ಮೀಸಲಾತಿಯೋ; ಪ್ರಾತಿನಿಧ್ಯವೋ?

Update: 2018-10-21 05:22 GMT

ಭಾಗ - 2

ಪ್ರಾತಿನಿಧ್ಯದ ಉದ್ದೇಶಗಳು (ಮೀಸಲಾತಿಯ ಉದ್ದೇಶಗಳು)
♦ ಪ್ರಾತಿನಿಧ್ಯವು ಬಡತನ ನಿರ್ಮೂಲನ ಮಾಡುವ ಹಾಗೂ ಉದ್ಯೋಗ ನೀಡುವ ಕಾರ್ಯಕ್ರಮವಲ್ಲ.
♦ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮತ್ತು ಮಹಿಳೆಯರ ರಕ್ಷಣೆಯನ್ನು ಮಾಡುವುದು ಹಾಗೂ ಭಾಗವಹಿಸುವುದನ್ನು ಖಚಿತಪಡಿಸುವುದು.
♦  ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವನ್ನು ಸಾಧಿಸುವುದು.
♦ ಸಮಾನಾಂತರವಾಗಿ ಆರ್ಥಿಕ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಹಂಚುವುದು.
♦ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆಯನ್ನು ತೆಗೆದುಹಾಕುವುದು.
ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಬಹುಸಂಖ್ಯಾತರಿಗೆ ಮನ್ನಣೆ ದೊರೆಯಬೇಕು ಮತ್ತು ಸಮವಾದ ಪ್ರಾತಿನಿಧ್ಯ ಹಾಗೂ ಸಮವಾದ ಭಾಗವಹಿಸುವಿಕೆಯಿರಬೇಕು, ಆದರೆ ಭಾರತದಲ್ಲಿ ವಿವಿಧ ವರ್ಗಗಳ ಪ್ರಾತಿನಿಧ್ಯ ಮತ್ತು ಭಾಗವಹಿಸುವಿಕೆಯ ಚಿತ್ರಣವೇ ಬೇರೆಯಾಗಿದೆ. ದೇಶದ ಜಾತಿವಾರು ಜನಸಂಖ್ಯೆಯ ಅಂಕಿ ಅಂಶಗಳನ್ನು ನೋಡುವುದಾದರೆ,
ಪರಿಶಿಷ್ಟ ಜಾತಿ ಶೇ. 15, ಪರಿಶಿಷ್ಟ ಪಂಗಡ ಶೇ. 8, ಮುಸ್ಲಿಂಶೇ. 14 ಇತರ ಅಲ್ಪಸಂಖ್ಯಾತರು ಶೇ. 1, ಹಿಂದುಳಿದ ವರ್ಗಗಳುಶೇ. 54 ಮುಂದುವರಿದ ಜಾತಿಗಳು ಶೇ. 8.

♦ ಭಾರತಕ್ಕೆ ಬೇಕಾಗಿರುವುದು, ಉನ್ನತ ಗುಣಮಟ್ಟದ ವಿದ್ಯಾಭ್ಯಾಸ ಮತ್ತು ಏಕರೂಪ ಶಿಕ್ಷಣ ವ್ಯವಸ್ಥೆ.
♦ ಶಿಕ್ಷಣ, ಮತ್ತು ಉದ್ಯೋಗದಲ್ಲಿ ಗಣನೀಯವಾದ ಸಮಾನ ಅವಕಾಶ: ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ.
♦ ಉದ್ಯೋಗ; ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ-ಎಲ್ಲಾ ಬ್ಯಾಕ್‌ಲಾಗ್ ಹುದ್ದೆಗಳ ತ್ವರಿತ ಭರ್ತಿ.

