ಅರಬ್ ಕಾಲದ ಅಂತರ್ಜಲ ಸುರಂಗಗಳಿಗೆ ಜೀವ ತುಂಬುತ್ತಿರುವ ಭಾರತ

Update: 2018-09-22 18:37 GMT

ಈ ಸುರಂಗ ಬಾವಿಗಳ ಉಪಯೋಗಗಳನ್ನು ಬಗ್ಗೆ ಮನಗಂಡ ಬೀದರ್ ಜಿಲ್ಲಾಡಳಿತ, ಇತರ ಸಂಸ್ಥೆಗಳು ಮತ್ತು ತಜ್ಞರ ಜೊತೆ ಸೇರಿ, ಭೂಮಿಯೊಳಗೆ ಅಡಕವಾಗಿರುವ ಈ ಸುರಂಗ ಬಾವಿಗಳಿಗೆ ಮರುಜೀವ ನೀಡುವ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ರ್ಶಿಯನ್ನರು ಜಗತ್ತಿಗೆ ನೀಡಿದ ಬಹುದೊಡ್ಡ ಕಾಣಿಕೆಗಳಲ್ಲಿ ಒಂದು ಕನಾತ್ (ಅರಬ್ ಭಾಷೆಯಲ್ಲಿ ವಾಹಿನಿ) ಅಥವಾ ಕರೇಝ್ (ಪರ್ಶಿಯನ್ ಭಾಷೆಯಲ್ಲಿ ಸಣ್ಣ ಸುರಂಗಬಾವಿ) ಎಂಬ ನೀರಾವರಿ ವ್ಯವಸ್ಥೆ. ಆ ಮೂಲಕ ಬರಡಾಗಬಹುದಾಗಿದ್ದ ಪ್ರದೇಶ ಗಳಲ್ಲೂ ಕೃಷಿ ಮತ್ತು ಪಟ್ಟಣ ಜೀವನ ಜೊತೆಯಾಗಿ ಸಾಗುವಂತೆ ನೋಡಿಕೊಂಡಿದ್ದರು. ಇದೀಗ ಈ ನೀರಾವರಿ ವ್ಯವಸ್ಥೆಗೆ ಕರ್ನಾಟಕದ ಅರೆಬರಡು ಪ್ರದೇಶವಾದ ಬೀದ್ನಲ್ಲಿ ಮರುಜೀವ ನೀಡಲಾಗುತ್ತಿದೆ.

