ಕಾಂಡೋಮ್ ಕೇಂದ್ರಿತ ಸಲಿಂಗ ವೈಭವದ ಟೊಳ್ಳುತನ ಮತ್ತು ಅಪಾಯಗಳು
ಭಾಗ-1
ನಿಜವಾಗಿ ಸಲಿಂಗ ಕಾಮದ ಹಾನಿಗಳನ್ನು ಬಲ್ಲವರು ಯಾರೂ ಅದನ್ನು ಪ್ರತಿರೋಧಿಸದೆ ಇರಲು ಸಾಧ್ಯವಿಲ್ಲ. ಆದರೆ ಈ ಪ್ರತಿರೋಧವು ಚರ್ಚೆ, ಸಂವಾದ, ಸಮಾಲೋಚನೆ, ಶಿಕ್ಷಣ, ಉಪದೇಶ ಇತ್ಯಾದಿಗಳ ಮೂಲಕ ಜನಜಾಗೃತಿ ಬೆಳೆಸುವ ಸ್ವರೂಪದಲ್ಲಿರಬೇಕೇ ಹೊರತು ಹಿಂಸೆ, ಬಲವಂತ, ನಿಂದನೆ, ದೂಷಣೆ ಮುಂತಾದ ರೂಪಗಳನ್ನು ಖಂಡಿತ ತಾಳಬಾರದು. ಸಲಿಂಗ ಕಾಮದ ಕುರಿತು ಚರ್ಚೆ ಪ್ರಬುದ್ಧ ಹಾಗೂ ಗಂಭೀರ ಸ್ತರದಲ್ಲಿ ಮುಂದುವರಿಯಬೇಕಿದ್ದರೆ, ಚರ್ಚೆಯಲ್ಲಿ ಪಾಲುಗೊಳ್ಳುವವರು ಬಹಳಷ್ಟು ಸಂವೇದನಾಶೀಲರಾಗಿ, ಸಂಯಮದೊಂದಿಗೆ, ಸಂತುಲಿತವಾಗಿ ಮುಂದುವರಿಯಬೇಕಾಗುತ್ತದೆ. ಅವರು ರೋಗಿ ಮತ್ತು ರೋಗದ ನಡುವಣ ಅಂತರವನ್ನು ಎಂದೂ ಮರೆಯಬಾರದು. ರೋಗದ ಕುರಿತಾದ ಅವರ ಜಿಗುಪ್ಸೆ ಯಾವ ಕಾರಣಕ್ಕೂ ರೋಗಿಯ ವಿರುದ್ಧ ತಿರುಗಬಾರದು.
ವ್ಯಕ್ತಿಗತವಾದ ಹಾಗೂ ಬಲವಂತವಿಲ್ಲದ ಲೈಂಗಿಕ ಅಥವಾ ಕಾಮ ಸಂಬಂಧಿ ಚಟುವಟಿಕೆಗಳು ಯಾವ ಸ್ವರೂಪದಲ್ಲಿದ್ದರೂ ಆ ಕುರಿತು ಸಮಾಜವು ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಸಾಮಾನ್ಯ ಸ್ಥಿತಿಯಲ್ಲಿ, ಕಾಮದ ವಿಷಯದಲ್ಲಿ, ಯಾವ ವ್ಯಕ್ತಿ ವೈಯಕ್ತಿಕವಾಗಿ ಎಂತಹ ಒಲವು ಉಳ್ಳವನು ಎಂಬ ಬಗ್ಗೆ ಬೇಹುಗಾರಿಕೆ ನಡೆಸುವ ಅಗತ್ಯವಿಲ್ಲ. ಯಾರೂ ಇನ್ನೊಬ್ಬರ ಖಾಸಗಿ ಬದುಕಿನೊಳಗೆ ಮೂಗು ತೂರಿಸಬೇಕಾಗಿಲ್ಲ. ಇನ್ನೊಬ್ಬರ ಬೆಡ್ ರೂಮ್ನೊಳಗೆ ಇಣುಕಿ ನೋಡ ಬೇಕಾಗಿಲ್ಲ. ನೈತಿಕ ದೃಷ್ಟಿಯಿಂದ ಯಾವುದು ಸದಾಚಾರ ಮತ್ತು ಯಾವುದು ದುರಾಚಾರ ಎಂಬುದನ್ನು ಸಮಾಜಕ್ಕೆ ನೆನಪಿಸುತ್ತಲಿದ್ದರೆ ಸಾಕು. ಹಾಗೆಯೇ ವಿವಿಧ ದುರಾಚಾರಗಳ ವಿವಿಧ ದುಷ್ಪರಿಣಾಮಗಳ ಬಗ್ಗೆ ಸಮಾಜವನ್ನು ಎಚ್ಚರಿಸುತ್ತಲಿದ್ದರೆ ಸಾಕು. ವ್ಯಕ್ತಿಗತ ದುರಾಚಾರಗಳನ್ನು ಸಮೂಹದ ಮೇಲೆ ಹೇರುವ ಶ್ರಮಗಳು ನಡೆಯದಂತೆ ನೋಡಿಕೊಂಡರೆ ಸಾಕು. ಇದು ಎಲ್ಲ ನಾಗರಿಕ ಸಮಾಜಗಳಲ್ಲಿ ಎಲ್ಲ ಕಾಲಗಳಲ್ಲೂ ಪಾಲಿಸಲಾಗಿರುವ ಒಂದು ಸರಳ ನಿಯಮ. ಇದಕ್ಕೆ ಅಪವಾದಗಳೂ ಇದ್ದವು. ಅಸ್ವಸ್ಥತೆಗಳು, ತೀವ್ರವಾದಿ ನಿಲುವುಗಳು, ಅಸಮತೋಲನಗಳು ವಿವಿಧ ಪ್ರಮಾಣಗಳಲ್ಲಿ ಆಂಶಿಕ ಅನಿಷ್ಟಗಳಾಗಿ ಎಲ್ಲ ಸಮಾಜ ಮತ್ತು ಎಲ್ಲ ಕಾಲಗಳಲ್ಲಿ ಅಸ್ತಿತ್ವದಲ್ಲಿದ್ದವು. ಆದರೆ ಇದೀಗ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಜೊತೆ ಸ್ಪರ್ಧಿಸಲಿಕ್ಕೋ ಎಂಬಂತೆ ನೈತಿಕ ಮತ್ತು ಸಾಮಾಜಿಕ ನಿಯಮಗಳು, ಹಿತ- ಅಹಿತದ ಮಾನದಂಡಗಳು ಕೂಡಾ ಕ್ಷಿಪ್ರವಾಗಿ ಬದಲಾಗುತ್ತಿವೆ. ಆಹಾರಕ್ಕಿಂತ ಕಾಮವು ಹೆಚ್ಚು ಚರ್ಚೆಯಲ್ಲಿದೆ. ಉದ್ಯಮ, ಉದ್ಯೋಗ, ವೃತ್ತಿ, ಕೃಷಿ, ವ್ಯವಸಾಯ, ಕಲೆ, ಕ್ರೀಡೆ, ಸಾಹಿತ್ಯ, ಸಂಸ್ಕೃತಿ, ಅಭಿವೃದ್ಧಿ ಇತ್ಯಾದಿಗಳ ಕುರಿತಾದ ಚರ್ಚೆಗೆ ಮೀಸಲಿದ್ದ ಜಾಗವನ್ನೆಲ್ಲ ಕಾಮ ಮತ್ತು ಲೈಂಗಿಕತೆಯ ಕುರಿತಾದ ಆಲಾಪಗಳು ಕಬಳಿಸುತ್ತಿವೆ. ಅಪವಾದ ಸ್ವರೂಪದ ಅಸ್ವಾಸ್ಥ್ಯಗಳನ್ನು ಎಷ್ಟು ಪರಿಣಾಮಕಾರಿಯಾಗಿ ಸಮಾಜದ ಪ್ರಧಾನಧಾರೆಗೆ ತರಲಾಗುತ್ತಿದೆ ಎಂದರೆ, ಅಸ್ವಸ್ಥರನ್ನು ತಿದ್ದಲು ಹೊರಟಿದ್ದ ಕೆಲವು ಸ್ವಸ್ಥರು, ತಾವು ನಿಜಕ್ಕೂ ಸ್ವಸ್ಥರೇ ಎಂದು ಸ್ವತಃ ತಮ್ಮ ಸ್ವಾಸ್ಥ್ಯದ ಕುರಿತು ಸಂಶಯ ಪಟ್ಟುಕೊಳ್ಳುವಂತಾಗಿದೆ.
ಒಂಟಿಯಾಗಿದ್ದ ‘ಜಿ’(G) ಕ್ರಮೇಣ LGBTQQIAAP+ ಸಮುದಾಯವಾಗಿ ಬೆಳೆದದ್ದು ಮತ್ತು ಮಿತಿಮೀರಿ ಬೆಳೆಯುತ್ತಿರುವುದು
