ಅಂದಿನ ತುರ್ತು ಪರಿಸ್ಥಿತಿಯ ಕರಾಳ ದಿನಗಳು ಹಾಗೂ ಇಂದಿನ ದ್ವೇಷ ರಾಜಕಾರಣದ ಕಾರ್ಮೋಡಗಳು

Update: 2018-08-02 18:31 GMT

ಭಾಗ-2

ಜರ್ಮನಿಯಲ್ಲಿ ಹಿಟ್ಲರ್ ಯಹೂದಿಗಳನ್ನು ಒಂದು ಪೆಡಂಭೂತವಾಗಿ ರೂಪಿಸಿ, ಜರ್ಮನರೇ ಸರ್ವ ಶ್ರೇಷ್ಠ ಜನಾಂಗವೆಂದು ಜರ್ಮನರನ್ನು ಬಡಿದೆಬ್ಬಿಸಿ ಬಳಸಿಕೊಂಡಂತೆಯೇ, ಭಾರತದಲ್ಲಿ ಸಂಘ ಪರಿವಾರದವರು ಅಲ್ಪಸಂಖ್ಯಾತ ಮುಸಲ್ಮಾನರನ್ನು ಒಂದು ದೈತ್ಯನಂತೆ ರೂಪಿಸಿ ಅವರ ವಿರುದ್ಧ ಹಿಂದುತ್ವವೆಂಬ ವಿನಾಶಕಾರಿ, ವೈದಿಕಶಾಹಿಯನ್ನು ಛೂ ಬಿಟ್ಟು ಸಂಘಟಿಸುವ ಮೂಲಕ ಅಧಿಕಾರ ಹಿಡಿಯುವ ಕುತಂತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ಹಿಟ್ಲರ್‌ನಂತೆಯೇ ಸುಳ್ಳನ್ನೇ ಪದೇ ಪದೇ ಹೇಳುವ ಮೂಲಕ ಸುಳ್ಳನ್ನು ಸತ್ಯವಾಗಿಸುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದಾರೆ.

1977ರ ಚುನಾವಣೆಯಲ್ಲಿ, ತುರ್ತುಪರಿಸ್ಥಿತಿ ಹೇರಿದವರನ್ನು ತಿರಸ್ಕರಿಸುವ ಮೂಲಕ ಶಿಕ್ಷೆ ವಿಧಿಸಿದ ಜನರೇ 1982ನೇ ಇಸವಿಯಲ್ಲಿ ಅವರನ್ನೇ ಮತ್ತೆ ಆಯ್ಕೆ ಮಾಡಿ ಅಧಿಕಾರಕ್ಕೆ ಏರಿಸಿದ್ದನ್ನು, ತುರ್ತುಪರಿಸ್ಥಿತಿ ಹೇರಿದವರನ್ನು ಈ ದೇಶದ ಜನ ಕ್ಷಮಿಸಿಬಿಟ್ಟರು ಎಂದು ವ್ಯಾಖ್ಯಾನಿಸಬಹುದೇ? ತುರ್ತು ಪರಿಸ್ಥಿತಿ ಹೇರಿದ್ದಕ್ಕೆ 1977ರ ಚುನಾವಣೆಯಲ್ಲಿ ಸೋಲುಣಿಸಿ ನೀಡಿದ ಶಿಕ್ಷೆಯಷ್ಟೇ ಸಾಕೆಂಬುದು ಜನರ ತೀರ್ಮಾನವೇ? ಅಥವಾ 1977ರ ಚುನಾವಣೆಯಲ್ಲಿ ಸೋಲಿಸಿ, ತುರ್ತುಪರಿಸ್ಥಿತಿ ಹೇರಿದ್ದಕ್ಕಾಗಿ ಶಿಕ್ಷೆಗೆ ಒಳಪಡಿಸಿದ ಜನರನ್ನೇ ಮತ್ತೆ 1982ರಲ್ಲಿ ಅಧಿಕಾರಕ್ಕೇರಿಸಿದ್ದಕ್ಕೆ ಬೇರೆ ಕಾರಣಗಳೇನಾದರೂ ಇದೆಯೇ? ಎಂಬುದರ ಬಗ್ಗೆ ಗಂಭೀರವಾಗಿ ವಿಮರ್ಶೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ನನಗನಿಸುತ್ತಿದೆ.

2018ನೇ ಇಸವಿ ಜೂನ್ 26ಕ್ಕೆ ತುರ್ತುಪರಿಸ್ಥಿತಿ ಹೇರಿದ 43ನೇ ವರ್ಷ. ಇಷ್ಟು ವರ್ಷ ಇಲ್ಲದಂತಹ ಕಾರ್ಯಕ್ರಮವನ್ನು ಕೇಂದ್ರದ ಮೋದಿ ಸರಕಾರ ಹಮ್ಮಿಕೊಂಡಿತ್ತು. ಅದು ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸಿ, ಇಂದಿರಾಗಾಂಧಿಯನ್ನು ಖಳನಾಯಕಿ ಮಾಡಿ, ಕಾಂಗ್ರೆಸ್‌ನ ವಿರುದ್ಧ ಜನರ ಭಾವನೆಯನ್ನು ಕೆರಳಿಸಿ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುವ ರಾಜಕೀಯ ಪ್ರೇರಿತ ಕಾರ್ಯಕ್ರಮವಾಗಿತ್ತು ಎಂಬುದು ನಿರ್ವಿವಾದ.
