ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿರುವ ಭಾರತ

Update: 2018-10-24 18:44 GMT

ಚೀನಾವು ಮಾಲಿನ್ಯ ಕಡಿಮೆಗೊಳಿಸಲು ನೆರವಾದ ಸಂಘಟಿತ ರಾಷ್ಟ್ರೀಯ ದೃಷ್ಟಿಕೋನವನ್ನು ರೂಪಿಸಲು ಭಾರತ ದೀರ್ಘ ಕಾಲದಿಂದ ಶ್ರಮಿಸುತ್ತಿದೆ. ಪ್ರಧಾನಿ ಮೋದಿ ಸರಕಾರವು ಈಗ ಕೆಲವೊಂದು ಹೊಸ ಅಭಿಯಾನಗಳನ್ನು ನಡೆಸುತ್ತಿದ್ದು ಇದರಿಂದ ವಾಯು ಮಾಲಿನ್ಯ ಮಟ್ಟವು ಕಡಿಮೆಯಾಗುತ್ತಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಯಾವುದೇ ಲಾಭವು, ಸಾವಿರಾರು ಹೊಸ ಕಟ್ಟಡ ನಿರ್ಮಾಣ ಕಾರ್ಯಗಳು ಮತ್ತು ಲಕ್ಷಾಂತರ ಹೊಸ ಕಾರುಗಳು ಉಗುಳುವ ಹೊಗೆ ಸೇರಿದಂತೆ ಭಾರತದ ಕ್ಷಿಪ್ರ ಬೆಳವಣಿಗೆಯ ಇತರ ಪರಿಣಾಮಗಳನ್ನು ರಿದೂಗಿಸಲು ಸಾಕಾಗುವಷ್ಟಿರಬೇಕಿದೆ.

ಶ್ಯಾದ ಅತ್ಯಂತ ದೊಡ್ಡ ಆರ್ಥಿಕತೆಯಾಗಿರುವ ಚೀನಾ ಒಂದು ಕಾಲದಲ್ಲಿ ಹೊಗೆಯುಕ್ತ ಆಕಾಶದ ಸಮಸ್ಯೆಯಿಂದ ಬಳಲುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದರ ನೆರೆ ರಾಷ್ಟ್ರ ಭಾರತ ಮಾಲಿನ್ಯದ ವಿರುದ್ಧ ಅತೀದೊಡ್ಡ ಹೋರಾಟವನು್ನ ನಡೆಸುತ್ತಿದೆ.

ಭಾರತದ ರಾಜಧಾನಿ ಹೊಸದಿಲ್ಲಿಯ ಹೊರಗೆ ಕುಸುಮ್ ಮಲಿಕ್ ತೋಮರ್‌ಗೆ ಜಗತ್ತಿನ ಅತ್ಯಂತ ವಿಷಕಾರಿ ಗಾಳಿಯನ್ನು ಉಸಿರಾಡಿರುವುದಕ್ಕೆ ತೆರ ಬೇಕಾದ ವೈಯಕ್ತಿಕ ಮತ್ತು ಆರ್ಥಿಕ ಬೆಲೆಯ ಬಗ್ಗೆ ತಿಳಿದಿದೆ. ತನ್ನ ಶ್ವಾಸಕೋಶದೊಳಗೆ ಬೆಳೆಯುತ್ತಿರುವ ಕ್ಯಾನ್ಸರ್‌ಗೆ ಮುಖ್ಯ ಕಾರಣ ಮಾಲಿನ್ಯ ಎಂಬುದು ಆಕೆಗೆ 29ರ ಹರೆಯದಲ್ಲೇ ತಿಳಿದಿತ್ತು. ಆಕೆ ತನ್ನ ಜೀವನದಲ್ಲಿ ಎಂದೂ ಸಿಗರೆಟ್ ಮುಟ್ಟಿದವರಲ್ಲ. ಆಕೆಯ ಚಿಕಿತ್ಸೆಗಾಗಿ ಆಕೆಯ ಪತಿ ತನ್ನ ಜಮೀನನ್ನು ಮಾರಿದರು. ಕುಟುಂಬಸ್ಥರಲ್ಲಿ ಹಣ ಸಾಲ ಪಡೆದರು. ಅವ ಉಳಿತಾಯ ನಿಧಾನವಾಗಿ ಮಾಯವಾಗಿತ್ತು.