ನಮ್ಮ ಸಮಕಾಲೀನ ಸಮಾಜದಲ್ಲಿ ಸಂವಾದಗಳು ರೂಪುಗೊಳ್ಳುವ ಮತ್ತು ಕ್ರಮೇಣ ಸಾಮೂಹಿಕ ಅಭಿರುಚಿ, ಸಂಸ್ಕೃತಿ, ಕಾನೂನು ಇತ್ಯಾದಿ ಎಲ್ಲವನ್ನೂ ಆವರಿಸಿ ಕೊಳ್ಳುವ ಪ್ರಕ್ರಿಯೆ ಬಹಳ ಗಮನಾರ್ಹವಾಗಿದೆ. ಕೆಲವೇ ದಶಕಗಳ ಹಿಂದೆ ಏಡ್ಸ್ ರೋಗದ ಹಿನ್ನೆಲೆಯಲ್ಲಿ ಪುರುಷರ ಸಲಿಂಗಕಾಮ ಅಥವಾ ‘ಗೇ’ ಕಾಮ ಚರ್ಚೆಗೆ ಬಂತು. ಏಡ್ಸ್ ಪೀಡಿತರ ಪೈಕಿ ಸಲಿಂಗಿ ಪುರುಷರ ಅನುಪಾತ ತುಂಬಾ ಅಧಿಕವಾಗಿರುವುದು ಪದೇ ಪದೇ ಸಾಬೀತಾಗಿ, ಸಲಿಂಗ ಕಾಮದ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳತೊಡಗಿತು. ಆದರೆ ಕ್ರಮೇಣ ಜನರನ್ನು ಏಡ್ಸ್ ಮತ್ತಿತರ ಸೋಂಕುಗಳಿಂದ ರಕ್ಷಿಸುವ ಹೊಣೆಯನ್ನು ಸಂಪೂರ್ಣವಾಗಿ ಕಾಂಡೋಮ್ಗಳಿಗೆ ವಹಿಸಿಕೊಡಲಾಯಿತು. ಕಾಂಡೋಮ್ ಧರಿಸಿಕೊಂಡು ಯಾವ ಬಗೆಯ ಕಾಮ ಕೇಳಿ ನಡೆಸಿದರೂ ಯಾವುದೇ ರೋಗ ಬಾಧಿಸುವುದಿಲ್ಲ ಎಂಬ ನಂಬಿಕೆ ವ್ಯಾಪಕವಾಯಿತು. ಶಕ್ತಿ ಸಂಪನ್ಮೂಲಗಳನ್ನೆಲ್ಲ ಕಾಂಡೋಮ್ಗಳ ಪರ ಪ್ರಚಾರಕ್ಕೆ ಮೀಸಲಿಡಲಾಯಿತು. ಜಗತ್ತಿನ ವಿವಿಧೆಡೆಯ ಸರಕಾರಗಳು ಏಡ್ಸ್ ವಿರುದ್ಧ ಜಾಗೃತಿಗಾಗಿ ಜಾಹೀರಾತುಗಳನ್ನು ಪ್ರಕಟಿಸತೊಡಗಿದವು. ಆ ಜಾಹೀರಾತುಗಳೆಲ್ಲಾ ಕಾಂಡೋಮ್ ಕೇಂದ್ರಿತವಾಗಿದ್ದವು. ಅಲ್ಲಿ ಶಾರೀರಿಕ ಹಾನಿ ಮತ್ತು ಸುರಕ್ಷೆಯ ಚರ್ಚೆ ಇತ್ತೇ ಹೊರತು ಚಾರಿತ್ರ್ಯ, ನೈತಿಕತೆ, ಕುಟುಂಬ ವ್ಯವಸ್ಥೆ, ಸಾಮಾಜಿಕ ಹಿತಾಸಕ್ತಿ ಇತ್ಯಾದಿ ಆಯಾಮಗಳ ಪ್ರಸ್ತಾಪವೇ ಇರಲಿಲ್ಲ. ಇದರ ಜೊತೆ ಜೊತೆಗೇ ಸಮಾಜದಲ್ಲಿ, ಏಡ್ಸ್ ಅನ್ನು ತಡೆಯಲು ಕಾಂಡೋಮ್ ಎಂಬ ಬ್ರಹ್ಮಾಸ್ತ್ರವಿರುವಾಗ ಸುಮ್ಮ ಸುಮ್ಮನೆ ಸಲಿಂಗ ಕಾಮವನ್ನು ಯಾಕೆ ವಿರೋಧಿಸಬೇಕು? ಎಂಬ ಪ್ರಶ್ನೆ ಜನಪ್ರಿಯವಾಗ ತೊಡಗಿತು. ಕ್ರಮೇಣ ‘ಗೇ’ಗಳ ಕುರಿತು ಅವರು ಅನಗತ್ಯವಾಗಿ ನಿಂದನೆಗೆ ತುತ್ತಾದವರು ಎಂಬ ಸಹಾನು ಭೂತಿಯ ವಾತುಗಳು ಕೇಳಿ ಬರಲಾರಂಭಿಸಿದವು.
