ಕಾಂಡೋಮ್ ಕೇಂದ್ರಿತ ಸಲಿಂಗ ವೈಭವದ ಟೊಳ್ಳುತನ ಮತ್ತು ಅಪಾಯಗಳು
ಭಾಗ-3
ಹತ್ತು ವರ್ಗಗಳ ಪೈಕಿ I (ಐ) ಅಥವಾ ಇಂಟರ್ಸೆಕ್ಸ್ (Intersex) ಎಂಬ ಒಂದು ವರ್ಗದವರು ಮಾತ್ರ ಶಾರೀರಿಕವಾಗಿ, ಲೈಂಗಿಕ ವೈಕಲ್ಯದೊಂದಿಗೆ ಜನಿಸಿರುತ್ತಾರೆ ಅಥವಾ ಕಾಲ ಕ್ರಮೇಣ ಅವರಲ್ಲಿ ಅಂತಹ ವೈಕಲ್ಯಗಳು ಬೆಳೆಯುತ್ತವೆ. ಅವರ ಶರೀರದಲ್ಲಿ ಸ್ತ್ರೀಯರ ಲಕ್ಷಣಗಳೂ ಪುರುಷರ ಲಕ್ಷಣಗಳೂ ಮಿಶ್ರವಾಗಿರುತ್ತವೆ. ಉಳಿದಂತೆ, ಬೇರೆ ಯಾವ ವರ್ಗದವರಲ್ಲೂ ಹುಟ್ಟುವಾಗ ಯಾವುದೇ ಬಗೆಯ ಶಾರೀರಿಕ ವೈಕಲ್ಯವಿರುವುದಿಲ್ಲ. ಅವರು ಸಾಮಾನ್ಯರಿಗಿಂತ ಭಿನ್ನರಾಗಿರುವುದು ತಮ್ಮ ನಡವಳಿಕೆ, ಮಾನಸಿಕ ಒಲವುಗಳು, ಆಗ್ರಹಗಳು ಮತ್ತು ತೆವಲುಗಳಲ್ಲಿ ಮಾತ್ರ. ‘ಗೇ’ ಪರ ವಕಾಲತ್ತು ವಹಿಸುವವರು ಈ ಮಹತ್ವದ ಸತ್ಯವನ್ನು ಮರೆಮಾಚಿ ಪ್ರಸ್ತುತ ಎಲ್ಲ ವರ್ಗದವರನ್ನೂ ಒಂದೇ ಬಗೆಯವರೆಂದು ಚಿತ್ರಿಸಲು ಶ್ರಮಿಸುತ್ತಾರೆ. ಈ ಕುರಿತು ಸತ್ಯವೇನೆಂಬುದನ್ನು ಅರಿಯಲು ಶ್ರಮಿಸದೆ ಅವರಿವರ ಮಾತು ಕೇಳಿ ತೀರ್ಮಾನ ಕೈಗೊಳ್ಳುವವರು ಇದರಿಂದ ಗೊಂದಲಕ್ಕೊಳಗಾಗುವುದು ಸಹಜ.
LGBTQQIAAP + ಎಂಬ ಅಕ್ಷರ ಸಂಧಿಯ ವಿವರಣೆ ಹೀಗಿದೆ:
L ಅಥವಾ Lesbian ಲೆಸ್ಬಿಯನ್ ಅಂದರೆ ಸ್ತ್ರೀಯರ ಕಡೆಗೆ ಮಾತ್ರ ಲೈಂಗಿಕವಾಗಿ ಆಕರ್ಷಿತಳಾಗುವ ಸ್ತ್ರೀ.
G ಅಥವಾ Gay ‘ಗೇ’ ಅಂದರೆ ಪುರುಷರ ಕಡೆಗೆ ಮಾತ್ರ ಲೈಂಗಿಕವಾಗಿ ಆಕರ್ಷಿತನಾಗುವ ಪುರುಷ.
B ಅಥವಾ Bisexual ಬೈ ಸೆಕ್ಸುವಲ್ ಅಂದರೆ ಪುರುಷರು ಮತ್ತು ಸ್ತ್ರೀಯರು ಇಬ್ಬರ ಕಡೆಗೂ ಲೈಂಗಿಕವಾಗಿ ಆಕರ್ಷಿತರಾಗುವ ಸ್ತ್ರೀಯರು ಮತ್ತು ಪುರುಷರು.
