ನೋಟು ಅಮಾನ್ಯ: ಒಂದಿಷ್ಟು ಒಳಿತು, ಬಹಳಷ್ಟು ಕೆಡುಕು

Update: 2018-09-28 18:40 GMT

ಮೋದಿಯ ನಡೆಯಿಂದ ಶ್ರೀಮಂತರು ಅಕ್ರಮವಾಗಿ ಕೂಡಿಟ್ಟಿರುವ ಹಣ ಯಾವುದೇ ಬೆಲೆಯಿಲ್ಲದೆ ನಿಷ್ಪ್ರಯೋಜಕವಾಗುತ್ತದೆ ಎಂಬ ಕಾರಣಕ್ಕೆ ಆರಂಭದಲ್ಲಿ ಅನೇಕ ಭಾರತೀಯರು ನೋಟು ನಿಷೇಧಕ್ಕೆ ಸಮ್ಮತಿ ಸೂಚಿಸಿದ್ದರು. ಅದಕ್ಕಾಗಿ ಬ್ಯಾಂಕ್‌ಗಳ ಮುಂದೆ ಉದ್ದನೆಯ ಸರತಿ ಸಾಲುಗಳಲ್ಲಿ ನಿಲ್ಲಲೂ ಅವರು ಸಿದ್ಧರಿದ್ದರು. ಆದರೆ ಅದು ನಡೆಯಲಿಲ್ಲ. ಕಳೆದ ವರ್ಷ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಹೆಚ್ಚಿನ ಮೊತ್ತದ ಅಕ್ರಮ ಆದಾಯವನ್ನು ಪತ್ತೆ ಮಾಡಿರುವುದು ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ತಡೆಯುವಲ್ಲಿ ಸರಕಾರ ಸಂಪೂರ್ಣವಾಗಿ ಸಫಲವಾಗಿಲ್ಲ ಎಂಬುದನ್ನು ತೋರಿಸುತ್ತದೆ.

ಎರಡು ವರ್ಷಗಳ ಹಿಂದೆ ಹೆಚ್ಚು ವೌಲ್ಯದ ಕರೆನ್ಸಿ ನೋಟುಗಳನ್ನು ನಿಷೇಧಿಸಿದ ಭಾರತ ಸರಕಾರದ ಕ್ರಮದಿಂದ ಆದ ಲಾಭ ಅಲ್ಪವಾದರೂ ತೊಂದರೆ ಬಹಳಷ್ಟು.

ಇದೀಗ ನೋಟು ರದ್ದತಿಯ ಎಲ್ಲ ಗೊಂದಲಗಳು ಬದಿಗೆ ಸರಿದಿದ್ದು ಸ್ಪಷ್ಟವಾಗಿ ದೊರೆಯುವ ಅಂಕಿಅಂಶಗಳು ತಿಳಿಸುವಂತೆ, ಕಪ್ಪುಹಣ ನಾಶ ಮತ್ತು ಅಕ್ರಮವಾಗಿ ಸಂಪಾದಿಸಿದ ಹಣವನ್ನು ಹೊರಗೆತರುವುದು ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧಿಸಲು ಮುಖ್ಯ ಕಾರಣವಾಗಿದ್ದರೂ ಅವೆರಡರ ಮೇಲೆ ಯಾವುದೇ ಪರಿಣಾಮವಾಗಿಲ್ಲ. ಇನ್ನು ಒಳ್ಳೆಯ ಬೆಳವಣಿಗೆಯೆಂದರೆ, ದೇಶದ ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಹೆಚ್ಚಳ, ಡಿಜಿಟಲ್ ಪಾವತಿಯ ಏರಿಕೆ ುತ್ತು ನಕಲಿ ನೋಟುಗಳ ಕುಸಿತ.
2016ರ ನವೆಂಬರ್‌ನಲ್ಲಿ ಪ್ರಧಾನಿ ಮೋದಿ ದೇಶದಲ್ಲಿ ಚಲಾವಣೆಯಲ್ಲಿದ್ದ ಶೇ.86 ಕರೆನ್ಸಿಯನ್ನು ನಿಷೇಧಿಸಿ ಆದೇಶ ನೀಡಿದರು. ಹೀಗೆ ಮಾಡುವ ಮೂಲಕ ತಮ್ಮಲ್ಲಿ ಅಕ್ರಮವಾಗಿ ಹಣವನ್ನು ಕೂಡಿಟ್ಟ ಜನರಿಗೆ ಬ್ಯಾಂಕ್‌ಗಳಲ್ಲಿ ಹೊಸ ನೋಟುಗಳನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದು ಮೋದಿ ಯೋಜನೆಯಾಗಿತ್ತು.
ಆದರೆ ಶೇ.99.7 ನಿಷೇಧಿತ 500 ಮತ್ತು 1000 ರೂ. ನೋಟುಗಳು ವಾಪಸ್ ಚಲಾವಣೆಗೆ ಬಂದಿರುವುದರಿಂದ ಮೋದಿಯ ಈ ಯೋಜನೆ ಫಲಿಸಲಿಲ್ಲ ಎನ್ನುವುದು ಸ್ಪಷ್ಟ.
ನೋಟು ನಿಷೇಧದಿಂದ ಉಂಟಾದ ಕೆಲವು ಲಾಭಗಳು ಮತ್ತು ಹಲವು ನಷ್ಟಗಳು ಇಲ್ಲಿವೆ:

ಆರ್ಥಿಕ ಬೆಳವಣಿಗೆ
ನಗದು ಕೊರತೆಯಿಂದ ಆರ್ಥಿಕತೆಯು ತೀವ್ರ ಹೊಡೆತಕ್ಕೊಳಗಾಯಿತು. ಜೂನ್ 2017ರ ತ್ರೈಮಾಸಿಕದಲ್ಲಿ ಬೆಳವಣಿಗೆಯು ಶೇ.5.6ಕ್ಕೆ ಕುಸಿಯಿತು. ಹಳೆ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸುವ ಧಾವಂತದಲ್ಲಿ ನೂರಕ್ಕೂ ಹೆಚ್ಚು ಜೀವಗಳು ಬಲಿಯಾದವು. ಕೋಟಿಗಟ್ಟಲೆ ದಿನಗೂಲಿ ನೌಕರರು ಹಲವು ವಾರಗಳ ಕಾಲ ಕೆಲಸ-ವೇತನವಿಲ್ಲದೆ ಪರದಾಡಿದರು, ಸಾವಿರಾರು ಸಣ್ಣ ಉದ್ದಿಮೆಗಳು ಬಾಗಿಲು ಮುಚ್ಚಿದವು ಎಂದು ಕಳೆದ ತಿಂಗಳು ಮಾಜಿ ವಿತ್ತ ಸಚಿವ ಪಿ.ಚಿದಂಬರಮ್ ತಿಳಿಸಿದ್ದಾರೆ.
ಕಳೆದ ವರ್ಷ ಸರಕಾರ ರಾಷ್ಟ್ರವ್ಯಾಪಿ ಸರಕು ಮತ್ತು ಸೇವಾ ತೆರಿಗೆ ಹೇರಿದ ಪರಿಣಾಮ ಬೆಳವಣಿಗೆ ಮತ್ತೊಮ್ಮೆ ಹಿನ್ನಡೆ ಅನುಭವಿಸಿತು. ನಂತರ ಕೊನೆಯ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ ಇತರ ಯಾವುದೇ ಪ್ರಮುಖ ಆರ್ಥಿಕತೆಗಿಂತ ಹೆಚ್ಚಿನ ವೇಗದಲ್ಲಿ ಏರಿಕೆ ಕಂಡು ಶೇ.8.2ಕ್ಕೆ ತಲುಪಿದೆ.