♦ ರಾಜಕೀಯ ಮತ್ತು ಆಡಳಿತಾತ್ಮಕ ಶಕ್ತಿಯನ್ನು ಪಡೆದುಕೊಳ್ಳುವುದು. ನಿಜವಾದ ಅರ್ಥದಲ್ಲಿ ಸಾಮಾಜಿಕ ಸಮಾನತೆ ತರುವಲ್ಲಿ ಮೀಸಲಾತಿ ಒಂದು ಸಾಧನ ಹಾಗೂ ಮೀಸಲಾತಿಯು ಜಾತಿ ನಿರ್ಮೂಲನೆಯ ಸಾಧನವೂ ಹೌದು. ಈ ದೇಶದಲ್ಲಿ ಮೀಸಲಾತಿಯೂ ಯಾವಾಗ ಕೊನೆಯಾಗುತ್ತೆ ಎನ್ನುವ ಪ್ರಶ್ನೆಗಳು ಮೇಲಿಂದ ಮೇಲೆ ಏಳುತ್ತಲೇ ಇರುತ್ತವೆ. ಕೇಳುವ ಎಲ್ಲಾ ಮನಸ್ಸುಗಳಿಗೆ ಹೇಳುವುದೊಂದೇ, ಯಾವಾಗ ಜಾತಿಗಳ ಮಧ್ಯೆ ಅಸಮಾನತೆ ಕೊನೆಯಾಗುತ್ತೋ, ಯಾವಾಗ ಅವಕಾಶಗಳ ದೊರೆಯುವಿಕೆಯಲ್ಲಿ ಅಸಮಾನತೆ ಕೊನೆಯಾಗುತ್ತೋ ಆವಾಗ ಈ ದೇಶದಲ್ಲಿ ಮೀಸಲಾತಿಯೂ ಕೊನೆಯಾಗುವುದು. ಹಾಗಾಗಿ ಕುಟುಂಬ ಮತ್ತು ಸಮುದಾಯದ ಸದಸ್ಯರಲ್ಲಿ ಅರಿವು ಮೂಡಿಸುವುದು, ವಿದ್ಯಾರ್ಥಿಗಳು ಸ್ವಾಭಿಮಾನಿಗಳಾಗಿ ಶಿಕ್ಷಣ, ಹೋರಾಟ ಮತ್ತು ಸಂಘಟನೆಯನ್ನು ಕೈಗೊಂಡು, ಉದ್ಯೋಗವಂತರು ಸಮುದಾಯದ ಪ್ರತಿನಿಧಿಗಳಾಗಿ ಜವಾಬ್ದಾರಿಯನ್ನು ಹೊತ್ತು, ಎಲ್ಲರೂ ರಾಜಕೀಯ ಜ್ಞಾನ ಬೆಳೆಸಿಕೊಳ್ಳಬೇಕಾಗಿದೆ. ಮೀಸಲಾತಿಗೆ ಮತ್ತು ಪ್ರಾತಿನಿಧ್ಯಕ್ಕೆ ಪೂರಕವಾದ ಪಾಲಿಸಿಗಳನ್ನು ರೂಪಿಸಬೇಕಾಗಿದೆ.