T ಅಥವಾ Transgenderಟ್ರಾನ್ಸ್‌ಜೆಂಡರ್ ಅಥವಾ Transexual ಟ್ರಾಂಸೆಕ್ಸುವಲ್ ಅಂದರೆ ಹುಟ್ಟುವಾಗ ಪುರುಷನೆಂದು ಗುರುತಿಸಲ್ಪಟ್ಟು ಕ್ರಮೇಣ ತಾನು ಸ್ತ್ರೀ ಎಂದು ನಂಬಲಾರಂಭಿಸಿ ಹಾವಭಾವದಲ್ಲಿ ಅಥವಾ ವರ್ತನೆಯಲ್ಲಿ ಅಥವಾ ಉಡುಗೆ ಅಲಂಕಾರ ಇತ್ಯಾದಿಗಳಲ್ಲಿ ಸ್ತ್ರೀಯರಂತಹ ಲಕ್ಷಣಗಳನ್ನು ಬೆಳೆಸಿಕೊಂಡವನು ಅಥವಾ ಹುಟ್ಟುವಾಗ ಸ್ತ್ರೀ ಎಂದು ಗುರುತಿಸಲ್ಪಟ್ಟು ಕ್ರಮೇಣ ಹಾವಭಾವದಲ್ಲಿ ಅಥವಾ ವರ್ತನೆಯಲ್ಲಿ ಅಥವಾ ಉಡುಗೆ ಅಲಂಕಾರ ಇತ್ಯಾದಿಗಳಲ್ಲಿ ಪುರುಷರಂತಹ ಲಕ್ಷಣಗಳನ್ನು ಬೆಳೆಸಿಕೊಂಡವಳು ಅಥವಾ ಅಳವಡಿಸಿಕೊಂಡವರು. ಇವರಲ್ಲಿ ಕೆಲವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ತಮ್ಮ ಒಲವಿಗನುಸಾರ ಲಿಂಗ ಪರಿವರ್ತನೆ ಮಾಡಿಕೊಳ್ಳುತ್ತಾರೆ. ಅಂದರೆ ಪುರುಷ ಲಕ್ಷಣಗಳೊಂದಿಗೆ ಹುಟ್ಟಿದವನು ಸ್ತ್ರೀಯಾಗಿ ಮಾರ್ಪಡುತ್ತಾನೆ. ಸ್ತ್ರೀ ಲಕ್ಷಣಗಳೊಂದಿಗೆ ಜನಿಸಿದವಳು ಪುರುಷನಾಗಿ ಮಾರ್ಪಡುತ್ತಾಳೆ.
Q ಅಥವಾ Queer ಕ್ವಿಯರ್ ಅಂದರೆ ತಮ್ಮನ್ನು ಸ್ತ್ರೀ, ಪುರುಷ ಅಥವಾ ಯಾವುದೇ ನಿರ್ದಿಷ್ಟ ಲಿಂಗ ದೊಂದಿಗೆ ಗುರುತಿಸಲ್ಪಡಲು ಅಪೇಕ್ಷಿಸದವರು.
Q ಅಥವಾ Questioning ಕ್ವೆಶ್ಚನಿಂಗ್ ಅಂದರೆ ತಮ್ಮ ಲೈಂಗಿಕ ಗುರುತು ಯಾವುದೆಂಬುದನ್ನು ನಿರ್ಧರಿಸಲಾಗದೆ ತಾವೇ ಆ ಕುರಿತು ಪ್ರಶ್ನಿುತ್ತಿರುವ ಹಂತದಲ್ಲಿರುವವರು.
I ಅಥವಾ Intersex ಇಂಟರ್ಸೆಕ್ಸ್ ಅಂದರೆ ಶಾರೀರಿಕವಾಗಿ ಸ್ತ್ರೀ ಮತ್ತು ಪುರುಷರಿಬ್ಬರ ಮಿಶ್ರ ಲಕ್ಷಣಗಳೊಂದಿಗೆ ಹುಟ್ಟಿದವರು. ಇಂತಹ ಪ್ರಕರಣಗಳು ತೀರಾ ವಿರಳ.
A Asexual ಅಥವಾ ಎಸೆಕ್ಸುವಲ್ ಅಂದರೆ ಯಾರ ಕಡೆಗೂ ಲೈಂಗಿಕವಾಗಿ ಆಕರ್ಷಿತರಾದ ಸ್ತ್ರೀಯರು ಅಥವಾ ಪುರುಷರು.
A ಅಥವಾ Allies ಅಲೈಸ್ ಅಂದರೆ ಲೈಂಗಿಕವಾಗಿ ಸ್ವತಃ ಸ್ವಸ್ಥರಾಗಿದ್ದು LGBTQQIAP ವರ್ಗಕ್ಕೆ ಸೇರಿದವರನ್ನು ಬೆಂಬಲಿಸುವವರು.
