ಮಂಡ್ಯ: ಕುವೆಂಪು ಸಾಂಸ್ಕೃತಿಕ ಪ್ರಶಸ್ತಿಗೆ ಆರು ಮಂದಿ ಆಯ್ಕೆ

Update: 2018-08-28 17:30 GMT

ಮಂಡ್ಯ, ಆ.28: ಜಿಲ್ಲಾ ಯುವ ಬರಹಗಾರರ ಬಳಗ ಹಾಗೂ ನಾಗಮಂಗಲದ ಹಾರ್ಟ್(ಹೆಲ್ತ್, ಎಜುಕೇಷನ್, ಅವೆರ್‍ನೆಸ್, ರೂರಲ್ ಡೆವಲಪ್ ಮೆಂಟ್) ಟ್ರಸ್ಟ್ ವತಿಯಿಂದ ನೀಡಲಾಗುವ ರಾಜ್ಯಮಟ್ಟದ 'ಕುವೆಂಪು ಸಾಂಸ್ಕೃತಿಕ ಪ್ರಶಸ್ತಿ’ಗೆ ರಾಜ್ಯದ ವಿವಿಧ ಜಿಲ್ಲೆಗಳ ವಿವಿಧ ಕ್ಷೇತ್ರದ ಆರು ಮಂದಿ ಸಾಧಕ ಗಣ್ಯರು ಆಯ್ಕೆಯಾಗಿದ್ದಾರೆ ಎಂದು ಬಳಗದ ಜಿಲ್ಲಾಧ್ಯಕ್ಷ ಟಿ.ಸತೀಶ್ ಜವರೇಗೌಡ  ತಿಳಿಸಿದ್ದಾರೆ.

ಮಂಡ್ಯದ ಪತ್ರಕರ್ತ ಹಾಗೂ ಸಾಹಿತಿ ಎಸ್.ಕೃಷ್ಣ ಸ್ವರ್ಣಸಂದ್ರ, ಕವಯತ್ರಿ ಹಾಗೂ ನಿರೂಪಕಿ ಡಾ.ಶುಭಶ್ರೀ ಪ್ರಸಾದ್, ಧಾರವಾಡ ಜಿಲ್ಲೆಯ ಸಾಹಿತಿ ಹಾಗೂ ಸಂಘಟಕ ಸೋಮುರೆಡ್ಡಿ, ರಾಮನಗರ ಜಿಲ್ಲೆಯ ಕವಯಿತ್ರಿ ಹಾಗೂ ಜನಪರ ಚಿಂತಕಿ ಕೆ.ಆರ್. ಸೌಮ್ಯ, ಗದಗ ಜಿಲ್ಲೆಯ ಸಾಹಿತಿ ಹಾಗೂ ಪ್ರಕಾಶಕ ಚಂದ್ರಶೇಖರ ಮಾಡಲಗೇರಿ, ಹಾಸನ ಜಿಲ್ಲೆಯ ಸಾಹಿತಿ ಹಾಗೂ ಸಂಘಟಕ ಡಾ. ಕಾಂತರಾಜಪುರ ಸುರೇಶ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.  

ಸೆ.2 ರಂದು ನಾಗಮಂಗಲದ ತಾಲೂಕು ಒಕ್ಕಲಿಗರ ಸಂಘದ ಕಟ್ಟಡದಲ್ಲಿರುವ ಕುವೆಂಪು ಶಾಲೆಯ ದಿ.ಬೆಟ್ಟೇಗೌಡ ಸಭಾಂಗಣದಲ್ಲಿ  ಪದ್ಮಭೂಷಣ  ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ಸ್ಮರಣಾರ್ಥ ನಡೆಯಲಿರುವ ರಾಜ್ಯಮಟ್ಟದ ಕವಿಕಾವ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಎಚ್.ಎಸ್. ಮುದ್ದೇಗೌಡ ಪ್ರಶಸ್ತಿ ಪ್ರದಾನ ಮಾಡುವರು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News