ರಸ್ತೆಗಳ ನಿರ್ಮಾಣಕ್ಕೆ ಪ್ಲಾಸ್ಟಿಕ್ ತ್ಯಾಜ್ಯ ಬಳಸಿದ 75ರ ಹರೆಯದ ಭಾರತದ ಪ್ರಾಧ್ಯಾಪಕ

Update: 2018-07-29 18:30 GMT

ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸುವ ಹೊಸ ಹೊಸ ವಿಧಾನಗಳು 75ರ ಹರೆಯದ ರಾಜಗೋಪಾಲನ್ ವಾಸುದೇವನ್ ಅವರಿಗೆ ಉತ್ತಮ ಫಲಿತಾಂಶಗಳು ನೀಡಿದೆ.

ದೇಶಾದ್ಯಂತ ಪಾಸ್ಟಿಕ್ ತ್ಯಾಜ್ಯ ದಿನೇ ದಿನೇ ಹೆಚ್ಚುತ್ತಿರುವ ಒಂದುಸಮಸ್ಯೆಯಾಗಿರುವುದು ಮಧುರೈನ ತ್ಯಾಗರಾಜನ್ ಇಂಜಿನಿಯ ರಿಂಗ್ ಕಾಲೇಜಿನ ಡೀನ್ ಹಾಗೂ ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೊ. ವಾಸುದೇವನ್ ಅವರನ್ನು ಚಿಂತೆಗೀಡು ಮಾಡಿತ್ತು. ಅವರು ರೀಸೈಕಲ್ ಮಾಡಲಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಗಮನೀಯ ಹಾಗೂ ದೀರ್ಘ ಕಾಲ ಬಾಳಿಕೆ ಬರುವ ರಸ್ತೆಗಳ ನಿರ್ಮಾಣಕ್ಕೆ ಬಳಸುವ ಹೊಸ ತಂತ್ರಜ್ಞಾನ ವಿಧಾನವನ್ನು ಕಂಡು ಹಿಡಿದರು. ಈಗ ಬಿಟುಮೆನ್ ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ಸರಿಯಾದ ಒಂದು ಮಿಶ್ರಣವನ್ನು ಬಳಸಿ 55,000 ಕಿ.ಮೀ. ರಸ್ತೆಗಳನ್ನು ನಿರ್ಮಿಸಲಾಗಿದೆ.
2050ರ ಸುಮಾರಿಗೆ ವಿಶ್ವದಲ್ಲಿರುವ ಸಾಗರಗಳಲ್ಲಿ ಮೀನು ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಇರಲಿದೆ ಎಂದು ಪ್ರೊ. ವಾಸುದೇವನ್ ಅವರಿಗೆ ತಿಳಿದಿತ್ತು. ವರದಿಯೊಂದರ ಪ್ರಕಾರ 1950ರಿಂದ 2017 ರವರೆಗೆ ಒಂಬತ್ತು ಬಿಲಿಯ ಟನ್‌ಗಳಿಗಿಂತಲೂ ಹೆಚ್ಚು ಪ್ಲಾಸ್ಟಿಕ್ ಅನ್ನು ಉತ್ಪಾದಿಸಲಾಗಿದೆ. ಭಾರತವು ಒಂದು ದಿನದಲ್ಲಿ 25,000 ಟನ್‌ಗಿಂತಲೂ ಹೆಚ್ಚು ಪಾಸ್ಟಿಕ್ ಉತ್ಪಾದಿಸುತ್ತದೆ. ಇದು ನಮ್ಮ ದೇಶ ಉತ್ಪಾದಿಸುವ ತ್ಯಾಜ್ಯದ ಎಂಟರಿಂದ ಹತ್ತು ಶೇಕಡಾದಷ್ಟು ಆಗಿದೆ.