 ಇಂದಿರಾಗಾಂಧಿಯವರನ್ನು ಫ್ಯಾಶಿಸ್ಟ್ ಹಿಟ್ಲರ್‌ಗೆ ಹೋಲಿಸಲಾಯಿತು. ಹೀಗೆ ಮಾಡಿದ್ದು ಹಿಟ್ಲರ್ ಕಾರ್ಯತಂತ್ರದ ಪ್ರತಿರೂಪವೇ ಆಗಿತ್ತೆಂದು ಬೇರೆ ಹೇಳಬೇಕಾಗಿಲ್ಲ. ಇಂದಿರಾಗಾಂಧಿಯವರು ಹಿಟ್ಲರ್‌ನ ಪ್ರತಿರೂಪವೇ ಆಗಿದ್ದರೆ, 1975ರ ಮಹಾಚುನಾವಣೆ ಘೋಷಣೆಯಾಗಿ, ತುರ್ತುಪರಿಸ್ಥಿತಿ ಹೇರಿದವರಿಗೆ ಶಿಕ್ಷೆ ನೀಡುವ ಅವಕಾಶವೇ ದೇಶದ ಜನರಿಗೆ ದೊರೆಯುತ್ತಿರಲಿಲ್ಲ. ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದು ತನ್ನ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಮಾತ್ರ. ಅದು ರಾಜ್ಯಾಂಗದ ತುರ್ತುಪರಿಸ್ಥಿತಿ ಹೇರುವುದಕ್ಕೆ ಅಧಿಕಾರ ನೀಡುವ ವಿಧಿಯ ನಗ್ನ ದುರುಪಯೋಗ. ರಾಜ್ಯಾಂಗವನ್ನೇ ಧ್ವಂಸಗೊಳಿಸುವ ಉದ್ದೇಶ ಅಲ್ಲ. ಅದು 1982ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಮುಗಿದು ಹೋದ ಅಧ್ಯಾಯ. ಹೀಗಿದ್ದರೂ ಸಂಘ ಪರಿವಾರ ಪ್ರತಿವರ್ಷ ಜೂನ್ 26ರಂದು ತುರ್ತುಪರಿಸ್ಥಿತಿಯ ದಿನವನ್ನು ನೆನಪಿಸುತ್ತಾ ರಾಜಕೀಯ ಮಾಡುವುದು ವಾಡಿಕೆಯಾಗಿ ನಡೆಯುತ್ತಿದೆ.
ಈಗ ಕೆಲವು ವರ್ಷದ ಹಿಂದೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕರ್ನಾಟಕದಲ್ಲಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜೈಲಿನಲ್ಲಿದ್ದವರ ಸಮಾರಂಭವೊಂದು ಸಂಘ ಪರಿವಾರದಿಂದ ಆಯೋಜಿಸಲ್ಪಟ್ಟಿತ್ತು. ತುರ್ತು ಪರಿಸ್ಥಿತಿಯಲ್ಲಿ ಬೆಂಗಳೂರು ಜೈಲಿನಲ್ಲಿದ್ದ ಎಲ್. ಕೆ. ಅಡ್ವಾಣಿಯವರು ಉದ್ಘಾಟಕರಾಗಿ ಸಮಾರಂಭಕ್ಕೆ ಆಗಮಿಸಿದ್ದರು. ನನಗೆ ಮಾತ್ರ ಆ ಸಮಾರಂಭಕ್ಕೆ ಆಹ್ವಾನವೇ ಇರಲಿಲ್ಲ. ಇಂತಹ ಇವರ ಕಾರ್ಯಕ್ರಮ ಅದೆಷ್ಟು ರಾಜಕೀಯ ಪ್ರೇರಿತ ಎನ್ನುವುದಕ್ಕೆ ಬೇರೆ ಉದಾಹರಣೆಯ ಅಗತ್ಯವೇ ಇಲ್ಲ. ತಮ್ಮ ಕ್ಷುಲ್ಲಕ ರಾಜಕೀಯಕ್ಕಾಗಿ ಸಂಘ ಪರಿವಾರದವರು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.
ಹಾಗಾದರೆ, ಸಂಘ ಪರಿವಾರದವರು ತುರ್ತುಪರಿಸ್ಥಿತಿಯನ್ನು ವಿರೋಧಿಸಿದರೇ ಎಂದು ಪರಿಶೀಲಿಸೋಣ. ನಿಜ ಸ್ಥಿತಿಯಲ್ಲಿ ಆರೆಸ್ಸೆಸ್ ತುರ್ತುಪರಿಸ್ಥಿತಿಯ ವಿರುದ್ಧ ಖಂಡಿತ ಇರಲಿಲ್ಲ. ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿ ಘೋಷಿಸುತ್ತಲೇ ಆರೆಸ್ಸೆಸ್ ಆದಿಯಾಗಿ ಕೆಲವೊಂದು ಸಂಘಟನೆಗಳ ಮೇಲೆ ನಿರ್ಬಂಧ ಹೇರಿ, ಆರೆಸ್ಸೆಸ್ ಕಾರ್ಯಕರ್ತರನ್ನು ದಸ್ತಗಿರಿ ಮಾಡಿ ಜೈಲಿಗೆ ತಳ್ಳಿದರು. ಆದ್ದರಿಂದ ಅವರು ಭೂಗತರಾಗಬೇಕಾಯಿತು. ಇಂದಿರಾಗಾಂಧಿಯ ಜೊತೆ ರಾಜಿ ಮಾಡಿಕೊಂಡು ನಿರ್ಬಂಧ ಹಿಂದೆಗೆಯಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಅವರು, ಸಂಘಪರಿವಾರದ ಮೇಲೆ ಹೇರಿದ್ದ ನಿರ್ಬಂಧದ ವಿರುದ್ಧ ಹೋರಾಡಲೇೇಕಾದಂತಹ ಪರಿಸ್ಥಿತಿ ಎದುರಾಯಿತು.