 1980ರಲ್ಲಿ ಬೃಂದೇಶ್ವರಿ ಪ್ರಸಾದ್ ಮಂಡಲ್ ಆಯೋಗದ ಪ್ರಕಾರ ದೇಶದಲ್ಲಿ ಹಿಂದುಳಿದ ವರ್ಗಗಳು ಶೇ. 52 ಜನಸಂಖ್ಯೆಯನ್ನು ಹೊಂದಿದ್ದು ಪ್ರಾತಿನಿಧ್ಯವೂ ಸಹ ಶೇ. 52 ಪಡೆದುಕೊಳ್ಳಬೇಕೆಂದು ಶಿಫಾರಸು ಮಾಡಿದೆ. ಹಾಗಾದರೆ ಮಂಡಲ್ ಆಯೋಗದ ವರದಿ ಪ್ರಕಾರ ದೇಶದಲ್ಲಿ ಒಟ್ಟು ಶೇ. 74.5 ಮೀಸಲಾತಿ ಇರಬೇಕಾಗುತ್ತದೆ.ಆದರೆ 1992ರಲ್ಲಿ ನೀಡಿದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ದೇಶದಲ್ಲಿ ಮೀಸಲಾತಿಯು ಶೇ. 50ಕ್ಕಿಂತ ಹೆಚ್ಚಿಸುವ ಹಾಗಿಲ್ಲ. ಆದರೆ, ಕೆಲವು ರಾಜ್ಯಗಳಲ್ಲಿ ಶೇ. 50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಲಾಗಿದೆ. ಉದಾ-ತಮಿಳುನಾಡು ಶೇ. 69, ರಾಜಸ್ಥಾನ ಶೇ. 68, ಛತ್ತೀಸ್‌ಗಡ ಶೇ. 58, ಮಹಾರಾಷ್ಟ್ರ ಶೇ. 52. ಇನ್ನುಳಿದ ರಾಜ್ಯಗಳಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸುವ ಅವಶ್ಯಕತೆ ಕಂಡುಬರುತ್ತದೆ.
 ಡಾ.ಬಿ.ಆರ್.ಅಂಬೇಡ್ಕರ್‌ರವರು ಸಂವಿಧಾನ ರಚನಾ ಸಭೆಯಲ್ಲಿ ಸಂವಿಧಾನದ ಅನುಚ್ಛೇದ; 340ರ ಸೇರ್ಪಡೆಗೆ ಹಿಂದುಳಿದ ವರ್ಗಗಳ ಆಯೋಗದ ರಚನೆಯ ಕುರಿತು ಮಾತನಾಡುತ್ತಾರೆ ಮತ್ತು ಅದರ ಅವಶ್ಯಕತೆ ಯನ್ನು ಸಮರ್ಥಿಸಿಕೊಳ್ಳುತ್ತಾರೆ. ಪ್ರಥಮ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕಾಕಾಸಾಹೇಬ ಕಾಲೇಲ್ಕರ್‌ರವರು ಭಾರತದ ಪರಿಸ್ಥಿತಿಗೆ ಅನುಗುಣವಾಗಿ ಹಿಂದುಳಿದ ವರ್ಗಗಳು ಎಂದರೆ ಯಾರು ಎಂಬುದಾಗಿ ಡಾ.ಬಿ.ಆರ್.ಅಂಬೇಡ್ಕರ್‌ರವರನ್ನು ವಿಚಾರಿಸಿದಾಗ, ಅಂಬೇಡ್ಕರ್‌ರವರು ‘‘ನಮ್ಮ ಸಮಸ್ಯೆ ಪ್ರತಿಯೊಬ್ಬನನ್ನು ಸಂತೃಪ್ತಿಗೊಳಿಸಲು ಸಂಪನ್ಮೂಲಗಳನ್ನು ಹಂಚಿಕೆ ಮಾಡುವುದಲ್ಲ. ನಮ್ಮ ಸಮಸ್ಯೆ ವಿಭಿನ್ನ ಸ್ಥಾನಮಾನಗಳ ವ್ಯೆಪರೀತ್ಯ ಅಂದರೆ ಮೇಲು ಕೀಳುಗಳನ್ನು ಹೋಗಲಾಡಿಸಬೇಕಾಗಿದೆ, ಶಿಕ್ಷಣದಲ್ಲಿ ಪ್ರಗತಿ ಹೊಂದುವುದರಿಂದ ಮಾತ್ರ ಅಂದರೆ ಎಲ್ಲರನ್ನು ಒಂದೇ ಶಿಕ್ಷಣ ಮಟ್ಟಕೆ ಏರಿಸುವುದರ ಮುಖಾಂತರ ಅಂದರೆ ಆ ಕೋಮಿನ ಪ್ರತಿಯೊಬ್ಬರನ್ನೂ ಮೇಲೆತ್ತುವುದಲ.