ವಾಟ್ಸ್ಯಾಪ್ ‘ಡಿಲಿಟ್ ಫಾರ್ ಎವರಿಒನ್’ ಫೀಚರ್ ನ ಈ ಪ್ರಮುಖ ಬದಲಾವಣೆಯ ಬಗ್ಗೆ ತಿಳಿದುಕೊಳ್ಳಿ

Update: 2018-10-15 08:55 GMT

ಹೊಸದಿಲ್ಲಿ, ಅ.15: ವಾಟ್ಸ್ಯಾಪ್ ತನ್ನ ‘ಡಿಲಿಟ್ ಫಾರ್ ಎವರಿಒನ್’ ಫೀಚರ್ ನಲ್ಲಿ ಬಳಕೆದಾರರಿಗೆ ತಾವು ಕಳುಹಿಸಿದ ಸಂದೇಶಗಳನ್ನು ಹಿಂಪಡೆಯಲು ಪ್ರಮುಖ ಬದಲಾವಣೆಗಳನ್ನು ತಂದಿದೆ.

ಬಳಕೆದಾರರು ತಾವು ಕಳುಹಿಸಿದ ಯಾವುದೇ ಸಂದೇಶಗಳು ಹಿಂಪಡೆಯಲು ಇತರರು ಒಪ್ಪಿಕೊಳ್ಳಬೇಕಿದೆ. ಇತರರು ಡಿಲೀಟ್ ರಿಕ್ವೆಸ್ಟ್ ಅನ್ನು ಒಪ್ಪಿಕೊಳ್ಳಲು ಬಳಕೆದಾರರಿಗೆ ಈಗ 13 ಗಂಟೆ, 8 ನಿಮಿಷ ಹಾಗೂ 16 ಸೆಕೆಂಡುಗಳು ಲಭ್ಯವಿರುತ್ತದೆ. ಹಳೆಯ ಸಂದೇಶಗಳಿಗೆ ಬರುತ್ತಿರುವ ಡಿಲೀಟ್ ರಿಕ್ವೆಸ್ಟ್ ಗಳನ್ನು ಗಮನದಲ್ಲಿರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಡಿಲೀಟ್ ಮಾಡಿದ್ದ ಸಂದೇಶವನ್ನು ವಾಪಸ್ ಪಡೆಯಲು ಮಾಡಲಾದ ಮನವಿಯಲ್ಲಿ ಆ ಸಂದೇಶ ಪಡೆದ ಎಲ್ಲಾ ಬಳಕೆದಾರರಿಗೆ ಒಪ್ಪಲು ಈ ಕಾಲಾವಕಾಶ ನೀಡಲಾಗಿದೆ. ಇದರ ನಂತರವಷ್ಟೇ ಡಿಲೀಟ್ ಫಾರ್ ಎವರಿಒನ್  ಫೀಚರ್ ಕಾರ್ಯರೂಪಕ್ಕೆ ಬರುತ್ತದೆ. ವಾಟ್ಸ್ಯಾಪ್ ತನ್ನ ಡಿಲೀಟ್ ಫಾರ್ ಎವರಿಒನ್ ಫೀಚರ್ ಅನ್ನು ಕಳೆದ ವರ್ಷ  ಜಾರಿಗೊಳಿಸಿತ್ತು.

ಇನ್ನಷ್ಟು ಹೊಸ ಆಕರ್ಷಕ ಫೀಚರ್ಸ್ ಹೊಂದುವ ಉದ್ದೇಶದಿಂದ ವಾಟ್ಸ್ಯಾಪ್ ಸದ್ಯದಲ್ಲಿಯೇ ಸ್ಟಿಕ್ಕರ್ಸ್ ಫೀಚರ್ಸ್ ಪರಿಚಯಿಸಲಿದೆ. ಇದರ ಹೊರತಾಗಿ ಹೊಸ ಇಮೋಜಿ ಪಟ್ಟಿಯನ್ನೂ ಅದು ಸೇರಿಸಬಹುದು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News