P ಅಥವಾ Pansexual ಪಾನ್ ಸೆಕ್ಸುವಲ್ ಅಂದರೆ ಇನ್ನೊಬ್ಬರ ಲೈಂಗಿಕತೆ ಏನಾಗಿದ್ದರೂ ಅದನ್ನು ಪರಿಗಣಿಸದೆಯೇ ಅವರ ಕಡೆಗೆ ಲೈಂಗಿಕವಾಗಿ ಆಕರ್ಷಿತರಾಗುವವರು.
ಮುಂದಿನ ದಿನಗಳಲ್ಲಿ ಇಂಗ್ಲಿಷ್ ಅಕ್ಷರಮಾಲೆಯ ಉಳಿದೆಲ್ಲ ಅಕ್ಷರಗಳು ಈ ಅಸಾಮಾನ್ಯರ ಪಟ್ಟಿಯಲ್ಲಿ ಸೇರಿಕೊಂಡರೂ ಅಚ್ಚರಿಯೇನಿಲ್ಲ. ಇಲ್ಲಿ Q ಮತ್ತು A ಎಂಬ ಮುಂದಕ್ಷರ ಅಥವಾ ಮೊದಲಕ್ಷರಗಳು ಎರಡೆರಡು ಬಾರಿ ಬಂದಿವೆ. ಹೀಗೆಯೇ ಮುಂದುವರಿದರೆ ಇದು ನೂರಾರು ಮುಂದಕ್ಷರಗಳಿಂದ ಗುರುತಿಸಲ್ಪಡುವ ಸಮುದಾಯವಾಗಿಯೂ ಬೆಳೆಯಬಹುದು. ಪ್ರಸ್ತುತ ಹತ್ತು ವರ್ಗಗಳಿಗೆ ಮೇಲೆ ನೀಡಲಾಗಿರುವ ವ್ಯಾಖ್ಯಾನಗಳು ಬಹುತೇಕ ಎಲ್ಲರೂ ಸಮ್ಮತಿಸುವ ವ್ಯಾಖ್ಯಾನಗಳಾಗಿವೆ. ಒಂದೊಂದಾಗಿ ಈ ಎಲ್ಲ ಲಕ್ಷಣಗಳನ್ನು ಗಮನವಿಟ್ಟು ನೋಡಿದರೆ ಒಂದಂತೂ ಬಹಳ ಸ್ಪಷ್ಟವಿದೆ. ಈ ಹತ್ತು ವರ್ಗಗಳ ಪೈಕಿ I ಅಥವಾ ಇಂಟರ್ಸೆಕ್ಸ್ (Intersex) ಎಂಬ ಒಂದು ವರ್ಗದವರು ಮಾತ್ರ ಶಾರೀರಿಕವಾಗಿ, ಲೈಂಗಿಕ ವೈಕಲ್ಯದೊಂದಿಗೆ ಜನಿಸಿರುತ್ತಾರೆ ಅಥವಾ ಕಾಲ ಕ್ರಮೇಣ ಅವರಲ್ಲಿ ಅಂತಹ ವೈಕಲ್ಯಗಳು ಬೆಳೆಯುತ್ತವೆ. ಅವರ ಶರೀರದಲ್ಲಿ ಸ್ತ್ರೀಯರ ಲಕ್ಷಣಗಳೂ ಪುರುಷರ ಲಕ್ಷಣಗಳೂ ಮಿಶ್ರವಾಗಿರುತ್ತವೆ. ಉಳಿದಂತೆ, ಬೇರೆ ಯಾವ ವರ್ಗದವರಲ್ಲೂ ಹುಟ್ಟುವಾಗ ಯಾವುದೇ ಬಗೆಯ ಶಾರೀರಿಕ ವೈಕಲ್ಯವಿರುವುದಿಲ್ಲ. ಅವರು ಸಾಮಾನ್ಯರಿಗಿಂತ ಭಿನ್ನರಾಗಿರುವುದು ತಮ್ಮ ನಡವಳಿಕೆ, ಮಾನಸಿಕ ಒಲವುಗಳು, ಆಗ್ರಹಗಳು ಮತ್ತು ತೆವಲುಗಳಲ್ಲಿ ಮಾತ್ರ. ‘ಗೇ’ ಪರ ವಕಾಲತ್ತು ವಹಿಸುವವರು ಈ ಮಹತ್ವದ ಸತ್ಯವನ್ನು ಮರೆಮಾಚಿ ಪ್ರಸ್ತುತ ಎಲ್ಲ ವರ್ಗದವರನ್ನೂ ಒಂದೇ ಬಗೆಯವರೆಂದು ಚಿತ್ರಿಸಲು ಶ್ರಮಿಸುತ್ತಾರೆ. ಈ ಕುರಿತು ಸತ್ಯವೇನೆಂಬುದನ್ನು ಅರಿಯಲು ಶ್ರಮಿಸದೆ ಅವರಿವರ ಮಾತು ಕೇಳಿ ತೀರ್ಮಾನ ಕೈಗೊಳ್ಳುವವರು ಇದರಿಂದ ಗೊಂದಲಕ್ಕೊಳಗಾಗುವುದು ಸಹಜ.