ಹೀಗೆ ಅವರು ಸಂಘ ಪರಿವಾರದ ವಿರುದ್ಧ ವಿಧಿಸಲಾಗಿದ್ದ ನಿರ್ಬಂಧದ ವಿರುದ್ಧ ಹೋರಾಡಿದ್ದರೇ ವಿನಃ ತುರ್ತುಪರಿಸ್ಥಿತಿಯ ವಿರುದ್ಧ ಅಲ್ಲ. ಒಂದು ವೇಳೆ ತುರ್ತುಪರಿಸ್ಥಿತಿಯಲ್ಲಿ ಸಂಘ ಪರಿವಾರವನ್ನು ನಿಷೇಧಿಸದೇ ಇದ್ದಿದ್ದರೆ, ಖಂಡಿತ ಅವರು ತುರ್ತುಪರಿಸ್ಥಿತಿ ವಿರುದ್ಧ ಚಕಾರವೆತ್ತುತ್ತಿರಲಿಲ್ಲ. ಈ ಬಗ್ಗೆ 1984ರಲ್ಲೇ ಮುದ್ರಣ ಕಂಡು, ಆ ಮೇಲೆ ಹಲವು ಮುದ್ರಣ ಕಂಡಿರುವ ನನ್ನ ‘ಆರೆಸ್ಸೆಸ್ ಅಂತರಂಗ’ ಎಂಬ ಪುಸ್ತಕದಲ್ಲಿ ವಿವರವಾಗಿ ದಾಖಲೆ ಸಮೇತ ಬರೆದಿದ್ದೇನೆ. ಆಸಕ್ತಿಯುಳ್ಳವರು ಅದನ್ನು ಓದಬಹುದು.
ಬಿಜೆಪಿಯವರು ತುರ್ತುಪರಿಸ್ಥಿತಿಯನ್ನು ಈಗ ವಿರೋಧಿಸುತ್ತಿದ್ದಾರೆ. ಈ ರೀತಿ ಅವರಿಗೆ ತುರ್ತುಪರಿಸ್ಥಿತಿಯನ್ನು ವಿರೋಧಿಸುವ ನೈತಿಕತೆ ಇದೆಯೇ ಎಂಬುದನ್ನು ಕೂಡ ಪರಿಶೀಲಿಸಬೇಕಾಗಿದೆ. ಏಕೆಂದರೆ ತುರ್ತುಪರಿಸ್ಥಿತಿಯ ನಂತರ ಪ್ರಚಾರದಲ್ಲಿ ಇದ್ದಂತಹ ಒಂದು ವಾಕ್ಯ ‘‘ಸಂಜಯ್ ವಿದ್ಯಾ ಬನ್ಸಿಲಾಲ್ ಆಪತ್ಕಾಲ್ಕಿ ತೀನ್ ದಲಾಲ್’’ ಎಂಬುದಾಗಿತ್ತು. ಅಂದರೆ ಸಂಜಯ್ ಗಾಂಧಿ, ವಿದ್ಯಾ ಚರಣ್ ಶುಕ್ಲ ಹಾಗೂ ಬನ್ಸಿಲಾಲ್‌ರವರು ತುರ್ತುಪರಿಸ್ಥಿತಿಯ ರೂವಾರಿಗಳು ಎಂದಾಗಿತ್ತು.
ಆ ನಂತರ ವಿದ್ಯಾಚರಣ್ ಶುಕ್ಲರವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಯಿತು. ಅವರನ್ನು ಬಿಜೆಪಿಯ ಮೂಲಕ ಲೋಕಸಭಾ ಸದಸ್ಯರನ್ನಾಗಿಸಲಾಯಿತು. ಮತ್ತೊಂದು ಕಡೆ ಹರ್ಯಾಣದಲ್ಲಿ ಬಿಜೆಪಿಯು ಬನ್ಸಿಲಾಲ್ ಜೊತೆಗೂಡಿ ಸಮ್ಮಿಶ್ರ ಸರಕಾರವನ್ನು ರಚಿಸಿತ್ತು. ಇಷ್ಟೇ ಅಲ್ಲ, ಇಂದಿರಾ ಗಾಂಧಿಯವರ ಸೊಸೆ ಹಾಗೂ ಸಂಜಯ್ ಗಾಂಧಿಯ ಪತ್ನಿ ಮೇನಕಾ ಗಾಂಧಿ ಹಾಗೂ ಅವರ ಪುತ್ರ ವರುಣ್ ಗಾಂಧಿಯವರನ್ನು ಬಿಜೆಪಿಗೆ ಸೇರಿಸಿಕೊಂಡು, ಮೇನಕಾ ಗಾಂಧಿ ಈಗ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದಾರೆ ಮತ್ತು ವರುಣ್ ಗಾಂಧಿ ಬಿಜೆಪಿಯ ಮೂಲಕವೇ ಸಂಸದರಾದರು.
ಹೀಗಿದ್ದರೂ ಸಂಘ ಪರಿವಾರದವರು, ತುರ್ತು ಪರಿಸ್ಥಿತಿಯನ್ನು ಕೆಣಕುತ್ತಾ ತಮ್ಮ ಕ್ಷುಲ್ಲಕ ರಾಜಕಾರಣ ನಡೆಸುತ್ತಿದ್ದಾರೆ. ಫ್ಯಾಶಿಸಂನ್ನು ತನ್ನದಾಗಿಸಿಕೊಂಡು, ಲಕ್ಷಾಂತರ ಯಹೂದಿಗಳನ್ನು ನಿರ್ದಯವಾಗಿ ಕೊಲ್ಲುತ್ತಾ ಗಹಗಹಸಿ ನಗುತ್ತಿದ್ದವನು ಹಿಟ್ಲರ್. ಜರ್ಮನರೇ ಮನುಷ್ಯಕುಲದ ಸರ್ವಶ್ರೇಷ್ಠರೆಂದು ಪ್ರತಿಪಾದಿಸುತ್ತಾ ಯಹೂದಿಗಳನ್ನು ರಾಕ್ಷಸರಂತೆ ಬಿಂಬಿಸುತ್ತಾ ಏಕಚಕ್ರಾದಿಪತ್ಯ ಸ್ಥಾಪಿಸಲು ಹೊರಟವನು ಹಿಟ್ಲರ್. ಈಗಿನ ಪ್ರಧಾನಿ ಹಿಟ್ಲರ್ ಸಂಸ್ಕೃತಿಯಾದ ಫ್ಯಾಶಿಸ್ಟ್‌ನ ವಾರಸುದಾರರಾಗಬಹುದಲ್ಲದೆ, ಇಂದಿರಾಗಾಂಧಿ ಖಂಡಿತ ಅಲ್ಲ.
