಿತು.
1904: ಅಮೆರಿಕದ ಪ್ರಥಮ ಬೌದ್ಧಮಂದಿರ ಲಾಸ್ ಏಂಜಲೀಸ್‌ನಲ್ಲಿ ಈ ದಿನ ಸ್ಥಾಪಿಸಲ್ಪಟ್ಟಿತು.
1919: ನೊಬೆಲ್ ಪ್ರಶಸ್ತಿ ಪುರಸ್ಕೃತ ಜರ್ಮನಿಯ ರಸಾಯನಶಾಸ್ತ್ರಜ್ಞ ಹರ್ಮನ್ ಎಮಿಲ್ ಫಿಶರ್ ಆತ್ಮಹತ್ಯೆ ಮಾಡಿಕೊಂಡರು.
1923: ಇಟಲಿಯ ಸಂಸತ್ತಿನಿಂದ ಹೊಸ ಸಂವಿಧಾನ ಅಂಗೀಕಾರವಾಯಿತು.
1955: ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರು, ಅಂದಿನ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಭಾರತದ ಅತ್ಯನ್ನತ ಪ್ರಶಸ್ತಿ ‘ಭಾರತ ರತ್ನ’ ಸ್ವೀಕರಿಸಿದರು. ಭಾರತ ಮಾತ್ರವಲ್ಲದೆ ವಿಶ್ವಾದ್ಯಂತ ತಮ್ಮ ನಾಯಕತ್ವದ ಚರೀಷ್ಮಾದಿಂದ ಗಮನ ಸೆಳೆದಿದ್ದ ಅವರು, ದೇಶಕ್ಕೆ ಈಗಲೂ ಮಾದರಿಯಾಗಿದ್ದಾರೆ.
1961: ಮಹಿಳೆ ಮತ್ತು ಪುರುಷ ಸಮಾನರು ಎಂಬ ಕಾಯ್ದೆಯನ್ನು ಸ್ಪೇನ್ ಅಂಗೀಕರಿಸಿತು.
1997: ಈ ದಿನ ಪರಿಸರವಾದಿ ಮಹೇಶ್‌ಚಂದ್ರ ಮೆಹ್ತಾ ಅವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ದೊರೆಯಿತು. ಪರಿಸರ ಮಾಲಿನ್ಯ ಉಂಟುಮಾಡುವ ಕಾರ್ಖಾನೆಗಳ ವಿರುದ್ಧ ನ್ಯಾಯಾಲಯಗಳಲ್ಲಿ ಹೋರಾಟ ನಡೆಸಿದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ಸಂದಿತು.
2006: ಟ್ವಿಟರ್ ಈ ದಿನ ಆರಂಭವಾಯಿತು. ಈಗ ಅದು ವಿಶ್ವದ ಬಹುದೊಡ್ಡ ಸಾಮಾಜಿಕ ಜಾಲತಾಣವಾಗಿ ಬೆಳೆದಿದೆ.