ಸೌದಿ ಅರೇಬಿಯಾದ ವಿವಿಧೆಡೆ ಮಳೆ
Update: 2018-10-31 10:26 GMT
ಜಿದ್ದಾ, ಅ. 31: ಮಳೆ ಅಪರೂಪದಲ್ಲೇ ಅಪರೂಪವಾಗಿರುವ ಸೌದಿ ಅರೇಬಿಯಾದ ಕೆಲವೆಡೆ ಕಳೆದ ರಾತ್ರಿ ಹಾಗು ಇಂದು ಮುಂಜಾನೆ ಸಾಧಾರಣವಾಗಿ ಮಳೆ ಸುರಿದು ತಂಪೆರೆಯಿತು.
ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣವಿತ್ತು. ಎರಡು ದಿನಗಳ ಹಿಂದೆ ಮಳೆ ಸಣ್ಣಗೆ ಹನಿದಿತ್ತು. ಆದರೆ ಕಳೆದ ರಾತ್ರಿ ಗುಡುಗು, ಮಿಂಚು ಕಾಣಿಸಿಕೊಂಡು ಸಾಧಾರಣವಾಗಿ ಮಳೆ ಸುರಿದಿದೆ. ಇಂದು ಪೂರ್ವಾಹ್ನ ಮತ್ತೆ ಆರಂಭವಾದ ಮಳೆ ಮಧ್ಯಾಹ್ನದವರೆಗೆ ಸುರಿಯುತ್ತಲ್ಲೇ ಇತ್ತು.
ರಸ್ತೆಯಲ್ಲೆಲ್ಲಾ ನೀರು ನಿಂತು ವಾಹನಗಳೆಲ್ಲ ಕೆಸರೆರಚುತ್ತಾ ಸಾಗುತ್ತಿರುವ ನೋಟ ಮುದ ನೀಡುತ್ತಿದ್ದವು. ಇದುವರೆಗೆ ಬಿಸಿಲಿನ ತೀವ್ರ ಬೇಗೆಯಿಂದ ಬೇಯುತ್ತಿರುವ ಜನರು ಮಳೆಯ ತಂಪಿನಿಂದ ಉಲ್ಲಾಸಿತರಾದರು. 2017ರ ಅಕ್ಟೋಬರ್ ತಿಂಗಳಲ್ಲೂ, ಬಳಿಕವೂ ಸೌದಿ ಅರೇಬಿಯಾದ ವಿವಿಧೆಡೆ ಮಳೆ ಸುರಿದಿತ್ತು.