ಭಾರತದ ಹೆಚ್ಚಿನ ದೊಡ್ಡ ನಗರಗಳಲ್ಲಿ ಟೋಲ್ ಗೇಟ್ ಅಥವಾ ಟ್ರಾಫಿಕ್ ಸಿಗ್ನಲ್ಗಳ ಸಮೀಪ ಕೆಲವು ಸ್ತ್ರೀ ವೇಷಧಾರಿಗಳು ಚಪ್ಪಾಳೆ ತಟ್ಟುತ್ತಾ ಹಣ ವಸೂಲಿ ಮಾಡುವುದು ಕಂಡು ಬರುತ್ತದೆ. ಇವರಲ್ಲಿ ಕೆಲವರ ವಸೂಲಿಯ ಶೈಲಿ ತುಂಬಾ ಆಕ್ರಮಣಕಾರಿಯಾಗಿರುತ್ತದೆ. ಇವರನ್ನು ಸಾಮಾನ್ಯವಾಗಿ ಹಿಜಡಾಗಳೆಂದು ಗುರುತಿಸಲಾಗುತ್ತದೆ. ಇವರ ಬಗ್ಗೆ ಕೂಡಾ ಇವರು ಹುಟ್ಟುವಾಗಲೇ ಮಿಶ್ರಲಿಂಗಿಗಳಾಗಿ ಅಥವಾ ಲೈಂಗಿಕ ವೈಕಲ್ಯದೊಂದಿಗೆ ಹುಟ್ಟಿರುತ್ತಾರೆ ಎಂಬ ನಂಬಿಕೆ ಸಾಮಾನ್ಯವಾಗಿದೆ. ಕೆಲವರು ಇವರನ್ನು transgender ಅಥವಾ transexual ಪ್ರವರ್ಗಕ್ಕೆ ಸೇರಿದವರೆಂದು ಪರಿಗಣಿಸುತ್ತಾರೆ. ಆದರೆ ಅಖಿಲ ಭಾರತ ಹಿಜಡಾ ಕಲ್ಯಾಣ ಸಂಘ (AIHKS ) ದವರ ಪ್ರಕಾರ ಹಿಜಡಾಗಳೆಂದು ಗುರುತಿಸಲ್ಪಡುವವರ ಪೈಕಿ ಲೈಂಗಿಕ ವೈಕಲ್ಯದೊಂದಿಗೆ ಹುಟ್ಟುವವರ ಸಂಖ್ಯೆ ಶೇ.1 ಮಾತ್ರ. ಉಳಿದವರಲ್ಲಿ ಹೆಚ್ಚಿನವರು ಪೂರ್ಣಪ್ರಮಾಣದ ಪುರುಷರಾಗಿದ್ದು ಹಿಜಡಾಗಳಂತೆ ನಟಿಸುತ್ತಿರುತ್ತಾರೆ. ಅನೇಕರನ್ನು ಅವರ ಬಾಲ್ಯದಲ್ಲಿ ಅಥವಾ ಹದಿ ಹರೆಯದಲ್ಲಿ ಬಲವಂತವಾಗಿ ಲಿಂಗ ಛೇದನ ಅಥವಾ ಕಸಿಯ ಮೂಲಕ ಹಿಜಡಾಗಳಾಗಿ ಪರಿವರ್ತಿಸಲಾಗುತ್ತದೆ. ಅಂದರೆ ಅವರ ಪುರುಷ ಜನನಾಂಗವನ್ನು ಕಿತ್ತು ಹಾಕಲಾಗುತ್ತದೆ. ಇದರ ಪರಿಣಾಮವಾಗಿ ಮುಂದೆ ಕ್ರಮೇಣ ಅವರ ಶರೀರದಲ್ಲಿ ಬದಲಾವಣೆಗಳಾಗಲು ಆರಂಭವಾಗುತ್ತದೆ ಮತ್ತು ಅವರಲ್ಲಿ ಕೆಲವು ಸ್ತ್ರೀ ಲಕ್ಷಣಗಳು ಬೆಳೆಯುತ್ತವೆ. ವಿಶೇಷವಾಗಿ ಗಂಡು