ಪುರುಷ ಪ್ರಧಾನವಾದ ‘ಗೇ’ ಸಂಸ್ಕೃತಿಗೆ ಗೌರವ ಮತ್ತು ಸಮತೋಲನ ತಂದು ಕೊಡಲು ಲೆಸ್ಬಿಯನ್ (Lesbian G L GLL G LGBTQQIAAP ) ಅಥವಾ ಸ್ತ್ರೀ ಸಲಿಂಗ ಸಂಸ್ಕೃತಿಯನ್ನು ಚರ್ಚೆಗೆ ತರಲಾಯಿತು, ಜೊತೆಗೆ ಸಂಸ್ಕೃತಿಯನ್ನು ಸೇರಿಸಿ ಅವೆರಡಕ್ಕೂ ಮಾನ್ಯತೆ ದೊರಕಿಸುವ ಶ್ರಮ ಆರಂಭವಾಯಿತು. ಸಲಿಂಗಿಗಳು ಯಾವುದೇ ಬಗೆಯ ಕೀಳರಿಮೆಗೆ ತುತ್ತಾಗಬೇಕಾಗಿಲ್ಲ ಎಂಬ ಸಾಂತ್ವನದ ಅಭಿಯಾನ ಬಿರುಸಾಗಿ ನಡೆಯಿತು. ‘ನಾನು ’ ಅಥವಾ ‘ನಾನು ’ ಎಂದು ತಮ್ಮನ್ನು ಪರಿಚಯಿಸಿಕೊಳ್ಳುವ ಹೊಸ ಫ್ಯಾಶನ್ ಪರ್ವ ಆರಂಭವಾಯಿತು. ಇದೀಗ ಅಂತಹ ಅಸ್ವಾಭಾವಿಕ ಗುರುತುಗಳು ಮತ್ತು ಗೆ ಸೀಮಿತವಾಗಿ ಉಳಿಯದೆ ಎಂಬ ಹತ್ತು ವಿಭಿನ್ನ ಗುರುತುಗಳಾಗಿ ಬೆಳೆದಿದೆ, ಬೆಳೆಯುತ್ತಲೇ ಇದೆ. ಅಸಹಜ, ಅಸ್ವಾಭಾವಿಕಗಳೆಲ್ಲ ಸಹಜ ಹಾಗೂ ಸ್ವಾಭಾವಿಕಗಳ ವ್ಯಾಪ್ತಿಯೊಳಗೆ ನುಸುಳಿಕೊಂಡು ನೆಲೆಯೂರುತ್ತಿವೆ. ವಿಪರ್ಯಾಸದ ಬೆಳವಣಿಗೆಯೇನೆಂದರೆ ಏಡ್ಸ್ ಎಂಬ ಮಹಾಮಾರಿ ಮಾನವ ಕುಲವನ್ನು ಬಾಧಿಸುತ್ತಲೇ ಇದೆ. ಆದರೆ ಕೆಲವು ದಶಕಗಳ ಹಿಂದೆ ಏಡ್ಸ್ ವಿರುದ್ಧ ಆರಂಭವಾಗಿದ್ದ ಜಾಗೃತಿ ಅಭಿಯಾನ ಇದೀಗ ತನ್ನ ಬಿರುಸು ಕಳೆದುಕೊಂಡು ಬಹಳಷ್ಟು ತಣ್ಣಗಾಗಿ ಬಿಟ್ಟಿದೆ. ಈ ಬೆಳವಣಿಗೆಗೆ ಸಮಾನಾಂತರವಾಗಿ ‘ಗೇ’ ಗಳನ್ನು ಗೌರವಿಸಬೇಕೆಂಬ ಅಭಿಯಾನ ತುಂಬಾ ಚುರುಕಾಗಿ ಬಿಟ್ಟಿದೆ. ‘ಗೇ’ ಗೌರವ ಎಂಬುದು ವ್ಯಾಪಕ ಮಾನ್ಯತೆ ಇರುವ ಫ್ಯಾಶನ್ ಆಗಿಬಿಟ್ಟಿದೆ.
ಫ್ಯಾಶನ್ ಸಾಮಾನ್ಯವಾಗಿ ಪಶ್ಚಿಮದ ಯಾವುದಾದರೂ ಮೂಲೆಯಲ್ಲಿ ಜನ್ಮ ತಾಳುತ್ತದೆ, ಬಹುಬೇಗನೆ ಪೂರ್ವದವರು ಭಕ್ತಿಪೂರ್ವಕ ಅದನ್ನು ಸ್ವೀಕರಿಸುತ್ತಾರೆ. ಹಲವೊಮ್ಮೆ ಪಶ್ಚಿಮದವರು ಒಂದು ಫ್ಯಾಶನ್ ಅನ್ನು ಬಿಟ್ಟು ದಶಕಗಳು ಉರುಳಿದರೂ ಪೌರ್ವಾತ್ಯರಾದ ನಾವಿಲ್ಲಿ ಬಹಳ ವಿಧೇಯವಾಗಿ ಅದಕ್ಕೆ ಅಂಟಿಕೊಂಡಿರುತ್ತೇವೆ. ನಮ್ಮಲ್ಲಿ ಶ್ರೀಮಂತರು ಅಥವಾ ತುಸು ಅನುಕೂಲಸ್ಥರು, ತಾವು ಧರಿಸಿರುವ ಬಟ್ಟೆಯ ಒಂದು ನೂಲು ಎದ್ದರೂ ಸಾಕು, ಮತ್ತೆ ಆ ಬಟ್ಟೆಯನ್ನೆಂದೂ ಧರಿಸುವುದಿಲ್ಲ. ಆದರೆ ಪಶ್ಚಿಮದವರು ಅಲ್ಲಲ್ಲಿ ಹರಿದಿರುವ ಜೀನ್ಸ್ ಪ್ಯಾಂಟ್ ಧರಿಸುವುದನ್ನು ಫ್ಯಾಶನ್ ಎಂದು ಸಾರಿದ್ದೇ ತಡ, ಇಲ್ಲಿಯ ನಮ್ಮ ಅನುಕೂಲಸ್ಥ ಯುವಕರು ತಮ್ಮ ಪ್ಯಾಂಟುಗಳನ್ನು ಕಂಡ ಕಂಡಲ್ಲಿ ಹರಿದು ಧರಿಸಲಾರಂಭಿಸುತ್ತಾರೆ. ಹರಿದು ಚಿಂದಿಯಾದ ಅಥವಾ ಅಲ್ಲಲ್ಲಿ ತೇಪೆ ಹಾಕಿದ ಅಥವಾ ಬಣ್ಣ ತೀರಾ ಮಸುಕಾಗಿ (Fade) ಹಳತಾಗಿ ಕಾಣುವ ಹೊಸ ಪ್ಯಾಂಟುಗಳನ್ನು ಸಾವಿರಾರು ರೂಪಾು ಕೊಟ್ಟು, ಖರೀದಿಸುತ್ತಾರೆ.
