ಹಂಗೇರಿ ಬಂಡಾಯ

Update: 2018-11-03 18:33 GMT

1921: ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನಿಂದ ‘ಕಂದು ಅಂಗಿ ದಳ’ ಸೈನ್ಯ ರಚನೆ.

1948: ಅಮೆರಿಕನ್ ಸಂಜಾತ ಬ್ರಿಟಿಷ್ ಲೇಖಕ, ಕವಿ, ವಿಮರ್ಶಕ ಟಿ.ಎಸ್.ಏಲಿಯಟ್‌ಗೆ ಸಾಹಿತ್ಯಕ್ಕಾಗಿ ನೊಬೆಲ್ ಪುರಸ್ಕಾರ ಸಂದಿತು.

1956: ಸೋವಿಯತ್ ಒಕ್ಕೂಟದ ಆಡಳಿತದ ವಿರುದ್ಧ ಪ್ರಧಾನಿ ಇಮ್ರೆ ನ್ಯಾಗಿ ನೇತೃತ್ವದಲ್ಲಿ ಹಂಗೇರಿಯನ್ನರು ಬಂಡಾಯವೆದ್ದಿದ್ದರು. ಈ ಸಂದರ್ಭ ಹಂಗೇರಿ ರಾಜಧಾನಿ ಬುಡಾಪೆಸ್ಟ್ ಮೇಲೆ ಸೋವಿಯತ್‌ನ ಸೈನ್ಯ ಬಾಂಬ್ ದಾಳಿ ನಡೆಸಲಾರಂಭಿಸಿತು. ಅಲ್ಲದೆ ಬಂಡಾಯವನ್ನು ಶಾಶ್ವತವಾಗಿ ಹತ್ತಿಕ್ಕಲು ಬುಡಾಪೆಸ್ಟ್ ನಗರದ ಹೊರಭಾಗದಲ್ಲಿ ಸುಮಾರು 1,000 ಯುದ್ಧ ಟ್ಯಾಂಕರ್‌ಗಳನ್ನು ಸಂಗ್ರಹಿಸಿಟ್ಟುಕೊಂಡಿತು. ಸೋವಿಯತ್ ಕೇವಲ ಒಂದು ತಿಂಗಳ ಅವಧಿಯಲ್ಲಿ ಸಂಪೂರ್ಣ ಬಂಡಾಯವನ್ನು ಹತ್ತಿಕ್ಕಿತು. ಸುಮಾರು 50,000 ಜನರು ಈ ಬಂಡಾಯದಲ್ಲಿ ಪ್ರಾಣ ಕಳೆದುಕೊಂಡರು.

1966: ಇಟಲಿಯ ಆರ್ನೊ ನದಿಯಿಂದ ಉಂಟಾದ ಪ್ರವಾಹದಲ್ಲಿ 113 ಜನ ಪ್ರಾಣ ಕಳೆದುಕೊಂಡರು. ಅಲ್ಲದೆ ಅಪಾರ ಅಮೂಲ್ಯ ಕಲಾಕೃತಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋದವು.

1970: ನೊಬೆಲ್ ಪ್ರಶಸ್ತಿ ಪುರಸ್ಕೃತ ರಶ್ಯನ್ ಭೌತಶಾಸ್ತ್ರಜ್ಞ, ಹೋರಾಟಗಾರ ಸಚಾರೋವ್ ಮಾನವ ಹಕ್ಕುಗಳ ಆಯೋಗವನ್ನು ರಚಿಸಿದರು.

1991: ಮಧ್ಯಪೂರ್ವ ರಾಷ್ಟ್ರಗಳ ಶಾಂತಿ ಸಮ್ಮೇಳನ ಸ್ಪೇನ್ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ಕೊನೆಗೊಂಡಿತು.

2015: ದಕ್ಷಿಣ ಸುಡಾನ್‌ನ ಜುಬಾ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ವಿಮಾನವು ಕೆಲವೇ ನಿಮಿಷಗಳ ನಂತರ ಪತನಗೊಂಡಿತು. ಈ ಸಂದರ್ಭದಲ್ಲಿ 37 ಜನ ಸಾವನ್ನಪ್ಪಿದರು. ಒಂದು ಮಗು ಮಾತ್ರ ತನ್ನ ತಂದೆಯ ಬಾಹುವಿನಲ್ಲಿ ಬಂದಿಯಾಗಿ ಬದುಕುಳಿದಿತ್ತು.

2016: ಹವಾಮಾನ ಬದಲಾವಣೆಯ ಕುರಿತ ಪ್ಯಾರಿಸ್ ಒಪ್ಪಂದ ಈ ದಿನ ಜಾರಿಗೆ ಬಂದಿತು.

1925: ಖ್ಯಾತ ಚಿತ್ರ ನಿರ್ದೇಶಕ ಬಂಗಾಳದ ಋತ್ವಿಕ್ ಘಟಕ್ ಜನ್ಮದಿನ ಇಂದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