ಮಕ್ಕಳನ್ನು ಅಪಹರಿಸಿ ಅವರನ್ನು ಹಿಜಡಾಗಳಾಗಿ ಪರಿವರ್ತಿಸುವ ಒಂದು ದೊಡ್ಡ ಜಾಲವೇ ಸಕ್ರಿಯವಾಗಿದೆ. ಹಿಜಡಾಗಳು ಸಂಘಟಿತರಾಗಿರುವಲ್ಲಿ ಅವರ ನಾಯಕರನ್ನು ‘ಗುರು’ ಎಂದು ಗುರುತಿಸಲಾಗುತ್ತದೆ. ಹಲವೆಡೆ ಕೆಲವು ಪಂಥಗಳ ಹಿಜಡಾಗಳು ಪ್ರತಿವರ್ಷ, ಈ ರೀತಿ ಅಪಹೃತ ಮಕ್ಕಳನ್ನು ಕಸಿ ಮಾಡಿ ವಿಧ್ಯುಕ್ತವಾಗಿ ಹಿಜಡಾ ಸಮಾಜಕ್ಕೆ ಸೇರಿಸುವ ‘ನಿರ್ವಾಣ’ ಎಂಬ ಅಧಿಕೃತ ಧಾರ್ಮಿಕ ಸಮಾರಂಭಗಳನ್ನು ಆಯೋಜಿಸುತ್ತಾರೆ. ಕೆಲವರು ವಿವಿಧ ಮೂಢನಂಬಿಕೆಗಳಿಂದ ಪ್ರೇರಿತರಾಗಿ ತಮ್ಮ ಒಂದು ಗಂಡು ಮಗುವನ್ನು ಹಿಜಡಾ ಮಾಡುವುದಾಗಿ ಹರಕೆ ಹೊತ್ತು ತಾವಾಗಿಯೇ ಅಂತಹ ಮಕ್ಕಳನ್ನು ಹಿಜಡಾ ‘ಗುರು’ಗಳಿಗೆ ಒಪ್ಪಿಸುವುದೂ ಇದೆ. ಆ ಗುರುಗಳು ತಮ್ಮ ಬಲಿಪಶುಗಳನ್ನು ಕ್ರಮೇಣ ಸಲಿಂಗಕಾಮಿಗಳಾಗಿಸಿ ಸಲಿಂಗ ಕಾಮದ ಬೃಹತ್‌ಸಂಘಟಿತ ಜಾಲಗಳನ್ನು ನಡೆಸುತ್ತಾರೆ. ಜೊತೆಗೆ ಭಿಕ್ಷಾಟನೆ ಮತ್ತು ಬಲವಂತದ ಹಫ್ತಾ ವಸೂಲಿ ಜಾಲಗಳನ್ನೂ ನಡೆಸುತ್ತಾರೆ. ಹೀಗೆ, ಹೆಚ್ಚಿನ ಪ್ರಕರಣಗಳಲ್ಲಿ ದೂರಬೇಕಾದದ್ದು ಶಾರೀರಿಕವಾಗಿ ಸ್ವಸ್ಥರಾಗಿದ್ದರೂ ಮಾನಸಿಕವಾಗಿ ವಕ್ರ ದಾರಿಗಳನ್ನು ಅರಸುವ ಅಸ್ವಸ್ಥ ಮಾನಸಿಕತೆಯನ್ನೇ ಹೊರತು ದೇವರನ್ನಂತೂ ಅಲ್ಲ. ಹಾಗೆಯೇ, ಲೈಂಗಿಕ ಅಸ್ವಾಸ್ಥ್ಯದ ಹೆಚ್ಚಿನ ಪ್ರಕರಣಗಳು ಶುದ್ಧ ಮಾನಸಿಕ ಸ್ವರೂಪದ ಸಮಸ್ಯೆಯಾಗಿದ್ದು ಅವುಗಳನ್ನು ಆ ಸ್ತರದಲ್ಲೇ ಗುರುತಿಸಿ ಬಗೆಹರಿಸಬೇಕೇ ಹೊರತು ನಿಂದನೆಯಾಗಲಿ ವೈಭವಿೀಕರಣವಾಗಲಿ ಅದಕ್ಕೆ ಪರಿಹಾರವಲ್ಲ.