‘‘ಸರಕಾರವು ಆರ್ಥಿಕ ಬೆಳವಣಿಗೆ ಬಗ್ಗೆ ಚಿಂತಿಸುತ್ತಿದೆ. ಆದರೆ ಜನರು ರೋಗಗಳಿಂದ ಸಾಯುತ್ತಿದ್ದಾರೆ ಅಥವಾ ನರಳುತ್ತಿದ್ದಾರೆ’’ ಎಂದು ಹೇಳುತ್ತಾರೆ ತೋಮರ್. ‘‘ದೇಶದೊಳಗೆ ಜನರು ವಾಯು ಮಾಲಿನ್ಯದ ಕಾರಣ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ನೀವು ಆರ್ಥಿಕವಾಗಿ ಬೆಳೆಯಲು ಹೇಗೆ ಸಾಧ್ಯ?’’ ಎಂದು ಆಕೆ ಪ್ರಶ್ನಿಸುತ್ತಾರೆ.
ಚೀನಾವು ಮಾಲಿನ್ಯ ಕಡಿಮೆಗೊಳಿಸಲು ನೆರವಾದ ಸಂಘಟಿತ ರಾಷ್ಟ್ರೀಯ ದೃಷ್ಟಿಕೋನವನ್ನು ರೂಪಿಸಲು ಭಾರತ ದೀರ್ಘ ಕಾಲದಿಂದ ಶ್ರಮಿಸುತ್ತಿದೆ. ಪ್ರಧಾನಿ ಮೋದಿ ಸರಕಾರವು ಈಗ ಕೆಲವೊಂದು ಹೊಸ ಅಭಿಯಾನಗಳನ್ನು ನಡೆಸುತ್ತಿದ್ದು ಇದರಿಂದ ವಾಯು ಮಾಲಿನ್ಯ ಮಟ್ಟವು ಕಡಿಮೆಯಾಗುತ್ತಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಯಾವುದೇ ಲಾಭವು, ಸಾವಿರಾರು ಹೊಸ ಕಟ್ಟಡ ನಿರ್ಮಾಣ ಕಾರ್ಯಗಳು ಮತ್ತು ಲಕ್ಷಾಂತರ ಹೊಸ ಕಾರುಗಳು ಉಗುಳುವ ಹೊಗೆ ಸೇರಿದಂತೆ ಭಾರತದ ಕ್ಷಿಪ್ರ ಬೆಳವಣಿಗೆಯ ಇತರ ಪರಿಣಾಮಗಳನ್ನು ರಿದೂಗಿಸಲು ಸಾಕಾಗುವಷ್ಟಿರಬೇಕಿದೆ.
ಮುಂದಿನ ವಾರಗಳಲ್ಲಿ ಉತ್ತರ ಭಾರತದ ಧೂಳಿನಿಂದ ಕೂಡಿದ ಪ್ರದೇಶಗಳಲ್ಲಿ ಚಳಿಗಾಲದ ಆಗಮನದ ಮೂಲಕ ಮೋದಿ ಸರಕಾರದ ಮಾಲಿನ್ಯ ಕುರಿತ ನೀತಿಗಳನ್ನು ಪರೀಕ್ಷೆಗೆ ಹಚ್ಚಲಾಗುತ್ತದೆ. ಈ ಸಮಯದಲ್ಲಿ ಬೆಳೆಗಳನ್ನು ಸುಡಲಾಗುತ್ತದೆ ಮತ್ತು ದೀಪಾವಳಿ ಹಬ್ಬದಂದು ಲಕ್ಷಾಂತರ ಪ್ರಮಾಣದಲ್ಲಿ ಪಟಾಕಿಗಳನ್ನು ಸುಡಲಾಗುತ್ತದೆ. ಇದರಿಂದ ವಾಯು ಮಾಲಿ್ಯ ಅಪಾಯಕಾರಿ ಮಟ್ಟಕ್ಕೆ ತಲುಪಲಿದೆ.
ಹಿಮಹೊಗೆಯ ವಿರುದ್ಧ ಹೋರಾಡಲು ಕಠಿಣ ನೀತಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದರೆ ಭಾರತದ ಪ್ರಜೆಗಳು ಮತ್ತು ಸರಕಾರ ಹೆಚ್ಚು ಶ್ರೀಮಂತರಾಗಬಹುದು. ವಿಶ್ವಬ್ಯಾಂಕ್ ಲೆಕ್ಕಾಚಾರದ ಪ್ರಕಾರ, ಮಾಲಿನ್ಯದ ಪರಿಣಾಮ ಆರೋಗ್ಯ ಸೇವಾ ಶುಲ್ಕ ಮತ್ತು ಉತ್ಪಾದನಾ ನಷ್ಟದ ಕಾರಣ ಭಾರತ ಜಿಡಿಪಿಯ ಶೇ.8.5 ನಷ್ಟ ಅನುಭವಿಸುತ್ತಿದೆ. ಈ ನಷ್ಟವು ಪ್ರಸಕ್ತ 2.6 ಟ್ರಿಲಿಯನ್ ಡಾಲರ್ ಗಾತ್ರದ ಆರ್ಥಿಕತೆಯಲ್ಲಿ 221 ಬಿಲಿಯನ್ ಡಾಲರ್ ಆಗಿದೆ.