ಈಗಲೂ ಬೀದರ್‌ನಲ್ಲಿ ಕನಿಷ್ಠ ಮೂರು ಸುರಂಗ ಬಾವಿಗಳು ಅಪಧಮನಿಯಂತೆ ಹರಿಯುತ್ತಿದ್ದು ಸುತ್ತಮುತ್ತಲ ಬರಡು ಭೂಮಿಗೆ ನೀರುಣಿಸುವ ಮೂಲಕ ಜೀವ ತುಂಬುತ್ತಿವೆೆ.
ಈ ಸುರಂಗ ಬಾವಿಗಳ ಉಪಯೋಗದ ಬಗ್ಗೆ ಮನಗಂಡ ಬೀದರ್ ಜಿಲ್ಲಾಡಳಿತ, ಇತರ ಸಂಸ್ಥೆಗಳು ಮತ್ತು ತಜ್ಞರ ಜೊತೆ ಸೇರಿ, ಭೂಮಿಯೊಳಗೆ ಅಡಕವಾಗಿರುವ ಈ ಸುರಂಗ ಬಾವಿಗಳಿಗೆ ಮರುಜೀವ ನೀಡುವ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ದಕ್ಕನ್ ವಂಶಾವಳಿಯ ಇತಿಹಾಸವನ್ನು ಗಮನಿಸಿದರೆ ಬೀದರ್ ಇಂಥ ಜಲ ಸುರಂಗ ವ್ಯವಸ್ಥೆಯನ್ನು ನಿರ್ಮಿಸಿದ ಮೊದಲ ನಗರವಾಗಿರಬಹುದು ಎಂಬ ಅಂಶ ತಿಳಿಯುತ್ತದೆ. ಬೀದರನ್ನು ಬಹಮನಿ ಸುಲ್ತಾನರು ತಮ್ಮ ರಾಜಧಾನಿಯನ್ನಾಗಿ ಮಾಡಿದ್ದರು. ಇಲ್ಲಿನ ಹಳೆ ಕೋಟೆಯನ್ನು ಮರುನಿರ್ಮಿಸಿದ ಬಹಮನಿಗಳು ಇಲ್ಲಿ ಅನೇಕ ಮಸೀದಿಗಳು, ಮದ್ರಸಗಳು, ಅರಮನೆಗಳು ಮತ್ತು ಉದ್ಯಾನವನಗಳನ್ನು ನಿರ್ಮಿಸಿದರು. ಕ್ರಿ.ಶ.1427ರಲ್ಲಿ ಅಹಮದ್ ಶಾ ಬಹಮನಿ ವಲಿ ತನ್ನ ಅಧಿಕಾರದ ಅವಧಿಯಲ್ಲಿ ಕರೆಝ್ ಅಥವಾ ಸುರಂಗ ಬಾವಿಗಳನ್ನು ನಿರ್ಮಿಸಿರಬಹುದು ಎಂದು ನಂಬಲಾಗಿದೆ.
ಇಂಥ ಕರೇಝ್‌ಗಳು ಕೇವಲ ಬೀದರ್‌ನಲ್ಲಿ ಮಾತ್ರವಲ್ಲದೆ ಬಿಜಾಪುರ, ಔರಂಗಾಬಾದ್, ಅಹಮದ್‌ನಗರ ಮತ್ತು ಹುಕ್ಕೇರಿಯಲ್ಲೂ ಕಾಣಲು ಸಿಗುತ್ತವೆ.
ಅಂದಿನ ಕಾಲದಲ್ಲಿ ಬಹಮನಿ ಸುಲ್ತಾನರಿಗೆ ಪರ್ಶಿಯಾ ಜೊತೆ ಸಂಪರ್ಕವಿದ್ದ ಕಾರಣ ಅಲ್ಲಿನ ಇಂಜಿನಿಯರ್‌ಗಳ ನೆರವಿನೊಂದಿಗೆ ಈ ರೀತಿಯ ಜಲ ಸಂರಕ್ಷಣೆ ಮತ್ತು ಭೂಗತ ಸರಬರಾಜು ವ್ಯವಸ್ಥೆಯನ್ನು ನಿರ್ಮಿಸಲಾಯಿತು.