ಕಾಂಡೋಮ್ ಎಂಬ ರಂಧ್ರಾಶ್ರಯದ ಇತಿಮಿತಿಗಳು
ವಿಪರ್ಯಾಸ ನೋಡಿ. ಸಲಿಂಗ ಕಾಮದ ಮಾರಕ ಅಪಾಯಗಳ ಕುರಿತು ಪ್ರಸ್ತಾಪ ಬಂದೊಡನೆ ಹಲವರು ಕಾಂಡೋಮ್ ಆಶ್ರಿತರಾಗಿ ಬಿಡುತ್ತಾರೆ. ಕಾಂಡೋಮ್ ಧರಿಸಿಕೊಂಡರೆ ಸಾಕು, ಯಾವ ವೇಶ್ಯಾ ಸಹವಾಸ ಮಾಡಿದರೂ ಎಂತಹ ವಿಕೃತ ಕಾಮಕೇಳಿ ನಡೆಸಿದರೂ ಎಲ್ಲ ಬಗೆಯ ಸೋಂಕು ರೋಗಗಳಿಂದ ಸುರಕ್ಷಿತರಾಗಿ ಉಳಿಯಲು ಸಾಧ್ಯವಿದೆ ಎಂದು ವಾದಿಸತೊಡಗುತ್ತಾರೆ. ಹೀಗೆ ವಾದಿಸುವವರ ಸಾಲಲ್ಲಿ ಭಂಡ ಅರೆಶಿಕ್ಷಿತರು ಮಾತ್ರವಲ್ಲ ಅಜ್ಞಾನಿ ಶಿಕ್ಷಿತರೂ ಸೇರಿದ್ದಾರೆ. ನಿರ್ದಿಷ್ಟವಾಗಿ ಕಾಂಡೋಮ್ ಇತಿಮಿತಿಗಳ ಕುರಿತಾಗಿಯೇ ಸವಿಸ್ತಾರ ಅಧ್ಯಯನ, ಸಂಶೋಧನೆಗಳನ್ನು ನಡೆಸಿರುವ ವಿಜ್ಞಾನಿಗಳು ಮತ್ತು ಸಂಶೋಧಕ ಸಂಸ್ಥೆಗಳು ನೀಡಿರುವ ಎಚ್ಚರಿಕೆಗಳು ಬಹುಶ: ಇವರಿಗೆ ಮನವರಿಕೆ ಆದಂತಿಲ್ಲ. ತಜ್ಞರ ಪ್ರಕಾರ ಗರ್ಭನಿರೋಧದ ವಿಷಯದಲ್ಲಾಗಲಿ, ರೋಗನಿರೋಧದ ವಿಷಯದಲ್ಲಾಗಲಿ ಕಾಂಡೋಮ್ಗಳು ತುಂಬಾ ಸಹಾಯಕ. ಆದರೆ ಅವು ಶೇ.100 ಸುರಕ್ಷಿತವಲ್ಲ. ಕಾಂಡೋಮ್ಗಳನ್ನು ಹೇಗೆ ಧರಿಸಬೇಕು ಎಂಬ ಕುರಿತಂತೆ ತಜ್ಞರು ಶಿಫಾರಸು ಮಾಡುವ ಹಲವು ನಿಯಮಗಳಿವೆ. ಆ ಎಲ್ಲ ನಿಯಮಗಳನ್ನೂ ಯಥಾವತ್ತಾಗಿ ಪಾಲಿಸಿದರೂ ಅವುಗಳ ಯಶಸ್ಸಿನ ಪ್ರಮಾಣ ಶೇ. 98ಕ್ಕಿಂತ ಹೆಚ್ಚಿಲ್ಲ. ವೈಫಲ್ಯದ ಪ್ರಮಾಣ ಕೇವಲ ಶೇ. 2 ಎಂದು ಕಾಮಾತುರರು ಸಂತಸ ಪಡಬೇಕಾಗಿಲ್ಲ. ಏಕೆಂದರೆ ಇದು ತಮ್ಮ ಆಪ್ತ ತಂಡಕ್ಕೆ ಸೋಲಾಯಿತೆಂದು ಮಾತ್ರ ದುಃಖಿಸಬೇಕಾಗುವ ಕ್ರಿಕೆಟ್ ಫುಟ್ಬಾಲ್ಗಳಂತಹ ಆಟವೇನಲ್ಲ. ಅಥವಾ ಕೇವಲ ಒಂದಷ್ಟು ಹಣ ಕಳೆದು ಹೋಗುವ ಜೂಜು ಕೂಡಾ ಅಲ್ಲ. ಇಲ್ಲಿಯ ಸೋಲು ಏಡ್ಸ್‌ನಂತಹ ಮಾರಕ ರೋಗದ ಗೆಲುವಾಗಿರುತ್ತದೆ. ಇಲ್ಲಿ ಮಾರಣಾಂತಿಕ ಅಪಾಯದ ಅಂಚಿನಲ್ಲಿರುವುದು ಅಮೂಲ್ಯ ಮಾನವ ಜೀವಗಳು.