ಪ್ರಸಕ್ತ ಭಾರತವು ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾದರೂ ಚೀನಾದ 12.2 ಟ್ರಿಲಿಯನ್ ಡಾಲರ್ ಆರ್ಥಿಕತೆ ಅದಕ್ಕಿಂತ ಐದು ಪಟ್ಟು ಹೆಚ್ಚಿದೆ. ದಕ್ಷಿಣ ಏಶ್ಯಾದ ದೇಶವು ತನ್ನ ಮೂಲಭೂತ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಅವಿರತವಾಗಿ ಪ್ರಯತ್ನಿಸುತ್ತಿದ್ದು ಇದರಿಂದ ಮಾಲಿನ್ಯ ಇನ್ನಷ್ಟು ಹೆಚ್ಚಾಗಲಿದೆ ಎಂದು ಆಸ್ಟ್ರೇಲಿಯದ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಉಪನ್ಯಾಸಕ ರಘುಬೇಂದ್ರ ಝಾ ಎಚ್ಚರಿಸಿದ್ದಾರೆ.
ಭಾರತದಲ್ಲಿ ಸ್ವಚ್ಛ ಆರ್ಥಿಕ ಬೆಳವಣಿಗೆಯತ್ತ ಪರಿವರ್ತನೆಯು ನಯವಾಗಿ ಆಗಲಿದೆ ಎಂದು ಯೋಚಿಸುವುದು ಬಹಳ ಸರಳವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
1988ರಲ್ಲಿ ದಿಲ್ಲಿಯ ಸರ್ ಗಂಗಾರಾಮ ಆಸ್ಪತ್ರೆಯಲ್ಲಿ ಶ್ವಾಸಕೋಶ ಶಸ್ತ್ರಚಿಕಿತ್ಸಕರಾಗಿ ಅರವಿಂದ್ ಕುಮಾರ್ ತನ್ನ ವೃತ್ತಿಜೀವನ ಆರಂಭಿಸಿದಾಗ ಶೇ.90 ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಗಳು ಮಧ್ಯ ವಯಸ್ಕ ಧೂಮಪಾನಿಗಳಾಗಿರುತ್ತಿದ್ದರು. ಈಗ ಶೇ.60 ರೋಗಿಗಳು ಧೂಮಪಾನ ಮಾಡದವರಾಗಿದ್ದಾರೆ. ಅದರಲ್ಲೂ ಅರ್ಧದಷ್ಟು ಮಹಿಳೆಯರಾಗಿರುತಾ್ತರೆ ಎಂದು ಕುಮಾರ್ ಹೇಳುತ್ತಾರೆ.
ಲಾಭರಹಿತ ಸಂಸ್ಥೆ ಆರೋಗ್ಯ ಪರಿಣಾಮಗಳು ಸಂಸ್ಥೆಯ ಪ್ರಕಾರ, ಸಣ್ಣ ಧೂಳಿನ ಕಣಗಳು ಅಸ್ತಮಾದಿಂದ ಹೃದ್ರೋಗ ಮತ್ತು ಶ್ವಾಸಕೋಶದ ಕ್ಯಾನ್ಸರ್‌ವರೆಗಿನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಇದರಿಂದಾಗಿ ಭಾರತದಲ್ಲಿ 2015ರಲ್ಲಿ 1.1 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ.


ಇದೇ ವೇಳೆ, ಜಾಗತಿಕ ಆರ್ಥಿಕತೆಯನ್ನು ಮರುರೂಪಿಸಿದ ಎರಡು ದಶಕಗಳ ವಿಸ್ತರಣೆಯ ನಂತರ ಚೀನಾ ಇದೀಗ ಕಡಿಮೆ ಮಾಲಿನ್ಯಗೊಳಿಸುವ ಸೇವೆಗಳು ಮತ್ತು ಬಳಕೆಯತ್ತ ವರ್ಗಾವಣೆಗೊಂಡಿದೆ. ಹಾಗಾಗಿ ಚೀನಾದ ನಗರಗಳು ಈಗಲೂ ಹಿಮಹೊಗೆಯ ದಿನಗಳನ್ನು ಕಂಡರೂ ಅವುಗಳ ಸ್ಥಿತಿಯಲ್ಲಿ ಸುಧಾರಣೆಯಾಗಿವೆ.