ಜರ್ಮನಿಯಲ್ಲಿ ಹಿಟ್ಲರ್ ಯಹೂದಿಗಳನ್ನು ಒಂದು ಪೆಡಂಭೂತವಾಗಿ ರೂಪಿಸಿ, ಜರ್ಮನರೇ ಸರ್ವ ಶ್ರೇಷ್ಟ ಜನಾಂಗವೆಂದು ಜರ್ಮನರನ್ನು ಬಡಿದೆಬ್ಬಿಸಿ ಬಳಸಿಕೊಂಡಂತೆಯೇ, ಭಾರತದಲ್ಲಿ ಸಂಘ ಪರಿವಾರದವರು ಅಲ್ಪಸಂಖ್ಯಾತ ಮುಸಲ್ಮಾನರನ್ನು ಒಂದು ದೈತ್ಯನಂತೆ ರೂಪಿಸಿ ಅವರ ವಿರುದ್ಧ ಹಿಂದುತ್ವವೆಂಬ ವಿನಾಶಕಾರಿ, ವೈದಿಕಶಾಹಿಯನ್ನು ಛೂ ಬಿಟ್ಟು ಸಂಘಟಿಸುವ ಮೂಲಕ ಅಧಿಕಾರ ಹಿಡಿಯುವ ಕುತಂತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ಹಿಟ್ಲರ್‌ನಂತೆಯೇ ಸುಳ್ಳನ್ನೇ ಪದೇ ಪದೇ ಹೇಳುವ ಮೂಲಕ ಸುಳ್ಳನ್ನು ಸತ್ಯವಾಗಿಸುವ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದಾರೆ.
ಗುಜರಾತ್‌ನಲ್ಲಿ 2002ರಲ್ಲಿ ನಡೆದ ನರಮೇಧದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದವರು ನರೇಂದ್ರ ಮೋದಿ. ಆಗ ಗೋಡ್ಸೆ ಬ್ರಾಂಡಿನ ಕೇಸರಿವಾದಿಗಳು ಮಾರಕಾಸ್ತ್ರಗಳನ್ನು ಹಿಡಿದು, ಸಿಕ್ಕ ಸಿಕ್ಕ ಮುಸಲ್ಮಾನರ ಮೇಲೆ ಹಲ್ಲೆ ಮಾಡಿ ಕೊಲೆಗೈಯುತ್ತಾ ಪೈಶಾಚಿಕ ಕೃತ್ಯದಲ್ಲಿ ತೊಡಗಿದ್ದಕ್ಕೆ ಪ್ರಭುತ್ವದ ಆಶೀರ್ವಾದವಿತ್ತೆಂಬುದ್ಕೆ ಸಾಕಷ್ಟು ದಾಖಲೆಗಳು ಲಭ್ಯವಿದೆ.
ಮುಂದಿನ ದಿನಗಳಲ್ಲಿ ಭಾರತದ ವೀರ ಮಹಿಳೆ ತೀಸ್ತಾ ಸೆಟಲ್‌ವಾಡ್, ನಿರಂತರ ನಡೆಸಿದ ಕಾನೂನು ಹೋರಾಟದ ಪರಿಣಾಮವಾಗಿ ಅಂದಿನ ಗುಜರಾತ್ ಮಂತ್ರಿಮಂಡಲದಲ್ಲಿದ್ದ ಮಾಯ ಕೊಡ್ನಾನಿ ಹಾಗೂ ಗೋಡ್ಸೆ ಹಿಂದುತ್ವವಾದಿ ಮುಖಂಡ ಬಾಬು ಬಜರಂಗಿಯಾದಿಯಾಗಿ ಹತ್ತಾರು ಜನರ ಮೇಲೆ ಮೊಕದ್ದಮೆ ಹೂಡುವಂತಾಗಿ, ಅವರಿಗೆಲ್ಲಾ ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆ ಸಹ ವಿಧಿಸಲ್ಪಟ್ಟಿತು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ನಕಲಿ ಎನ್‌ಕೌಂಟರ್ ಪ್ರಕರಣಗಳಲ್ಲಿ ಆರೋಪಿಯಾಗಿ ಬಂಧನಕ್ಕೂ ಒಳಪಟ್ಟರು. ನರೇಂದ್ರ ಮೋದಿಯವರು ಗುಜರಾತ್ ಹತ್ಯಾಕಾಂಡಕ್ಕೆ ಒಬ್ಬ ಮುಖ್ಯಮಂತ್ರಿಯಾಗಿ ಕುಮ್ಮಕ್ಕು ನೀಡಿದರೆಂದು ಮೇಲುನೋಟಕ್ಕೆ ಕಂಡು ಬಂದಿದ್ದರೆಂದೂ ಆ ಬಗ್ಗೆ ವಿಚಾರಣೆಗಳೂ ನಡೆದವು. ಈ ಎಲ್ಲಾ ಬೆಳವಣಿಗೆ ನ್ಯಾಯಾಂಗದ ಮಧ್ಯ ಪ್ರವೇಶ ಮಾಡಿದ್ದರಿಂದ ಮಾತ್ರ ಆಯಿತು. ಇಲ್ಲವಾದರೆ, ಯಾವುದೂ ಹೊರಬರುತ್ತಿರಲಿಲ್ಲ. ಗುಜರಾತ್‌ನ ಅಂದಿನ ಸರಕಾರದ ಸಹಾನುಭೂತಿಯಿಂದ ಎಲ್ಲವೂ ಮುಚ್ಚಿ ಹೋಗುತ್ತಿದ್ದವು