ಸರಳ ವಿಧಾನ

ಈ ವರ್ಷ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ರಾಜಗೋಪಾಲನ್ ವಾಸು ದೇವನ್ ಕಂಡುಹಿಡಿದ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ರಸ್ತೆಗಳು ಹನ್ನೊಂದು ವರ್ಷಗಳ ಬಳಿಕವೂ ಸುಸ್ಥಿತಿಯಲ್ಲಿವೆ. 2002ರಲ್ಲಿ ಪೇಟೆಂಟ್ ಮಾಡಲಾದ ಹಾಗೂ 2005ರಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಂಜೂರಾತಿ ಪಡೆದ ವಾಸುದೇವನ್ ರವರ ನೂತನ ವಿಧಾನ ದೇಶದಲ್ಲಷ್ಟೇ ಅಲ್ಲ ಚೀನಾ, ಜಪಾನ್, ಇಂಡೋನೇಶ್ಯಾ, ಮಲೇಶ್ಯಾ, ಬ್ರೂನೈ, ದಕ್ಷಿಣ ಆಫ್ರಿಕದಂತಹ ವಿದೇಶ ಗಳಲ್ಲೂ ಆಸಕ್ತಿ ಮೂಡಿಸಿದೆ. ತಮ್ಮ ದೇಶದಲ್ಲೂ ಈ ತಂತ್ರಜ್ಞಾನ ಬಳಸಲು ಅವುಗಳು ಆಸಕ್ತಿ ತೋರಿವೆ.

ಈಗ 20ಕ್ಕೂ ಹೆಚ್ಚು ದೇಶಗಳು ಅದ್ಭುತ ಫಲಿತಾಂಶದೊಂದಿಗೆ ಈ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿವೆ. ಈ ತಂತ್ರಜ್ಞಾನದಲ್ಲಿ ಪ್ರತೀ ಒಂದು ಕಿಲೋ ಜಲ್ಲಿಕಲ್ಲಿನೊಂದಿಗೆ 50 ಗ್ರಾಂ. ಬಿಟುಮಿನ್ ಬಳಸಲಾ ಗುತ್ತದೆ ಮತ್ತು ಇದರ ಹತ್ತನೇ ಒಂದು ಭಾಗವು ಪ್ಲಾಸ್ಟಿಕ್ ತ್ಯಾಜ್ಯ ವಾಗಿದೆ. ಪರಿಣಾಮವಾಗಿ ಅದು ಬಿಟುಮಿನ್ ಬಳಕೆಯ ಪ್ರಮಾಣ ವನ್ನು ಕಡಿಮೆ ಮಾಡುತ್ತದೆ

ಇದೆಲ್ಲ ಹೇಗೆ ಆರಂಭವಾಯಿತು?

ಒಣ ಚೂರುಚೂರು ಪ್ಲಾಸ್ಟಿಕ್‌ಅನ್ನು 170 ಡಿಗ್ರಿ ಸೆಲ್ಸಿಯಸ್‌ಗೆ ಬಿಸಿ ಮಾಡಿದ ಗ್ರಾವೆಲ್ ಅಥವಾ ಬಿಟುಮಿನ್‌ನ ಮೇಲೆ ಸ್ಪ್ರೇ ಮಾಡುವ ವಿಚಾರ ವಾಸದೇವನ್‌ರವರಿಗೆ ಒಲಿದದ್ದು 2002ರಲ್ಲಿ. ಹೀಗೆ ಪ್ಲಾಸ್ಟಿಕ್ ಕೋಟ್ ಮಾಡಿದ ಕಲ್ಲುಗಳನ್ನು (ಜಲ್ಲಿಯನ್ನು) ಕರಗಿಸಿದ ಟಾರ್ ನೊಂದಿಗೆ ಮಿಶ್ರಣ ಮಾಡಲಾಯಿತು. ಪ್ಲಾಸ್ಟಿಕ್ ಮತ್ತು ತಾರ್ ಎರಡೂ ಕೂಡ ಪೆಟ್ರೋಲಿಯಂ ಉತ್ಪನ್ನಗಳಾಗಿರುವುದರಿಂದ ಅವುಗಳು ಚೆನ್ನಾಗಿ ಅಂಟಿಕೊಳ್ಳುತ್ತವೆ. ತ್ಯಾಗರಾಜ ಇಂಜಿನಿಯರಿಂಗ್ ಕ್ಯಾಂಪಸ್‌ನಲ್ಲಿ ಒಂದು ರಸ್ತೆ ನಿರ್ಮಿಸುವಾಗ ಆ ತಂತ್ರವನ್ನು ಮೊದಲ ಬಾರಿಗೆ ಬಳಸಿ ಪ್ರಯೋಗ ನಡೆಸಲಾಯಿತು. ಅದ್ಭುತ ಫಲಿತಾಂಶ ದೊರಕಿತು. ಈಗ ಈ ತಂತ್ರ ಹಾಗೂ ತಂತ್ರಜ್ಞಾನವನ್ನು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಗ್ರಾಮ ಪಂಚಾಯತ್ ನಿರ್ಮಿಸುವ ರಸ್ತೆಗಳೂ ಸೇರಿದಂತೆ ಎಲ್ಲ ಹಂತಗಳಲ್ಲೂ ಬಳಸಲಾಗುತ್ತದೆ. ವಾಸುದೇವನ್‌ಅವರನ್ನು ‘ಪ್ಲಾಸ್ಟಿಕ್ ಮ್ಯಾನ್ ಆಫ್ ಇಂಡಿಯಾ’ ಎಂದು ಕರೆಯಲಾಗುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಶೋಧನೆಗಳು ಮತ್ತು ಮನ್ನಣೆಗಳು