ವಾಯು ಗುಣಮಟ್ಟವನ್ನು ಪರಿಶೀಲಿಸುವ ಏರ್‌ವಿಶುವಲ್ ನಡೆಸಿದ ವಾಯು ಗುಣಮಟ್ಟದ ಅಂಕಿಅಂಶಗಳ ಪರಿಶೀಲನೆಯ ಪ್ರಕಾರ ಗಾಳಿಯಲ್ಲಿ ಅಪಾಯಕಾರಿ ಕಣಗಳು ಎಂದು ಕರೆಯಲಾಗುವ ಪಿಎಂ 2.5 ಮಟ್ಟ 200 ದಾಟಿದ ಅತ್ಯಂತ ಅನಾರೋಗ್ಯಕರ ದಿನಗಳು ಎಂದು ಪರಿಗಣಿಸಲ್ಪಡುವ ದಿನಗಳ ಸಂಖ್ಯೆ ಹೊಸದಿಲ್ಲಿ 2015ರಲ್ಲಿ 66ರಿಂದ 2017ರ ವೇಳೆಗೆ 84ಕ್ಕೆ ಏರಿತ್ತು. ಇದೇ ಅವಧಿಯಲ್ಲಿ ಬೀಜಿಂಗ್‌ನಲ್ಲಿ ಈ ದಿನಗಳ ಸಂಖ್ಯೆಯು 43ರಿಂದ 20ಕ್ಕೆ ಕುಸಿದಿತ್ತು.
ಶಿಕಾಗೊ ವಿಶ್ವವಿದ್ಯಾನಿಲಯದ ಇಂಧನ ನೀತಿ ಸಂಸ್ಥೆಯ ನಿರ್ದೇಶಕ ಮೈಕಲ್ ಗ್ರೀನ್‌ಸ್ಟೋನ್ ತಿಳಿಸುವಂತೆ, ಚೀನಾದಲ್ಲಿ ನಡೆದಂತೆ ಭಾರತದ ಜನರು ವಾಯು ಮಾಲಿನ್ಯದಲ್ಲಿ ಸುಧಾರಣೆಯ ಕುರಿತು ನಿರಂತರವಾಗಿ ಆಗ್ರಹ ಮಾಡುತ್ತಿಲ್ಲ. ಇದಕ್ಕೆ ಒಂದು ಕಾರಣವೆಂದರೆ, ಭಾರತದಲ್ಲಿ ವಾಯು ಮಾಲಿನ್ಯದ ಕಾರಣ ಜನರು ನಡೆಸುತ್ತಿರುವ ಕುಂಠಿತ ಮತ್ತು ರೋಗಪೀಡಿತ ಜೀವನದ ಬಗ್ಗೆ ಇನ್ನೂ ಸಂಪೂರ್ಣವಾಗಿ ತಿಳುವಳಿಕೆ ಮೂಡಿಲ್ಲ.
ಕೆಲವು ಅಂತರ್‌ರಾಷ್ಟ್ರೀಯ ಅಧ್ಯಯನಗಳು ವಾಯು ಮಾಲಿನ್ಯಕ್ಕೆ ಮರಣ ದರದೊಂದಿಗೆ ಸಂಬಂಧ ಕಲ್ಪಿಸಿರುವುದು ಸರಿಯಲ್ಲ ಮತ್ತು ವಾಯು ಮಾಲಿನ್ಯದಿಂದ ಸಂಭವಿಸುವ ಸಾವುಗಳನ್ನು ಹೆಚ್ಚಿನ ತನಿಖೆಗೊಳಪಡಿಸಬೇಕು ಮತ್ತು ದೇಶೀಯ ಅಧ್ಯಯನಗಳನ್ನು ನಡೆಸಬೇಕು ಎಂು ಭಾರತ ಸರಕಾರ ಹೇಳಿಕೊಂಡಿದೆ.
