ಔಷಧಗಳ ಮೇಲೆ ನಿರ್ಬಂಧ

Update: 2018-09-23 18:41 GMT

ಸುಧಾರಣೆಯ ಹಾದಿ ದೂರ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವಿದೆ ಎನ್ನುವಾಗ ನ್ಯಾಯಾಲಯವು ಯಾರ ಪರವಾಗಿ ತಡೆಯಾಜ್ಞೆ ಇರಬೇಕು, ಯಾಕಾಗಿ ಇರಬೇಕು ಎಂದು ಕೂಡಲೇ ತೀರ್ಮಾನಿಸಬೇಕು; ಇಲ್ಲವಾದಲ್ಲಿ ಜಾಣ ಲಾಯರ್‌ಗಳ ವಾದಗಳು ಭಾರತದ ಔಷಧಿ ನಿಯಂತ್ರಣವನ್ನು ಸುಧಾರಿಸುವ ಮತ್ತು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಸಣ್ಣ, ಅಂದರೆ ಮುಖ್ಯವಾದ, ಸರಕಾರದ ಒಂದು ಹೆಜ್ಜೆಯನ್ನು ಅದು ಹಿಂದಕ್ಕೆ ಇಡುವಂತೆ ಮಾಡಬಲ್ಲವು.

ಫಿಕ್ಸ್‌ಡ್ ಡೋಸ್ ಕಾಂಬಿನೇಶನ್ ಡ್ರಗ್ಸ್ ಅಥವಾ ಎಫ್‌ಡಿಸಿ ಔಷಧಗಳ ಮೇಲೆ ಸರಕಾರವು ಹೊಸ ತಜ್ಞರ ಉಪಸಮಿತಿಯ ವರದಿಯನ್ನಾಧರಿಸಿ ನಿಷೇಧವನ್ನು ಹೇರಿದೆ. ಈವರದಿಯು ಈ ಮೊದಲು 2016ರಲ್ಲಿ ಸಲ್ಲಿಸಲಾದ ವರದಿಗಿಂತ ತುಂಬ ಹೆಚ್ಚು ಕಠಿಣವಾಗಿದೆ. ಸಾರ್ವಜನಿಕ ಆರೋಗ್ಯವು ಸಾರ್ವಜನಿಕ ಹಿತಾಸಕ್ತಿಯ ಅವಿಭಾಜ್ಯ ಅಂಗ ಎಂದು ಹೇಳುವ ಮೂಲಕ ಅದು ಔಷಧಿಗಳ ಸಂಪೂರ್ಣ ರದ್ದನ್ನು ಸಮರ್ಥಿಸಿಕೊಂಡಿದೆ. ಜತೆಗೆ ಭಾರತದ ಔಷಧ ನಿಯಂತ್ರಣ ವ್ಯವಸ್ಥೆಯ ಸಂಪೂರ್ಣ ಸುಧಾರಣೆಗೆ ಇಡಬೇಕಾದ ಮೊದಲ ಹೆಜ್ಜೆಗಳನ್ನು ಸೂಚಿಸಿದೆ.