ಮುಂದೇನಾಯಿತು? ಎಂದು ಈಗ ಚರ್ಚಿಸೋಣ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತಗಳಿಸಿ, ಗುಜರಾತ್ ಮುಖ್ಯಮಂತ್ರಿ ಮೋದಿ ಭಾರತದ ಪ್ರಧಾನಿಯಾದರು. ಆ ದಿನದಿಂದಲೇ ತನ್ನ ಏಕಚಕ್ರಾಧಿಪತ್ಯ ಸ್ಥಾಪಿಸಿ, ಭಾರತದ ಬಹುತ್ವವನ್ನು ಕೊಂದು, ಏಕತ್ವದ ಹಿಂದುತ್ವ ಸಾಮ್ರಾಜ್ಯವನ್ನಾಗಿ ಭಾರತವನ್ನು ಪರಿವರ್ತಿಸುವ ಕಾರ್ಯಸೂಚಿಗಳು ಒಂದೊಂದಾಗಿ ಜಾರಿಯಾಗುತ್ತಾ ಬರತೊಡಗಿದವು. ಇಂತಹ ಎಲ್ಲಾ ಚಟುವಟಿಕೆಗಳಿಗೆ ಅಡ್ಡ ಬರುವುದು ನ್ಯಾಯಾಂಗವೆಂಬುದನ್ನು ಮನಗಂಡ ಪ್ರಧಾನಿ ಮೋದಿ, ನ್ಯಾಯಾಧೀಶರ ನೇಮಕಾತಿ ನಿಯಮವನ್ನು ಪಾರ್ಲಿಮೆಂಟಿನ ಮುಂದೆ ಮಂಡಿಸಿ ಅನುಮೋದನೆ ಪಡೆದರು. ಮುಂದೆ ಸುಪ್ರೀಂ ಕೋರ್ಟು ಅದನ್ನು ಸಂವಿಧಾನ ಬಾಹಿರವೆಂದು ರದ್ದುಪಡಿಸಿದ ಕಾರಣ ನ್ಯಾಯಾಧೀಶರ ನೇಮಕವನ್ನೇ ಸ್ಥಗಿತಗೊಳಿಸಿ, ನ್ಯಾಯಾಂಗದ ಕೇಸರೀಕರಣಕ್ಕೆ ಮೋದಿ ಸರಕಾರ ಹವಣಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ನ್ಯಾಯಾಧೀಶರ ಕೊರತೆಯಿಂದಾಗಿ ಈಗಾಗಲೇ ಭಾರತದ ನ್ಯಾಯಾಂಗದಲ್ಲಿ ಅರಾಜಕತೆ ತಾಂಡವವಾಡತೊಡಗಿದೆ.
ನ್ಯಾಯಾಂಗವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗದಿದ್ದರೆ ಅದನ್ನು ನಿರ್ನಾಮ ಮಾಡುವುದು ಪ್ರಧಾನಿ ನರೇಂದ್ರ ಮೋದಿಯವರ ಉದ್ದೇಶವೆಂದು ತೋರುತ್ತಿದೆ. ಸಂವಿಧಾನವನ್ನೇ ಧ್ವಂಸ ಮಾಡಿ, ಮನು(ಅ)ಧರ್ಮ ಶಾಸ್ತ್ರವನ್ನೇ ಭಾರತದ ಸಂವಿಧಾನವನ್ನಾಗಿಸುವುದು ಸಂಘ ಪರಿವಾರದ ಹಿಡನ್ ಅಜೆಂಡಾ ಎಂದು ಬೇರೆ ಹೇಳಬೇಕಾಗಿಲ್ಲ. ಈ ಹಿಡನ್ ಅಜೆಂಡಾವನ್ನು ಜಾರಿಗೊಳಿಸುವುದಕ್ಕಾಗಿ, ಅಧಿಕಾರವನ್ನು ಕೇಂದ್ರೀಕರಿಸಿಕೊಳ್ಳಲು ಎಲ್ಲಾ ಸ್ವತಂತ್ರ ಸಂಸ್ಥೆಗಳನ್ನು ಅಧೀನಪಡಿಸಿಕೊಳ್ಳುವಲ್ಲಿ ಕಾರ್ಯೋನ್ಮುಖರಾದ ಮೋದಿ, ಯೋಜನಾ ಆಯೋಗವನ್ನು ರದ್ದುಪಡಿಸಿ ನೀತಿ ಆಯೋಗವನ್ನು ರಚಿಸಿಕೊಂಡರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿಯಮವನ್ನೇ ಬದಲಾಯಿಸಿ ತನ್ನ ಅಧೀನ ಪಡಿಸಿಕೊಂಡರು. ಹಾಗೆಯೇ ಸ್ವತಂತ್ರ ತನಿಖಾ ಸಂಸ್ಥೆಯಾದ ಸಿಬಿಐ ಹಾಗೂ ಆದಾಯ ತೆರಿಗೆ, ಆಯೋಜಕ ವಿಭಾಗವನ್ನು ಸಹ ತನ್ನ ಕೈಗೊಂಬೆ ಮಾಡಿಕೊಂಡ ಸರಕಾರ, ತನ್ನ ಎದುರಾಳಿ ಶಕ್ತಿಗಳನ್ನು ನಿರ್ನಾಮ ಮಾಡಲು ಈ ಎಲ್ಲಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದು ಸೂರ್ಯನ ಬೆಳಕಿನಷ್ಟೇ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಹಿಂದುತ್ವವೆಂಬ ಕೇಸರಿ ಫ್ಯಾಶಿಸ್ಟ್‌ನ್ನು ವಿರೋಧಿಸುತ್ತಿರುವ ಜಾತ್ಯತೀತ, ವಿಚಾರವಾದಿಗಳ ಧ್ವನಿ ಅಡಗಿಸಲು, ಅನ್ಯ ಬೆದರಿಕೆಯ ಮಾರ್ಗಗಳು ಫಲಿಸದಿದ್ದರೆ ಕೊಲೆ ಮಾಡುವುದರ ಮೂಲಕ ತಮ್ಮ ಕಾರ್ಯ ಸಾಧಿಸಿಕೊಳ್ಳಲು ಒಂದು ಕೊಲೆ ಪಾತಕಿಗಳ ವಿಭಾಗವನ್ನೇ ಸಂಘ ಪರಿವಾರ ಸೃಷ್ಟಿಸಿದೆಯೆಂಬುದನ್ನು ವಿಚಾರವಾದಿ ಪತ್ರಕರ್ತೆ ಗೌರಿ ಕೊಲೆಯ ತನಿಖೆಯಿಂದ ಸ್ಪಷ್ಟವಾಗಿದೆ. ಈ ಹಂತಕರ ಪಡೆ, ಈಗಾಗಲೇ ವಿಚಾರವಾದಿಗಳಾದ ಪನ್ಸಾರೆ, ದಾಭೋಲ್ಕರ್, ಕಲಬುರ್ಗಿ, ಗೌರಿ ಮುಂತಾದವರ ಕೊಲೆ ನಡೆಸುವುದರಲ್ಲಿ ಯಶಸ್ವಿಯಾಗಿ ಸಂಭ್ರಮಿಸುತ್ತಿದೆ. ಇಂತಹ ಎಲ್ಲಾ ಕೊಲೆಗಳಿಗೆ ಪರೋಕ್ಷವಾಗಿ ರಾಜಾಶ್ರಯವಿರುವುದು ಆತಂಕಕಾರಿಯಾಗಿದೆ. ಯಾವ ಶಕ್ತಿಗಳು ಗಾಂಧೀಜಿಯವರ ಹತ್ಯೆ ನಡೆಸಿದರೋ ಅದೇ ಶಕ್ತಿಗಳ ವಾರಸುದಾರರೇ ಇಂದು ಪನ್ಸಾರೆ, ದಾಭೋಲ್ಕರ್, ಕಲಬುರ್ಗಿ ಹಾಗೂ ಗೌರಿಯವರ ಹತ್ಯೆಯನ್ನು ಆಳುವ ವರ್ಗದವರ ಸಹಾನುಭೂತಿಯಿಂದಲೇ ನಡೆಸಿದ್ದಾರೆ ಹಾಗೂ ಇಂತಹ ಕೊಲೆಗಳನ್ನು ಮುಂದೆ ನಡೆಸುವುದಕ್ಕೂ ತಯಾರಿಗಳು ನಡೆಯುತ್ತಿವೆೆ. ಹಂತಕರಿಗೆ ಸಹಕರಿಸಲು ಅಪಾರ ಪ್ರಮಾಣದಲ್ಲಿ ಧನರಾಶಿ ಎಲ್ಲಿಂದಲೋ ಹರಿದು ಬರುತ್ತಿರುವುು ಸಹ ಇದೀಗ ರಹಸ್ಯವಾಗಿ ಉಳಿದಿಲ್ಲ.
ಗೌರಿ ಹಂತಕ ಆರೋಪಿಗಳಲ್ಲೊಬ್ಬ ಅಮೋಲ್‌ಕಾಳೆ ಎಂಬವನಿಗೆ, ಪ್ರತೀ ತಿಂಗಳು ಒಂದೂ ಕಾಲು ಲಕ್ಷ ರೂಪಾಯಿ ಒದಗಿಸಲಾಗಿತ್ತೆಂದು ತನಿಖೆಯ ಫಲಿತಾಂಶ ಹೇಳುತ್ತಿದೆ.
ಮೋದಿಯವರು ಪ್ರಧಾನಿಯಾದ ನಂತರ ಸಿಬಿಐಯವರ ಸಹಾನುಭೂತಿ ಪಡೆದ ಬಿಜೆಪಿಯ ಈಗಿನ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಜೈಲಿನಿಂದ ಹೊರ ಬಂದದ್ದಲ್ಲದೆ, ಕೇಸರಿ ಆರೋಪಿಗಳಾದ ಸೈನ್ಯಾಧಿಕಾರಿ ಪುರೋಹಿತ್, ಪ್ರಜ್ಞಾಸಿಂಗ್ ಆದಿಯಾಗಿ ಬಹುತೇಕ ಎಲ್ಲರೂ ಜೈಲಿನಿಂದ ಮುಕ್ತಿ ಪಡೆದಿರುವುದು, ಜೊತೆಗೆ ಗುಜರಾತ್ ಹತ್ಯಾಕಾಂಡದಲ್ಲಿ ಶಿಕ್ಷೆಗೊಳಗಾಗಿದ್ದ ಮಾಯಾ ಕೊಡ್ನಾನಿಯಾದಿಯಾಗಿ, ಬಾಬು ಬಜರಂಗಿಯೊಬ್ಬನನ್ನು ಹೊರತುಪಡಿಸಿ ಎಲ್ಲರೂ ಇಂದು ಸ್ವತಂತ್ರರಾಗಿ ಜೈಲಿನಿಂದ ಹೊರ ಬಂದಿರುವುದರ ಹಿಂದೆ ಪ್ರಭುತ್ವದ ಕೈವಾಡವಿಲ್ಲವೇ?.
ಆರೋಪಿಗಳೇ ನ್ಯಾಯಾಧೀಶರಾಗಿರುವ ಪರಿಸ್ಥಿತಿ ದೇಶದಲ್ಲಿ ಈಗ ನಿರ್ಮಾಣವಾಗಿದೆ. ಈ ಸರಕಾರದ ಆಡಳಿತದ ಅವಧಿಯಲ್ಲಿ, ಮಕ್ಕಳು, ಮಹಿಳೆಯರ ಮೇಲೆ, ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ, ದಲಿತ ಹೋರಾಟಗಾರರ ಮೇಲೆ, ನಡೆದಿರುವ, ನಡೆಯುತ್ತಿರುವ ಕೊಲೆ, ದೌರ್ಜನ್ಯಗಳಿಗೆ ಪ್ರಭುತ್ವದ ಸಹಕಾರ, ಸಹಾನುೂತಿಯಿರುವುದು ಎದ್ದು ಕಾಣುತ್ತಿದೆ.