ಸಮುದಾಯ ಜನ ವ್ಯವ್ಥೆ
ಕರೇಝ್‌ಗಳನ್ನು ಮುಖ್ಯವಾಗಿ ಸಮುದಾಯ ಜಲ ವ್ಯವಸ್ಥೆಯಾಗಿ ಅಭಿವೃದ್ಧಿಪಡಿಸಲಾದರೂ ಅದರ ಕಂದಕಗಳನ್ನು ನೀರಿನಿಂದ ತುಂಬುವ ಮೂಲಕ ಕೋಟೆಯ ರಕ್ಷಣೆಯನ್ನು ಮಾಡಲೂ ನೆರವಾಗಿತ್ತು. ಕಲ್ಲಿನಿಂದ ಕೂಡಿದ ಭೂಪ್ರದೇಶವನ್ನು ಹೊಂದಿದ್ದು ನೀರಿಗಾಗಿ ಬಾವಿಗಳನ್ನು ಕೊರೆಯುವುದು ಸುಲಭವಲ್ಲದ ಬೀದರ್‌ನಂಥ ಪ್ರದೇಶಗಳಲ್ಲಿ ಕರೇಝ್‌ನಂಥ ನೀರಾವರಿ ವ್ಯವಸ್ಥೆ ಬಹಳ ಉಪಯುಕ್ತವೆನಿಸುತ್ತದೆ.
ನೌಬಾದ್ ಕರೇಝ್ ಸದ್ಯ ಕಾರ್ಯಾಚರಿಸುತ್ತಿದ್ದು ಇಲ್ಲಿನ ನೀರನ್ನು ಕುಡಿಯಲು ಮತ್ತು ಇತರ ಗೃಹ ಕಾರ್ಯಗಳಿಗೆ ಬಳಕೆ ಮಾಡಬಹುದಾಗಿದೆ. ಆದರೆ ಈ ಸುರಂಗಬಾವಿಯ ಸ್ಥಿತಿಯನ್ನು ಇನ್ನ್ಟು ಉತ್ತಮಗೊಳಿಸುವ ಅಗತ್ಯವಿದೆ.
ಕೇರಳದ ಪಾಲಕ್ಕಾಡ್‌ನಲ್ಲಿರುವ ಚಿತ್ತೂರು ಸರಕಾರಿ ಕಾಲೇಜಿನ ಭೂಗೋಳ ವಿಭಾಗದ ಸಹಾಯಕ ಪ್ರೊಫೆಸರ್ ಆಗಿರುವ ವಿ. ಗೋವಿಂದನ್‌ಕುಟ್ಟಿ ಈ ಕರೇಝ್ ಮಾರ್ಗಗಳನ್ನು ಸುಸ್ಥಿತಿಗೆ ತರುವ ಸಲುವಾಗಿ ಯೋಜನೆಯನ್ನು ಸಿದ್ಧಪಡಿಸಲು ಎರಡು ವರ್ಷಗಳನ್ನು ಕಳೆದಿದ್ದಾರೆ.
ತನ್ನ ಯೋಜನೆಗೆ ಸರಿಯಾದ ಸಮಯದಲ್ಲಿ ಹಲವರು ಬೆಂಬಲವನ್ನು ವ್ಯಕ್ತಪಡಿಸಿದರು ಎಂದು ಗೋವಿಂದನ್‌ಕುಟ್ಟಿ ಹೇಳುತ್ತಾರೆ. ಅದರಲ್ಲೂ ಬೀದರ್ ಜಿಲ್ಲಾ ಆಯುಕ್ತರಾಗಿದ್ದ ಅನುರಾಗ್ ತಿವಾರಿ ಕೇವಲ ಈ ಕರೇಝ್‌ಗಳನ್ನು ಅಭಿವೃದ್ಧಿ ಪಡಿಸಲು ಸಹಕರಿಸಿದ್ದು ಮಾತ್ರವಲ್ಲ ಅನೇಕ ಐತಿಹಾಸಿಕ ಕೆರೆಗಳು ಮತ್ತು ಬಾವಿಗಳನ್ನು ಪುನರ್‌ನಿರ್ಮಿಸಲೂ ನೆರವಾರು ಎಂದು ಅವರು ಸ್ಮರಿಸುತ್ತಾರೆ.

