ಕಾಂಡೋಮ್ ಕೇಂದ್ರಿತ ಸಲಿಂಗ ವೈಭವದ ಟೊಳ್ಳುತನ ಮತ್ತು ಅಪಾಯಗಳು

Update: 2018-10-03 18:38 GMT

ಭಾಗ-2

ಏಡ್ಸ್ ಮತ್ತು ಸಲಿಂಗ ಅಥವಾ ಕಾಮ ವಿಕೃತಿ ಇವೆರಡರ ನಡುವೆ ಏನು ಸಂಬಂಧವಿದೆ ಎಂದು ಅಚ್ಚರಿ ಪಡುವವರು ಗಮನಿಸಬೇಕು: ಜಗತ್ತಿಗೆ ಅನೇಕಾರು ಅನಿಷ್ಟಗಳನ್ನು ರಫ್ತು ಮಾಡಿರುವ ಯುಎಸ್‌ಎ ಜನಸಂಖ್ಯೆಯಲ್ಲಿ ಸಲಿಂಗ ಕಾಮಿಗಳ ಪ್ರಮಾಣ ಶೇ.2ರ ಆಸುಪಾಸಿನಲ್ಲಿದೆ. ಆದರೆ ಅಲ್ಲಿರುವ ಏಡ್ಸ್ ರೋಗ ಪೀಡಿತರ ಪೈಕಿ ಸಲಿಂಗಕಾಮಿಗಳು ಮತ್ತು ಉಭಯ ಕಾಮಿಗಳ (Bisexual) ಪ್ರಮಾಣ ಶೇ. 70ದಷ್ಟಿದೆ. ಸಲಿಂಗ ಕಾಮವೆನ್ನುವುದು ಕೇವಲ ಭಾವನೆಗಳು, ಒಲವುಗಳು ಮತ್ತು ಹವ್ಯಾಸಗಳಿಗೆ ಸಂಬಂಧಿಸಿದ ವಿಷಯವಲ್ಲ, ಅದು ನೇರವಾಗಿ ಅಸ್ತಿತ್ವಕ್ಕೇ ಸಂಬಂಧಿಸಿದ ಅಪಾಯವೆಂಬುದ್ಕೆ ಬೇರಾವ ಪುರಾವೆಯ ಅಗತ್ಯವಿದೆ?

ಯಾವುದು ಮಾನವೀಯತೆ?
 ಆತ್ಮಹತ್ಯೆ ಪಾಪ ಎಂದು ನಂಬುವ ಹಲವಾರು ಮಂದಿ ನಮ್ಮ ಸಮಾಜದಲ್ಲಿದ್ದಾರೆ. ಅದನ್ನು ಪಲಾಯನವಾದ, ಹೇಡಿತನ ಎಂದಿತ್ಯಾದಿಯಾಗಿ ಖಂಡಿಸುವವರೂ ಇದ್ದಾರೆ. ಇಷ್ಟಾಗಿಯೂ ನಮ್ಮ ದೇಶವೂ ಸೇರಿದಂತೆ ಜಗತ್ತಿನೆಲ್ಲೆಡೆ ನೂರಾರು ಮಂದಿ ವಿವಿಧ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯನುಸಾರ ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು ಹತ್ತು ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಂದರೆ ಈ ಲೋಕದಲ್ಲಿ ಪ್ರತಿ ನಲ್ವತ್ತು ಸೆಕೆಂಡ್‌ಗೆ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಕಳವಳದ ಅಂಶವೇನೆಂದರೆ ಜಗತ್ತಿನಲ್ಲಿ ಈ ರೀತಿ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆಯು ಕ್ರಮೇಣ ಕುಸಿಯುವ ಬದಲು ಬಹಳ ತ್ವರಿತವಾಗಿ ಹೆಚ್ಚುತ್ತಿದ್ದು ಬಹುಬೇಗನೆ ಈ ಸಂಖ್ಯೆ ದ್ವಿಗುಣಗೊಳ್ಳುವ ಲಕ್ಷಣಗಳಿವೆ.