 
ಗೋವು, ಗೋಮಾಂಸ, ಲವ್ ಜಿಹಾದ್ ಇತ್ಯಾದಿಗಳ ಹೆಸರಿನಲ್ಲಿ ಹಾಡಹಗಲೇ ನಡುಬೀದಿಯಲ್ಲಿ ಕೊಲೆಗೈದು, ಆರೋಪಿಗಳು ನಿರಾಯಾಸವಾಗಿ ಪಾರಾಗುತ್ತಿರುವುದು ಇಂದು ಸರ್ವೇ ಸಾಮಾನ್ಯವಾಗಿ ಹೋಗಿದೆ. ಈ ಎಲ್ಲಾ ಕ್ರೌರ್ಯಗಳಿಗೆ ಗೋಡ್ಸೆ ಕೇಸರಿ ಪರಿವಾರವೇ ಕಾರಣವಾಗಿರುವುದರಿಂದ ಇವುಗಳ ಪೋಷಣೆ ಪ್ರಭುತ್ವದಿಂದಲೇ ನಡೆಯುತ್ತಿದೆಯೆಂಬುದನ್ನು ಸಾಬೀತು ಪಡಿಸಲು ಆಧಾರಗಳಿಗೆ ಕೊರತೆಯೇನೂ ಇಲ್ಲ. ಜಾರ್ಖಂಡ್‌ನಲ್ಲಿ, ಅಲೀಮುದ್ದೀನ್ ಅನ್ಸಾರಿ ಎಂಬವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಕೇಂದ್ರ ಸಚಿವ ಜಯಂತ ಸಿನ್ಹಾ ಜೈಲಿನಲ್ಲಿ ಭೇಟಿಮಾಡಿ ಸಾಂತ್ವನ ಹೇಳಿದ್ದೇ ಅಲ್ಲದೆ, ಶಿಕ್ಷೆ ವಿಧಿಸಲ್ಪಟ್ಟವರಿಗೆ ಮೇಲ್ಮನವಿ ನ್ಯಾಯಾಲಯದಿಂದ ಜಾಮೀನು ದೊರೆತಾಗ ಅವರನ್ನು ‘ಸನ್ಮಾನಿಸಿ’ ಗೌರವಿಸಿರುವುದು, ಸರಕಾರ ಇಂತಹ ಕೊಲೆ ಪಾತಕಿಗಳ ಪಕ್ಷಪಾತವಾಗಿದೆಯೆಂದು ಸಾಬೀತುಪಡಿಸುತ್ತದೆ. ಕಾಶ್ಮೀರದ ಕಥುವಾದಲ್ಲಿ ಕೇವಲ ಎಂಟು ವರ್ಷ ವಯಸ್ಸಿನ ಧಾರ್ಮಿಕ ಅಲ್ಪಸಂಖ್ಯಾತ ಹೆಣ್ಣು ಮಗುವನ್ನು ಗೋಡ್ಸೆ ಹಿಂದುತ್ವದ ಪಿಶಾಚಿಗಳು, ಕೆಲವು ಪೊಲೀಸರ ಜೊತೆಗೂಡಿ ಸಾಮೂಹಿಕ ಅತ್ಯಾಚಾರ ನಡೆಸಿ, ನಂತರ ದೇವಸ್ಥಾನ ಒಂದರಲ್ಲಿ ಕೂಡಿಟ್ಟು ದಿವಸಗಟ್ಟಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪಾತಕಿಗಳ ಪರವಾಗಿ ಗೋಡ್ಸೆ ಪರಿವಾರದವರು ಸಭೆ ನಡೆಸಿದಾಗ ಅದರಲ್ಲಿ ಬಿಜೆಪಿಯ ಇಬ್ಬರು ಸಚಿವರು ಭಾಗವಹಿಸಿದನ್ನು ನೋಡಿ ಇಡೀ ದೇಶವೇ ಬೆಚ್ಚಿ ಬಿದ್ದದ್ದನ್ನು ಎಂದೂ ಮರೆಯಲಾಗದು.
ಇಲ್ಲಿ ನ್ಯಾಯಾಂಗ ಮಧ್ಯಪ್ರವೇಶ ಮಾಡದಿದ್ದರೆ ಇಡೀ ಪ್ರಕರಣವೇ ಮುಚ್ಚಿ ಹೋಗುತ್ತಿತ್ತು. ಅದೇ ರೀತಿ ಉತ್ತರ ಪ್ರದೇಶದ ಉನ್ನಾವೊದಲ್ಲಿ ಒಬ್ಬ ಬಿಜೆಪಿ ಶಾಸಕನೇ ಹೆಣ್ಮಗಳೊಬ್ಬಳ ಮೇಲೆ ಅತ್ಯಾಚಾರ ಮಾಡಿ ಸಂಬಂಧಿಕಳೊಬ್ಬಳ ಕೊಲೆಗೆ ಕಾರಣವಾದರೂ ಆತನ ಮೇಲೆ ಕಾನೂನು ಕೆಲಸ ಮಾಡದೆ ಆತ ಪೊಲೀಸರಿಗೆ ಧಮಕಿ ಹಾಕುತ್ತಾ ರಾಜಾರೋಷವಾಗಿ ಓಡಾಡುತ್ತಿದ್ದು, ಪೊಲೀಸ್ ಮೊಕದ್ದಮೆ ಕೂಡ ದಾಖಲಿಸಲಿಲ್ಲ. ಕಡೆಗೆ ಹೈಕೋರ್ಟ್ ಮಧ್ಯೆ ಪ್ರವೇಶಿಸಿದ ನಂತರವಷ್ಟೆ ಆರೋಪಿ ಶಾಸಕನ ದಸ್ತಗಿರಿಯಾಯಿತು. ನ್ಯಾಯಾಂಗ ಮಧ್ಯ ಪ್ರವೇಶ ಮಾಡದಿದ್ದರೆ ಈ ಇಡೀ ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತಿತ್ತೆಂಬುದರಲ್ಲಿ ಯಾವ ಅುಮಾನವೂ ಇಲ್ಲ.