ತಡವಾದ ಅನುಕರಣೆ
ಹಾಗೆಂದು ಎಲ್ಲ ಫ್ಯಾಶನ್‌ಗಳನ್ನೂ ಚುರುಕಾಗಿ ತತ್ ಕ್ಷಣವೇ ಸ್ವೀಕರಿಸಲು ನಮಗೆ ಸಾಧ್ಯವಾಗುವುದಿಲ್ಲ. ಕೆಲವು ವಿಷಯಗಳಲ್ಲಿ ನಾವು ತುಸು ಮಂದಗತಿಯಲ್ಲಿ ಹೆಜ್ಜೆ ಇಡುತ್ತೇವೆ. ಉದಾಹರಣೆಗೆ ಸಲಿಂಗ ಕಾಮದ ವಿಷಯವನ್ನೇ ನೋಡಿ. ಆ ಕುರಿತು ಯುಎಸ್ ಎಯಲ್ಲಿನ ನ್ಯಾಯಾಧೀಶರು 15 ವರ್ಷಗಳ ಹಿಂದೆ ನೀಡಿದ ತೀರ್ಪೊಂದನ್ನು ಭಾರತೀಯ ನ್ಯಾಯಾಂಗವು ತೀರಾ ಇತ್ತೀಚಿಗೆ ಆಮದು ಮಾಡಿಕೊಂಡಿದೆ. ಸಲಿಂಗ ಕಾಮ ಅಪರಾಧವಲ್ಲ ಎಂದು ನಮ್ಮ ಸರ್ವೋಚ್ಚ ನ್ಯಾಯಾಲಯವು ಸಾರಿದೆ. ಅಚ್ಚರಿಯ ಸಂಗತಿ ಏನೆಂದರೆ, ಬಹಳ ಮಹತ್ವದ ಈ ತೀರ್ಪಿನ ಕುರಿತಂತೆ ಯಾವುದೇ ಗಣ್ಯ ಮಟ್ಟದ ಪ್ರತಿಕ್ರಿಯೆ ಸಾಂಪ್ರದಾಯಿಕ ಭಾರತೀಯ ಸಮಾಜದಲ್ಲಿ ಪ್ರಕಟವಾಗಲಿಲ್ಲ. ಧರ್ಮ, ಅಧ್ಯಾತ್ಮ, ನಂಬಿಕೆ, ಧ್ಯಾನ, ಇತ್ಯಾದಿಗೆ ಸಂಬಂಧಿಸಿದ ಭಾವನೆಗಳು, ಸಂಕೇತಗಳು ಹಾಗೂ ಗದ್ದಲಗಳು ಸದಾ ತುಂಬಿ ತುಳುಕುತ್ತಿರುವ ನಮ್ಮ ಮಡಿವಂತ ಸಮಾಜವು ಆ ತೀರ್ಪು ನಮಗೆ ಸಂಬಂಧಿಸಿದ್ದೇ ಅಲ್ಲವೆಂಬ ಂತೆ ನಿರ್ಲಿಪ್ತ ನಿಲುವು ತಾಳಿ ಬಿಟ್ಟಿತು.
ಕೆಲವರ ಸಡಗರ, ಉಳಿದವರ ನಿಗೂಢ ನಿರ್ಲಿಪ್ತತೆ
ನಿಜವಾಗಿ ಸುಪ್ರೀಂ ಕೋರ್ಟಿನ ಆ ತೀರ್ಪು ಫ್ಯಾಶನ್ ನ ವ್ಯಾಪ್ತಿಗೆ ಮೀರಿದ, ತುಂಬಾ ಗಾಢವಾದ, ದೂರಗಾಮಿ ಪರಿಣಾಮಗಳಿರುವ ತೀರ್ಪಾಗಿತ್ತು. ಪ್ರಕೃತಿ, ಧರ್ಮ, ಸಮಾಜ, ನೈತಿಕತೆ, ಚಾರಿತ್ರ್ಯ, ಆರೋಗ್ಯ, ಸಂಬಂಧಗಳು, ಬಾಂಧವ್ಯಗಳು ಹೀಗೆ ಹಲವನ್ನು ಬಾಧಿಸುವ ತೀರ್ಪು. ಆ ತೀರ್ಪಿನ ಸಮಗ್ರ ಮಹತ್ವಕ್ಕೆ ಹೋಲಿಸಿದರೆ ಅದಕ್ಕೆ ಪ್ರಕಟವಾದ ಪ್ರತಿಕ್ರಿಯೆ ತೀರಾ ನೀರಸ ಹಾಗೂ ಕ್ಷೀಣವಾಗಿತ್ತು. ಸುಪ್ರೀಂ ಕೋರ್ಟಿನ ಈ ತೀರ್ಪು ಪ್ರಕಟವಾದ ಬೆನ್ನಿಗೆ ಅದರ ‘ನೇರ ಫಲಾನುಭವಿ’ಗಳಾದ ಒಂದಷ್ಟು ಮಂದಿ ಯಾವುದೋ ವಿಶ್ವಕಪ್ ಮ್ಯಾಚು ಗೆದ್ದಾಗ ಸಂಭ್ರಮಿಸು ವಂತೆ ಸದ್ದು ಗದ್ದಲದೊಂದಿಗೆ ಸಂಭ್ರಮಿಸಿದ್ದಾರೆ, ಹರ್ಷ ಪಟ್ಟಿದ್ದಾರೆ. ಬೀದಿಗಳಲ್ಲಿ ನಲಿದಾಡಿದ್ದಾರೆ. ಆದರೆ ಉಳಿದವರ ಕಥೆ ಏನು? ಅವರೆಲ್ಲಾ ಮೌನವಾಗಿ ಸಂತೋಷ ಆಚರಿಸಿದರೇ? ಈ ತೀರ್ಪಿನ ಬಗ್ಗೆ ಯಾರಿಗೆ ಏನು ಅನಿಸಿತು? ಯಾರು ಯಾವ ರೀತಿ ತಮ್ಮ ಅನಿಸಿಕೆಗಳನ್ನು ಪ್ರಕಟಿಸಿದರು? ಅಥವಾ ಯಾರು ಎಷ್ಟು ನಾಜೂಕಾಗಿ ತಮ್ಮ ಅಭಿಮತವನ್ನು ಬಚ್ಚಿಟ್ಟುಕೊಂಡರು? ಅವರು ತಮ್ಮ ಅನಿಸಿಕೆಗಳನ್ನು ಆ ರೀತಿ ಯಾಕೆ ಬಚ್ಚಿಟ್ಟು ಕೊಂಡರು? ಇವೆಲ್ಲಾ ನಿಜಕ್ಕೂ ಕುತೂಹಲದ ವಿಷಯಗಳು.
ಗಮ್ಮತ್ತೆಂದರೆ ಶತಮಾನಗಳಿಂದ ಸಲಿಂಗ ಕಾಮವನ್ನು ಅದು ಅನೈತಿಕ, ಅಸ್ವಾಭಾವಿಕ, ಹೊಲಸು, ಅಮಾನುಷ, ಲಜ್ಜಾಹೀನ ಎಂದೆಲ್ಲ ನಿಂದಿಸುತ್ತಾ ಅದರ ವಿರುದ್ಧ ಉಪದೇಶ ನೀಡುತ್ತಾ ಬಂದಿರುವ ನಮ್ಮಲ್ಲಿನ ಹಲವು ಪ್ರಮುಖ ಧರ್ಮಗಳ ವಕ್ತಾರರು ಕೂಡಾ ಪ್ರಸ್ತುತ ಸುಪ್ರೀಂ ಕೋರ್ಟ್ ತೀರ್ಪಿನ ವಿಷಯದಲ್ಲಿ ಮೌನ ತಾಳಿದರು. ಮಾತು ಮಾತಿಗೆ ಧರ್ಮ ರಕ್ಷಣೆಯ ಹೆಸರಲ್ಲಿ ಬೀದಿಗಿಳಿಯುವವರು ಈ ವಿಷಯದಲ್ಲಿ ತಾಳಿರುವ ಮೌನ ಅಚ್ಚರಿ ಮೂಡಿಸುತ್ತದೆ. ಅವರು ಈ ವಿಷಯದಲ್ಲಿ ಪ್ರತಿಭಟಿಸುವುದು ಬಿಡಿ, ಈ ಕುರಿತು ಚರ್ಚಿಸುವುದಕ್ಕೂ ಬೀದಿಯ ಹತ್ತಿರ ಸುಳಿಯದಿರುವುದು ನಿಗೂಢವಾಗಿದೆ. ನೈತಿಕತೆಯ ರಕ್ಷಣೆಯ ಹೆಸರಲ್ಲಿ, ಬೀದಿಯಲ್ಲಿ ನಡೆದಾಡುವ ಯುವಕ ಯುವತಿಯರ ಧರ್ಮ, ಜಾತಿ ಇತ್ಯಾದಿಗಳ ಬಗ್ಗೆ ತನಿಖೆ ನಡೆಸಿ, ಅಲ್ಲೇ ವಿಚಾರಣೆಯನ್ನೂ ನಡೆಸಿ, ಅವರು ವಾಗ್ದಂಡ, ನಿಂದನೆ, ಹಲ್ಲೆ, ವಿವಸ್ತ್ರ, ಮರಣ ದಂಡನೆ ಇತ್ಯಾದಿಗಳ ಪೈಕಿ ಯಾವ ಶಿಕ್ಷೆಗೆ ಅರ್ಹರೆಂಬುದನ್ನೂ ಅಲ್ಲೇ ತೀರ್ಮಾನಿಸಿ ಅಲ್ಲೇ ಶಿಕ್ಷೆಯನ್ನೂ ಘೋಷಿಸಿ ಅದನ್ನು ಜಾರಿಗೊಳಿಸಿಯೂ ಬಿಡುವ ನಮ್ಮ ಅತಿ ಸಂವೇದನಾ ಶೀಲ ಧರ್ಮವೀರರು ಕೂಡಾ ಸಲಿಂಗ ಕಾಮವನ್ನು ಸಕ್ರಮಗೊಳಿಸುವ ತೀರ್ಪಿಗೆ ಮೌನ ಸಮ್ಮತಿ ನೀಡಿದರು. ಗೋ ರಕ್ಷಕರು ಕೂಡಾ ಪರೋಕ್ಷಾಗಿ ‘ಗೇ’ ರಕ್ಷಕರಾಗಿ ಮಾರ್ಪಟ್ಟರು.