ದೇಶದ ಪರಿಸರ ಸಚಿವಾಲಯ ತಾನು ಕೆಟ್ಟ ಗಾಳಿಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗುತ್ತಿರುವುದಾಗಿ ಹೇಳಿಕೊಂಡಿದೆ. ಸೆಪ್ಟಂಬರ್‌ನಲ್ಲಿ ದಿಲ್ಲಿಯಲ್ಲಿ ಪಿಎಂ2.5 ಪ್ರಮಾಣ ಇಳಿಕೆಯಾಗಿದೆ ಎಂದು ಹೇಳಲು ಅದು ತನ್ನದೇ ಲೆಕ್ಕಾಚಾರವನ್ನು ಮುಂದಿಡುತ್ತದೆ. ಮಾಲಿನ್ಯ ಏರಿಕೆಯಾಗುವ ಮೊದಲೇ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ನೆರವಾಗುವಂತೆ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಸಚಿವಾಲಯ ಪರಿಚಯಿಸಿದೆ ಮತ್ತು ಹೆಚ್ಚು ರಸ್ತೆ ಸ್ವಚ್ಛಗೊಳಿಸುವ ಯಂತ್ರಗಳು ಹಾಗೂ ಇತರ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ.
‘‘ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸರಕಾರ ಅರಿತಿದೆ’’ ಎಂದು ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. ‘‘ಎಲ್ಲವೂ ಸರಿಯಾಗಿದೆ, ನಾವೀಗ ಆರಾಮವಾಗಿರಬಹುದೆಂದು ನಾವು ಹೇಳುತ್ತಿಲ್ಲ. ನಾವು ಒಂದು ಕ್ಷಣವೂ ವಿರಮಿುತ್ತಿಲ್ಲ’’ ಎಂದು ಅವರು ತಿಳಿಸಿದ್ದಾರೆ.


ಸೌರ ವಿದ್ಯುತ್‌ಗೆ ಪ್ರೋತ್ಸಾಹ, ಸುಧಾರಿತ ಮಾಲಿನ್ಯ ಹೊರಸೂಸುವಿಕೆ ದರ್ಜೆ ಮತ್ತು ಮನೆಗಳಲ್ಲಿ ಅಡುಗೆಗಾಗಿ ಹಚ್ಚಲಾಗುವ ಬೆಂಕಿಯನ್ನು ಕಡಿಮೆಗೊಳಿಸಲು ಲಕ್ಷಾಂತರ ಕುಟುಂಬಗಳಿಗೆ ಅಡುಗೆ ಅನಿಲಗಳನ್ನು ವಿತರಿಸುವಂಥ ಅನೇಕ ಕ್ರಮಗಳನ್ನು ಮೋದಿ ಸರಕಾರ ತೆಗೆದುಕೊಂಡಿದೆ. ರೈತರು ಬೆಳೆಗಳನ್ನು ಸುಡುವ ಮೇಲೆಯೂ ಅಧಿಕಾರಿಗಳು ನಿಷೇಧ ಹೇರಿದ್ದಾರೆ. ಆದರೆ, ಇನ್ನಷ್ಟೇ ಅಧಿಕೃತವಾಗಿ ಚಾಲನೆ ದೊರೆಯಬೇಕಿರುವ ರಾಷ್ಟ್ರೀಯ ಸ್ವಚ್ಛ ಗಾಳಿ ಯೋಜನೆಯಿಂದ ಹೆಚ್ಚಿನ ಪ್ರಬಲ ಕ್ರಮಗಳಿಗೆ ಪರಿಸರತಜ್ಞರು ಕಾಯುತ್ತಿದ್ದಾರೆ.
‘‘ಈ ಹಂತದಲ್ಲಿ ಜಾರಿಗೆ ತರುವ ಯಾವುದೇ ಯೋಜನೆಗಳು ಮಾಲಿನ್ಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರಬೇಕು ಮತ್ತು ಸ್ಪಷ್ಟ ಅನುಸರಣಾ ತಂತ್ರವನ್ನು ಹೊಂದಿರಬೇಕು’’ ಎಂದು, 20 ವರ್ಷಗಳ ಮೊದಲೇ ವಾಯು ಮಾಲಿನ್ಯದ ಬಗ್ಗೆ ಎಚ್ಚರಿಸಿದ್ದ ಹೊಸದಿಲ್ಲಿಯ ವಿಜ್ಞಾನ ಮತ್ತು ಪರಿಸರ ಕೇಂದ್ರದ ಅನುಮಿತ ರಾಯ್‌ಚೌದರಿ ತಿಳಿಸುತ್ತಾರೆ.
ಇಲ್ಲಿರುವ ಬಹುದೊಡ್ಡ ಸವಾಲೆಂದರೆ, ಭಾರತದ ಗೊಂದಲಯುಕ್ತ ಪ್ರಜಾಪ್ರಭುತ್ವದಲ್ಲಿ ಬಡತನ ಮತ್ತು ನಿರುದ್ಯೋಗವನ್ನು ದೊಡ್ಡ ಸಮಸ್ಯೆಯಾಗಿ ಪರಿಗಣಿಸಲಾಗುತ್ತದೆ ಮತ್ತು ಪರಸ್ಪರ ವಿರೋಧಿ ರಾಜಕೀಯ ಪಕ್ಷಗಳು ಮುನ್ನಡೆಸುವ ಸರಕಾರದ ವಿವಿಧ ಅಂಗಗಳು ವಾಯು ಮಾಲಿನ್ಯದ ವಿಷಯದಲ್ಲಿ ಪರಸ್ಪರ ಕೈಜೋಡಿಸುವ ಸಾಧ್ಯತೆಗಳು ಕಡಿಮೆಯಿವೆ.

ಹೊಸದಿಲ್ಲಿಯಲ್ಲಿ ಸರಕಾರ ನಡೆಸುತ್ತಿರುವ ಆಮ್ ಆದ್ಮಿ ಪಕ್ಷದ ವಕ್ತಾರ ರಾಘವ್ ಚಡ್ಡಾ ತಿಳಿಸುವಂತೆ, ಮಾಲಿನ್ಯದ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಅವರ ಪಕ್ಷಕ್ಕೆ ಸೀಮಿತ ಅಧಿಕಾರವಿದೆ ಮತ್ತು ನಿರ್ಮಾಣ ಕಾರ್ಯಗಳ ಮೇಲೆ ತಾತ್ಕಾಲಿಕ ನಿಷೇಧವನ್ನು ಹೇರುವಂಥ ಸಣ್ಣ ಕ್ರಮಗಳನ್ನು ಮಾತ್ರ ಅದು ತೆಗೆದುಕೊಳ್ಳಬಹುದಾಗಿದೆ. ಸದ್ಯ ಅಗತ್ಯವಿರುವುದು ಕೇಂದ್ರ ಸರಕಾರದ ನೇತೃತ್ವದಲ್ಲಿ ಎಲ್ಲ ರಾಜ್ಯ ಸರಕಾರಗಳು ಸಮನ್ವಯ ಸಾಧಿಸುವುದು ಎಂದು ಅವರು ತಿಳಿಸುತ್ತಾರೆ. ಇದರ ಜೊತೆಗೆಯೇ ತನ್ನ ಪಕ್ಷಕ್ಕೆ ಮೋದಿ ಸರಕಾರದ ಜೊತೆ ತೀವ್ರ ಭಿನ್ನಾಭಿಪ್ರಾಯವಿದೆ ಎಂಬುದನ್ನೂ ಅವರು ಒಪ್ಪಿಕೊಳ್ಳುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ಚೀನಾದಲ್ಲಿ ಪ್ರಧಾನಿ ಲಿ ಕೆಖ್ಯಾಂಗ್ ಮಾಲಿನ್ಯದ ವಿರುದ್ಧ ರಾಷ್ಟ್ರೀಯ ಸಮರವನ್ನು ಸಾರಿದ್ದಾರೆ. ನಿಗದಿತ ವಾಯು ಗುಣಮಟ್ಟದ ಗುರಿಯನ್ನು ತಲುಪದಿದ್ದರೆ ಭಡ್ತಿ ನೀಡಲಾಗುವುದಿಲ್ಲ ಎಂದು ಕೇಂದ್ರ ಸರಕಾರ ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ ಮತ್ತು ದೇಶವು ಮಲಿನಕಾರಕ ಕೈಗಾರಿಕೆಗಳಿಂದ ದೂರ ಸರಿಯಲು ಮುಂದಾಗಿದೆ. ಸರಕಾರಿ ನೀತಿಗಳು ಲಕ್ಷಾಂತರ ಮನೆಗಳು ಮತ್ತು ಉದ್ದಿಮೆಗಳು ಕಲ್ಲಿದ್ದಲಿನಿಂದ ನೈಸರ್ಗಿಕ ಅನಿಲಕ್ಕೆ ಮೊರೆ ಹೋಗುವಂತೆ ಮಾಡಿದೆ.