ಸ್ಥಗಿತಗೊಂಡ ಕೆಲಸ
2016ರ ಸೆಪ್ಟಂಬರ್‌ನಲ್ಲಿ ನೌಬಾದ್ ಸುರಂಗಬಾವಿ ಯಿಂದ ನೀರು ಹೊರಬರಲು ಆರಂಭಿಸಿತು, ಆದರೆ ಅಂದಿನಿಂದ ಇದರ ಕೆಲಸವನ್ನೂ ಸ್ಥಗಿತಗೊಳಿಸಲಾಯಿತು. ಗೋವಿಂದನ್‌ಕುಟ್ಟಿಯ ಪ್ರಕಾರ, ನೌಬಾದ್ ಕರೇಝ್‌ನ ಅಭಿವೃದ್ಧಿ ಕೆಲಸವನ್ನು ಮತ್ತೆ ಮುಂದುವರಿಸಬೇಕಿದೆ. ಆ ಮೂಲಕ ಇಂದಿನ ಕಾಲದಲ್ಲಿ ಈ ಜಲ ವ್ಯವಸ್ಥೆ ಎಷ್ಟೊಂದು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂಬುದನ್ನು ಜಗತ್ತಿಗೆ ತೋರಿಸಲು ಸಾಧ್ಯವಾಗುತ್ತದೆ.
ಹಲವು ತಂಡಗಳು ವಿವಿಧ ಸ್ಥಳಗಳಲ್ಲಿ ಕಾರ್ಯೋನ್ಮುಖರಾಗುವ ಮೂಲಕ ಈ ಕಾರ್ಯವು ವ್ಯವಸ್ಥಿತವಾಗಿ ಮತ್ತು ವೇಗವಾಗಿ ನಡೆಯಬೇಕು ಎಂದು ಪ್ರೊಫೆಸರ್ ಹೇಳುತ್ತಾರೆ.
ಬೀದರ್ ಮೂಲಕ ಸರಕಾರೇತರ ಸಂಸ್ಥೆ ‘ಯುವ’ ದ ನಾಗನಾಥ್ ಪಾಟೀಲ್ ಪ್ರಕಾರ, ಬೀದರ್‌ನಲ್ಲಿ ಇಂಥ ಮೂರು ಸುರಂಗಬಾವಿಗಳಿವೆ. ಇವುಗಳಲ್ಲಿ ನೌಬಾದ್ ಕರೇಝ್ ಪ್ರಸಿದ್ಧವಾಗಿದೆ. 2.58 ಕಿ.ಮೀ. ಉದ್ದದ ಈ ಕರೇಝ್ ಸದ್ಯ ಕಾರ್ಯಾಚರಿಸುತ್ತಿದೆ.
ನೌಬಾದ್ ಕರೇಝ್‌ನಲ್ಲಿ ಹರಿಯುತ್ತಿರುವ ನೀರು, ಸುರಂಗಬಾವಿ ಮತ್ತು ಅದರ ಕಂದಕಗಳ ಜೊತೆಗೆ ಬಾವಿಗಳು ಮತ್ತು ಕಲ್ಯಾಣಿಗಳ ಪುನಸ್ಥಾಪನೆಗೆ ತಿಂಗಳುಗಟ್ಟಲೆ ನಡೆಸಿದ ಸಂಶೋಧನೆ ಮತ್ತು ನಿಖರವಾದ ಮರುನಿರ್ಮಾಣ ಕಾರ್ಯದ ಫಲವಾಗಿೆ ಎಂದು ಪಾಟೀಲ್ ತಿಳಿಸುತ್ತಾರೆ.
ಮುಂದಿನ ಕೆಲಸವನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಪಾಟೀಲ್ ತಿಳಿಸುತ್ತಾರೆ. ಮೊದಲ ಹಂತದಲ್ಲಿ ನೌಬಾದ್‌ನಲ್ಲಿ ಕರೇಝ್ ಮಾರ್ಗದ ಸಮೀಪ 50 ಮೀ. ವ್ಯಾಪ್ತಿಯನ್ನು ಸುಂದರಗೊಳಿಸುವುದು. ಎರಡನೆಯ ಹಂತದಲ್ಲಿ ಕರೇಝ್‌ನ ಬಾಯಿಯ ಪಕ್ಕದಲ್ಲಿ ಉದ್ಯಾನವನ ಮತ್ತು ಉಭಯಚರ ಕೇಂದ್ರವನ್ನು ನಿರ್ಮಿಸುವುದು ಎಂದು ಅವರು ತಿಳಿಸುತ್ತಾರೆ.
