ಭಾರತದ ಮಧ್ಯಂತರ ಸರಕಾರದ ರಚನೆ

Update: 2018-09-01 18:32 GMT

1573: ಮುಘಲ್ ದೊರೆ ಅಕ್ಬರ್ ಅಹ್ಮದಾಬಾದ್‌ನಲ್ಲಿ ನಡೆದ ಕದನವೊಂದರಲ್ಲಿ ಗೆದ್ದು ಗುಜರಾತ್‌ನ್ನು ವಶಪಡಿಸಿಕೊಂಡನು.

1666: ಲಂಡನ್‌ನಲ್ಲಿ ಮಹಾ ಬೆಂಕಿ ದುರಂತ ಈ ದಿನ ಸಂಭವಿಸಿತು. ಪಡ್ಡಿಂಗ್ ಬೀದಿಯಲ್ಲಿ ಹೊತ್ತಿಕೊಂಡ ಬೆಂಕಿಗೆ ಲಂಡನ್ ನಗರದ ಶೇ.80ರಷ್ಟು ಭಾಗ ನಾಶವಾಯಿತು.

1935: ಫ್ಲೋರಿಡಾದಲ್ಲಿ ಬೀಸಿದ ಭೀಕರ ಚಂಡಮಾರುತಕ್ಕೆ 423 ಜನರು ಸಾವನ್ನಪ್ಪಿದರು.

1945: ವಿಯೆಟ್ನಾಂ ದೇಶವು ಫ್ರಾನ್ಸ್ ಕಪಿಮುಷ್ಟಿಯಿಂದ ಪಾರಾಗಿ ಸ್ವತಂತ್ರ ದೇಶವಾಯಿತು ಎಂದು ವಿಯೆಟ್ನಾಂನ ಕ್ರಾಂತಿಕಾರಿ ನಾಯಕ ಹೊ ಚಿ ಮಿನ್ ಘೋಷಿಸಿದರು. ಈ ದಿನವನ್ನು ವಿಯೆಟ್ನಾಂನ ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ.

1945: ಅಮೆರಿಕಕ್ಕೆ ಜಪಾನ್ ಔಪಚಾರಿಕವಾಗಿ ಶರಣಾಗುವುದರ ಮೂಲಕ ಎರಡನೇ ಮಹಾಯುದ್ಧ ಅಂತ್ಯಕಂಡಿತು. ಇದನ್ನು ವಿ-ಜೆ ಡೇ ಎಂದು ಕರೆಯಲಾಗಿದೆ.

1946: ಭಾರತದ ಮಧ್ಯಂತರ ಸರಕಾರ ಈ ದಿನ ರಚನೆಗೊಂಡಿತು. ಜವಾಹರ್‌ಲಾಲ ನೆಹರೂ ಸರಕಾರದ ಮುಖ್ಯಸ್ಥರಾಗಿದ್ದರು. ಈ ತಾತ್ಕಾಲಿಕ ಸರಕಾರವು ಭಾರತದ ಸಂವಿಧಾನ ಸಭೆಯಿಂದ ರಚಿಸಲ್ಪಟ್ಟಿತು. ಬ್ರಿಟಿಷ್ ಆಡಳಿತದಿಂದ ಸ್ವತಂತ್ರಗೊಂಡು ಭಾರತ ಮತ್ತು ಪಾಕಿಸ್ತಾನ ಎಂಬ ಪ್ರತ್ಯೇಕ ರಾಷ್ಟ್ರಗಳ ವಿಭಜನೆಯ ಕಾರ್ಯವನ್ನು ಈ ಮಧ್ಯಂತರ ಸರಕಾರಕ್ಕೆ ನೀಡಲಾಯಿತು. ಈ ಸರಕಾರವು ಆ.15, 1947ರವರೆಗೆ ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರವಾಗುವವರೆಗೆ ಅಸ್ತಿತ್ವದಲ್ಲಿತ್ತು.

1970: ಕನ್ಯಾಕುಮಾರಿಯಲ್ಲಿ ಪ್ರಸಿದ್ಧ ವಿವೇಕಾನಂದ ಸ್ಮಾರಕ ಭವನವನ್ನು ಅಂದಿನ ರಾಷ್ಟ್ರಪತಿ ವಿ.ವಿ.ಗಿರಿ ಉದ್ಘಾಟಿಸಿದರು.

1992: ನಿಕರಾಗುವಾದಲ್ಲಿ ಭೂಕಂಪ ಹಾಗೂ ಪ್ರವಾಹದಿಂದಾಗಿ 118 ಜನರು ಸಾವನ್ನಪ್ಪಿದ ವರದಿಯಾಗಿದೆ.

1998: ಪೈಲಟ್‌ರಹಿತ ತರಬೇತಿ ವಿಮಾನ ನಿಶಾಂತ್ ಈ ದಿನ ಯಶಸ್ವಿಯಾಗಿ ಹಾರಾಟ ನಡೆಸಿತು.

1973: ಕನ್ನಡ ಸಿನೆಮಾ ನಟ ಸುದೀಪ್ ಜನ್ಮದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