 ಇನ್ನೊಂದೆಡೆ ಗೋ ರಕ್ಷಣೆ ನೆಪದಲ್ಲಿ ನಕಲಿ ಗೋ ರಕ್ಷಕರು ದಲಿತರ ಮೇಲೆ ನಿರಂತರವಾಗಿ ನಡೆಸುತ್ತಿರುವ ಕ್ರೌರ್ಯ ಹಿಂದೆಂದೂ ಕಂಡು ಕೇಳರಿಯದ ದುರ್ಘಟನೆಗಳಾಗಿವೆ. ರೋಹಿತ್ ವೇಮುಲಾ ಆತ್ಮಹತ್ಯೆಯೆಂಬ ಪ್ರಭುತ್ವ ಕೊಲೆಯಿಂದ ಪ್ರಾರಂಭವಾದ ದಲಿತರ ಮೇಲಿನ ದೌರ್ಜನ್ಯಗಳು ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ದಲಿತರ ಪ್ರತಿಭಟನೆಗಳನ್ನು ಹತ್ತಿಕ್ಕಲು ನಡೆಸಲಾಗುತ್ತಿರುವ ಕ್ರೌರ್ಯಕ್ಕೆ ಇಡೀ ದಲಿತ ಜನಾಂಗ ತತ್ತರಿಸಿ ಹೋಗಿದೆ. ಉತ್ತರ ಪ್ರದೇಶದ ದಲಿತ ಹೋರಾಟಗಾರ ಚಂದ್ರಶೇಖರ ಆಝಾದ್‌ರನ್ನು ವಿಚಾರಣೆಯೇ ಇಲ್ಲದೆ ಬಂಧಿಸಿ ಜೈಲಿನಲ್ಲಿ ಕೊಳೆಯುವಂತೆ ಮಾಡಲಾಗಿದೆ.
ಭೀಮಾ ಕೋರೆಗಾಂ ಯುದ್ಧದಲ್ಲಿ ದಲಿತರು ಪೇಶ್ವೆ ಸೈನ್ಯವನ್ನು ಸೋಲಿಸಿದ ಘಟನೆಯ ವರ್ಷಾಚರಣೆಯಲ್ಲಿ ತೊಡಗಿದ್ದ ದಲಿತರ ಮೇಲೆ ಹಲ್ಲೆ ನಡೆಸಿದ ಹಿಂದುತ್ವ ಪ್ರತಿಪಾದಕರನ್ನು ರಕ್ಷಿಸುತ್ತಾ ಕೇವಲ, ಘಟನೆಯ ವರ್ಷಾಚರಣೆ ಮಾಡಿದ ದಲಿತ ಸಂಘಟನೆಗಳನ್ನು ಹತ್ತಿಕ್ಕುವುದಕ್ಕಾಗಿ ಬಗೆ ಬಗೆಯಾದ ಮಾರ್ಗದಲ್ಲಿ ಸರಕಾರ ತೊಡಗಿರುವುದು ಕಂಡು ಬರುತ್ತಿದೆ. ಹೋರಾಟಗಾರ ದಲಿತ ನಾಯಕರಿಗೆ ನಕ್ಸಲರೆಂಬ ಹಣೆಪಟ್ಟಿ ಕಟ್ಟಲು ಪೊಲೀಸರ ಮುಖಾಂತರವೇ ಪ್ರಭುತ್ವ ಅನೇಕ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದೆ ಎಂಬ ಆರೋಪವಿದೆ. ಪ್ರಧಾನಿ ಮೋದಿಯವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗುತ್ತಿದೆಯೆಂಬ ಕಟ್ಟುಕತೆ ಸೃಷ್ಟಿಸಿ, ಸಮರ್ಥನೆಗಾಗಿ ಅನೇಕ ಪತ್ರ ವ್ಯವಹಾರವನ್ನು ಸೃಷ್ಟಿಸಿ, ದೇಶದಲ್ಲಿ ಇಡೀ ದಲಿತ ಹೋರಾಟವನ್ನೇ ಧಮನಿಸುವ ಷಡ್ಯಂತ್ರಗಳು ನಡೆಯುತ್ತಿರುವ ಬಗ್ಗೆ ಸಂದರ್ಭಗಳು ಸಾಕ್ಷಿ ನುಡಿಯುತ್ತಿವೆ.
 ಗುಜರಾತ್‌ನಲ್ಲಿ ಶಾಸಕರೂ ಆಗಿರುವ ಜಿಗ್ನೇಶ್ ಮೇವಾನಿಯವರ ಮೇಲೂ ನಕ್ಸಲ್ ಹಣೆಪಟ್ಟಿ ಕಟ್ಟಿ ಧಮನಿಸುವ ಕಾರ್ಯ ಯೋಜನೆ ತಯಾರಾಗುತ್ತಿರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಜಿಗ್ನೇಶ್ ಮೇವಾನಿಯವರು ತುರ್ತು ಚಿಕಿತ್ಸೆಗೋಸ್ಕರ ಅಮೆರಿಕಕ್ಕೆ ತೆರಳುವುದಕ್ಕೆ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದರೆ, ಪಾಸ್‌ಪೋರ್ಟನ್ನೇ ನೀಡದೆ ಸತಾಯಿಸಲಾಗುತ್ತಿ�

Writer - ಎ. ಕೆ. ಸುಬ್ಬಯ್ಯ

contributor

Editor - ಎ. ಕೆ. ಸುಬ್ಬಯ್ಯ

contributor

Similar News

ಜಗದಗಲ
ಜಗ ದಗಲ