ವಿಶೇಷ ವಿವಾಹ ಕಾಯ್ದೆಯ ವಿಧಿ ಸ್ವೀಕಾರ

Update: 2018-09-15 18:31 GMT

1906: ನಾರ್ವೆ ದೆೇಶದ ಶೋಧಕ ರೋವಾಲ್ಡ್ ಆ್ಯಮುಂಡ್ಸನ್ ಕಾಂತೀಯ ದಕ್ಷಿಣ ಧ್ರುವವನ್ನು ಕಂಡುಹಿಡಿದನು.

1926: ಅಮೆರಿಕದ ಫ್ಲೊರಿಡಾ ಮತ್ತು ಅಲಬಾಮಾ ಪ್ರದೇಶಗಳಲ್ಲಿ ಚಂಡಮಾರುತದ ಪರಿಣಾಮ 372 ಜನ ಪ್ರಾಣ ಕಳೆದುಕೊಂಡರು.

1931: ಸ್ವಾತಂತ್ರ ಹೋರಾಟದ ಸಮಯದಲ್ಲಿ ಪಶ್ಚಿಮ ಬಂಗಾಳದ ಹಿಲ್ಜಿ ಜೈಲಿನಲ್ಲಿ ದಂಗೆಯೆದ್ದಿದ್ದ ಸಂತೋಷ್‌ಕುಮಾರ್ ಮಿತ್ರ ಹಾಗೂ ತಾರಕೇಶ್ವರ ಸೇನ್ ಎಂಬಿಬ್ಬರು ಕೈದಿಗಳು ಈ ದಿನ ಬ್ರಿಟಿಷ್ ಪೊಲೀಸರ ಗುಂಡಿಗೆ ಬಲಿಯಾಗಿ ಹುತಾತ್ಮರಾದರು. ಅವರ ಶವಗಳನ್ನು ಸಾಗಿಸಲು ಸ್ವತಃ ನೇತಾಜಿ ಬೋಸ್ ಜೈಲಿಗೆ ತೆರಳಿದ್ದರು. ಈ ಘಟನೆಯ ವಿರುದ್ಧ ಭಾರತೀಯರಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾಯಿತು.

1954: ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯಲು ಅವಕಾಶ ಒದಗಿಸುವ ವಿಶೇಷ ವಿವಾಹ ಕಾಯ್ದೆಯ ವಿಧಿಯನ್ನು ಲೋಕಸಭೆಯು ಸೆ.16ರ ಈ ದಿನ ಸ್ವೀಕರಿಸಿತು. ಈ ವಿಶೇಷ ವಿವಾಹ ಕಾಯ್ದೆಯನ್ನು ಅಕ್ಟೋಬರ್ 9, 1954ರಂದು ಸಂಸತ್ತು ಅಧಿಕೃತವಾಗಿ ಜಾರಿಗೊಳಿಸಿತು. 1872ರ ಕಾಯ್ದೆ 3ರ ಬದಲಾಗಿ ಇದನ್ನು ರೂಪಿಸಲಾಯಿತು. ಈ ಕಾಯ್ದೆಯು ಮೂರು ಪ್ರಮುಖ ಉದ್ದೇಶಗಳನ್ನು ಹೊಂದಿತ್ತು. ಅವೆಂದರೆ 1)ಕೆಲವು ಪ್ರಕರಣಗಳಲ್ಲಿ ವಿಶೇಷ ರೂಪದ ವಿವಾಹಗಳಿಗೆ ಅನುಮತಿ. 2)ವಿವಾಹ ನೋಂದಣಿ. 3)ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯುವುದು.

2015: ದಕ್ಷಿಣ ಸುಡಾನ್‌ನ ಮಾರಿದಿ ಎಂಬಲ್ಲಿ ಇಂಧನ ಟ್ಯಾಂಕರ್‌ವೊಂದು ಸ್ಫೋಟಗೊಂಡು 170 ಜನ ಸಾವನ್ನಪ್ಪಿದರು.

1931: ಭಾರತದ ಖ್ಯಾತ ಭೌತವಿಜ್ಞಾನಿ ಜಾರ್ಜ್ ಸುದರ್ಶನ್ ಈ ದಿನ ಜನಿಸಿದರು.

1977: ಈ ದಿನವೇ ಭಾರತದ ಶಾಸ್ತ್ರೀಯ ಗಾಯಕ ಕೇಸರ್‌ಭಾಯಿ ಕೇರ್ಕರ್ ಮುಂಬೈಯಲ್ಲಿ ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