ಸುಪ್ರೀಂಕೋರ್ಟ್‌ನಲ್ಲಿ ಸಮಾಧಿಯಾಗುವ ಭ್ರಷ್ಟಾಚಾರ ಪ್ರಕರಣ
ಭ್ರಷ್ಟಾಚಾರಕ್ಕೆ ನ್ಯಾಯಾಂಗವನ್ನು ತಪ್ಪಿತಸ್ಥ ಎಂದು ತೀರ್ಪು ನೀಡುವುದು ಯಾರಿಗೂ ಸಾಧ್ಯವಿಲ್ಲ. ತನ್ನ ವಿರುದ್ಧದ ಆರೋಪಗಳ ತನಿಖೆ ನಡೆಸದಿರುವುದು ಅಲ್ಪಾವಧಿಗೆ ನ್ಯಾಯಾಂಗವನ್ನು ರಕ್ಷಿಸಬಹುದು. ಆದರೆ ಸಾರ್ವಜನಿಕರು ನ್ಯಾಯಾಂಗವನ್ನು ಭ್ರಷ್ಟ ಎಂದು ಭಾವಿಸುವುದು ಅದಕ್ಕಿಂತಲೂ ದೊಡ್ಡ ನಷ್ಟವಾಗಿದೆ.
ಒಂದು ಬೃಹತ್ ಭ್ರಷ್ಟಾಚಾರ ಹಗರಣವು ಭಾರತದ ಶ್ರೇಷ್ಠ ನ್ಯಾಯಾಲಯವನ್ನು ಬಾಧಿಸಿದಾಗ ಏನಾಗುತ್ತದೆ? ಆರಂಭದಲ್ಲಿ ಸ್ವಲ್ಪ ಸದ್ದಾಗಬಹುದು, ಆದರೆ ನಂತರ ಏನೂ ಆಗುವುದಿಲ್ಲ.
ಹೀಗೇ ಒಂದು ವರ್ಷದ ಹಿಂದೆ ನ್ಯಾಯಾಧೀಶ ಜೆ.ಚೆಲಮೇಶ್ವರ ನೇತೃತ್ವದ ಪೀಠವು ವೈದ್ಯಕೀಯ ಕಾಲೇಜು ಲಂಚ ಪ್ರಕರಣದ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಹಾಕಲಾಗಿದ್ದ ತುತರ್ು ಅರ್ಜಿಯ ವಿಚಾರಣೆ ನಡೆಸುತ್ತಿತ್ತು.
ನವೆಂಬರ್ 9,2017ರಂದು ನಡೆದ ಆ ವಿಚಾರಣೆಯು ಭಾರತದ ಸರ್ವೋಚ್ಚ ನ್ಯಾಯಾಲಯವನ್ನು ಅವ್ಯವಸ್ಥೆಗೆ ತಳ್ಳುವಂಥ ಘಟನೆಗಳ ಸರಣಿಯನ್ನು ಸೃಷ್ಟಿಸಿತ್ತು. ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರನ್ನು ಬಂಧಿಸುವುದ ರಿಂದ ಭಾರತದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾರನ್ನು ವಾಗ್ದಂಡನೆಗೊಳಪಡಿಸುವವರೆಗೆ, ಈ ಹಗರಣವು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಬೃಹತ್ ಅಲೆಯನ್ನೇ ಎಬ್ಬಿಸಿತ್ತು.
ಈ ಘಟನೆ ನಡೆದು ಒಂದು ವರ್ಷ ಕಳೆದರೂ ಉನ್ನತ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರದ ಆರೋಪದ ಬಗ್ಗೆ ತನಿಖೆಯೂ ನಡೆದಿಲ್ಲ. ದಿನಕಳೆದಂತೆ ಹೊಸ ಸುದ್ದಿಗಳ ಅಲೆಯಲ್ಲಿ ಈ ಭ್ರಷ್ಟಾಚಾರದ ನೆನಪು ಸಾರ್ವಜನಿಕರ ನೆನಪಿನಿಂದ ಮಾಸಿತು.