     ಈ ರೀತಿ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜೀವ ಕಳೆದುಕೊಳ್ಳುತ್ತಿರುವ ಆತ್ಮಹತ್ಯಾಕಾಂಕ್ಷಿಗಳ ಬಗ್ಗೆ ಅನುಕಂಪ, ಸಹಾನುಭೂತಿ ಇರುವವರು ಏನು ಮಾಡಲು ಸಾಧ್ಯವಿದೆ? ಆತ್ಮಹತ್ಯೆ ಯಾವುದೇ ಸಮಸ್ಯೆಯ ಪರಿಹಾರವಲ್ಲ ಎಂಬ ಸಂದೇಶವನ್ನು ಸಮಾಜದಲ್ಲಿ ಜನಪ್ರಿಯ ಗೊಳಿಸುವ ಆಂದೋಲನ, ಅಭಿಯಾನಗಳನ್ನು ನಡೆಸಬಹುದು. ಯಾರಲ್ಲಾದರೂ ಆತ್ಮಹತ್ಯೆಯ ಒಲವು ಮೂಡಿದರೆ ಅಂಥವರಿಗೆ ಸಾಂತ್ವನ ನೀಡಿ, ಅವರ ನಿರಾಶೆ ಹತಾಶೆಗಳನ್ನು ಹೋಗಲಾಡಿಸಿ, ಅವರಲ್ಲಿ ಧೈರ್ಯ ತುಂಬಿ, ಅವರಲ್ಲಿ ಆತ್ಮವಿಶ್ವಾಸ, ಸ್ಥೈರ್ಯ ಹಾಗೂ ಆಶಾವಾದ ಮೂಡಿಸುವಂತಹ ಸಾಂತ್ವನ ಕೇಂದ್ರಗಳನ್ನು ಸ್ಥಾಪಿಸಬಹುದು. ಇದಕ್ಕಾಗಿ, ಅಲ್ಲಲ್ಲಿ ವೈದ್ಯರಿಗೆ, ಸಾಮಾಜಿಕ ಕಾರ್ಯಕರ್ತರಿಗೆ ಸಮಾಲೋಚನಾ ತರಬೇತಿ ನೀಡಬಹುದು. ಇದರ ಬದಲಿಗೆ ಯಾರಾದರೂ ಆತ್ಮಹತ್ಯಾಕಾಂಕ್ಷಿಗಳ ಬಗ್ಗೆ ಸಹಾನುಭೂತಿ ಪ್ರಕಟಿಸುತ್ತಾ, ಆತ್ಮಹತ್ಯೆಯ ಹಕ್ಕನ್ನು ವೈಭವೀಕರಿಸುತ್ತಾ, ಯಾರೂ ಆತ್ಮಹತ್ಯೆಯನ್ನು ವಿರೋಧಿಸಬಾರದು, ಅದರ ವಿರುದ್ಧ ಮಾತನಾಡಬಾರದು, ಎಂದೆಲ್ಲಾ ವಾದಿಸಿದರೆ ಹೇಗಿದ್ದೀತು? ಆತ್ಮಹತ್ಯೆಯನ್ನು ಸಕ್ರಮಗೊಳಿಸಬೇಕು, ಜನರಿಗೆ ಘನತೆಯೊಂದಿಗೆ ಆತ್ಮಹತ್ಯೆಮಾಡಿಕೊಳ್ಳುವುದಕ್ಕೆ ಬೇಕಾದ ಎಲ್ಲ ಮಾರ್ಗದರ್ಶನ ಹಾಗೂ ಸಕಲ ಸವಲತ್ತುಗಳನ್ನು ಒದಗಿಸಿ ಕೊಡಬೇಕು ಎಂದು ಆಗ್ರಹಿಸಲಾರಂಭಿಸಿದರೆ ಹೇಗಿದ್ದೀತು? ಇಂಥವರು ಆತ್ಮಹತ್ಯಾಕಾಂಕ್ಷಿಗಳ ಹಿತೈಷಿಗಳಾಗಿರಲು ಸಾಧ್ಯವೇ? ಮಾನವೀಯ ಅಂತಃಕರಣ ಉಳ್ಳ ಯಾರೂ ಎಲ್ಲೂ ಎಂದೂ ಇಂತಹ ಧೋರಣೆಯನ್ನು ಅನುಸರಿಸಲಾರರು. ಹಾಗೆಯೇ, ಮಾನವೀಯ ಅಂತಃಕರಣ ಇರುವ ಯಾರೂ ಇಂಥವರ ವಾದಗಳನ್ನು ಕೇಳಿ ಅದನ್ನು ಪ್ರತಿಭಟಿಸದೆ, ಪ್ರತಿರೋಧಿಸದೆ ಸುಮ್ಮನಿರಲಾರರು.
ಆತ್ಮಹತ್ಯೆಯ ಕುರಿತಾದ ಈ ಮಾತುಗಳು ‘ಗೇ’ (Gay ) ಗಳ ಕುರಿತು ಅನುಕಂಪ ಪ್ರಕಟಿಸುತ್ತಾ, ‘ಗೇ’ ಸಂಸ್ಕೃತಿಯನ್ನು ಸಕ್ರಮಗೊಳಿಸಿ ಸಮಾಜದಲ್ಲಿ ಅದಕ್ಕೆ ಮಾನ್ಯತೆ ನೀಡಬೇಕೆಂದು ವಾದಿಸುವವರಿಗೆ ಮತ್ತು ಅಂತಹ ವಾದಗಳಿಗೆ ಮೌನ ಸಮ್ಮತಿ ಸೂಚಿಸುವವರಿಗೂ ಸಂಪೂರ್ಣವಾಗಿ ಅನ್ವಯಿಸುತ್ತವೆ. ಮಾನವೀಯ ನೆಲೆಯಲ್ಲಿ ‘ಗೇ’ಗಳ ಬಗ್ಗೆ ಅನುಕಂಪ ತೋರಿಸುವವರು ನಿಜಕ್ಕೂ ಪ್ರಾಮಾಣಿಕರಾಗಿದ್ದರೆ ‘ಗೇ’ ಸಂಸ್ಕೃತಿಯನ್ನು ಮತ್ತು ಸಲಿಂಗ ಕಾಮವನ್ನು ಬಹಳ ಸ್ಪಷ್ಟವಾಗಿ ಹಾಗೂ ಪರಿಣಾಮಕಾರಿಯಾಗಿ ವಿರೋಧಿಸಬೇಕು. ಆ ಕುರಿತು ವ್ಯಾಪಕ ಜನಜಾಗೃತಿ ಮೂಡಿಸಬೇಕು. ‘ಗೇ’ ಗಳನ್ನೂ ಸಂಪೂರ್ಣ ಸಮಾಜವನ್ನೂ ವಿನಾಶದಿಂದ ರಕ್ಷಿಸುವುದಕ್ಕೆ ಇರುವುದು ಇದೊಂದೇ ಮಾರ್ಗ.