ತೆರಿಗೆ ಆದಾಯ
2017ರ ಮಾರ್ಚ್ ವೇಳೆಗೆ ಭಾರತದ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹದಲ್ಲಿ ಶೇ.27ರ ಗಮನಾರ್ಹ ಏರಿಕೆಯಾಗಿದೆ. ಜೊತೆಗೆ ಕಳೆದ ವಿತ್ತೀಯ ವರ್ಷಕ್ಕಿಂತ ಶೇ.21 ಏರಿಕೆ ಕಂಡಿದೆ.
ಇದು ಸರಕಾರದ ಒಟ್ಟಾರೆ ಆದಾಯವನ್ನು ಸರಿದೂಗಿಸಲು ನೆರವಾಗಿದೆ. ಆದರೆ ಮುಂದಿನ ಮೇಯಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ವೆಚ್ಚವನ್ನು ಏರಿಕೆ ಮಾಡಿರುವ ಸರಕಾರ ಕ್ರಮದಿಂದ ಬಜೆಟ್ ಕೊರತೆಯನ್ನು ಸರಿದೂಗಿಸಲು ಸಾಕಾಗುವುದಿಲ್ಲ.
ಪ್ರಸಕ್ತ ವರ್ಷ ವಿತ್ತೀಯ ಕೊರತೆ ಗುರಿಯು ಜಿಡಿಪಿಯ ಶೇ.3.3 ಆಗಿದೆ. ಈ ಗುರಿಯನ್ನು ತಲುಪಬಹುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಆದರೆ ಇದಕ್ಕೆ ಆದಾಯ ಮತ್ತು ಆಸ್ತಿ ಮಾರಾಟ ಗುರಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ.
ನೋಟು ಅಮಾನ್ಯದಿಂದಾಗಿ ಹೊಸ ತೆರಿಗೆ ಪಾವತಿದಾರರಲ್ಲಿ ಉಂಟಾದ ಏರಿಕೆಯಿಂದ ಆದಾಯ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದೆ. ಕಳೆದ ಆರು ವರ್ಷಗಳ ಸರಾಸರಿ 6.2 ಮಿಲಿಯನ್‌ಗೆ ಹೋಲಿಸಿದರೆ 2017ರಲ್ಲಿ 10.1 ಮಿಲಿಯನ್ ಹೊಸ ತೆರಿಗೆ ಪಾವತಿದಾರರು ಸೇರಿಕೊಂಡಿದ್ದಾರೆ ಎಂದು ಸರಕಾರದ ಅಂಕಿಅಂಶ ತಿಳಿಸುತ್ತದೆ.


ಆದರೂ ಭಾರತ ಇನ್ನೂ ಹೆಚ್ಚಿನದನ್ನು ಮಾಡಬೇಕಿದೆ. ಮೋದಿ ಆಡಳಿತದ ಮೊದಲ ಮೂರು ವರ್ಷಗಳಲ್ಲಿ ತೆರಿಗೆ ಪಾವತಿದಾರರ ಪ್ರಮಾಣ ಶೇ. 30 ಏರಿಕೆ ಕಂಡು 82.7 ಮಿಲಿಯನ್‌ಗೆ ತಲುಪಿದೆ. ಆದರೆ 2.6 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಅನುಪಾತಕ್ಕೆ ಹೋಲಿಸಿದರೆ ಈ ಪ್ರಮಾಣವು ಕಡಿಮೆಯೆನಿಸುತ್ತದೆ.
ತೆರಿಗೆಕಳ್ಳರನ್ನು ತಡೆಯುವ ಉದ್ದೇಶದಿಂದ ಸರಕು ಮತ್ತು ಸೇವಾ ತೆರಿಗೆಯಂಥ ಕ್ರಮಗಳನ್ನು ಅಳವಡಿಸಿದರೂ ಭಾರತ ಟ್ಯಾಕ್ಸ್-ಟು-ಜಿಡಿಪಿ ಅನುಪಾತ ದಶಕಗಳ ಹಿಂದೆ ಇದ್ದ ಪ್ರಮಾಣದ ಸುತ್ತಮುತ್ತವೇ ಗಿರಕಿ ಹೊಡೆಯುತ್ತಿದೆ ಮತ್ತು ಾಗತಿಕ ಸರಾಸರಿಯಿಂದ ಕಡಿಮೆಯಿದೆ.