ವೈದ್ಯಕೀಯ ಕಾಲೇಜು ಪ್ರಕರಣ
ಸರ್ವೋಚ್ಚ ನ್ಯಾಯಾಲಯದಿಂದ ತನ್ನ ಪರ ಆದೇಶ ಬರುವಂತೆ ಮಾಡಲು ಒಡಿಶಾ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಐ.ಎಂ. ಖುದ್ದೂಸಿಗೆ ಲಕ್ನೋ ಮೂಲದ ವೈದ್ಯಕೀಯ ಕಾಲೇಜು ಪ್ರಸಾದ್ ಶಿಕ್ಷಣ ಸಂಸ್ಥೆ ಲಂಚ ನೀಡಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆ ಸಿಬಿಐ 2017ರ ಸೆಪ್ಟಂಬರ್‌ನಲ್ಲಿ ಎಫ್‌ಐಆರ್ ದಾಖಲಿಸಿತ್ತು.
ಕುದ್ದುಸಿ ಮತ್ತು ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯ ಮಧ್ಯೆ ನಡೆದ ದೂರವಾಣಿ ಸಂಭಾಷಣೆಯ ದಾಖಲೆಗಳನ್ನು ಸಿಬಿಐ ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದು ಅದರಲ್ಲಿ ‘‘ಪ್ರಸಾದವನ್ನು ದೇವಸ್ಥಾನಕ್ಕೆ ಒಪ್ಪಿಸುವಂತೆ’’ ಸೂಚಿಸಲಾಗಿತ್ತು.
ಪ್ರಸಾದ್ ಕಾಲೇಜು ಪ್ರಕರಣದ ವಿಚಾರಣೆಯನ್ನು ದೀಪಕ್ ಮಿಶ್ರಾ ನೇತೃತ್ವದ ಪೀಠ ನಡೆಸುತ್ತಿತ್ತು. ಈ ಪ್ರಕರಣದಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಮಿಶ್ರಾ ಹೆಸರು ಇಲ್ಲದಿದ್ದರೂ ಅಥವಾ ಈ ಪ್ರಕರಣದಲ್ಲಿ ಅವರ ಶಾಮೀಲಾತಿ ಬಗ್ಗೆ ಯಾವ ಉಲ್ಲೇಖವಿಲ್ಲದಿದ್ದರೂ ಮಿಶ್ರಾ ಈ ಪ್ರಕರಣವನ್ನು ಮುಚ್ಚಿಹಾಕಲು ಆತುರಪಡುವಂತಿತ್ತು. ಈ ಸಂದರ್ಭವನ್ನು ಶ್ರೇಷ್ಠ ನ್ಯಾಯಾಲಯದ ನಂ.2 ನ್ಯಾಯಾಧೀಶ ಚೆಲಮೇಶ್ವರ್, ಮಿಶ್ರಾ ವಿರುದ್ಧ ಸಮರ ಸಾರಲು ಅವಕಾಶವಾಗಿ ಬಳಸಿಕೊಂಡರು. ಆದರೆ ಮಾಜಿ ಸಿಜೆಐ ತಾನು ಪದವಿಯಲ್ಲಿ ಇರುವಷ್ಟೂ ಕಾಲ ಒಂದಿಲ್ಲೊಂದು ವಿವಾದಗಳ ವಿರುದ್ಧ ಹೋರಾಡುತ್ತಲೇ ತನ್ನ ಅವಧಿಯನ್ನು ಮುಗಿಸಿದರು. ಅಂತಿಮವಾಗಿ ವಾಗ್ದಂಡನೆಗೊಳಪಟ್ಟ ಭಾರತದ ಮೊತ್ತಮೊದಲ ಸಿಜೆಐ ಎಂಬ ಕುಖ್ಯಾತಿಯೊಂದಿಗೆ ಮಿಶ್ರಾ ನಿವೃತ್ತಿ ಹೊಂದಿದರು.