ಕಳೆದ ವರ್ಷಕ್ಕೆ ಹೋಲಿಸಿದರೆ ಪಿಎಂ2.5 ಮಟ್ಟ ಬೀಜಿಂಗ್, ತಿಯಾಜಿಂಗ್ ಮತ್ತು 26 ಇತರ ಸುತ್ತಮುತ್ತಲ ನಗರಗಳಲ್ಲ್ಲಿ ಶೇ.33 ಕುಸಿತ ಕಂಡಿದೆ. ಅಮೆರಿಕ ಮತ್ತು ಭಾರತದಂಥ ಪ್ರಜಾಪ್ರಭುತ್ವಗಳಿಗೆ ಹೋಲಿಸಿದರೆ ಚೀನಾ ಅತ್ಯಂತ ವೇಗವಾಗಿ, ನಿರ್ಣಾಯಕವಾಗಿ ಮತ್ತು ಸಮರ್ಪಕವಾಗಿ ಸ್ಪಂದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಚೀನಾದಲ್ಲಿ ಮಾಲಿನ್ಯ ಕುರಿತ ಪುಸ್ತಕವನ್ನು ಬರೆದಿರುವ ಸ್ಮಿತ್ ಕಾಲೇಜಿನ ಇತಿಹಾಸ ಉಪನ್ಯಾಸ ಡೇನಿಯಲ್ ಗಾರ್ಡ್ನರ್ ತಿಳಿಸುತ್ತಾರೆ.
ಚೀನಾ ಈಗಲೂ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುತ್ತಿದೆ ಮತ್ತು ಅದು ಮಾಲಿನ್ಯದ ವಿರುದ್ಧ ನಡೆಸಿದ ಹೋರಾಟದಲ್ಲಿ ಅದರದೇ ಆದ ಸಮಸ್ಯೆಗಳೂ ಇದ್ದವು. ಕೆಲವು ಪ್ರಕರಣಗಳಲ್ಲಿ, ಚೀನಾವು ಪ್ರಮುಖ ನಗರಗಳಲ್ಲಿರುವ ಮಾಲಿನ್ಯಕಾರಕ ಕೈಗಾರಿಕೆಗಳನ್ನು ಮುಚ್ಚಿ ಅವುಗಳನ್ನು ಪಶ್ಚಿಮ ಪ್ರದೇಶಗಳಿಗೆ ಸ್ಥಳಾಂತರಿಸಿತು ಎಂದು ಅಂತರ್‌ರಾಷ್ಟ್ರೀಯ ಹವಾಮಾನ ಸಂಶೋಧನೆ ಕೇಂದ್ರದ ಸಂಶೋಧಕ ಕ್ರಿಸ್ಟೀನ್ ಔನನ್ ತಿಳಿಸುತ್ತಾರೆ. ನಂತರ ಚೀನಾ ಇನ್ನಷ್ಟು ಸುಧಾರಿತ ಯೋಜನೆಗಳನ್ನು ಜಾರಿಗೆ ತಂದು ಇತರ ನಗರಗಳಿಗೂ ಮಾಲಿನ್ಯ ಗುರಿಗಳನ್ನು ವಿಸ್ತರಿಸಿತು.
ಭಾರತದಲ್ಲಿ ಈಗಲೇ ಉದ್ದಿಮೆಗಳು ಪರಿಣಾಮಗಳನ್ನು ಎದುರಿಸುತ್ತಿವೆ. ಡಿಜಿಟಲ್ ಪಾವತಿ ಸಂಸ್ಥೆ ಪೇಟಿಎಂ ಸಂಸ್ಥಾಪಕ ಕೋಟ್ಯಧಿಪತಿ ಉದ್ಯಮಿ ವಿಜಯ್ ಶೇಖರ್ ಪ್ರತಿಭೆಗಳನ್ನು ಕಳೆದುೊಳ್ಳುವ ಚಿಂತೆಯನ್ನು ಹೊಂದಿದ್ದಾರೆ.