‘ಗೇ’ ಸಂಸ್ಕೃತಿಯ ಬೀಭತ್ಸ ಫಲಗಳು
 ‘ಗೇ’ ಸಂಸ್ಕೃತಿಯ ಬಗ್ಗೆ ಜಿಗುಪ್ಸೆ ಪಡುವುದಕ್ಕೆ ಮತ್ತು ಅದರ ವಿರುದ್ಧ ನಿಷ್ಠುರ ನಿಲುವು ತಾಳುವುದಕ್ಕೆ ಧಾರ್ಮಿಕ, ನೈತಿಕ ಅಥವಾ ಆಧ್ಯಾತ್ಮಿಕ ಆಧಾರಗಳ ಅಗತ್ಯವೇನೂ ಇಲ್ಲ. ಇದರ ಬಗ್ಗೆ ಐತಿಹಾಸಿಕ ಸಂಶೋಧನೆ ಅಥವಾ ಭವಿಷ್ಯದ ಕುರಿತಾದ ಊಹೆ, ತರ್ಕ ಇತ್ಯಾದಿಗಳ ಅಗತ್ಯವೂ ಇಲ್ಲ. ನಮ್ಮ ಮುಂದುವರಿದ, ಆಧುನಿಕ, ವರ್ತಮಾನ ಸಮಾಜದಲ್ಲಿ ‘ಗೇ’ ಸಂಸ್ಕೃತಿಯು ನೀಡಿರುವ ಭಯಾನಕ ಫಲಗಳನ್ನೊಮ್ಮೆ ನೋಡಿದರೆ ಸಾಕು. ಮಾನವೀಯ ಅಂತಃಕರಣ ಉಳ್ಳವರು ಪ್ರಥಮವಾಗಿ ‘ಗೇ’ಗಳನ್ನು ’ಗೇ’ ಸಂಸ್ಕೃತಿಯಿಂದ ಕಾಪಾಡಲು ಧಾವಿಸುತ್ತಾರೆ ಮತ್ತು ಸ್ವಸ್ಥ ಮನುಷ್ಯರು ‘ಗೇ’ಗಳಾಗದಂತೆ ರಕ್ಷಿಸುವುದು ಹೇಗೆಂದು ಚಿಂತಿತರಾಗುತ್ತಾರೆ. ಏಕೆಂದರೆ ‘ಗೇ’ ಸಂಸ್ಕೃತಿಗೆ ಏಡ್ಸ್ ಎಂಬ ಮಾರಕ ರೋಗದೊಂದಿಗೆ ನೇರ ನಂಟಿದೆ, ಮಾತ್ರವಲ್ಲ, ಆ ಸಂಸ್ಕೃತಿ ಏಡ್ಸ್ ಎಂಬ ಮಹಾಮಾರಿಯ ಹೆಬ್ಬಾಗಿಲಾಗಿದೆ.

ಏಡ್ಸ್‌ಗೆ ಸುಮಾರು ಒಂದು ಶತಮಾನದ ಇತಿಹಾಸವಿದೆ ಎನ್ನುತ್ತಾರೆ. ಆದರೆ ಮಾನವ ಸಮಾಜ ಅದರ ಅಪಾಯಗಳನ್ನು ಅಧಿಕೃತವಾಗಿ ಗುರುತಿಸತೊಡಗಿದ್ದು 80ರ ದಶಕದ ಆರಂಭದಲ್ಲಿ. ಪ್ರಥಮವಾಗಿ ವರದಿಯಾದ ಏಡ್ಸ್ ಪ್ರಕರಣಗಳಲ್ಲಿ ಒಂದಂಶ ಸಮಾನವಾಗಿತ್ತು. ಅದೇನೆಂದರೆ ಏಡ್ಸ್ ಪೀಡಿತರೆಲ್ಲರೂ ಸಲಿಂಗ ಕಾಮಿಗಳಾಗಿದ್ದರು ಅಥವಾ ಸಲಿಂಗ ಕಾಮಿಗಳ ಸಂಗಾತಿ ಅಥವಾ ರಕ್ತದ ಮೂಲಕ ಏಡ್ಸ್ ಸೋಂಕು ಪಡೆದವರಾಗಿದ್ದರು. ಕಳೆದ ನಾಲ್ಕು ದಶಕಗಳಲ್ಲಿ ಈ ರೋಗವು ಜಗತ್ತಿನಲ್ಲಿ ಮೂರೂವರೆ ಕೋಟಿಗೂ ಹೆಚ್ಚು ಮಂದಿಯ ಜೀವಗಳನ್ನು ಬಲಿ ಪಡೆದುಕೊಂಡಿದೆ. ಇಂದು ಜಗತ್ತಿನಲ್ಲಿ ಸುಮಾರು 3.7 ಕೋಟಿ ಜನರು ಏಡ್ಸ್ ರೋಗದಿಂದ ಬಳಲುತ್ತಿದ್ದಾರೆ. ಆ ಪೈಕಿ 2 ಕೋಟಿಗೂ ಅಧಿಕ ಮಂದಿ 15 ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳು. ಇನ್ನೊಂದು ದುರಂತವೇನೆಂದರೆ ಏಡ್ಸ್ ಪೀಡಿತರ ಪೈಕಿ ಸುಮಾರು ಶೇ.39 ಮಂದಿಗೆ, ತಾವು ಏಡ್ಸ್ ಪೀಡಿತರೆಂಬ ಪರಿಜ್ಞಾನವೇ ಇಲ್ಲ. ಏಕೆಂದರೆ ಅವರು ತಮ್ಮನ್ನು  HIV ಪರೀಕ್ಷೆಗೆ ಒಳಪಡಿಸಿಲ್ಲ. ಅದೆಷ್ಟೋ ಮಂದಿಗೆ ತಮ್ಮನ್ನು  HIV ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆ ಎಂಬುದೇ ಮನವರಿಕೆಯಾಗಿರುವುದಿಲ್ಲ. ಇನ್ನೆಷ್ಟೋ ಕಡೆ ಅಂತಹ ಪರೀಕ್ಷೆಗೆ ಬೇಕಾದ ಸವಲತ್ತುಗಳು ಕೂಡಾ ಲಭ್ಯವಿರುವುದಿಲ್ಲ.
 ಏಡ್ಸ್ ಬಂದರೆ ಬರಲಿ ಎಂದು ಧೈರ್ಯದಿಂದ ಸಲಿಂಗ ಸಾಹಸಕ್ಕೆ ಇಳಿಯುವವರ ಪ್ರವೃತ್ತಿಯನ್ನು ಯಾರಾದರೂ ಸಾಹಸ ಪ್ರವೃತ್ತಿಯೆಂದು ಪ್ರಶಂಸಿಸ ಬಹುದು. ಆದರೆ ಅವರ ಕೃತ್ಯಗಳ ಪರಿಣಾಮವಾಗಿ ಆ ಅಪಾಯಕಾರಿ ಕೃತ್ಯದೊಂದಿಗೆ ಯಾವುದೇ ಸಂಬಂಧ ಇಲ್ಲದ ಲಕ್ಷಾಂತರ ಮುಗ್ಧ ಮಂದಿ ಕೂಡಾ ಪರೋಕ್ಷ ಮೂಲಗಳಿಂದ ಅವರ ರೋಗದ ಸೋಂಕು ಪಡೆದು ರೋಗಿಗಳಾಗಿ, ನರಕ ಯಾತನೆ ಅನುಭವಿಸಿ ಸಾಯುತ್ತಾರೆ. ಗೇ ಅನುಕಂಪಿಗಳು ತಮ್ಮ ಅನುಕಂಪದ ಒಂದು ಪಾಲನ್ನಾದರೂ ಆ ಮುಗ್ಧ ಬಲಿಪಶುಗಳಿಗಾಗಿ ಮೀಸಲಿಡಬೇಕು.
ವಿಶ್ವ ಸಂಸ್ಥೆಯವರು ಒದಗಿಸಿರುವ ಮಾಹಿತಿ ಪ್ರಕಾರ 2016 ರಲ್ಲಿ ಒಂದೇ ವರ್ಷದ ಅವಧಿಯಲ್ಲಿ 10 ಲಕ್ಷ ಮಂದಿ ಏಡ್ಸ್ ರೋಗ ಪೀಡಿತರು ಮರಣವನ್ನಪ್ಪಿದ್ದಾರೆ. ಅದೇ ವರ್ಷ 18 ಲಕ್ಷ ಮಂದಿ ಹೊಸದಾಗಿ  HIV ಸೋಂಕಿಗೆ ಒಳಗಾಗಿದ್ದಾರೆ. ಅಂದರೆ ನಿತ್ಯ ಸರಾಸರಿ 5ಸಾವಿರ ಮಂದಿ ಹೊಸದಾಗಿ ಏಡ್ಸ್ ಸೋಂಕಿತರಾಗುತ್ತಿದ್ದಾರೆ.