ಮುಖ ಉಳಿಸಿಕೊಳ್ಳುವ ಪ್ರಯತ್ನವಾಗಿ ಸಿಜೆಐ ಮಿಶ್ರಾ, ಸಂಬಂಧವೇ ಇಲ್ಲದ ಇನ್ನೊಂದು ವೈದ್ಯಕೀಯ ಕಾಲೇಜು ಪ್ರಕರಣ ದಲ್ಲಿ ಅವ್ಯವಹಾರ ನಡೆಸಿದ ಆರೋಪದಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನಾರಾಯಣ ಶುಕ್ಲಾ ವಿರು್ಧ ಆಂತರಿಕ ತನಿಖೆಗೆ ಆದೇಶಿಸಿದರು.
ಇದೇ ವೇಳೆ, ಖುದ್ದೂಸಿ, ವೈದ್ಯಕೀಯ ಕಾಲೇಜು ಮಂಡಳಿಯ ಸದಸ್ಯರು ಮತ್ತು ಮಧ್ಯವರ್ತಿ ಜಾಮೀನು ಪಡೆದು ಕೊಂಡರು. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಲಂಚ ನೀಡುವ ಕುರಿತು ತಾನು ಮಾಡಿರುವ ಫೋನ್ ಸಂಭಾಷಣೆಗಳನ್ನು ಮಾಧ್ಯಮಗಳಿಗೆ ನೀಡದಂತೆ ದಿಲ್ಲಿ ಉಚ್ಚ ನ್ಯಾಯಾಲಯದಿಂದ ನಿರ್ಬಂಧ ಆದೇಶವನ್ನು ತರುವಲ್ಲಿ ಕುದ್ದುಸಿ ಯಶಸ್ವಿಯಾದರು.
ವರ್ಷ ಕಳೆದರೂ ಈ ಪ್ರಕರಣದಲ್ಲಿ ಸಿಬಿಐ ಇನ್ನಷ್ಟೇ ದೋಷಾರೋಪ ದಾಖಲಿಸಬೇಕಿದೆ.
ಉನ್ನತ ನ್ಯಾಯಾಂಗದಲ್ಲಿ ಭ್ರಷ್ಟಾಚಾರ
ಉನ್ನತ ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಕುರಿತು ಚರ್ಚೆ ನಡೆಯುವಾಗ ನಮ್ಮ ಸ್ವತಂತ್ರ ನ್ಯಾಯಾಂಗವು ಎಂದಿನಂತೆ ಮುಖ ತಿರುಗಿಸಿಕೊಳ್ಳುತ್ತದೆ. ಭ್ರಷ್ಟ ನ್ಯಾಯಾಧೀಶರು ಎನ್ನುವುದೇನೂ ಕಟ್ಟುಕತೆಯಲ್ಲ. ಆದರೆ ಉಚ್ಚ ನ್ಯಾಯಾಲಯಗಳ ಅಥವಾ ಸರ್ವೋಚ್ಚ ನ್ಯಾಯಾಲಯದ ಒಬ್ಬನೇ ಒಬ್ಬ ಭ್ರಷ್ಟ ನ್ಯಾಯಾಧೀಶನಿಗೆ ಶಿಕ್ಷೆಯಾಗಿುವ ಒಂದೇ ಒಂದು ಉದಾಹರಣೆಯಿಲ್ಲ.
ತಪ್ಪು ಮಾಡಿದ ನ್ಯಾಯಾಧೀಶರನ್ನು ಶಿಕ್ಷಿಸುವ ಒಂದೇ ವಿಧಾನ ವಾಗ್ದಂಡನೆ. ಹಾಗಾಗಿ, ಭ್ರಷ್ಟಾಚಾರದ ವಿರುದ್ಧ ನ್ಯಾಯಾಲಯಗಳು ಎರಡು ತಂತ್ರಗಳನ್ನು ಅಳವಡಿಸಿಕೊಂಡಿವೆ: ತಪ್ಪಿತಸ್ಥ ನ್ಯಾಯಾಧೀಶರ ವರ್ಗಾವಣೆ ಅಥವಾ ನಿರ್ಲಕ್ಷ.