ಕ್ಷಮಾಪಣೆಯ ವರಸೆ
ಕಳೆದ ಕೆಲವು ವರ್ಷಗಳಿಂದ ಕೆಲವರು ‘LGBTQ ಗಳ ಹಕ್ಕುಗಳು’ ಎಂಬ ಹೆಸರಲ್ಲಿ ಒಂದು ಉದ್ದದ ಪಟ್ಟಿ ರಚಿಸಿ, ಅವುಗಳ ಪರ ವಕಾಲತ್ತು ನಡೆಸುತ್ತಿದ್ದರು. ಕಾಲಕ್ರಮೇಣ ಅವರಿಗೆ, ತಮ್ಮ ಚಟುವಟಿಕೆಯನ್ನು ಫ್ಯಾಶನ್‌ನ ವ್ಯಾಪ್ತಿಗೆ ಸೇರಿಸಲು ಸಾಧ್ಯವಾಯಿತು. ಒಂದು ವಸ್ತು ಫ್ಯಾಶನ್ ಆಗಿ ಬಿಟ್ಟಿತೆಂದರೆ ಮತ್ತೆ ಅದನ್ನು ವಿರೋಧಿಸುವುದು ಸುಲಭದ ಕೆಲಸವೇನಲ್ಲ. ಆದ್ದರಿಂದಲೇ, ಖಾಸಗಿಯಾಗಿ ಸಲಿಂಗ ಕಾಮದ ವಿರುದ್ಧ ತುಂಬಾ ಖಾರವಾಗಿಯೇ ಮಾತನಾಡುತ್ತಿದ್ದ ಅಥವಾ ಆ ಕುರಿತು ಮಾತನಾಡಿದರೆ ವಾಕರಿಕೆ ಬರುತ್ತದೆ ಎಂಬ ಕಾರಣಕ್ಕಾಗಿ ಮಾತನಾಡಲು ಮುಜುಗರ ಪಡುತ್ತಿದ್ದ ಹಲವರ ಧಾಟಿ ಬದಲಾಗಿದೆ. ಅವರಲ್ಲಿ ಅನೇಕರು ಇದೀಗ ಸಾರ್ವಜನಿಕವಾಗಿ ಬೇರೆಯೇ ನಿಲುವು ಪ್ರಕಟಿಸುತ್ತಿದ್ದಾರೆ ಅಥವಾ ತಮ್ಮ ನೈಜ ನಿಲುವು ಎಲ್ಲಿ ಜನರಿಗೆ ತಿಳಿದು ಬಿಡುತ್ತದೋ ಎಂದು ಅಳುಕುತ್ತಿದ್ದಾರೆ. ಅವರ ಧ್ವನಿಯಲ್ಲಿ ರಾಜಿ, ಹಿಂಜರಿಕೆ ಮಾತ್ರವಲ್ಲ ಕ್ಷಮಾಪಣೆಯ ಧಾಟಿ ಎದ್ದು ಕಾಣುತ್ತಿದೆ. ‘ಗೇ’ ರಕ್ಷಣೆ ಎಂಬುದು ಜಾಗತಿಕ ಮಟ್ಟದಲ್ಲಿ ಫ್ಯಾಶನ್ ಆಗಿ ಬಿಟ್ಟಿದೆ ಎಂದು ಅವರು ನಂಬಿರುವುದರಿಂದ ಆ ಕುರಿತು ಪ್ರತಿಕೂಲವಾಗಿ ಮಾತನಾಡಿದರೆ ಎಲ್ಲಿ ಯಾರಾದರೂ ತಮ್ಮನ್ನು ಔಟ್ ಆಫ್‌ಫ್ಯಾಶನ್ ಎಂದು ಬ್ರಾಂಡ್ ಮಾಡಿ ಬಿಡುತ್ತಾರೋ ಎಂದು ಅವರು ಅಂಜುತ್ತಿದ್ದಾರೆಂಬುದು ಸ್ಪಷ್ಟವಾಗಿದೆ.
ಪ್ರತಿರೋಧ ರೋಗದ ವಿರುದ್ಧವೇ ಹೊರತು ರೋಗಿಯ ವಿರುದ್ಧವಲ್ಲ.
