ಡೈನಮೈಟ್‌ಗಾಗಿ ಆಲ್‌ಫ್ರೆಡ್ ನೊಬೆಲ್‌ಗೆ ಪೇಟೆಂಟ್

Update: 2018-11-24 18:43 GMT

1867: ಸ್ವೀಡನ್ ದೇಶದ ರಸಾಯನಶಾಸ್ತ್ರಜ್ಞ, ಇಂಜಿನಿಯರ್ ಆಲ್‌ಫ್ರೆಡ್ ನೊಬೆಲ್ ತಾವು ಸಂಶೋಧಿಸಿದ ಡೈನಮೈಟ್‌ಗೆ ಪೇಟೆಂಟ್ ಪಡೆದರು. ಇವರ ಹೆಸರಿನಲ್ಲಿಯೇ ಪ್ರತೀ ವರ್ಷ ಅತ್ಯುನ್ನತ ನೊಬೆಲ್ ಪುರಸ್ಕಾರವನ್ನು ನೀಡಲಾಗುತ್ತದೆ.

1667: ಏಶ್ಯಾ ಮತ್ತು ಯುರೋಪ್ ಗಡಿಪ್ರದೇಶದ ದೇಶ ಶೆಮಾಖಾದಲ್ಲಿ ಪ್ರಬಲ ಮಾರಣಾಂತಿಕ ಭೂಕಂಪಕ್ಕೆ ಸುಮಾರು 80,000 ಜನ ಸಾವಿಗೀಡಾದ ವರದಿಯಾಯಿತು.

1897: ಪೋರ್ಟೊರಿಕೊ ದೇಶದ ಸ್ವಾಯತ್ತೆಗೆ ಸ್ಪೇನ್ ದೇಶವು ಅನುಮತಿ ನೀಡಿತು.

1944: ದ್ವಿತೀಯ ಜಾಗತಿಕ ಮಹಾಯುದ್ಧದಲ್ಲಿ ಜರ್ಮನ್ ದೇಶದ ವಿ-2 ರಾಕೆಟ್ ಇಂಗ್ಲೆಂಡ್‌ನಲ್ಲಿನ ವೂಲ್ಸ್‌ವರ್ಥ್ ಸ್ಟೋರ್‌ನ ಕಟ್ಟಡಕ್ಕೆ ಅಪ್ಪಳಿಸಿತು. ಈ ರಾಕೆಟ್ ದಾಳಿಗೆ 160 ಜನ ಬಲಿಯಾದ ವರದಿಯಾಗಿದೆ.

1958: ಫ್ರೆಂಚ್ ಸಹಭಾಗಿತ್ವದಿಂದ ಸ್ವಾಯತ್ತೆಯನ್ನು ಪಡೆದ ಪ್ರಥಮ ದೇಶವಾಗಿ ಸೆನೆಗಲ್ ಖ್ಯಾತಿಯಾಯಿತು.

1976: ಫ್ರಾನ್ಸ್‌ನಲ್ಲಿ ಭಾರೀ ಮಳೆಯ ಕಾರಣದಿಂದಾಗಿ ವಿನಾಶಕಾರಿ ಭೂ ಕುಸಿತ ಸಂಭವಿಸಿದ ವರದಿಯಾಗಿತ್ತು. ಇದು 25 ಜನರ ಸಾವಿಗೆ ಕಾರಣವಾಯಿತು.

1980: ಫ್ರಾನ್ಸ್ ದೇಶವು ಮುರುರೋವಾ ಎಂಬಲ್ಲಿ ಅಣುಬಾಂಬ್ ಪರೀಕ್ಷಾರ್ಥ ಪ್ರಯೋಗ ನಡೆಸಿತು.

2014: ಕರಿಯ ಜನಾಂಗದ ಯುವಕನನ್ನು ಗುಂಡಿಟ್ಟು ಕೊಂದ ಬಿಳಿಯ ಜನಾಂಗದ ಪೊಲೀಸ್‌ನೋರ್ವನಿಗೆ ಶಿಕ್ಷೆ ವಿಧಿಸದ ಕೋರ್ಟ್ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿ ಅಮೆರಿಕದ್ಯಂತ ಪ್ರತಿಭಟನೆಗಳು ನಡೆದವು.

1898: ಲೇಖಕ, ಬಂಗಾಳಿ ಚಿತ್ರ ನಿರ್ದೇಶಕ ದೇವಕಿ ಬೋಸ್ ಜನ್ಮದಿನ ಇಂದು.

1985: ಸ್ವಾತಂತ್ರ ಹೋರಾಟಗಾರ, ಮಹಾರಾಷ್ಟ್ರದ ಫ್ರಥಮ ಮುಖ್ಯಮಂತ್ರಿ ಯಶವಂತರಾವ್ ಚವ್ಹಾನ್ ಇಂದು ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