ಮಾಜಿ ಬ್ಯಾಂಕರ್ ಕೃಷ್ಣ ಹೆಗ್ಡೆ ಪೇಟಿಎಂಗಾಗಿ ಹೊಸ ಉತ್ಪನ್ನವನ್ನು ಅಭಿವೃದ್ಧಿಪಡಿಸಲು ತಮ್ಮ ನಿವಾಸವನ್ನು ಸಿಂಗಾಪುರದಿಂದ ಬೆಂಗಳೂರಿಗೆ ಸ್ಥಳಾಂತರಿಸಿದರು. ಆದರೆ ದಿಲ್ಲಿಯಲ್ಲಿರುವ ಸಂಸ್ಥೆಯ ಮುಖ್ಯ ಕಚೇರಿಗೆ ತಾನು ತೆರಳಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಸಂಸ್ಥೆಗೆ ರಾಜೀನಾಮೆ ನೀಡಿದ್ದಾಗಿ ಅವರು ತಿಳಿಸಿದ್ದರು. ಮೊದಲ ದಿನ ಕೊನೆಯಲ್ಲಿ ನನ್ನ ಶಕ್ತಿಯ ಮಟ್ಟ ಕುಸಿದಿರುತ್ತದೆ ಮತ್ತು ಎರಡನೇ ದಿನದಂತ್ಯಕ್ಕೆ ನನಗೆ ತಲೆನೋವು ಆರಂಭವಾಗುತ್ತದೆ ಎಂದು ಹೆಗ್ಡೆ ತಿಳಿಸಿದಾ್ದರೆ.
ಸದ್ಯ ಶರ್ಮಾ, ಹಿಮಹೊಗೆಯನ್ನು ಕಡಿಮೆಗೊಳಿಸಲು ನೆರವಾಗುವ ಸ್ಥಳೀಯ ಮತ್ತು ಜಾಗತಿಕ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಲು ಬಂಡವಾಳ ಹೂಡಿಕೆದಾರರ ಜೊತೆ ಕೈಜೋಡಿಸಿದ್ದಾರೆ. ಇತರ ಕಂಪೆನಿಗಳೂ ಇದೇ ಮಾದರಿಯ ಯೋಜನೆಗಳನ್ನು ರೂಪಿಸುತ್ತಿವೆ. ಟ್ರಾಕ್ಟರ್‌ಗಳನ್ನು ತಯಾರಿಸುವ ಸೊನಾಲಿಕಾ ಗ್ರೂಪ್, ರೈತರು ಬೆಳೆಗಳನ್ನು ಸುಡುವುದನ್ನು ತಡೆಯಲು ಪ್ರೋತ್ಸಾಹಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ ಯಂತ್ರಗಳನ್ನು ಹರ್ಯಾಣದ ರೈತರಿಗೆ ದೇಣಿಗೆ ನೀಡಿದೆ.
ಅತ್ತ ಹೊಸದಿಲ್ಲಿಯಲ್ಲಿ ಆರು ವರ್ಷಗಳ ಹಿಂದೆ ನಾಲ್ಕನೇ ಹಂತದ ಶ್ವಾಸಕೋಶದ ಕ್ಯಾನ್ಸರ್ ಲಕ್ಷಣಗಳು ಪತ್ತೆಯಾದ ತೋಮರ್ ಸದ್ಯ ಕೆಲಸ ಮಾಡಲು ಅಶಕ್ತರಾಗಿದ್ದಾರೆ. ತನ್ನ ಅಪಾರ್ಟ್‌ಮೆಂಟ್‌ನಲ್ಲಿ ವಿಶ್ರಾಂತಿ ಪಡೆಯುವುದು, ವೈದ್ಯಕೀಯ ಪರೀಕ್ಷೆಗಳು ಮತ್ತು ಕೀಮೊಥೆರಪಿಗಳ ಮಧ್ಯೆ ಆಕೆ ತನ್ನ ದಿನಚರಿಯನ್ನು ಮುಗಿಸುತ್ತಿದ್ದಾರೆ.
ನನ್ನ ಕುಟುಂಬವು ಮಾನಸಿಕ,ದೈಹಿಕ, ಭಾವನಾತ್ಮಕವಾಗಿ ನರಳುತ್ತಿರುವ ಜೊತೆಗೆ ಆರ್ಥಿಕವಾಗಿಯೂ ಸಂಕಷ್ಟ ಅನುಭವಿಸಬೇಕಿದೆ ಎಂಬುದನ್ನು ಯೋಚಿಸಿ ಕೆಲವೊಮ್ಮೆ ನಾನು ಕುಸಿದು ಹೋಗುತ್ತೇನೆ ಎಂದು ಆಕೆ ದುಃಖದಿಂದ ತಿಳಿಸುತ್ತಾರೆ.
ಕೃಪೆ: BLOOMBERG

Writer - ಇಯಾನ್ ಮಾರ್ಲೊ

contributor

Editor - ಇಯಾನ್ ಮಾರ್ಲೊ

contributor

Similar News

ಜಗದಗಲ
ಜಗ ದಗಲ