ಸೆ.12ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೊಸತಾಗಿ ಒಂದಷ್ಟು ಅಧಿನಿಯಮಗಳನ್ನು ಹೊರಡಿಸುವ ಮೂಲಕ 328 ಎಫ್‌ಡಿಸಿಗಳನ್ನು ನಿಷೇಧಿಸಿತು. 2016ರ ಮಾರ್ಚ್ ತಿಂಗಳಲ್ಲಿ ಸಚಿವಾಲಯವು 1940ರ ‘ಔಷಧಗಳು ಮತ್ತು ಶೃಂಗಾರ ಸಾಮಗ್ರಿಗಳು’ ಕಾಯ್ದೆಯ 26ಎ ಸೆಕ್ಷನ್ ಪ್ರಕಾರ 344 ಎಫ್‌ಡಿಸಿಗಳನ್ನು ನಿಷೇಧಿಸಿತ್ತು. ಅಂದಿನಿಂದ ಸಚಿವಾಲಯವೂ ಔಷಧಿ ಕಂಪೆನಿಗಳ ಕಾನೂನು ಸವಾಲುಗಳ ದಾಳಿಗಳನ್ನು ಎದುರಿಸಬೇಕಾಗಿದೆ.
ಜಾಹೀರಾತು
 1940ರ ಕಾಯ್ದೆಯನ್ನು ಸರಿಯಾಗಿ ಅರ್ಥೈಸ ಲಾಗಿಲ್ಲ ಎಂಬ ನೆಲೆಯಲ್ಲಿ ದಿಲ್ಲಿ ಹೈಕೋರ್ಟ್ 2016ರ ನಿಷೇಧವನ್ನು ರದ್ದುಪಡಿಸಿತ್ತು. ಸರಕಾರವು ಔಷಧಿಗಳ ತಾಂತ್ರಿಕ ಸಲಹಾ ಸಮಿತಿಯೊಂದಿಗೆ (ಡಿಟಿಎಬಿ) ಮೊದಲು ಸಮಾಲೋಚಿಸಿ ಬಳಿಕ ನಿಷೇಧ ಹೇರಬೇಕಾಗಿತ್ತು ಎಂಬ ವಾದವನ್ನು ಹೈಕೋರ್ಟ್ ಮನ್ನಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಡಿಟಿಎಬಿಗೆ ನಿಷೇಧಕ್ಕೊಳಗಾಗಿದ್ದ ಔಷಧಗಳನ್ನು ಪುನರ್ ಪರಿಶೀಲಿಸುವಂತೆ ಆದೇಶಿಸಿತು.
ಔಷಧಿ ಕಂಪೆನಿಗಳು ಈಗ ಸಚಿವಾಲಯವೂ ನಿಷೇಧಿಸಿರುವ ಔಷಧಿಗಳ ಕುರಿತು ನ್ಯಾಯಾಲಯಕ್ಕೆ ಅಹವಾಲು ಸಲ್ಲಿಸಲು ಪ್ರಯತ್ನಿಸುತ್ತಿವೆಯಾದರೂ ಡಾ.ನೀಲಿಮಾ ಕ್ಷೀರಸಾಗರ್ ನೇತೃತ್ವದ ಹೊಸ ಉಪ ಸಮಿತಿಯ ವರದಿ ಯಲ್ಲಿ ದೋಷಗಳನ್ನು ಕಂಡು ಹಿಡಿಯುವುದು ಅವುಗಳಿಗೆ ಅಷ್ಟೊಂದು ಸುಲಭವಾಗಲಾರದು.
ಸೆಕ್ಷನ್ 26ಎಯ ಪ್ರಕಾರ ಔಷಧಿಗಳನ್ನು ನಿಷೇಧಿಸಲು ಇರುವ 3 ಮಾನದಂಡಗಳು ಹೀಗಿವೆ:
1. ಎಫ್‌ಡಿಸಿಗಳು ಮನುಷ್ಯರಿಗೆ ಅಥವಾ ಪ್ರಾಣಿಗಳಿಗೆ ಅಪಾಯಕಾರಿಯಾಗುವ ಸಾಧ್ಯತೆಯಿದೆ. 2. ಅವುಗಳು ತಮಗೆ ಇದೆ ಎಂದು ಹೇಳುವ ರೋಗ ನಿರೋಧಕ ಶಕ್ತಿ ಅವುಗಳಿಗಿಲ್ಲ. 3. ಅಥವಾ ಅವುಗಳಲ್ಲಿರುವ ಘಟಕಗಳು ರೋಗ ನಿವಾರಕ ಗುಣಗಳನ್ನು ಹೊಂದಿದೆ ಎಂಬುದಕ್ಕೆ ಸಮರ್ಥನೆಯಿಲ್ಲ.