ಬೀದರ್‌ನ ಕರೇಝ್ ವ್ಯವಸ್ಥೆಯ ಬಗ್ಗೆ ಮೊದಲ ಬಾರಿ 1920ರಲ್ಲಿ ಹೈದರಾಬಾದ್‌ನ ನಿಝಾಮ್ ಸರಕಾರದಲ್ಲಿ ಪುರಾತತ್ವಶಾಸ್ತ್ರ ಮುಖ್ಯಸ್ಥರಾಗಿದ್ದ ಗುಲಾಮ್ ಯಝ್ದನಿ ತಮ್ಮ ‘ಬೀದರ್ ಇತಿಹಾಸ ಮತ್ತು ಅದರ ಸ್ಮಾರಕಗಳು’ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಕರೇಝ್‌ನ ಈಗಿನ ಸ್ಥಿತಿ
ಅವ್ಯವಸ್ಥಿತ ನಗರೀಕರಣವು ಬಾವಿಗಳನ್ನು ನುಂಗಿ ಹಾಕಿರುವ ಕಾರಣ ಈ ಕರೇಝ್‌ಗಳ ಈಗಿನ ಸ್ಥಿತಿ ತೃಪ್ತಿದಾಯಕವಾಗಿಲ್ಲ ಎಂದು ಗೋವಿಂದನ್‌ಕುಟ್ಟಿ ತಿಳಿಸುತ್ತಾರೆ.
ಜಮುನಾ ಮೋರಿ ಮತ್ತು ಶುಕ್ಲ ತೀರ್ಥ ಅಪಾಯದ ಅಂಚಿನಲ್ಲಿದೆ. ಈ ಕಾಲುವೆಗಳಲ್ಲಿ ನೀರು ಹರಿದರೂ ಸುರಂಗ ಕುಸಿತದಿಂದ ಬಿದ್ದಿರುವ ಮಣ್ಣಿನ ರಾಶಿ ಮತ್ತು ತ್ಯಾಜ್ಯ ಎಸೆತದಿಂದ ಅಲ್ಲಲ್ಲಿ ಕಾಲುವೆ ಮುಚ್ಚಲ್ಪಟ್ಟಿದ್ದು ನೀರಿನ ಹರಿವನ್ನು ತಡೆಯುತ್ತಿದೆ. ಅದರಲ್ಲೂ ನೀರು ಮಲಿನವಾಗಿರುವುದು ಪ್ರಮುಖ ಮತ್ತು ಅಪಾಯಕಾರಿ ಸಮಸ್ಯೆಯಾಗಿದೆ ಎಂದು ಅವರು ಖೇದ ್ಯಕ್ತಪಡಿಸುತ್ತಾರೆ.
ಗೋವಿಂದನ್‌ಕುಟ್ಟಿ ಹೇಳುವಂತೆ ಸಂರಕ್ಷಣಾ ಯೋಜನೆಗಳನ್ನು ತಳಮಟ್ಟದಿಂದ ಅನುಷ್ಠಾನಗೊಳಿಸುವ ಅಗತ್ಯ ವಿದೆ. ಪ್ರಸ್ಥಭೂಮಿಯ ಭೂಭೌತ ಲಕ್ಷಣಗಳು ಮತ್ತು ಅಂತರ್ಜಲ ಹರಿವಿನ ಅಧ್ಯಯನ ನಡೆಸಿದ ನಂತರ ಒಂದು ಸಮಗ್ರ ಸಂರಕ್ಷಣಾ ಯೋಜನೆಯನ್ನು ಸಿದ್ಧಪಡಿಸಲಾಗುತ್ತೆ.
ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಉತ್ತಮ ಕಾರ್ಯ ಮಾಡುತ್ತಿವೆ. ಆದರೆ ಅದನ್ನು ಮುಂದುವರಿಸಬೇಕಾದ ಅಗತ್ಯವಿದೆ ಎಂದು ಗೋವಿಂದನ್‌ಕುಟ್ಟಿ ತಿಳಿಸುತ್ತಾರೆ.
ಕೃಪೆ: english.alarabiya.net

Writer - ಅಫ್ತಾಬ್ ಹುಸೈನ್ ಕೋಲಾ

contributor

Editor - ಅಫ್ತಾಬ್ ಹುಸೈನ್ ಕೋಲಾ

contributor

Similar News

ಜಗದಗಲ
ಜಗ ದಗಲ