್ಲ ಒಂದು ಸಮುದಾಯದಲ್ಲಿ 10 ಜನ ಬ್ಯಾರಿಸ್ಟರ್, 20 ಜನ ಡಾಕ್ಟರ್ ಮತ್ತು 30 ಜನ ಇಂಜಿನಿಯರ್ ಇದ್ದರೆ ಅದು ಮುಂದುವರಿದ ಸಮುದಾಯ ಎಂದು ಭಾವಿಸುತ್ತೇನೆ.ಕಾಕಾಸಾಹೇಬ ಕಾಲೇಲ್ಕರ್‌ರವರ ಇನ್ನೊಂದು ಪ್ರಶ್ನೆ-ಅನುಸೂಚಿತ ಜಾತಿ ಮತ್ತು ಹಿಂದುಳಿದ ವರ್ಗಗಳ ಸೌಲಭ್ಯಗಳು ನಗರದ ಜನರಿಗೆ ತಲುಪುತ್ತಿವೆ, ಗ್ರಾಮೀಣ ಪ್ರದೇಶದವರಿಗೆ ತಲುಪುತ್ತಿಲ್ಲವಲ್ಲ.’’ ಅಂಬೇಡ್ಕರ್‌ರವರ ಉತ್ತರ ಇಡಿ ಹಿಂದುಳಿದ ವರ್ಗಗಳ ಜನರನ್ನು ಮೇಲೆತ್ತಬೇಕೇ ಹೊರತು ವ್ಯಕ್ತಿಗತವಲ್ಲ.
ಹಾಗಾಗಿ ಹಿಂದುಳಿಯುವಿಕೆಯು ಕೀಳರಿಮೆಯ ಭಾಗವಾಗಿದೆ ಮತ್ತು ಮೀಸಲಾತಿ ಆರ್ಥಿತೆಗೆ ಅಲ್ಲ, ಏಕೆಂದರೆ? ಕೆಳವರ್ಗದ ಬಡವನ ಹಾಗೆ ಶ್ರೀಮಂತನೂ ತಾರತಮ್ಯಕ್ಕೆ ಒಳಗಾಗುತ್ತಾನೆ, ಕೆಳವರ್ಗದ ಗ್ರಾಮೀಣ ಭಾಗದ ಜನರ ಹಾಗೆ ನಗರ ಭಾಗದ ಜನರೂ ತಾರತಮ್ಯಕ್ಕೆ ಒಳಗಾಗುತ್ತಾರೆ, ಕೆಳವರ್ಗದ ಅನಕ್ಷರಸ್ಥರ ಹಾಗೆ ಅಕ್ಷರಸ್ಥರೂ ತಾರತಮ್ಯಕ್ಕೆ ಒಳಗಾಗುತ್ತಾರೆ. ಕೆಳವರ್ಗದ ನಿರುದ್ಯೋಗಿಗಳ ಹಾಗೆ ಉದ್ಯೋಗಿಗಳೂ ತಾರತಮ್ಯಕ್ಕೆ ಒಳಗಾಗುತ್ತಾರೆ, ಕೆಳವರ್ಗದ ಖಾಸಗಿ ಉದ್ಯೋಗಿಗಳ ಹಾಗೆ ಸರಕಾರಿ ಉದ್ಯೋಗಿಗಳೂ ತಾರತಮ್ಯಕ್ಕೆ ಒಳಗಾಗುತ್ತಾರೆ.
 ದೇಶದ ಉಪಪ್ರಧಾನಿಯಾಗಿದ್ದ ಬಾಬು ಜಗಜೀವನರಾಂ ರವರು ವಾರಣಾಸಿಯಲ್ಲಿ ಸ್ವಾಮಿ ಸ್ವರೂಪಾನಂದ ವಿಗ್ರಹ ಅನಾವರಣಗೊಳಿಸಿದ ಮೇಲೆ ವಾರಣಾಸಿಯ ಬ್ರಾಹ್ಮಣರು ವಿಗ್ರಹವನ್ನು ತೊಳೆದು ಅಸ್ಪಶ್ಯತೆಯನ್ನು ತೋರಿದ್ದರು. ಇಂದಿಗೂ ದಲಿತರಿಗೆ ಮದುವೆ ಮೆರವಣಿಗೆಯ ಭಾಗ್ಯವಿಲ್ಲ, ಇದಕ್ಕೆ ಸಾಕ್ಷಿ ಎನ್ನುವಂತೆ ಇತ್ತೀಚೆಗೆ ನಡೆದ ಉತ್ತರ ಪ್ರದೇಶದ ಬಸಾಯಿ ಗ್ರಾಮದ ಸಂಜಯ್ ಜಾಟವ್ ಎನ್ನುವ ಕೆಳಜಾತಿಯ ವರನ ಮದುವೆ ಮೆರವಣಿಗೆಗೆ ಠಾಕೂರ್ ಸಮುದಾಯ ಆಕ್ಷೇಪ ಮಾಡಿತ್ತು. ಒಪ್ಪಿಕೊಳ್ಳದಿದ್ದರೆ ಬಹಿಷ್ಕಾರ ಹಾಕುವುದಾಗಿ ಹೆದರಿಸಿ ಮೇಲ್ಜಾತಿಯ ವರ್ಗ ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ರಿಯೋ ಒಲಿಂಪಿಕ್‌ನಲ್ಲಿ ಪದಕ ಪಡೆದ ಸಾಕ್ಷಿ ಮಲ್ಲಿಕ್ ಹಾಗೂ ಪಿ. ವಿ. ಸಿಂಧುರವರು ಯಾವ ಜಾತಿಯವರೆಂದು ಗೂಗಲ್‌ನಲ್ಲಿ ಹುಡುಕಾಡಲಾಗಿದೆ. ಅದೇ ರೀತಿ ಫಿನ್‌ಲ್ಯಾಂಡ್ ವಿಶ್ವ ಜೂನಿಯರ್ ಕ್ರೀಡಾಕೂಟದಲ್ಲಿ ಜುಲೈ 16, 2018 ರಂದು ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನ ಗೆದ್ದ ಹಿಮಾದಾಸ್ ಬಗ್ಗೆ ಕೂಡ ಗೂಗಲ್‌ನಲ್ಲಿ ಜಾತಿಯ ಕುರಿತು ಹುಡುಕಾಟ ನಡೆಸಲಾಗಿದೆ. ಲಕ್ನೋದ ಬಾಬಾ ಸಾಹೇಬ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ದಲಿತ ಪ್ರೊ.ಸಿ.ಎಲ್.ಮಲ್ಲಯ್ಯರವರಿಗೆ ಅವರದೇ ಸಂಶೋಧನಾ ವಿದ್ಯಾರ್ಥಿ ಸಂಜಯ್ ಉಪಾಧ್ಯಾಯ ‘ಚಮಾರ್’ ಎಂಬ ಪದ ಬಳಸಿ ಹೀಯಾಳಿಸಿದ್ದಾನೆ. ಹಾಗಾಗಿ ಆರ್ಥಿಕ ಸ್ಥಿತಿಗಿಂತ ಸಾಮಾಜಿಕ ಸ್ಥಿತಿ ಮುಖ್ಯವಾದುದ್ದು. ಸಾಮಾಜಿಕ ಸ್ಥಿತಿ ಸುಧಾರಣೆಯಾಗದೆ ಆರ್ಥಿಕ ಸ್ಥಿತಿ ಸುಧಾರಣೆಯಾಗದು. ಆರ್ಥಿಕ ಸ್ಥಿತಿ ಸುಧಾರಣೆಯಾಗದೆ ರಾಜಕೀಯ ಸ್ಥಿತಿ ಸುಧಾರಣೆಯಾಗದು. ದೇಶದ ಅಭಿವೃದ್ದಿಗೆ ಸಾಮಾಜಿಕ ಸ್ಥಿತಿ ಸುಧಾರಣೆಯಾಗಬೇಕಾದುದ್ದು ಅತೀ ಅವಶ್ಯಕ. ಸಾಮಾಜಿಕ ಸ್ಥಿತಿಯ ಸುಧಾರಣೆಗೆಂದೇ ಪ್ರಾತಿನಿಧ್ಯ ಮತ್ತು ಮೀಸಲಾತಿಯನ್ನು ಅಳವಡಿಸಿಕೊಳ್ಳಲಾಗಿದೆ.
ಮೀಸಲಾತಿ ಎಷ್ಟು ವರ್ಷಕ್ಕೆಂದು ಎಲ್ಲಿ ನಮೂದಿಸಲಾಗಿದೆ?
ಸಂವಿಧಾನದಲ್ಲಿ ಮೀಸಲಾತಿಯು ಇಷ್ಟು ವರ್ಷಕ್ಕೆಂದು ಎರಡು ಕಡೆ ನಮೂದಿಸಲಾಗಿದೆ, ಅನುಚ್ಛೇದ 330, 331, 332, 333- ಆಂಗ್ಲೋ ಇಂಡಿಯನ್ಸ್‌ಗಳಿಗೆ ಪಾರ್ಲಿಮೆಂಟ್ ಮತ್ತು ವಿಧಾನ ಸಭೆಗಳಲ್ಲಿ ರಾಜಕೀಯ ಪ್ರಾತಿನಿಧ್ಯವು ಸಂವಿಧಾನ ಜಾರಿಗೆಯಾದ 60 ವರ್ಷಗಳವರೆಗೆ ನಿಗದಿಪಡಿಸಲಾಗಿದೆ. ಹಾಗೆಯೆ, ಅನುಚ್ಛೇದ 336ರಲ್ಲಿ ಕೆಲವು ಸೇವೆಗಳಲ್ಲಿ ಆಂಗ್ಲೋ-ಇಂಡಿಯನ್‌ಗಳಿಗೆ ರೈಲ್ವೆ, ಕಸ್ಟಮ್ಸ್, ಅಂಚೆ, ತಂತಿ, ಸೇವೆಗಳ ಹುದ್ದೆಗಳಿಗೆ ಮೀಸಲಿಟ್ಟ ಹುದ್ದೆಗಳು ಪ್ರತಿ ಎರಡು ವರ್ಷಗಳಿಗೆ ಶೇ. 10 ಕಡಿಮೆಯಾಗಬೇಕು. ಆದರೆ ಈ ಸಂವಿಧಾನ ಪ್ರಾರಂಭವಾದಾಗಿನಿಂದ ಹತ್ತು ವರ್ಷಗಳ ಕೊನೆಯಲ್ಲಿ ಈ ಎಲ್ಲಾ ಮೀಸಲಾತಿಗಳು ನಿಂತು ಹೋಗತಕ್ಕದು. ಹಾಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮತ್ತು ಮಹಿಳೆಯರಿಗೆ ಸಂವಿಧಾನದಲ್ಲಿ ನೀಡಿದ ಮೀಸಲಾತಿಯು ಸಮಯ ನಿರ್ಧರಿತವಾಗಿದ್ದಲ್ಲ ಮತ್ತು ಹತ್ತು ವರ್ಷಗಳವರೆಗೆಂದು ಎಲ್ಲಿಯೂ ನಮೂದಿಸಿರುವುದಿಲ್ಲ.