ವಾಗ್ದಂಡನೆ ಮತ್ತು ನಿರ್ಲಕ್ಷದ ಮಧ್ಯೆ ಬೇರೇನೂ ನಡೆಯುವುದಿಲ್ಲ ಮತ್ತು ಇದೇ ಭ್ರಷ್ಟ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಬಹುೊಡ್ಡ ಅಡಚಣೆಯಾಗಿದೆ.
2017ರ ಫೆಬ್ರವರಿಯಲ್ಲಿ ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲಿಕೊ ಪುಲ್ ಅವರ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಲಾಗಿದ್ದ ಇಬ್ಬರು ಅತ್ಯಂತ ಹಿರಿಯ ನ್ಯಾಯಾಧೀಶರ ಭ್ರಷ್ಟಾಚಾರ ಪ್ರಕರಣದ ಆರೋಪದ ತನಿಖೆ ನಡೆಸಲು ರ್ವೋಚ್ಚ ನ್ಯಾಯಾಲಯ ನಿರಾಕರಿಸಿತ್ತು.
ಮಾಜಿ ಸಿಜೆಐ ಕೆ.ಜಿ. ಬಾಲಕೃಷ್ಣನ್ ಅವರ ಬಳಿ ಆದಾಯಕ್ಕೂ ಅಧಿಕ ಸಂಪತ್ತಿದೆ ಎಂಬ ಆರೋಪಗಳು ಕೇಳಿಬಂದಾಗ ಈ ಪ್ರಕ ರಣದ ವಿಚಾರಣೆಯನ್ನು ನಾಲ್ಕು ವರ್ಷಗಳ ಕಾಲ ಮುಂದೂ ಡಿದ ಸುಪ್ರೀಂ ಕೋರ್ಟ್ ಅಂತಿಮವಾಗಿ ತಮ್ಮ ದೂರನ್ನು ಹಿಂಪಡೆದು ಎಫ್‌ಐಆರ್ ದಾಖಲಿಸುವಂತೆ ದೂರುದಾರರಿಗೆ ಸೂಚಿಸಿತ್ತು.
ಇನ್ನೋರ್ವ ಮಾಜಿ ಸಿಜಿಐ ವೈ.ಕೆ.ಸಬರ್ವಾಲ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇಂದ್ರ ವಿಚಕ್ಷಣ ಆಯೋಗ ದೂರನ್ನು ಕಾನೂನು ಸಚಿವಾಲಯಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಲು ರವಾನಿಸಿದ್ದರೂ ಈ ಆರೋಪದಿಂದ ಮಾಜಿ ಮುಖ್ಯ ನ್ಯಾಯಾಧೀಶ ತಪ್ಪಿಸಿಕೊಂಡಿದ್ದರು.
ಇನ್ನು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ ಅನೇಕವು ಗಂಭೀರ ಸ್ವರೂಪದ್ದಾಗಿವೆ. ಆದರೆ ಕೊಲಿಜಿಯಂ ವ್ಯವಸ್ಥೆಯಲ್ಲಿರುವ ವರ್ಗಾವಣೆ ನೀತಿಯ ಕಾರಣದಿಂದಾಗಿ ತನ್ನ ವಿರುದ್ಧದ ಆರೋಪ ಬಹಿರಂಗಗೊಳ್ಳುತ್ತಿದ್ದಂತೆ, ನ್ಯಾಯಾಧೀಶರು ಈ ಆರೋಪಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡದೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವರ್ಗಾವಣೆ ಹೊಂದಲು ಅವಕಾಶ ದೊರೆಯುತ್ತದೆ.
