‘ಮಿಶನರೀಸ್ ಆಫ್ ಚ್ಯಾರಿಟಿ’ ಸ್ಥಾಪನೆಗೆ ಅನುಮತಿ

Update: 2018-10-06 18:33 GMT

1806: ಸಂಶೋಧಕ ರಾಲ್ಫ್ ವೆಡ್‌ಗೂಡ್ ಕಾರ್ಬನ್ ಪೇಪರ್ ಸಂಶೋಧನೆಗೆ ಹಕ್ಕುಸ್ವಾಮ್ಯ ಪಡೆದರು.

1950: ಮಹಾ ಮಾನವತಾವಾದಿ ಮದರ್ ತೆರೇಸಾ ಈ ದಿನ ಭಾರತದಲ್ಲಿ ‘ಮಿಶನರೀಸ್ ಆಫ್ ಚಾರಿಟಿ’ ಸ್ಥಾಪಿಸಲು ವ್ಯಾಟಿಕನ್‌ನಿಂದ ಅನುಮತಿ ಪಡೆದರು. ಕೋಲ್ಕತಾದಲ್ಲಿ ಕೇವಲ 13 ಜನ ಸದಸ್ಯರೊಂದಿಗೆ ಆರಂಭವಾದ ಈ ಚಾರಿಟಿ ನಂತರ ಬೃಹತ್ ಸಂಸ್ಥೆಯಾಗಿ ಬೆಳೆಯಿತು. ಸಾವಿರಾರು ಸಿಸ್ಟರ್‌ಗಳೊಂದಿಗೆ ಅನಾಥಾಶ್ರಮಗಳು, ಏಡ್ಸ್ ಆಸ್ಪತ್ರೆಗಳು ಮತ್ತು ಚಾರಿಟಿ ಕೇಂದ್ರಗಳು ವಿಶ್ವದಾದ್ಯಂತ ಸ್ಥಾಪನೆಯಾದವು. 1980ರಲ್ಲಿ ಭಾರತ ಸರಕಾರ ತೆರೇಸಾರ ಮಾನವೀಯ ಸೇವೆಗೆ ಅತ್ಯುನ್ನತ ಭಾರತರತ್ನ ನೀಡಿ ಗೌರವಿಸಿದೆ.

1963: ಹೈಟಿ ಮತ್ತು ಡೊಮಿನಿಕನ್ ಗಣರಾಜ್ಯದಲ್ಲಿ ಫ್ಲೋರಾ ಚಂಡಮಾರುತ ಬೀಸಿದ ಪರಿಣಾಮ 7,190 ಜನರು ಮೃತಪಟ್ಟ ವರದಿಯಾಗಿದೆ.

1993: ಅಮೆರಿಕದ ಖ್ಯಾತ ಲೇಖಕ ಟೋನಿ ಮೊರಿಸನ್‌ಗೆ ಸಾಹಿತ್ಯದ ನೊಬೆಲ್ ಪ್ರದಾನಿಸಲಾಯಿತು.

2011: ಅಮೆರಿಕವು ಈ ದಿನ ಅಫ್ಘಾನಿಸ್ತಾನದ ಮೇಲೆ ವಾಯುದಾಳಿ ಮಾಡುವುದರ ಮೂಲಕ ಆಕ್ರಮಣ ಮಾಡಿತು.

2012: ಸುಡಾನ್‌ನ ಸೇನಾ ವಿಮಾನವೊಂದು ಖಾರ್ಟೂಮ್ ಎಂಬಲ್ಲಿ ಪತನಗೊಳ್ಳುವ ಮೂಲಕ 13 ಜನರು ಮೃತಪಟ್ಟರು.

2014: ನೀಲಿ ಬಣ್ಣದ ಬೆಳಕು ಹೊರಸೂಸುವ ಡಯೋಡ್‌ಗಳನ್ನು ಅನ್ವೇಷಿಸಿದ ಜಪಾನ್‌ನ ಇಸಾಮು ಅಕಾಸಾಕಿ, ಹಿರೋಶಿ ಅಮಾನೊ ಹಾಗೂ ಅಮೆರಿಕದ ನಕಮುರಾ 2014ರ ಭೌತಶಾಸ್ತ್ರದ ನೊಬೆಲ್‌ಗೆ ಭಾಜನರಾದರು.

1978: ಭಾರತದ ನಿವೃತ್ತ ಕ್ರಿಕೆಟಿಗ ಝಹೀರ್‌ಖಾನ್ ಜನ್ಮದಿನ.

1975: ಕನ್ನಡದ ಖ್ಯಾತ ಲೇಖಕ, ತತ್ವಜ್ಞಾನಿ ಡಿ.ವಿ.ಗುಂಡಪ್ಪ ಈ ದಿನ ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