 ಏಡ್ಸ್ ಮತ್ತು ಸಲಿಂಗ ಅಥವಾ ಕಾಮ ವಿಕೃತಿ ಇವೆರಡರ ನಡುವೆ ಏನು ಸಂಬಂಧವಿದೆ ಎಂದು ಅಚ್ಚರಿ ಪಡುವವರು ಗಮನಿಸಬೇಕು: ಜಗತ್ತಿಗೆ ಅನೇಕಾರು ಅನಿಷ್ಟಗಳನ್ನು ರಫ್ತು ಮಾಡಿರುವ ಯುಎಸ್‌ಎ ಜನಸಂಖ್ಯೆಯಲ್ಲಿ ಸಲಿಂಗ ಕಾಮಿಗಳ ಪ್ರಮಾಣ ಶೇ.2ರ ಆಸುಪಾಸಿನಲ್ಲಿದೆ. ಆದರೆ ಅಲ್ಲಿರುವ ಏಡ್ಸ್ ರೋಗ ಪೀಡಿತರ ಪೈಕಿ ಸಲಿಂಗಕಾಮಿಗಳು ಮತ್ತು ಉಭಯ ಕಾಮಿಗಳ (Bisexual) ಪ್ರಮಾಣ ಶೇ. 70ದಷ್ಟಿದೆ. ಸಲಿಂಗ ಕಾಮವೆನ್ನುವುದು ಕೇವಲ ಭಾವನೆಗಳು, ಒಲವುಗಳು ಮತ್ತು ಹವ್ಯಾಸಗಳಿಗೆ ಸಂಬಂಧಿಸಿದ ವಿಷಯವಲ್ಲ, ಅದು ನೇರವಾಗಿ ಅಸ್ತಿತ್ವಕ್ಕೇ ಸಂಬಂಧಿಸಿದ ಅಪಾಯವೆಂಬುದ್ಕೆ ಬೇರಾವ ಪುರಾವೆಯ ಅಗತ್ಯವಿದೆ?
ABC ಸಲಿಂಗ ಕಾಮಿಗಳು ಏಡ್ಸ್ ಮಾತ್ರವಲ್ಲದೆ ಹಲವು ಬಗೆಯ ಇತರ ಲೈಂಗಿಕ ರೋಗಗಳಿಗೂ ತುತ್ತಾಗುವ ಸರ್ವ ಸಾಧ್ಯತೆಗಳಿವೆ. ಜೊತೆಗೆ, ತಮ್ಮ ಸಂಪರ್ಕದಲ್ಲಿರುವ ಅಥವಾ ಅರಿವಿಲ್ಲದೆ ತಮ್ಮ ರಕ್ತ ಪಡೆಯುವ ಇತರರನ್ನು ಕೂಡ ಅಪಾಯಕ್ಕೆ ಸಿಲುಕಿಸುವ ಸಾಧ್ಯತೆಗಳಿವೆ. ಹಾಗೆಯೇ , ಅವರು ಗೊನೋರಿಯಾ, ಸಿಫಿಲಿಸ್, ಹೇರ್ಪಿಸ್, ಹೆಪಟೈಟಿಸ್ , , ಮತ್ತು ಇತ್ಯಾದಿ ಮಾರಕ ವ್ಯಾಧಿಗಳಿಗೆ ತುತ್ತಾಗುವ ಸಾಧ್ಯತೆ ಗಳಿರುತ್ತವೆ.
ಯುಎಸ್‌ಎ ಯಲ್ಲಿರುವ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಟಿಸಿರುವ ವರದಿ ಪ್ರಕಾರ 2014ರಲ್ಲಿ ಪ್ರಥಮ ಹಾಗೂ ದ್ವಿತೀಯ ಮಟ್ಟದ ಸಿಫಿಲಿಸ್ (syphilis) ರೋಗ ಬಾಧಿತರ ಪೈಕಿ ಶೇ. 83 ಮಂದಿ ವಿವಿಧ ಸ್ವರೂಪದ ಸಲಿಂಗ ಕಾಮಿಗಳಾಗಿದ್ದರು. ಸಲಿಂಗ ಕಾಮಿಗಳು ಖ್ಲಾಮೆಡಿಯ (chlamydia) ಮತ್ತು ಗೊನೋರಿಯ (gonorrhea) ಎಂಬ ಮಾರಕ ಸೋಂಕುಗಳಿಗೆ ತುತ್ತಾಗುವ ಅಪಾಯ ಇತರರಿಗಿಂತ ತುಂಬಾ ಅಧಿಕವಿದೆ. ಇದೇ ಸಂಸ್ಥೆಯ ವರದಿ ಪ್ರಕಾರ ಸಹಜ ಕಾಮಿಗಳಿಗೆ ಹೋಲಿಸಿದರೆ ಸಲಿಂಗ ಕಾಮಿಗಳು ಬಾಯಿ ಮತ್ತು ಗುದದ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಾಧ್ಯತೆ 17 ಪಟ್ಟು ಅಧಿಕವಾಗಿದೆ.
ಭಾವನಾತ್ಮಕ ಮೋಸದ ಜಾಲ
‘ಗೇ’ ಸಂಸ್ಕೃತಿಯ ಪರ ವಕಾಲತ್ತು ವಹಿಸುವ ಕೆಲವರು ಬಹಳ ಭಾವನಾತ್ಮಕ ವಾದಗಳನ್ನು ಮಂಡಿಸುತ್ತಾರೆ. ಅವರು ಅದನ್ನು ನೇರವಾಗಿ, ಪ್ರೀತಿ, ಪ್ರೇಮ, ಸ್ನೇಹ, ವಾತ್ಸಲ್ಯವೇ ಮುಂತಾದ ಜಾಗತಿಕ ಮಾನ್ಯತೆ ಇರುವ ಮೌಲ್ಯಗಳ ಜೊತೆ ಜೋಡಿಸಲು ಪ್ರಯತ್ನಿಸುತ್ತಾರೆ. ಪುರುಷನೊಬ್ಬ ಇನ್ನೊಬ್ಬ ಪುರುಷನನ್ನು ಪ್ರೀತಿಸುವುದರಲ್ಲಿ ತಪ್ಪೇನಿದೆ? ಎಂಬ ಅತಿ ಸರಳೀಕೃತ ಪ್ರಶ್ನೆಯೇ ಅವರ ವಾದದ ಸಾರಾಂಶವಾಗಿರುತ್ತದೆ. ನಿಜವಾಗಿ ಪುರುಷರು ಪುರುಷರನ್ನು ಅಥವಾ ಸ್ತ್ರೀಯರು ಸ್ತ್ರೀಯರನ್ನು ಪ್ರೀತಿಸುವುದಕ್ಕೆ ಯಾರ ಆಕ್ಷೇಪವೂ ಇಲ್ಲ. ಆಕ್ಷೇಪವಿರುವುದು ಸಲಿಂಗ ಕಾಮಕ್ಕೆ ಮಾತ್ರವೇ ಹೊರತು ಸಲಿಂಗ ಪ್ರೇಮಕ್ಕಲ್ಲ. ಈ ಕುರಿತು ಹೆಚ್ಚಿನ ವಿವರಣೆಯ ಅಗತ್ಯವಿಲ್ಲ. ಪ್ರಕೃತಿಯಲ್ಲೇ ಪ್ರೇಮಕ್ಕೆ ಯಾವುದೇ ನಿರ್ಬಂಧವಿಲ್ಲ. ಆದರೆ ಕಾಮಕ್ಕೆ ನಿರ್ಬಂಧಗಳಿವೆ. ಅದು ಅಸಹಜ ಸ್ವರೂಪದಲ್ಲಿ ನಡೆದಾಗ ಪ್ರಕೃತಿ ತನ್ನ ದಂಡ ಸಂಹಿತೆಯನ್ನು ಅನುಷ್ಠಾನಿಸುತ್ತದೆ. ಪ್ರೇಮ ಮತ್ತು ಕಾಮಗಳ ನಡುವೆ ಇರುವ ಬೃಹತ್ ಅಂತರವನ್ನು ಗುರುತಿಸ ಬಲ್ಲ ಯಾರೂ ಈ ವಿಷಯದಲ್ಲಿ ಗೊಂದಲಕ್ಕೆ ಒಳಗಾಗುವುದಿಲ್ಲ. ಪ್ರೇಮ ಮತ್ತು ಕಾಮ ಒಂದಲ್ಲ ಎಂಬ ಸರಳ ಸತ್ಯವನ್ನು ಒಪ್ಪಿಕೊಂಡರೆ ಸಾಕು. ಯಾವ ಗೊಂದಲವೂ ಉಳಿಯುವುದಿಲ್ಲ.
ಸಲಿಂಗಿಗಳ ಖಾಸಗಿ ಬದುಕಿನಲ್ಲಿ ‘ಗೇ’ ರಕ್ಷಕರು ಮೂಗು ತೂರುವುದೇಕೆ?
 ಸಲಿಂಗ ಕಾಮ ಹೊಸದೇನೂ ಅಲ್ಲ. ಸಲಿಂಗ ಕಾಮದ ಬಹಿರಂಗ ಅಭಿವ್ಯಕ್ತಿ, ಸಾಮೂಹಿಕ ವೈಭವೀಕರಣ ಮತ್ತು ಅದಕ್ಕೆ ಸಮಾಜ ಹಾಗೂ ಕಾನೂನಿನ ಮನೆ ಕೊಡಿಸುವ ’ಗೇ’ ಅಭಿಯಾನ ಹಾಗೂ ಆಂದೋಲನ ಮಾತ್ರ ಹೊಸತು. ಈ ಹಿನ್ನೆಲೆಯಲ್ಲಿ ’ಗೇ’ ಪೋಷಕ ವಲಯಗಳು ನಡೆಸುತ್ತಿರುವ ಮುಂದಿಡುವ ಕೆಲವು ಭಾವುಕ ತರ್ಕಗಳು ಮತ್ತು ಬೇಡಿಕೆಗಳ ಟೊಳ್ಳುತನವನ್ನು ಇಲ್ಲಿ ಪ್ರಸ್ತಾಪಿಸಬೇಕಾಗಿದೆ:
‘ಗೇ’ ಅಥವಾ ಲೆಸ್ಬಿಯನ್ ಸಂಗಾತಿಗಳ ಪರಸ್ಪರ ಸಂಬಂಧವು ಪ್ರೀತಿ ಮತ್ತು ಪ್ರೇಮದ ಸಂಬಂಧವಾಗಿದ್ದರೆ ಅವರು ಕಾಮಕೇಳಿಗೆ ಇಳಿಯದೆಯೇ ತಮ್ಮ ಸಂಬಂಧವನ್ನು ಮುಂದುವರಿಸಬಹುದು. ಅದನ್ನು ಯಾರೂ ಆಕ್ಷೇಪಿಸಿದ್ದಿಲ್ಲ. ಇನ್ನು ಅದು ಸ್ನೇಹದ ಅಥವಾ ಭಾವನಾತ್ಮಕವಾದ ಸಂಬಂಧವಾಗಿದ್ದರೆ ಆಗಲೂ ಅವರು ಕಾಮಕೇಳಿಗೆ ಇಳಿಯದೆಯೇ ತಮ್ಮ ಸ್ನೇಹ ಸಂಬಂಧವನ್ನು ಮುಂದುವರಿಸಬಹುದು. ಪ್ರೀತಿ ಪ್ರೇಮದ ಅಥವಾ ಸ್ನೇಹದ ಸಂಬಂಧವನ್ನು ಮುಂದುವರಿಸಲು, ಕಾಮ ಸಂಬಂಧಿ ಚಟುವಟಿಕೆಯ ಅಥವಾ ಸಲಿಂಗ ವಿವಾಹದ ಯಾವ ಅಗತ್ಯವೂ ಇಲ್ಲ.