ನ್ಯಾಯಾಂಗದ ಸ್ವಾತಂತ್ರ
ಸರಕಾರವನ್ನು ಜನರು ನೇರವಾಗಿ ಆಯ್ಕೆ ಮಾಡಿದರೆ ನ್ಯಾಯಾಂಗಕ್ಕೆ ಸಾರ್ವಜನಿಕರ ವಿಶ್ವಾಸದಿಂದ ಶಕ್ತಿ ದೊರೆಯುತ್ತದೆ. ಸಂವಿಧಾನದ ರಕ್ಷಕರೇ ಆರೋಪಿ ಸ್ಥಾನದಲ್ಲಿರುವಾಗ ಸಾರ್ವಜನಿಕರ ವಿಶ್ವಾಸ ಪಾತಾಳಕ್ಕೆ ಕುಸಿಯುತ್ತದೆ.
ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿರುವ ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗದ ರಚನೆಯ ಪ್ರಸ್ತಾಪವನ್ನು ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಮುಂತಾದ ವಾದಗಳೊಂದಿಗೆ ಮಂಡಿಸಲಾಗಿತ್ತು. ಇಡೀ ಪ್ರಹಸನದಿಂದ ರಾಜಕೀಯ ಪಕ್ಷಗಳಿಗೆ ಹೆಚ್ಚು ಲಾಭ ದೊರೆಯಲಿತ್ತು. ವೈದ್ಯಕೀಯ ಕಾಲೇಜು ಪ್ರಕರಣವನ್ನು ಕಾಂಗ್ರೆಸ್ ಸಿಜೆಐ ದೀಪಕ್ ಮಿಶ್ರಾ ವಿರುದ್ಧ ಬಳಸಿಕೊಂಡರೂ ಅದನ್ನು ಸರಿಯಾಗಿ ಮುಂದುವರಿಸುವಲ್ಲಿ ವಿಫಲವಾಯಿತು. ಇದರಿಂದಾಗಿ ನ್ಯಾಯಾಂಗ ವ್ಯವಸ್ಥೆಗೆ ಇನ್ನಷ್ಟು ನಷ್ಟವೇ ಆಯಿತು.
ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಘಟನೆಗಳನ್ನು ನಿರ್ಲಕ್ಷಿಸುವು ದರಿಂದ ಅದರ ಸ್ವಾತಂತ್ರವನ್ನು ಕಡೆಗಣಿಸಿದಂತಾಗುತ್ತದೆ ಎಂದು ಹೇಳುವುದು ಅಷ್ಟೊಂದು ಮುಖ್ಯವಾಗುಳಿದಿಲ್ಲ. ಸ್ವತಂತ್ರ ನ್ಯಾಯಾಂಗ ಎನ್ನುವುದು ಸರಕಾರದ ಹಸ್ತಕ್ಷೇಪವಿಲ್ಲದೆ ನ್ಯಾಯಾಧೀಶರನ್ನು ನೇಮಕ ಮಾಡಲು ಸಾಧ್ಯವಿರುವುದಕ್ಕೆ ಅನ್ವರ್ಥಾಗಿದೆಯೇ ಹೊರತು ಹೆಚ್ಚೇನೂ ಅಲ್ಲ.
ಭ್ರಷ್ಟಾಚಾರಕ್ಕೆ ನ್ಯಾಯಾಂಗವನ್ನು ತಪ್ಪಿತಸ್ಥ ಎಂದು ತೀರ್ಪು ನೀಡುವುದು ಯಾರಿಗೂ ಸಾಧ್ಯವಿಲ್ಲ. ತನ್ನ ವಿರುದ್ಧದ ಆರೋಪಗಳ ತನಿಖೆ ನಡೆಸದಿರುವುದು ಅಲ್ಪಾವಧಿಗೆ ನ್ಯಾಯಾಂಗವನ್ನು ರಕ್ಷಿಸಬಹುದು. ಆದರೆ ಸಾರ್ವಜನಿಕರು ನ್ಯಾಯಾಂಗವನ್ನು ಭ್ರಷ್ಟ ಎಂದು ಭಾವಿಸುವುದು ಅದಕ್ಕಿಂತಲೂ ದೊಡ್ಡ ನಷ್ಟವಾಗಿದೆ.
ಕೃಪೆ: theprint.in