ಉಪಸಮಿತಿಯ ವರದಿ ಭಾರತದ ಔಷಧಿ ನಿಯಂತ್ರಣದ ನಿಟ್ಟಿನಲ್ಲಿ ಒಂದು ರೋಡ್‌ಮ್ಯಾಪ್ ಸಿದ್ಧಪಡಿಸಿದೆ. ಇವರ ಪ್ರಕಾರ ಮೂರು ಮುಖ್ಯ ಕ್ಷೇತ್ರಗಳಲ್ಲಿ ಬದಲಾವಣೆಯಾಗಬೇಕಿದೆ. ಔಷಧಿ ಕಂಪೆನಿಗಳ ತಯಾರಕರ ಮೇಲೆ ನಿಗಾ ಇಡುವುದು, ಔಷಧಿ ಅನುಮೋದನೆಗೆ ತಾಂತ್ರಿಕ ಸಾಮರ್ಥ್ಯದ ಪರಿಶೀಲನೆ ಮತ್ತು ಹೊಸ ಔಷಧಿಗೆ ಒಪ್ಪಿಗೆ ನೀಡುವಲ್ಲಿ, (ವಿಶೇಷವಾಗಿ ರಾಜ್ಯ ಮಟ್ಟದಲ್ಲಿ), ಈಗ ಇರುವ ಕುಂದುಕೊರತೆಗಳ ನಿವಾರಣೆ.
ಎಫ್‌ಡಿಸಿಗಳನ್ನು ಯಾವ ಕಾರಣಕ್ಕಾಗಿ ಅನುಮೋದಿಸಲಾಯಿತು ಎಂಬ ಬಗ್ಗೆ ನ್ಯಾಯಾಲಯಕ್ಕೆ ಪುರಾವೆಗಳನ್ನು ನೀಡಲು ಔಷಧಿ ತಯಾರಿಕಾ ಸಂಸ್ಥೆಗಳು ಸಮರ್ಥವಾಗಲಿಲ್ಲ ಎಂಬುದನ್ನೂ ಉಪಸಮಿತಿ ಗಮನಿಸಿದೆ. ಇದು ದೇಶದ ಔಷಧಿ ನಿಯಂತ್ರಣ ವ್ಯವಸ್ಥೆಯ ಒಂದು ದೊಡ್ಡ ವೈಫಲ್ಯ. ವಿಶೇಷವಾಗಿ. ಈ ಅನುಮೋದನಾ ಪತ್ರಗಳನ್ನು ನೀಡಿದ ರಾಜ್ಯಗಳ ಪರವಾನಿಗೆ ಪ್ರಾಧಿಕಾರಗಳ ವೈಫಲ್ಯ.
ಕಾನೂನು ಸಮರ ಮುಂದುವರಿಯುತ್ತಿದೆ
ಔಷಧಿ ನಿಯಂತ್ರಣ ವ್ಯವಸ್ಥೆಯಲ್ಲಿರುವ ಈ ಸಮಸ್ಯೆಗಳತ್ತ ಕೇಂದ್ರ ಔಷಧಿಗಳ ಗುಣಮಟ್ಟ ನಿಯಂತ್ರಣ ಸಂಸ್ಥೆ ಗಮನ ಹರಿಸಬೇಕಿದೆ. 1988ರ ಸೆಪ್ಟಂಬರ್ 21ರ ಮೊದಲು ಅಂಗೀಕಾರ ಪಡೆದ 15 ಎಫ್‌ಡಿಸಿಗಳು ಈಗ ಮುಖ್ಯ ವಿವಾದದ ವಿಷಯವಾಗಿದೆ. ಉಪಸಮಿತಿುು ಈ 15 ಔಷಧಿಗಳನ್ನು ಪರಿಶೀಲಿಸಿದೆ.
ಆದರೆ ಸೆಪ್ಟಂಬರ್ 7ರ ಒಂದು ಆದೇಶದ ಪ್ರಕಾರ ಈ 15 ಔಷಧಿಗಳ ಬಗ್ಗೆ ಉಪ ಸಮಿತಿ ನೀಡಿದ ವರದಿಯ ಆಧಾರದಲ್ಲಿ ಕೇಂದ್ರ ಸರಕಾರ ಯಾವುದೇಕ್ರಮ ತೆಗೆದುಕೊಳ್ಳದಂತೆ ನ್ಯಾಯಾಲಯ ತಡೆದಿದೆ. ಸೆಪ್ಟಂಬರ್ 17ರಂದು ಸಾರಿಡಾನ್, ಪಿರಿಟೋನ್ ಮತ್ತು ಡಾಟ್‌ನಂತಹ ಔಷಧಿಗಳನ್ನು ಮಾರಾಟ ಮಾಡುವ ಕಂಪೆನಿಗಳು ತಮ್ಮ ಈ ಔಷಧಿಗಳಿಗೆ 1988ಕ್ಕಿಂತ ಮೊದಲೇ ಅಂಗೀಕಾರ ದೊರಕಿತ್ತು ಎಂಬ ನೆಲೆಯಲ್ಲಿ ಇವುಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ತಮಗೆ ಅನುಮತಿ ಮುಂದುವರಿಯಬೇಕೆಂದು ವಾದಿಸಿ ಸುಪ್ರೀಂ ಕೋರ್ಟ್‌ಗೆ ಮೊರೆಹೋದವು. ವಿಚಾರಣೆಯ ಅಂತಿಮ ತೀರ್ಪು ಬರುವವರೆಗೆ ಎಂಬ ಷರತ್ತಿನಲ್ಲಿ ನ್ಯಾಯಾಲಯವು ಕಂಪೆನಿಗಳಿಗೆ ಅನುಮತಿ ನೀಡಿದೆ.