 ಸ್ತ್ರೀಯರಿರಲಿ, ಪುರುಷರಿರಲಿ ಹೆಚ್ಚಿನ ಸಲಿಂಗಿಗಳು ತಾವು ಸಲಿಂಗಿಗಳೆಂದು ಸಮಾಜದಲ್ಲಿ ಮಾತ್ರವಲ್ಲ ತಮ್ಮ ಆಪ್ತ ವಲಯದಲ್ಲೂ ಗುರುತಿಸಿಕೊಳ್ಳಲು ಅಪೇಕ್ಷಿಸುವುದಿಲ್ಲ. ಪರಸ್ಪರ ಸಲಿಂಗ ಲೈಂಗಿಕ ಸಂಬಂಧ ಇರುವವರಲ್ಲಿ ಕೂಡಾ ಹೆಚ್ಚಿನವರು ಅದನ್ನು ಗುಟ್ಟಾಗಿಯೇ ಇಡಲು ಬಯಸುತ್ತಾರೆ. ತಮ್ಮ ಒಲವು ಬಹಿರಂಗವಾಗಿ ಚರ್ಚೆಗೆ ಒಳಪಡುವುದು ಅವರಿಗೆ ಇಷ್ಟವಿರುವುದಿಲ್ಲ. ಅವರಿಗೆ ತಮ್ಮ ಹಾಗೂ ತಮ್ಮ ಲೈಂಗಿಕ ಒಲವುಗಳ ಖಾಸಗಿತನ ತುಂಬಾ ಮಹತ್ವದ್ದಾಗಿರುತ್ತದೆ. ತಮ್ಮ ಲೈಂಗಿಕ ಒಲವುಗಳ ಬಗ್ಗೆ ಅಥವಾ ತಮ್ಮ ಲೈಂಗಿಕ ಚಟುವಟಿಕೆಗಳ ಬಗ್ಗೆ ಅನ್ಯರು ಮಾತನಾಡಿಕೊಳ್ಳುವುದು ಅವರಿಗೆ ಅಪಥ್ಯವಾಗಿರುತ್ತದೆ. ಆದ್ದರಿಂದ, ಸಲಿಂಗಿಗಳು ತಮ್ಮ ಸಲಿಂಗಿ ಒಲವನ್ನು ಸಮಾಜದ ಮುಂದೆ ಪ್ರಕಟಿಸಬೇಕು ಮತ್ತು ತಮ್ಮನ್ನು ಸಲಿಂಗಿಗಳೆಂದೇ ಗುರುತಿಸಿಕೊಳ್ಳಬೇಕು ಎಂದು ನೇರ ಅಥವಾ ಪರೋಕ್ಷವಾಗಿ ಅವರ ಮೇಲೆ ಒತ್ತಡ ಹೇರುತ್ತಿರುವವರು ಈ ಸಲಿಂಗಿಗಳಿಗೆ ಯಾವುದೇ ಉಪಕಾರವನ್ನು ಮಾಡುತ್ತಿಲ್ಲ. ನಿಜವಾಗಿ ಈ ‘ಗೇ ’ ಆಂದೋಲನದವರು ಸಲಿಂಗಿಗಳನ್ನು ಬಯಲಿಗೆ ತಂದು ನಿಲ್ಲಿಸಿ ಅವರನ್ನು ಮುಜುಗರಕ್ಕೆ ಸಿಲುಕಿಸುವ ಮೂಲಕ ಅವರನ್ನು ಬೇರೊಂದು ತರದಲ್ಲಿ ಹಿಂಸಿಸುತ್ತಿದ್ದಾರೆ.