2018ನೇ ಸಾಲಿನ ಯಂಗ್ ಇಂಡಿಯಾ ವರದಿಯ ಪ್ರಕಾರ ವಿವಿಧ ಜಾತಿ/ವರ್ಗಗಳ ಜನರು ಪಡೆದುಕೊಂಡಿರುವ ಹುದ್ದೆಗಳು
♦ರಾಷ್ಟ್ರಪತಿ ಕಾರ್ಯಾಲಯದ 49 ಹುದ್ದೆಗಳಲ್ಲಿ, ಬ್ರಾಹ್ಮಣರು 39, ಎಸ್ಸಿ/ಎಸ್ಟಿ 4 ಹಾಗೂ ಒಬಿಸಿ 6 ಹುದ್ದೆಗಳನ್ನು ಪಡೆದುಕೊಂಡಿದ್ದಾರೆ.
♦ ಉಪರಾಷ್ಟ್ರಪತಿ ಕಾರ್ಯಾಲಯದ ಎಲ್ಲ 7 ಹುದ್ದೆಗಳನ್ನು ಬ್ರಾಹ್ಮಣರೇ ಪಡೆದುಕೊಂಡಿದ್ದಾರೆ.
♦ಪ್ರಧಾನಿ ಕಚೇರಿಯ 35 ಹುದ್ದೆಗಳಲ್ಲಿ, ಬ್ರಾಹ್ಮಣರು 31, ಎಸ್ಸಿ/ಎಸ್ಟಿ 2 ಮತ್ತು ಒಬಿಸಿ 2 ಹುದ್ದೆಗಳನ್ನು ಪಡೆದುಕೊಂಡಿದ್ದಾರೆ.
♦ಕ್ಯಾಬಿನೆಟ್ ಕಾರ್ಯದರ್ಶಿಯ 20 ಹುದ್ದೆಗಳಲ್ಲಿ, ಬ್ರಾಹ್ಮಣರು 17, ಎಸ್/ಎಸ್ಟಿ 1 ಮತ್ತು ಒಬಿಸಿ-2 ಹುದ್ದೆಗಳನ್ನು ಪಡೆದುಕೊಂಡಿದ್ದಾರೆ.
♦ರಕ್ಷಣಾ ಸಚಿವಾಲಯದ 1,379 ಹುದ್ದೆಗಳಲ್ಲಿ, ಬ್ರಾಹ್ಮಣರು-1300, ಎಸ್ಸಿ/ಎಸ್ಟಿ-2 ಮತ್ತು ಒಬಿಸಿ-2 ಹುದ್ದೆಗಳನ್ನು ಪಡೆದುಕೊಂಡಿದ್ದಾರೆ.
♦ ಸಮಾಜ ಕಲ್ಯಾಣ ಮತ್ತು ಆರೋಗ್ಯ ಸಚಿವಾಲಯದ 209 ಹುದ್ದೆಗಳಲ್ಲಿ, ಬ್ರಾಹ್ಮಣರು 132, ಎಸ್ಸಿ/ಎಸ್ಟಿ 17 ಹಾಗೂ ಒಬಿಸಿ 60 ಹುದ್ದೆಗಳನ್ನು ಪಡೆದುಕೊಂಡಿದ್ದಾರೆ.
♦ ಹಣಕಾಸು ಸಚಿವಾಲಯ 1,008 ಹುದ್ದೆಗಳಲ್ಲಿ, ಬ್ರಾಹ್ಮಣರು-942, ಎಸ್ಸಿ/ಎಸ್ಟಿ-20, ಮತ್ತು ಒಬಿಸಿ-46 ಹುದ್ದೆಗಳನ್ನು ಪಡೆದುಕೊಂಡಿದ್ದಾರೆ.
♦ ದೇಶವಿದೇಶಗಳಲ್ಲಿ ರಾಯಭಾರಿಗಳ ಎಲ್ಲ 140 ಹುದ್ದೆಗಳು ಬ್ರಾಹ್ಮಣರೇ ಪಡೆದುಕೊಂಡಿದ್ದಾರೆ.
♦ ಕೇಂದ್ರ ಸರಕಾರದ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ 108 ಹುದ್ದೆಗಳಲ್ಲಿ, ಬ್ರಾಹ್ಮಣರು-100 ಎಸ್ಸಿ/ಎಸ್ಟಿ-3, ಹಾಗೂ ಒಬಿಸಿ-2 ಹುದ್ದೆಗಳನ್ನು ಪಡೆದುಕೊಂಡಿದ್ದಾರೆ.
♦ ಹೈಕೋರ್ಟ್ ನ್ಯಾಯಾಧೀಶರ 330 ಹುದ್ದೆಗಳಲ್ಲಿ, ಬ್ರಾಹ್ಮಣರು-306, ಎಸ್ಸಿ/ಎಸ್ಟಿ-4 ಮತ್ತು ಒಬಿಸಿ-20 ಹುದ್ದೆಗಳನ್ನು ಪಡೆದುಕೊಂಡಿದ್ದಾರೆ.
♦ ಸುಪ್ರೀಂ ಕೋರ್ಟ್ ನ್ಯಾಯಾಧೀಶರ 23 ಹುದ್ದೆಗಳಲ್ಲಿ, ಬ್ರಾಹ್ಮಣರು 20, ಎಸ್ಸಿ/ಎಸ್ಟಿ 1 ಮತ್ತು ಒಬಿಸಿ 2 ಹುದ್ದೆಗಳನ್ನು ಪಡೆದುಕೊಂಡಿದ್ದಾರೆ.
♦ ಕೇಂದ್ರ ವಿಶ್ವವಿದ್ಯಾನಿಲಯಗಳು ಮತ್ತು ರಾಷ್ಟ್ರೀಯ ಸಂಸ್ಥೆಗಳ ಕುರಿತಾದ ಉನ್ನತ ಶಿಕ್ಷಣದ ಎಐಎಸ್‌ಎಚ್‌ಇ ವರದಿಯ ಪ್ರಕಾರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಸ್ಸಿ ಶೇ. 11, ಎಸ್ಟಿ ಶೇ. 4, ಮುಸ್ಲಿಂ ಶೇ. 2, ಒಬಿಸಿ ಹಿಂದೂ ಶೇ.15, ಹಿಂದೂ ಉನ್ನತ ಜಾತಿ ಶೇ. 67, ಇತರ ಅಲ್ಪಸಂಖ್ಯಾತರು ಶೇ. 1ಹುದ್ದೆಗಳನ್ನು ಪಡೆದುಕೊಂಡಿದ್ದಾರೆ.
♦ ಮಾಧ್ಯಮದ 300 ಹಿರಿಯ ವರದಿಗಾರರಲ್ಲಿ, ಶೇ. 71 ಮೇಲ್ವರ್ಗ ದವರು ಮತ್ತು ಶೇ. 4 ಹಿಂದುಳಿದ ವರ್ಗಗಳ ಜನ ಕಾರ್ಯನಿರ್ವಹಿಸುತ್ತಿದ್ದಾರೆ.
ಮೇಲಿನ ಅಂಕಿ ಅಂಶಗಳ ಪ್ರಕಾರ ಕಳೆದ 65 ವರ್ಷಗಳಲ್ಲಿ ಶೇ. 10-12 ಜನಸಂಖ್ಯೆ ಹೊಂದಿದ ವರ್ಗ ಶೇ. 75-80ರಷ್ಟು ಹುದ್ದೆಗಳನ್ನು ಪಡೆದುಕೊಂಡಿದ್ದಾರೆ
ಪಾರ್ಲಿಮೆಂಟ್‌ನ ಸಚಿವರಾದ ನಾರಾಯಣಸ್ವಾಮಿಯವರು ನೀಡಿದ ಅಂಕಿಅಂಶಗಳ ಪ್ರಕ್ರಾರ ಜಾತಿ ಮತ್ತು ವರ್ಗಗಳ ಸಂಖ್ಯೆಗೆ ಅನುಗುಣವಾಗಿ ಕಳೆದ 65 ವರ್ಷಗಳಲ್ಲಿ ಹುದ್ದೆಗಳು ದೊರೆಯಬೇಕಾಗಿದ್ದು ಹಾಗೂ ದೊರೆತಿರುವ ಪ್ರತಿಶತ.

