ಸಿಐಸಿ- ಪಿಸಿಐ ವಾದ, ವಿವಾದ

Update: 2018-08-01 18:30 GMT

ಸೆಂಟ್ರಲ್ ಇನ್ಫರ್ಮೇಷನ್ ಕಮಿಷನ್ (ಸಿಐಸಿ) ಇತ್ತೀಚೆಗೆ ಪ್ಯಾರಾಲಿಂಪಿಕ್ಸ್ ಕಮಿಟಿ ಆಫ್ ಇಂಡಿಯಾ (ಪಿಸಿಐ)ವನ್ನು ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸದೆ ಇದ್ದುದಕ್ಕಾಗಿ ತರಾಟೆಗೆ ತೆಗೆದುಕೊಂಡಿದೆ ಮತ್ತು ಅದರ ಮಾಜಿ ಅಧ್ಯಕ್ಷ ರಾಜೇಶ್ ತೋಮರ್ ಸಲ್ಲಿಸಿದ್ದ ಮನವಿಯೂ ಸೇರಿದಂತೆ ಎಲ್ಲ ಆರ್‌ಟಿಐ ಮನವಿಗಳಿಗೆ ಉತ್ತರಿಸುವಂತೆ ನಿರ್ದೇಶಿಸಿದೆ. ‘‘ಪಿಸಿಐ ಎಲ್ಲ ನಿಯಮಗಳಿಗನು ಸಾರವಾಗಿ ಹಾಗೂ ಭಾರತದ ತಂಡಗಳನ್ನು ಆಯ್ಕೆ ಮಾಡುವ ಮತ್ತು ಸರಕಾರದಿಂದ ಅನುದಾನಗಳನ್ನು ಪಡೆದಿರುವ ಕಾರಣಕ್ಕಾಗಿ, ಆರ್‌ಟಿಐ ಕಾಯ್ದೆಯ ಪ್ರಕಾರ ಪಿಸಿಐ ಒಂದು ಸಾರ್ವಜನಿಕ ಪ್ರಾಧಿಕಾರ’’ ಎಂದು ಕೇಂದ್ರ ಮಾಹಿತಿ ಆಯೋಗದ ಕಮಿಷನರ್ ಎಂ ಶ್ರೀಧರ್ ಆಚಾರ್ಯಲು ಹೇಳಿದ್ದಾರೆ. ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಸ್ಪರ್ಧೆಗಳಿಗೆ ಭಾರತದ ತಂಡಗಳನ್ನು ಆಯ್ಕೆ ಮಾಡುವ ಪಿಸಿಐ ಕೇಂದ್ರ ಸರಕಾರದ ಕೋಟಿಗಟ್ಟಲೆ ಮೊತ್ತದ ಅನುದಾನ ಪಡೆಯುತ್ತದೆ.

ಪಿಸಿಐ ಪರವಾಗಿ ವಾದಿಸುತ್ತ ಸಿಐಸಿಯ ಮುಂದೆ ನ್ಯಾಯವಾದಿ ಬಿ. ಕೆ. ಗೋಯಲ್ ಹೇಳಿದರು: ‘‘ಈ ವರ್ಷ ಫೆಬ್ರವರಿ 8ರಂದು ತೋಮರ್ ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯೆಯಾಗಿ ಪಿಸಿಐ ಎಪ್ರಿಲ್ 16ರಂದು ಒಂದು ಉತ್ತರ ನೀಡಿತ್ತು. ಆ ಉತ್ತರದಲ್ಲಿ ಪಿಸಿಐ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 8 (1) (ಡಿ) ನಿಯಮದ ಪ್ರಕಾರ ವಾಣಿಜ್ಯ ಗೌಪ್ಯತೆಯ ನೆಲೆಯಲ್ಲಿ ಸೂಕ್ತ ಮಾಹಿತಿ ನೀಡಲು ನಿರಾಕರಿಸಿತು.
ಆರ್‌ಟಿಐ ಸಲ್ಲಿಸಿದ ಪ್ರಶ್ನೆಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಪಿಸಿಐ ಖಾಲಿ ಕಾಗದ ಕಳುಹಿಸಿತು. ತನಗೆ ಉತ್ತರ ರೂಪವಾಗಿ ಪಿಸಿಐ ಕಳುಹಿಸಿದ ಖಾಲಿ ಹಾಳೆಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಸಿಐಸಿ ಇಂತಹ ತುಂಟಾಟವನ್ನು ಸೂಕ್ತ ವಿಚಾರಣೆ ನಡೆಸದೆ ಬಿಡಕೂಡದು ಎಂದಿತ್ತು. ‘‘ಇಂತಹ ಪ್ರತಿಕ್ರಿಯೆ ಉತ್ತರಗಳನ್ನು ಬಚ್ಚಿಡುವುದಕ್ಕೆ ಸಮಾನವಾಗುತ್ತದೆ’’ ಎಂದು ಆಚಾರ್ಯಲು ಹೇಳಿದ್ದಾರೆ.