ಕಪ್ಪುಹಣ
ತೆರಿಗೆಯನ್ನು ತಪ್ಪಿಸಿ ಅಥವಾ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಸಂಬೋಧಿಸಲು ಸ್ಥಳೀಯವಾಗಿ ಬಳಸುವ ಶಬ್ದ ಕಪ್ಪುಹಣ, 2014 ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿತ್ತು ಮತ್ತು ಪ್ರಧಾನಿ ಮೋದಿ ನೋಟು ನಿಷೇಧ ಮಾಡಲು ಮುಖ್ಯ ಕಾರಣವಾಗಿತ್ತು.
ಈ ನಡೆಯಿಂದ ಶ್ರೀಮಂತರು ಅಕ್ರಮವಾಗಿ ಕೂಡಿಟ್ಟಿರುವ ಹಣ ಯಾವುದೇ ಬೆಲೆಯಿಲ್ಲದೆ ನಿಷ್ಪ್ರಯೋಜಕವಾಗುತ್ತದೆ ಎಂಬ ಕಾರಣಕ್ಕೆ ಆರಂಭದಲ್ಲಿ ಅನೇಕ ಭಾರತೀಯರು ನೋಟು ನಿಷೇಧಕ್ಕೆ ಸಮ್ಮತಿ ಸೂಚಿಸಿದ್ದರು. ಅದಕ್ಕಾಗಿ ಬ್ಯಾಂಕ್‌ಗಳ ಮುಂದೆ ಉದ್ದನೆಯ ಸರತಿ ಸಾಲುಳಲ್ಲಿ ನಿಲ್ಲಲೂ ಅವರು ಸಿದ್ಧರಿದ್ದರು.
ಆದರೆ ಅದು ನಡೆಯಲಿಲ್ಲ. ಕಳೆದ ವರ್ಷ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಹೆಚ್ಚಿನ ಮೊತ್ತದ ಅಕ್ರಮ ಆದಾಯವನ್ನು ಪತ್ತೆ ಮಾಡಿರುವುದು ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ತಡೆಯುವಲ್ಲಿ ಸರಕಾರ ಸಂಪೂರ್ಣವಾಗಿ ಸಫಲವಾಗಿಲ್ಲ ಎಂಬುದನ್ನು ತೋರಿಸುತ್ತದೆ.
ಶೇ.90ರಷ್ಟು ಪಾವತಿಗಳನ್ನು ನಗದು ರೂಪದಲ್ಲಿ ಮಾಡುವ ಆರ್ಥಿಕತೆಯನ್ನು ಡಿಜಿಟಲ್ ವ್ಯವಹಾರಕ್ಕೆ ಪ್ರೇರೇಪಿಸುವುದು ನೋಟು ಅಮಾನ್ಯದ ಹಿಂದಿನ ಇನ್ನೊಂದು ಉದ್ದೇಶವಾಗಿತ್ತು. ಪರಿಣಾಮವಾಗಿ 2016ರ ನವೆಂಬರ್‌ನಲ್ಲಿ ಜನರಲ್ಲಿ ಡಿಜಿಟಲ್ ವ್ಯಾಲೆಟ್, ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಕೆಯ ಹೊರತಾಗಿ ಬೇರೆ ಯಾವುದೇ ದಾರಿಯಿಲ್ಲದ ಕಾರಣ ಆ ತಿಂಗಳಲ್ಲಿ ಡಿಜಿಟಲ್ ವ್ಯವಹಾರ ಗಣನೀಯ ಏರಿಕೆಯನ್ನು ಕಂಡಿತು.
ಭಾರತದಲ್ಲಿ ಈಗಲೂ ನಗದು ವ್ಯವಹಾರ ಅತ್ಯಂತ ಜನಪ್ರಿಯವಾಗಿದೆ. ನೋಟು ಅಮಾನ್ಯದ ಮೊದಲು ಸಾರ್ವಜನಿಕವಾಗಿ 17.9 ಟ್ರಿಲಿಯನ್ ರೂಪಾಯಿ ಇದ್ದ ಕರೆನ್ಸಿ ಕಳೆದ ಆಗಸ್ಟ್‌ನಲ್ಲಿ 18.5 ಟ್ರಿಲಿಯನ್ ರೂಪಾಯಿಗೆ ಏರಿಕೆಯಾಗಿದೆ.

ನಕಲಿ ಪತ್ತೆ
ನೋಟು ಅಮಾನ್ಯದ ನಂತರ ಉತ್ತಮ ಗುಣಮಟ್ಟದ ಹೊಸ ನಕಲಿ ನೋಟುಗಳನ್ನು ಯಾವುದೇ ಸಂಸ್ಥೆಯು ಪತ್ತೆಹಚ್ಚಿಲ್ಲ ಮತ್ತು ಇತ್ತೀಚೆಗೆ ಪತ್ತೆಯಾದಂತ ನಕಲಿ ನೋಟುಗಳು ಸ್ಕಾನ್ ಅಥವಾ ಝೆರಾಕ್ಸ್ ಮಾಡಲ್ಪಟ್ಟಂತಹವು ಎಂದು ಕಳೆದ ತಿಂಗಳು ಸರಕಾರ ಸದನದಲ್ಲಿ ತಿಳಿಸಿತ್ತು. ಸದ್ಯ ಇದ್ದ ನಕಲಿ ನೋಟುಗಳ ಸಂಗ್ರಹವನ್ನು ಧ್ವಂಸಗೊಳಿಸಿರುವುದು ನೋಟು ಅಮಾನ್ಯದ ಅಲ್ಪಾವಧಿ ಲಾಭವಾಗಿದೆ ಎಂದು ಸರಕಾರ ತಿಳಿಸಿತ್ತು.

Writer - ಆರ್.ಎನ್.

contributor

Editor - ಆರ್.ಎನ್.

contributor

Similar News

ಜಗದಗಲ
ಜಗ ದಗಲ