ಭಾರತದಲ್ಲಿ ಪೂರ್ಣಪ್ರಮಾಣದ ಮೀಸಲಾತಿಯು ಜಾರಿಯಾಗಿಯೇ ಇಲ್ಲ. ಕೇವಲ ಶೇ. 10ರಷ್ಟು ಮೀಸಲಾತಿ ಪಡೆದ ಕೆಳವರ್ಗಗಳ ಬೆಳವಣಿಗೆಯನ್ನು ಕಂಡು ಮೇಲ್ವರ್ಗದವರು ಸಹಿಸಲಾಗದೆ ಅವರ ಅವಕಾಶಗಳು ಕಸಿದು ಕೊಳ್ಳಲಾಗುತ್ತಿದೆ ಎಂಬ ಅಸಮಾನತೆಯ, ಅಸಹಿಷ್ಣುತೆಯ ಕೂಗುಗಳು ಕೇಳಿ ಬರುತ್ತಿವೆ.
ಸಲಹೆಗಳು:
♦ ಭಾರತಕ್ಕೆ ಬೇಕಾಗಿರುವುದು, ಉನ್ನತ ಗುಣಮಟ್ಟದ ವಿದ್ಯಾಭ್ಯಾಸ ಮತ್ತು ಏಕರೂಪ ಶಿಕ್ಷಣ ವ್ಯವಸ್ಥೆ.
♦ಶಿಕ್ಷಣ, ಮತ್ತು ಉದ್ಯೋಗದಲ್ಲಿ ಗಣನೀಯವಾದ ಸಮಾನ ಅವಕಾಶ: ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ.
♦ಉದ್ಯೋಗ; ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ-ಎಲ್ಲಾ ಬ್ಯಾಕ್‌ಲಾಗ್ ಹುದ್ದೆಗಳ ತ್ವರಿತ ಭರ್ತಿ.

