ಇನ್ನು ವಾಟ್ಸ್ಯಾಪ್ ನಲ್ಲಿ ಐದಕ್ಕಿಂತ ಹೆಚ್ಚು ಜನರಿಗೆ ಫಾರ್ವರ್ಡ್ ಮೆಸೇಜ್ ಕಳುಹಿಸುವಂತಿಲ್ಲ

Update: 2018-08-08 16:50 GMT

ಹೊಸದಿಲ್ಲಿ, ಆ.8: ಸುಳ್ಳು ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸುವಲ್ಲಿ ವಾಟ್ಸ್ ಆ್ಯಪ್ ಕೈಗೊಂಡಿರುವ ಕ್ರಮಗಳ ಬಗ್ಗೆ ಅಸಮಾಧಾನ ಹೊಂದಿರುವ ನಡುವೆಯೇ ಭಾರತದ ಬಳಕೆದಾರರು ಕೇವಲ ಐವರಿಗೆ ಮಾತ್ರ ಫಾರ್ವರ್ಡ್ ಸಂದೇಶಗಳನ್ನು ಕಳುಹಿಸುವಂತೆ ನಿರ್ಬಂಧ ವಿಧಿಸಲು ಮುಂದಾಗಿರುವುದಾಗಿ ಹೇಳಿದೆ.

ಭಾರತದಲ್ಲಿ ಐದು ಚಾಟ್ ಗಳಿಗೆ ಮಾತ್ರ ಫಾರ್ವರ್ಡ್ ಸಂದೇಶಗಳನ್ನು ಕಳುಹಿಸುವಂತೆ ನಿರ್ಬಂಧ ವಿಧಿಸುವ ಬಗ್ಗೆ ಫೇಸ್ ಬುಕ್ ಮಾಲಕತ್ವದ ವಾಟ್ಸ್ಯಾಪ್ ಕಳೆದ ತಿಂಗಳು ಹೇಳಿತ್ತು. “ಈ ವಾರ ಭಾರತದಲ್ಲಿರುವ ವಾಟ್ಸ್ಯಾಪ್ ಬಳಕೆದಾರರಿಗೆ ಈ ನಿಯಮ ಅನ್ವಯವಾಗಲಿದೆ” ಎಂದು ಕಂಪೆನಿಯ ಹೇಳಿಕೆಯೊಂದು ತಿಳಿಸಿದೆ.

ಸುಳ್ಳು ಸುದ್ದಿಗಳನ್ನು ಪತ್ತೆ ಮಾಡಲು ಬಳಕೆದಾರರಿಗೆ ಈ ಬಗ್ಗೆ ಮಾಹಿತಿಯನ್ನು ಒದಗಿಸಲಾಗುವುದು. “ಈ ವಾರ ವಾಟ್ಸ್ಯಾಪ್ ವಿಡಿಯೋವೊಂದನ್ನು ಬಿಡುಗಡೆ ಮಾಡಲಿದೆ. ‘ಫಾರ್ವರ್ಡ್’ನ ಮಹತ್ವಗಳು ಹಾಗು ಸಂದೇಶಗಳನ್ನು ಯಾರು ರಚಿಸಿದ್ದಾರೆ ಎನ್ನುವ ಬಗ್ಗೆ ಖಚಿತತೆ ಇಲ್ಲದೇ ಇರುವಾಗ ಎರಡೆರಡು ಬಾರಿ ಪರೀಕ್ಷಿಸಿಕೊಳ್ಳಲು ಈ ವಿಡಿಯೋ ತಿಳಿಸಿಕೊಡುತ್ತದೆ” ಎಂದು ಕಂಪೆನಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News