ಹೈದರಾಬಾದ್ ನಿಝಾಮ್ ಶರಣಾಗತಿ: ಆಪರೇಷನ್ ಪೋಲೋ ಅಂತ್ಯ

Update: 2018-09-17 18:23 GMT

1810: ಚಿಲಿ ದೇಶವು ಸ್ಪೇನ್‌ನಿಂದ ಬಿಡುಗಡೆ ಪಡೆದು ಸ್ವತಂತ್ರ ದೇಶವಾಯಿತು.

1906: ಹಾಂಕಾಂಗ್‌ನಲ್ಲಿ ಸಂಭವಿಸಿದ ಪ್ರಬಲ ಸುನಾಮಿ ದುರಂತಕ್ಕೆ ಅಂದಾಜು 10,000 ಜನರು ಮೃತಪಟ್ಟರು.

1916: ಇಂಗ್ಲೆಂಡ್‌ನ ರಾಜ ಜೇಮ್ಸ್‌ನ ಪ್ರತಿನಿಧಿಯಾಗಿ ಬ್ರಿಟಿಷ್ ರಾಯಭಾರಿ ಥಾಮಸ್ ರೋ ಮೊಗಲ್ ದೊರೆ ಜಹಾಂಗೀರ್‌ರನ್ನು ಭೇಟಿಯಾಗಲು ಸೂರತ್‌ಗೆ ಬಂದಿಳಿದನು.

1926: ಅಮೆರಿಕದ ಫ್ಲೋರಿಡಾದಲ್ಲಿ ಬೀಸಿದ ಮಿಯಾಮಿ ಹೆಸರಿನ ಚಂಡಮಾರುತಕ್ಕೆ 250 ಜನ ಬಲಿಯಾದರು.

1948: ಹೈದರಾಬಾದ್ ನಿಝಾಮರ ಸೈನ್ಯ ಶರಣಾಗಲು ಒಪ್ಪಿಕೊಂಡ ಬಳಿಕ ಭಾರತೀಯ ಸೈನ್ಯ ‘ಆಪರೇಷನ್ ಪೋಲೋ’ವನ್ನು ಅಂತ್ಯಗೊಳಿಸಿತು. ಭಾರತ ಬ್ರಿಟಿಷ್ ಆಡಳಿತದಿಂದ ಸ್ವತಂತ್ರವಾದ ನಂತರ ಹೈದರಾಬಾದ್ ಸಂಸ್ಥಾನವು ಭಾರತೀಯ ಒಕ್ಕೂಟ ಸೇರಲು ನಿರಾಕರಿಸಿತು. ಈ ಸಂದರ್ಭದಲ್ಲಿ ಅನಿವಾರ್ಯವಾಗಿ ಅಂದಿನ ಪ್ರಧಾನಿ ನೆಹರೂ ಮತ್ತು ಗೃಹಮಂತ್ರಿ ಸರ್ದಾರ್ ಪಟೇಲ್ ಅವರು ಹೈದರಾಬಾದ್ ಮೇಲೆ ಸೇನಾ ದಾಳಿಗೆ ಆದೇಶವಿತ್ತರು. ಇದೇ ದಾಳಿಗೆ ‘ಆಪರೇಷನ್ ಪೋಲೋ’ ಎಂದು ಕರೆಯಲಾಗಿದೆ. ಹೈದರಾಬಾದ್ ನಿಝಾಮ್ ಸೋತು ಶರಣಾದ ಬಳಿಕ ಈ ಕಾರ್ಯಾಚರಣೆಯನ್ನು ಅಂತ್ಯಗೊಳಿಸಲಾಯಿತು.

1967: ನಾಗಾಲ್ಯಾಂಡ್ ರಾಜ್ಯವು ಇಂಗ್ಲಿಷ್ ಭಾಷೆಯನ್ನು ಬೋಧನಾ ಮಾಧ್ಯಮವಾಗಿ ಅಂಗೀಕರಿಸಿತು.

1974: ಹೊಂಡುರಾಸ್‌ನಲ್ಲಿ ಬೀಸಿದ ಫಿಫಿ ಹೆಸರಿನ ಚಂಡಮಾರುತಕ್ಕೆ ಸುಮಾರು 5,000 ಜನ ಬಲಿಯಾದರು.

1986: ಸಂಪೂರ್ಣ ಮಹಿಳಾ ಸಿಬ್ಬಂದಿಯನ್ನೇ ಹೊಂದಿದ್ದ ಜೆಟ್ ವಿಮಾನವು ಮುಂಬೈನಿಂದ ಗೋವಾಕ್ಕೆ ಪ್ರಯಾಣಿಸಿತು.

2014: ಗ್ರೇಟ್ ಬ್ರಿಟನ್‌ನ ಭಾಗವಾಗಿರಲು ಸ್ಕಾಟ್ಲೆಂಡ್ ದೇಶವು ಜನಮತ ಸಂಗ್ರಹಿಸಿತು.

2015: ಉತ್ತರ ಪ್ರದೇಶದಲ್ಲಿ 238 ಅಟೆಂಡರ್ ಹುದ್ದೆಗೆ 20 ಲಕ್ಷಕ್ಕಿಂತ ಹೆಚ್ಚು ಜನ ಅರ್ಜಿ ಸಲ್ಲಿಸಿದ್ದಾರೆಂದು ಅಲ್ಲಿಯ ಸರಕಾರ ದೃಢಪಡಿಸಿತು. ಇದು ಭಾರತದಲ್ಲಿ ಉದ್ಯೋಗದ ತೀವ್ರ ಕೊರತೆಯನ್ನು ವಿಶ್ವಕ್ಕೆ ತಿಳಿಯಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