 ಒಂದು ವೇಳೆ ಇಬ್ಬರು ಸಲಿಂಗಿಗಳು ಪರಸ್ಪರ ಲೈಂಗಿಕ ಸಂಬಂಧ ವನ್ನು ಇಟ್ಟುಕೊಂಡಿರುವರು ಎಂದುಕೊಳ್ಳೋಣ. ಆಗಲೂ ಸಲಿಂಗ ವಿವಾಹದ ಅಗತ್ಯವೇನೂ ಇಲ್ಲ. ಸ್ವತಃ ಸಲಿಂಗಿಗಳಲ್ಲಿ ಹೆಚ್ಚಿನವರು ಈ ತಮ್ಮ ಸಂಬಂಧವನ್ನು ಸಮಾಜದ ಗಮನಕ್ಕೆ ತರಲು ಅಥವಾ ವಿವಾಹವನ್ನು ತಮ್ಮ ಮೇಲೆ ಹೇರಿಕೊಳ್ಳಲು ಬಯಸುವುದಿಲ್ಲ. ಹೀಗಿರುತ್ತಾ ಸಲಿಂಗ ವಿವಾಹವನ್ನು ಸಕ್ರಮಗೊಳಿಸಬೇಕೆಂದು ಆಗ್ರಹಿಸುತ್ತಿರುವವರು ಹಾಗೆ ಮಾಡುತ್ತಿರುವುದು ಸಲಿಂಗಿಗಳ ಹಿತಕ್ಕಾಗಿಯೋ ಅಥವಾ ಸ್ವಸ್ಥ ಸಮಾಜವನ್ನು ಕೆಣಕಲಿಕ್ಕಾಗಿ ಮಾತ್ರೆ ಎಂಬ ಸಂದೇಹ ಮೂಡುತ್ತದೆ.
 ಗೊಂದಲವೇ ಬಂಡವಾಳ: LGBTQQIAAP + ಎಂಬ ಹತ್ತು ಭಿನ್ನ ವರ್ಗಗಳನ್ನು ಒಂದೆಂದು ಚಿತ್ರಿಸುವ ಹುನ್ನಾರ
 ‘ಗೇ’ ರಕ್ಷಕರು ಮತ್ತು ‘ಗೇ’ ಪೋಷಕರು ಒಟ್ಟು ಲೈಂಗಿಕತೆಯ ವಿಷಯದಲ್ಲಿ ಜನಸಾಮಾನ್ಯರಲ್ಲಿ ಇರುವ ಅಜ್ಞಾನ ಮತ್ತು ಗೊಂದಲಗಳನ್ನೇ ತಮ್ಮ ಬಂಡವಾಳವಾಗಿ ಬಳಸಿಕೊಳ್ಳುತ್ತಾರೆ. ಅಸಹಜ ಕಾಮಿಗಳು ಹುಟ್ಟಿನಿಂದಲೇ ಹಾಗಿರುತ್ತಾರೆ.... ಅವರ ಮುಂದೆ ಬೇರಾವುದೇ ದಾರಿ ಇರುವುದಿಲ್ಲ .... ಅವರೆಷ್ಟು ಬಯಸಿದರೂ ಅದರಿಂದ ಹೊರಬರಲು ಅವರಿಗೆ ಸಾಧ್ಯವಾಗುವುದಿಲ್ಲ... ಪ್ರಕೃತಿಯೇ ಅವರನ್ನು ಹಾಗೆ ಮಾಡಿರು ವಾಗ ಸಮಾಜವು ಅವರನ್ನು ನಿರ್ಬಂಧಿಸುವುದು ಸರಿಯಲ್ಲ....... ಅವರಿಗೆ ಬೇರೆ ಆಯ್ಕೆಯೇ ಎಲ್ಲಿದೆ? ........ ಹೀಗೆ ಸಾಗುತ್ತದೆ ಅವರ ವಾದ ವೈಖರಿ. ಈ ಮೂಲಕ ಅವರು ಅಂಗ ವೈಕಲ್ಯಗಳೊಂದಿಗೆ ಜನಿಸುವ ಜನರ ಪರವಾಗಿರುವ, ಸಹತಾಪ, ಸಹಾನುಭೂತಿಗಳನ್ನು ಸ್ವಯಂ ಪ್ರೇರಿತ ಹಾಗೂ ಸ್ವಯಂಕೃತ ನ್ಯೂನತೆ, ಅಸ್ವಾಸ್ಥ್ಯಗಳಿಗೆ ಅನ್ವಯಿಸಲು ಹೆಣಗುತ್ತಾರೆ. ಸಮಾಜದಲ್ಲಿ ಹಿಜಡಾಗಳ ಅಥವಾ ನಪುಂಸಕರ ಬಗ್ಗೆ ಇರುವ ಗೊಂದಲಗಳನ್ನೂ ಇವರು ತಮ್ಮ ಬಂಡವಾಳವಾಗಿಸುತ್ತಾರೆ. ಈ ದೃಷ್ಟಿಯಿಂದ, ಅಸಾಮಾನ್ಯ ಲೈಂಗಿಕತೆಯ ಎಲ್ಲ ಪ್ರಕಾರಗಳನ್ನು ಪ್ರತ್ಯೇಕವಾಗಿ ಗುರುತಿಸಿ ಪರಿಚಯ ಪಡುವುದು ಅತ್ಯವಶ್ಯಕವಾಗಿದೆ.
(ಮುಂದುವರಿಯುವುದು)

Writer - ಪಿ. ಎ. ಸಾದಿಕ್

contributor

Editor - ಪಿ. ಎ. ಸಾದಿಕ್

contributor

Similar News

ಜಗದಗಲ
ಜಗ ದಗಲ