 ಇಲ್ಲಿ ಎರಡು ಮುಖ್ಯ ಸಮಸ್ಯೆಗಳಿವೆ: ಮೊದಲನೆಯದಾಗಿ, 1988ರ ಪೂರ್ವದ ಔಷಧಿಗಳ ಬಗ್ಗೆ ಸರಕಾರ ಒಂದು ಹೊಸ ವಿಚಾರಣೆ ನಡೆಸಬಹುದು ಎನ್ನುವಾಗ ಸುಪ್ರೀಂ ಕೋರ್ಟ್ ಯಾವ ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೋಡು ಹಾಗೆ ಹೇಳಿತು ಎಂಬುದು ಸ್ಪಷ್ಟವಿಲ್ಲ. ಎರಡನೆಯದಾಗಿ, ಅಂತಿಮ ತೀರ್ಪು ನಿಡುವವರೆಗೆ, ಕಂಪೆನಿಗಳು ತಮ್ಮ ಔಷಧಿಗಳನ್ನು ಮಾರಬಹುದು ಎಂದು ಅನುಮತಿ ನೀಡುವಾಗ ಕೋರ್ಟ್ ಆ ಔಷಧಿಗಳು ಸಾರ್ವಜನಿಕ ಹಿತಾಸಕ್ತಿಗೆ ಮಾರಕವಾಗಿವೆ ಎಂಬುದನ್ನು ಗಣನೆಗೆ ತೆಗೆದುಕೊಂಡತ್ತಿಲ್ಲ; ಕಂಪೆನಿಗಳಿಗಾಗುತ್ತದೆನ್ನಲಾದ ಹಣಕಾಸಿನ ತೊಂದರೆ ಅಥವಾ ನಷ್ಟವನ್ನಷ್ಟೇ ಗಣನೆಗೆ ತೆಗೆದುಕೊಂಡಂತಿದೆ. 1998ರ ಮೊದಲೇ ತಮ್ಮ ಕಂಪೆನಿಯ ಔಷಧಗಳಿಗೆ ಅಂಗೀಕಾರ ನೀಡಲಾಗಿತ್ತು ಎಂದು ವಾದಿಸಿದ ಕಂಪೆನಿಗಳು ಆ ಅಂಗೀಕಾರವನ್ನು ಸಾಬೀತುಪಡಿಸುವ ದಾಖಲೆಗಳನ್ನು ಒದಗಿಸಲು ಅಸಮರ್ಥವಾದವು ಎಂದು ಉಪಸಮಿತಿ ಹೇಳಿದೆ. ಸಾರ್ವಜನಿಕ ಆರೋಗ್ಯಕ್ಕೆ ಅಪಾಯವಿದೆ ಎನ್ನುವಾಗ ನ್ಯಾಯಾಲಯವು ಯಾರ ಪರವಾಗಿ ತಡೆಯಾಜ್ಞೆ ಇರಬೇಕು, ಯಾಕಾಗಿ ಇರಬೇಕು ಎಂದು ಕೂಡಲೇ ತೀರ್ಮಾನಿಸಬೇಕು; ಇಲ್ಲವಾದಲ್ಲಿ ಜಾಣ ಲಾಯರ್‌ಗಳ ವಾದಗಳು ಭಾರತದ ಔಷಧಿ ನಿಯಂತ್ರಣವನ್ನು ಸುಧಾರಿಸುವ ಮತ್ತು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಸಣ್ಣ, ಅಂದರೆ ಮುಖ್ಯವಾದ, ಸರಕಾರದ ಒಂದು ಹೆಜ್ಜೆಯನ್ನು ಅದು ಹಿಂದಕ್ಕೆ ಇಡುವಂತೆ ಮಾಡಬಲ್ಲವು.
ಕೃಪೆ: scroll.in

Writer - ಧ್ವನಿ ಮೆಹ್ತಾ

contributor

Editor - ಧ್ವನಿ ಮೆಹ್ತಾ

contributor

Similar News

ಜಗದಗಲ
ಜಗ ದಗಲ