ಪುರುಷರು ಸ್ತ್ರೀ ಸಂಪರ್ಕದ ವೇಳೆ ಕಾಂಡೋಮ್ ಧರಿಸಿದ್ದರೂ, ಧರಿಸಿದ ವಿಧಾನದ ದೋಷದಿಂದಾಗಿ ಅವರ ಲೈಂಗಿಕ ಸಂಗಾತಿ ಗರ್ಭ ಧರಿಸುವ ಸಾಧ್ಯತೆ ಶೇ. 15ರಷ್ಟಿದೆ. ಲೈಂಗಿಕ ರೋಗಗಳ ವರ್ಗಾವಣೆಯ ಸಾಧ್ಯತೆ ಇದಕ್ಕಿಂತ ತುಂಬಾ ಅಧಿಕವಿದೆ.
ಕಾಂಡೋಮ್ಗಳನ್ನು ನಂಬಿ ಕುರುಡು ಸಾಹಸಕ್ಕಿಳಿಯುವವರು ತಿಳಿದಿರಬೇಕು: ಈಗಾಗಲೇ ಸ್ವತಃ ತಮಗೆ ಏಡ್ಸ್ ಇತ್ಯಾದಿ ಘಾತಕ ಸೋಂಕು ತಗಲಿಸಿ ಕೊಂಡಿರುವ ಮತ್ತು ತಮ್ಮ ಅಕ್ರಮ ಲೈಂಗಿಕ ಸಂಗಾತಿಗಳಿಗೂ, ಮುಗ್ಧ ಜೀವನ ಸಂಗಾತಿಗಳಿಗೂ, ತಮ್ಮ ನಿಕಟವರ್ತಿಗಳಿಗೂ, ತಮ್ಮ ರಕ್ತದಾನದ ಅಮಾಯಕ ಫಲಾನುಭವಿಗಳಿಗೂ ಸೋಂಕು ಪ್ರಸಾದ ನೀಡಿರುವ ಹಲವು ಕೋಟಿ ಸಾಹಸಿಗಳು ಸಂಪೂರ್ಣವಾಗಿ ಕಾಂಡೋಮ್ ವಿರೋಧಿಗಳಾಗಲಿ ಕಾಂಡೋಮ್ ಪರಿತ್ಯಾಗಿಗಳಾಗಲಿ ಆಗಿರಲಿಲ್ಲ. ಅವರಲ್ಲಿ ಲಕ್ಷಾಂತರ ಮಂದಿ ಕಾಂಡೋಮ್ಧಾರಿಗಳಾಗಿಯೇ ವಿನಾಶಲೋಕಕ್ಕೆ ಹೆಜ್ಜೆ ಇಟ್ಟಿರುತ್ತಾರೆ. ಆದರೆ ಒಂದೋ ಕಾಂಡೋಮ್ ಕೈಕೊಟ್ಟಿರುತ್ತದೆ ಅಥವಾ ಕಾಂಡೋಮ್ ಧರಿಸುವ ವಿಧಾನದ ವೈಫಲ್ಯದಿಂದ ಅದನ್ನು ನಂಬಿದವನು ಗುಂಡಿಗೆ ಬಿದ್ದಿರುತ್ತಾನೆ. ಇನ್ನು ಕಾಂಡೋಮ್ ಅನ್ನು ಎಷ್ಟು ಶಾಸ್ತ್ರೋಕ್ತವಾಗಿ ಧರಿಸಿದರೂ ಅದು ಗುಪ್ತಾಂಗದ ಒಂದು ಭಾಗವನ್ನು ಮಾತ್ರ ಆವರಿಸಿರುತ್ತದೆಯೇ ಹೊರತು ಸಂಪೂರ್ಣ ಶರೀರದ ಪಾಲಿಗೆ ರಕ್ಷಾ ಕವಚವಾಗಿರುವುದಿಲ್ಲ.