ಒಂದು ಸಂಶೋಧನೆಯಿಂದ ತೃಪ್ತರಾಗದ ಪಾಸ್ಟಿಕ್ ಮ್ಯಾನ್ ಕೊರೆತ- ಮುಕ್ತ (ಕೊರೊಶನ್ ಫ್ರೀ) ರಾಡುಗಳು ಹಾಗೂ ‘ಪ್ಲಾಸ್ಟೋನ್’ ಬ್ಲಾಕ್ ಗಳಂತಹ ಇನ್ನೂ ಕೆಲ ಶೋಧನೆಗಳನ್ನು ಮಾಡಿದ್ದಾರೆ. ಇದನ್ನೆಲ್ಲ ಪರಿ ಗಣಿಸಿ ಅವರಿಗೆ ಹಲವಾರು ಪ್ರಶಸ್ತಿಗಳು, ಮನ್ನಣೆಗಳು ಲಭಿಸಿವೆ. ಆಡಳಿತದಲ್ಲಿ ಹೊಸ ಶೋಧಕ್ಕಾಗಿ ಇರುವ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ, ಉದಯಪುರದ ಮೇವಾರ್ ಪ್ರತಿಷ್ಠಾನ ನೀಡುವ ಮಹಾರಾಣಾ ಉದಯಸಿಂಗ್ ಪ್ರಶಸ್ತಿ ಮತ್ತು ಭಾರತದ ಪ್ರಧಾನಿ ಯವರು 2015ರಲ್ಲಿ ಪ್ರದಾನ ಮಾಡಿದ ‘ದಿ ಟೆಕ್ ಐಕಾನ್ ಆಫ್ ಇಂಡಿಯಾ’ ಪ್ರಶಸ್ತಿ ಇತ್ಯಾದಿ.

