ಪ್ರಥಮ ಆ್ಯಂಟಿಸೆಪ್ಟಿಕ್ ಸರ್ಜರಿ
1865: ಈ ದಿನ ವೈದ್ಯಕೀಯ ಲೋಕಕ್ಕೆ ಒಂದು ಮಹತ್ವದ ಕೊಡುಗೆಯನ್ನು ಖ್ಯಾತ ಸರ್ಜನ್ ಜೋಸೆಫ್ ಲಿಸ್ಟರ್ ನೀಡಿದರು. ಶಸ್ತ್ರಚಿಕಿತ್ಸೆಯ ಬಳಿಕ ಉಂಟಾಗುವ ನಂಜು, ಸೋಂಕಿನಿಂದ ಹಲವಾರು ಜನ ಆಗ ಚಿಕಿತ್ಸೆಯಿಲ್ಲದೆ ಬಳಿ ಸಾಯುತ್ತಿದ್ದರು. ಜೋಸೆಫ್ ಲಿಸ್ಟರ್ ಈ ಕುರಿತು ಸುಮಾರು 13-14 ತಿಂಗಳುಗಳ ಕಾಲ ಸುದೀರ್ಘ ಅಧ್ಯಯನ ನಡೆಸಿದರು. ಪರಿಣಾಮ ಪ್ರಥಮ ಆ್ಯಂಟಿಸೆಪ್ಟಿಕ್(ನಂಜುರಹಿತ) ಸರ್ಜರಿಯನ್ನು ಈ ದಿನ ಯಶಸ್ವಿಯಾಗಿ ನೆರವೇರಿಸಿದರು. ಇದು ಹಲವಾರು ಜನರ ಪ್ರಾಣ ಉಳಿಸಲು ನೆರವಾಗಿದೆ.
1948: ಖ್ಯಾತ ಆಟಗಾರ ಬಲ್ಬೀರ್‌ಸಿಂಗ್ ಅವರ ಅವಳಿ ಗೋಲುಗಳ ನೆರವಿನಿಂದ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್ ಹಾಕಿ ಫೈನಲ್ ಪಂದ್ಯದಲ್ಲಿ ಬ್ರಿಟನ್‌ನ್ನು ಬಗ್ಗುಬಡಿದ ಭಾರತ ಹಾಕಿ ತಂಡ ಸತತ ನಾಲ್ಕನೇ ಬಾರಿ ಒಲಿಂಪಿಕ್ಸ್ ಹಾಕಿಯಲ್ಲಿ ಚಿನ್ನವನ್ನು ಮುಡಿಗೇರಿಸಿಕೊಂಡಿತು.
1851: ಅಮೆರಿಕದ ಸಂಶೋಧಕ ಐಸಾಕ್ ಸಿಂಗರ್ ತಾನು ಕಂಡುಹಿಡಿದ ಹೊಲಿಗೆಯಂತ್ರಕ್ಕೆ ಹಕ್ಕುಸ್ವಾಮ್ಯ ಪಡೆದರು.
1877: ಥಾಮಸ್ ಆಲ್ವಾ ಎಡಿಸನ್ ಅವರು, ಸೌಂಡ್ ರೆಕಾರ್ಡಿಂಗ್ ಯಂತ್ರ ‘ಎಡಿಸನ್ ಫೋನ್’ನ್ನು ಕಂಡುಹಿಡಿದರು.
1953: ಈ ದಿನ ಲೋನಿಯನ್ ದ್ವೀಪಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 453 ಜನ ಅಸುನೀಗಿದರು.
1960: ನಾಸಾವು ಇಕೋ 1 ಎಂಬ ಪ್ರಥಮ ಸಂವಹನ ಉಪಗ್ರಹವನ್ನು ಉಡಾವಣೆ ಮಾಡಿತು.
2005: ಶ್ರೀಲಂಕಾದ ವಿದೇಶಾಂಗ ಸಚಿವ ಕದಿರ್ಗಾಮಾ ಎಲ್‌ಟಿಟಿಇ ಉಗ್ರರಿಂದ ತಮ್ಮ ಸ್ವಗೃಹದಲ್ಲಿ ಭೀಕರವಾಗಿ ಹತ್ಯೆಗೀಡಾದರು.
2013: ಈಶಾನ್ಯ ನೈಝೀರಿಯಾದಲ್ಲಿ ಬಂದೂಕುಧಾರಿಗಳಿಂದ 30 ಜನ ಹತ್ಯೆಗೈಯಲ್ಪಟ್ಟರು.
1919: ಭಾರತದ ಖ್ಯಾತ ಭೌತವಿಜ್ಞಾನಿ ವಿಕ್ರಮ್ ಸಾರಾಭಾಯ್ ಜನ್ಮದಿನ.
1952: ಖ್ಯಾತ ಕಮುನಿಸ್ಟ್ ನಾಯಕ, ಸಿಪಿಎಂನ ಸೀತಾರಾಂ ಯೆಚೂರಿ ಜನಿಸಿದರು.