ನ್ಯಾಯಾಂಗದ ಅಸಹಜ ಆತುರ
ನಮ್ಮ ನ್ಯಾಯಾಂಗ ತುಂಬಾ ಪುರುಸೊತ್ತಿರುವ ಸಂಸ್ಥೆಯೇನಲ್ಲ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರೇ ಇತ್ತೀಚೆಗೆ ತಿಳಿಸಿದ ಪ್ರಕಾರ ನಮ್ಮ ಕೆಳ ಕೋರ್ಟುಗಳಲ್ಲಿ ಸುಮಾರು 2. 85 ಕೋಟಿ ಕೇಸುಗಳು ಹಲವಾರು ವರ್ಷಗಳಿಂದ ಇತ್ಯರ್ಥಕ್ಕೆ ಬಾಕಿ ಇವೆ. ಹೈಕೋರ್ಟುಗಳಲ್ಲಿ ಅಂತಹ 43 ಲಕ್ಷ ಕೇಸುಗಳು ಬಾಕಿ ಇವೆ. ಸುಪ್ರೀಂ ಕೋರ್ಟಿನಲ್ಲೇ ಸುಮಾರು 60 ಸಾವಿರ ಹಳೆಯ ಕೇಸುಗಳು ಬಾಕಿ ಇವೆ. ಹೀಗಿರುತ್ತಾ ಆ ನಮ್ಮ ಪರಮೋಚ್ಚ ನ್ಯಾಯ ಧಾಮವು ಇತರ ಬಾಕಿ ಕೇಸುಗಳನ್ನು ಶೀತಲ ಪೆಟ್ಟಿಗೆಯಲ್ಲಿಟ್ಟು ‘ಗೇ’ ಮಹನೀಯರ ನೆರವಿಗಾಗಿ ಸಂವಿಧಾನದ 377ನೇ ಪರಿಚ್ಛೇದದಲ್ಲಿದ್ದ ನಿಯಮವನ್ನು ರದ್ದುಗೊಳಿಸಿ ಸಲಿಂಗ ಕಾಮವನ್ನು ಸಕ್ರಮಗೊಳಿಸುವ ವಿಷಯದಲ್ಲಿ ತೋರಿರುವ ಅಸಹಜ ಆತುರ ಹಲವು ಪ್ರಶ್ನೆಗಳಿಗೆ ಜನ್ಮ ನೀಡುತ್ತದೆ.
ಸಾಮೂಹಿಕ ಹೊಣೆ
ಮುಂದಿನ ದಿನಗಳಲ್ಲಿ, ನೈತಿಕ ಮೌಲ್ಯಗಳಲ್ಲಿ ಮತ್ತು ಪ್ರಕೃತಿಯ ನೈರ್ಮಲ್ಯದಲ್ಲಿ ನಂಬಿಕೆ ಉಳ್ಳ, ಸಮಾಜದ ವಿವಿಧ ವಲಯಗಳು ಜೊತೆಗೂಡಿ ಈ ಪ್ರಶ್ನೆಗಳನ್ನು ಚರ್ಚೆಗೆತ್ತಿಕೊಳ್ಳಬೇಕಾಗಿದೆ. ಸಾಮಾಜಿಕ, ಕೌಟುಂಬಿಕ ಮತ್ತು ವೈಜ್ಞಾನಿಕ ವಾಸ್ತವ, ತರ್ಕ ಹಾಗೂ ಪುರಾವೆಗಳ ಆಧಾರದಲ್ಲಿ ಸಲಿಂಗಕಾಮದ ಆತ್ಮಘಾತಕ, ಆಪ್ತಘಾತಕ ಮತ್ತು ಸಮೂಹ ಘಾತಕ ಆಯಾಮಗಳ ಕುರಿತು, ವ್ಯಾಪಕ ಜನಜಾಗೃತಿ ಬೆಳೆಸಬೇಕಾಗಿದೆ. ಆಗ ನಮ್ಮ ಸಲಿಂಗ ಸಹಿಷ್ಣು ಹಾಗೂ ಸಲಿಂಗ ಪೋಷಕ ವ್ಯಕ್ತಿಗಳು ಹಾಗೂ ಗುಂಪುಗಳು ಮಾತ್ರವಲ್ಲ, ನ್ಯಾಯಾಧೀಶರುಗಳು ಕೂಡ ಪ್ರಕೃತಿಯ ಪ್ರಾಚೀನ ಫ್ಯಾಶನ್ ಕಡೆಗೆ ಮರಳಿ ಬರುವ ನಿರೀಕ್ಷೆ ಇದೆ.