ನ್ಯಾಯವಾದಿಗಳಿಗೆ ಮಾಡಿದ ಪಾವತಿ ‘‘ಬಹಿರಂಗ ಪಡಿಸಲಾಗದ ಮಾಹಿತಿ’’ ಆಗಲಾರದು.
ತನ್ನ ವಿರುದ್ಧ ವಾದಿಸಲು ನಿಯುಕ್ತಿಗೊಳಿಸಿದ ನ್ಯಾಯವಾದಿ ಗಳಿಗೆ ನೀಡಲಾದ ಮೊತ್ತಗಳ ವಿವರಗಳನ್ನು ನೀಡುವಂತೆ ತೋಮರ್ ತನ್ನ ಮನವಿಯಲ್ಲಿ ಕೇಳಿಕೊಂಡಿದ್ದರು. ಆದರೆ ಹೀಗೆ ನೀಡಲಾದ ಮೊತ್ತಗಳ ವಿವರ ಕಾನ್ಫಿಡೆನ್ಶಿಯಲ್ ಮಾಹಿತಿಯಾಗಲಾರದು ಎಂದು ಆಚಾರ್ಯರು ತನ್ನ ಆಜ್ಞೆಯಲ್ಲಿ ಹೇಳಿದ್ದಾರೆ: ‘‘ಯುವಜನ ವ್ಯವಹಾರಗಳು ಮತ್ತು ಮತ್ತು ಕ್ರೀಡಾ ಸಚಿವಾಲಯದಿಂದ ಒಂದು ಸಾರ್ವಜನಿಕ ಪ್ರಾಧಿಕಾರ ಎಂದು ಮಾನ್ಯತೆ ಪಡೆದಿರುವ ಪಿಸಿಐ ಅಂತಹ ಮಾಹಿತಿಯನ್ನು ನಿರಾಕರಿಸಲಾಗದು.’’