♦ರಾಜಕೀಯ ಮತ್ತು ಆಡಳಿತಾತ್ಮಕ ಶಕ್ತಿಯನ್ನು ಪಡೆದುಕೊಳ್ಳುವುದು. ನಿಜವಾದ ಅರ್ಥದಲ್ಲಿ ಸಾಮಾಜಿಕ ಸಮಾನತೆ ತರುವಲ್ಲಿ ಮೀಸಲಾತಿ ಒಂದು ಸಾಧನ ಹಾಗೂ ಮೀಸಲಾತಿಯು ಜಾತಿ ನಿರ್ಮೂಲನೆಯ ಸಾಧನವೂ ಹೌದು. ಈ ದೇಶದಲ್ಲಿ ಮೀಸಲಾತಿಯೂ ಯಾವಾಗ ಕೊನೆಯಾಗುತ್ತೆ ಎನ್ನುವ ಪ್ರಶ್ನೆಗಳು ಮೇಲಿಂದ ಮೇಲೆ ಏಳುತ್ತಲೇ ಇರುತ್ತವೆ. ಕೇಳುವ ಎಲ್ಲಾ ಮನಸ್ಸುಗಳಿಗೆ ಹೇಳುವುದೊಂದೇ, ಯಾವಾಗ ಜಾತಿಗಳ ಮಧ್ಯೆ ಅಸಮಾನತೆ ಕೊನೆಯಾಗುತ್ತೋ, ಯಾವಾಗ ಅವಕಾಶಗಳ ದೊರೆಯುವಿಕೆಯಲ್ಲಿ ಅಸಮಾನತೆ ಕೊನೆಯಾಗುತ್ತೋ ಆವಾಗ ಈ ದೇಶದಲ್ಲಿ ಮೀಸಲಾತಿಯೂ ಕೊನೆಯಾಗುವುದು. ಹಾಗಾಗಿ ಕುಟುಂಬ ಮತ್ತು ಸಮುದಾಯದ ಸದಸ್ಯರಲ್ಲಿ ಅರಿವು ಮೂಡಿಸುವುದು, ವಿದ್ಯಾರ್ಥಿಗಳು ಸ್ವಾಭಿಮಾನಿಗಳಾಗಿ ಶಿಕ್ಷಣ, ಹೋರಾಟ ಮತ್ತು ಸಂಘಟನೆಯನ್ನು ಕೈಗೊಂಡು, ಉದ್ಯೋಗವಂತರು ಸಮುದಾಯದ ಪ್ರತಿನಿಧಿಗಳಾಗಿ ಜವಾಬ್ದಾರಿಯನ್ನು ಹೊತ್ತು, ಎಲ್ಲರೂ ರಾಜಕೀಯ ಜ್ಞಾನ ಬೆಳೆಸಿಕೊಳ್ಳಬೇಕಾಗಿದೆ. ಮೀಸಲಾತಿಗೆ ಮತ್ತು ಪ್ರಾತಿನಿಧ್ಯಕ್ಕೆ ಪೂರಕವಾದ ಪಾಲಿಸಿಗಳನ್ನು ರೂಪಿಸಬೇಕಾಗಿದೆ.

 

Writer - ಡಾ. ಜಗನ್ನಾಥ ಕೆ. ಡಾಂಗೆ

contributor

Editor - ಡಾ. ಜಗನ್ನಾಥ ಕೆ. ಡಾಂಗೆ

contributor

Similar News

ಜಗದಗಲ
ಜಗ ದಗಲ