ಸಲಿಂಗ ಕಾಮದ ಘೋರ ಅಪಾಯಗಳ ಬಗ್ಗೆ ಜಾಗೃತಿ ಇರುವ ವರು ಆ ಕುರಿತು ಸಾಮಾಜಿಕ ಜಾಗೃತಿ ಬೆಳೆಸಲು ಶ್ರಮಿಸುವುದು ಸಹಜ. ಆದ್ದರಿಂದಲೇ ಸಲಿಂಗ ಕಾಮದ ವಿರುದ್ಧ ಪ್ರತಿರೋಧ ಎಲ್ಲ ಸ್ವಸ್ಥ ಸಮಾಜಗಳಲ್ಲಿ ಹಿಂದಿನಿಂದಲೂ ನಡೆದು ಬಂದಿದೆ. ಇದೀಗ, ಸಲಿಂಗಕಾಮಕ್ಕೆ ಗೌರವ ಕೊಡಿಸುವ ಶ್ರಮವು ಜಾಗತಿಕ ಮಟ್ಟದಲ್ಲಿ ಬಹಳ ಸಂಘಟಿತವಾಗಿ ನಡೆಯುತ್ತಿರುವುದರಿಂದ ಅಂತಹ ಶ್ರಮಗಳ ವಿರುದ್ಧವೂ ಪ್ರತಿರೋಧ ಪ್ರಕಟವಾಗುತ್ತಿದೆ. ನಿರ್ಮಲ ವಸ್ತುವಿಗೆ ಕಳಂಕ ಅಂಟಿದರೆ ಅದನ್ನು ಕಳಂಕ ಮುಕ್ತಗೊಳಿಸಲು ಶ್ರಮಿಸಬಹುದು. ಆದರೆ ಸಾಕ್ಷಾತ್ ಕಳಂಕವನ್ನು ಕಳಂಕ ಮುಕ್ತಗೊಳಿಸಲಿಕ್ಕಾಗುವುದಿಲ್ಲ. ಆದ್ದರಿಂದಲೇ ಸಲಿಂಗ ಕಾಮವನ್ನು ಕಳಂಕ ಮುಕ್ತಗೊಳಿಸಲು ನಡೆಯುವ ಎಲ್ಲ ಶ್ರಮಗಳ ಮೇಲೆ ಕಣ್ಣಿಟ್ಟು ಅವುಗಳನ್ನು ಸೋಲಿಸಬೇಕಾದುದು ತಮ್ಮ ಕರ್ತವ್ಯವಾಗಿದೆ ಎಂದು ಸ್ವಸ್ಥ ಸಮಾಜದ ಸದಸ್ಯರು ಹಾಗೂ ಸಾಮಾಜಿಕ ಸ್ವಾಸ್ಥ್ಯದ ಪ್ರತಿಪಾದಕರು ನಂಬಿದ್ದಾರೆ. ಜಗತ್ತಿನಲ್ಲಿ ಹಲವೆಡೆ ಸಲಿಂಗ ಕಾಮದ ವಿರುದ್ಧ ಅಭಿಯಾನಗಳು ಹಿಂಸಾತ್ಮಕ ರೂಪ ತಾಳಿ ಹಲವು ಅನಾಹುತಗಳಿಗೆ ಎಡೆಮಾಡಿಕೊಟ್ಟಿದೆ. ನಿಜವಾಗಿ ಸಲಿಂಗ ಕಾಮದ ಹಾನಿಗಳನ್ನು ಬಲ್ಲವರು ಯಾರೂ ಅದನ್ನು ಪ್ರತಿರೋಧಿಸದೆ ಇರಲು ಸಾಧ್ಯವಿಲ್ಲ. ಆದರೆ ಈ ಪ್ರತಿರೋಧವು ಚರ್ಚೆ, ಸಂವಾದ, ಸಮಾಲೋಚನೆ, ಶಿಕ್ಷಣ, ಉಪದೇಶ ಇತ್ಯಾದಿಗಳ ಮೂಲಕ ಜನಜಾಗೃತಿ ಬೆಳೆಸುವ ಸ್ವರೂಪದಲ್ಲಿರಬೇಕೇ ಹೊರತು ಹಿಂಸೆ, ಬಲವಂತ, ನಿಂದನೆ, ದೂಷಣೆ ಮುಂತಾದ ರೂಪಗಳನ್ನು ಖಂಡಿತ ತಾಳಬಾರದು. ಸಲಿಂಗ ಕಾಮದ ಕುರಿತು ಚರ್ಚೆ ಪ್ರಬುದ್ಧ ಹಾಗೂ ಗಂಭೀರ ಸ್ತರದಲ್ಲಿ ಮುಂದುವರಿಯಬೇಕಿದ್ದರೆ, ಚರ್ಚೆಯಲ್ಲಿ ಪಾಲುಗೊಳ್ಳುವವರು ಬಹಳಷ್ಟು ಸಂವೇದನಾಶೀಲರಾಗಿ, ಸಂಯಮದೊಂದಿಗೆ, ಸಂತುಲಿತವಾಗಿ ಮುಂದುವರಿಯಬೇಕಾಗುತ್ತದೆ. ಅವರು ರೋಗಿ ಮತ್ತು ರೋಗದ ನಡುವಣ ಅಂತರವನ್ನು ಎಂದೂ ಮರೆಯಬಾರದು. ರೋಗದ ಕುರಿತಾದ ಅವರ ಜಿಗುಪ್ಸೆ ಯಾವ ಕಾರಣಕ್ಕೂ ರೋಗಿಯ ವಿರುದ್ಧ ತಿರುಗಬಾರದು.