  ವಿಚಾರಣೆಯ ವೇಳೆ ಬಿಸಿಸಿಐ ಬಗ್ಗೆ ಕಾನೂನು ಆಯೋಗದ ಶಿಫಾರಸಿನ ಪ್ರಸ್ತಾವ.
ಪಿಸಿಐ ಪ್ರತಿನಿಧಿಯು ಬಿಸಿಸಿಐ ಪ್ರಕರಣದಲ್ಲಿ 2016ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ್ದರು. ಆರ್‌ಟಿಐ ಕಾಯ್ದೆಯ ಪ್ರಕಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಂದು ಸಾರ್ವಜನಿಕ ಪ್ರಾಧಿಕಾರ ಹೌದೋ ಅಲ್ಲವೋ ಎಂದು ಪರಿಗಣಿಸಿ ಹೇಳುವಂತೆ ಕಾನೂನು ಆಯೋಗವನ್ನು ಆ ಪ್ರಕರಣದಲ್ಲಿ ಕೇಳಿಕೊಳ್ಳಲಾಗಿತ್ತು. ಕಾನೂನು ಆಯೋಗವು ಈ ವರ್ಷ ಎಪ್ರಿಲ್ ತಿಂಗಳಲ್ಲಿ ಬಿಸಿಸಿಐಯನ್ನು ಒಂದು ಸಾರ್ವಜನಿಕ ಪ್ರಾಧಿಕಾರವಾಗಿ ಮಾಡುವಂತೆ ಪ್ರಬಲವಾಗಿ ಶಿಫಾರಸು ಮಾಡಿತ್ತು.
ಪಿಸಿಐ ವಾರ್ಷಿಕ 3ರಿಂದ 5 ಕೋಟಿ ರೂಪಾಯಿ ಅನುದಾನ ಪಡೆಯುತ್ತದೆ. ಪಿಸಿಐ ಒಂದು ರಾಷ್ಟ್ರೀಯ ಕ್ರೀಡಾ ಫೆಡರೇಷನ್ ಆಗಿರುವುದರಿಂದ ಅದು ಒಂದು ಸಾರ್ವಜನಿಕ ಪ್ರಾಧಿಕಾರವಾಗಿದೆ. ಅಲ್ಲದೆ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಮಂಡಳಿಯ ಪ್ರಕಾರ ಯಾವುದೇ ರಾಷ್ಟ್ರೀಯ ಕ್ರೀಡಾ ಫೆಡರೇಶನ್ ವರ್ಷವೊಂದರ ರೂಪಾಯಿ ಹತ್ತು ಲಕ್ಷ ಅಥವಾ ಹತ್ತು ಲಕ್ಷಕ್ಕಿಂತ ಹೆಚ್ಚು ಅನುದಾನಗಳನ್ನು ಪಡೆದಲ್ಲಿ ಅದೊಂದು ಸಾರ್ವಜನಿಕ ಪ್ರಾಧಿಕಾರವಾಗುತ್ತದೆ. ಈ ಎಲ್ಲ ಅಂಶಗಳ ಬೆಳಕಿನಲ್ಲಿ ಪರಿಶೀಲಿಸಿದಾಗ ಪಿಸಿಐ ಒಂದು ಸಾರ್ವಜನಿಕ ಸಂಸ್ಥೆ ಅಥವಾ ಪ್ರಾಧಿಕಾರವಲ್ಲ ಎಂಬ ಪಿಸಿಐ ಪ್ರತಿನಿಧಿಯ ವಾದ ಕಾನೂನು ಬಾಹಿರ ವಿರೋಧಾಭಾಸದಿಂದ ಕೂಡಿದ್ದು ಹಾಗೂ ಅನಪೇಕ್ಷಿತವಾದದ್ದಾಗಿದೆ.

 2015ರಲ್ಲಿ ಎಪ್ರಿಲ್ನಲ್ಲಿ ತೋಮರ್‌ರನ್ನು ಅವರ ಹುದ್ದೆಯಿಂದ ವಜಾ ಮಾಡಲಾಗಿತ್ತು.
ಗಾಝಿಯಾಬಾದ್‌ನಲ್ಲಿ ನಡೆದ 15ನೇ ರಾಷ್ಟ್ರೀಯ ಪ್ಯಾರಾಲಿಂಪಿಕ್ ಕೂಟದಲ್ಲಿ ಸರಿಯಾದ, ಸಾಕಷ್ಟು ಸೌಕರ್ಯಗಳನ್ನು ಒದಗಿಸಲಾಗಿಲ್ಲ ಎಂಬ ಆಪಾದನೆ ಮೇಲೆ ತೋಮರ್‌ರನ್ನು ಪಿಸಿಐ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಗಿತ್ತು. ಆದರೆ ಅವರು ಕ್ರೀಡಾಕೂಟವನ್ನು ಏರ್ಪಡಿಸಲು ಸರಕಾರವೂ ಸರಿಯಾದ ಒಂದು ಸ್ಥಳವನ್ನು ನೀಡಲಿಲ್ಲವೆಂದು ಸರಕಾರವನ್ನು ದೂರಿದ್ದರು.
ಕೃಪೆ: thewire.in

Writer - ಗೌರವ್ ವಿವೇಕ್ ಭಟ್ನಾಗರ್

contributor

Editor - ಗೌರವ್ ವಿವೇಕ್ ಭಟ್ನಾಗರ್

contributor

Similar News

ಜಗದಗಲ
ಜಗ ದಗಲ