ಲಾಭಗಳು
ತನ್ನ ನೂತನ ವಿಧಾನದಿಂದ ನಿರ್ಮಾಣವಾಗುವ ರಸ್ತೆಯ ಲಾಭಗಳು, ಉಪಯೋಗಗಳು ಹಲವು ಎನ್ನುತ್ತಾರೆ ವಾಸುದೇವನ್. ಸಾಮಾನ್ಯವಾದ ಬಿಟುಮಿನ್ ರಸ್ತೆಗೆ ಹೋಲಿಸಿದರೆ ಪ್ಲಾಸ್ಟಿಕ್ ರಸ್ತೆ ದ್ವಿಗುಣ ಶಕ್ತಿ ಹೊಂದಿರುತ್ತದೆ. ಅದು ಭಾರವಾದ ಲೋಡ್ ಮತ್ತು ಭಾರೀ ಸಂಚಾರವನ್ನು ತೆಗೆದುಕೊಳ್ಳಬಲ್ಲದು. ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆಯ ಗುಣಮಟ್ಟ ನಿಯಮಗಳಿಗನುಸಾರವಾಗಿ ಪ್ಲಾಸ್ಟಿಕ್ ರಸ್ತೆಯ ಗುಣಮಟ್ಟ ಅಧ್ಯಯನಗಳನ್ನು ನಡೆಸಲಾಯಿತು. ಅಧ್ಯಯನಗಳ ಪ್ರಕಾರ ಅತ್ಯುತ್ತಮ ಫಲಿತಾಂಶ ದೊರಕಿದೆ.
ಇಷ್ಟೇ ಅಲ್ಲದೆ ಶೀತ ಪ್ರದೇಶಗಳಲ್ಲಿ ಬಳಸಲು ಯೋಗ್ಯವಾದ ಒಂದು ಶೀತ ಮಿಶ್ರಣ ರಸ್ತೆ ನಿರ್ಮಾಣ ವಿಧಾನವನ್ನು ವಾಸುದೇವನ್ ಅಭಿವೃದ್ಧಿಪಡಿಸಿದ್ದಾರೆ. ಶೀತ ಪ್ರದೇಶಗಳಲ್ಲಿ ಬಿಟುಮೆನ್ ಅನ್ನು ಬಿಸಿ ಮಾಡುವುದು ಸುಲಭವಲ್ಲವಾದ್ದರಿಂದ ಅಂತಹ ಪ್ರದೇಶಗಳಲ್ಲಿ ಈ ತಂತ್ರಜ್ಞಾ ತುಂಬಾ ಉಪಯೋಗಕಾರಿಯಾಗುತ್ತದೆ.
ಅಲ್ಲದೆ ಪಾಲಿಮಾರ್ ಸುಧಾರಿತ ಬಿಟುಮೆನ್ ರೂಫಿಂಗ್ ಶೀಟ್‌ಗಳು ಕಟ್ಟಡ ನಿರ್ಮಾಣದಲ್ಲಿ ಕೊರೆತವನ್ನು ತಡೆಯಬಲ್ಲ ರೀನ್ ಫೋರ್ಸ್‌ಡ್ ಸ್ಟೀಲ್ ಬಾರ್‌ಗಳನ್ನು ಕೂಡ ವಾಸುದೇವನ್ ಅಭಿವೃದ್ಧಿಪಡಿಸಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಮುಕ್ತಿ ಪಡೆಯಲು ಸರಕಾರವು ರಸ್ತೆ ನಿರ್ಮಾಣದಲ್ಲಿ ಪುಡಿ ಮಾಡಲಾದ ಪಾಸ್ಟಿಕ್ ಬಳಕೆಯನ್ನು ಪ್ರೋತ್ಸಾಹಿಸುತ್ತದೆ. ಜೂನ್ 5, ವಿಶ್ವ ಪರಿಸರ ದಿನಾಚರಣೆಯಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶದ ಜನತೆಗೆ ‘‘ಇನ್ನಷ್ಟು ಸ್ವಚ್ಛವಾದ ಮತ್ತು ತಡೆದುಕೊಳ್ಳಬಲ್ಲ (ಸಸ್ಟೈನಬಲ್) ಗ್ರಹಕ್ಕಾಗಿ ಶ್ರಮಿಸುವಂತೆ ದೇಶದ ಜನತೆಗೆ ಟ್ವೀಟ್ ಮಾಡಿದರು. ಈ ದಿಕ್ಕಿನಲ್ಲಿ ವಾಸುದೇವನ್ ಪ್ರಯತ್ನ ಒಂದು ಸರಿಯಾದ ಹೆಜ್ಜೆಯಾಗಿದೆ.

Writer - ಅಫ್ತಾಬ್ ಹುಸೈನ್ ಕೋಲಾ

contributor

Editor - ಅಫ್ತಾಬ್ ಹುಸೈನ್ ಕೋಲಾ

contributor

Similar News

ಜಗದಗಲ
ಜಗ ದಗಲ