2019ರಲ್ಲಿ ಈ ಫೋನ್ ಗಳಲ್ಲಿ ವಾಟ್ಸ್ ಆ್ಯಪ್ ಕೆಲಸ ಮಾಡದು!

Update: 2018-12-31 12:21 GMT

ಸ್ಯಾನ್ ಫ್ರಾನ್ಸಿಸ್ಕೋ, ಡಿ.31: ಫೇಸ್ ಬುಕ್ ಒಡೆತನದ ವಾಟ್ಸ್ಯಾಪ್ ಹಳೆಯ ಆಪರೇಟಿಂಗ್ ಸಿಸ್ಟಮ್ಸ್ ಹೊಂದಿರುವ ಮೊಬೈಲ್ ಗಳಿಗೆ ತನ್ನ ಸೇವೆಯನ್ನು ಆಗಿಂದಾಗ್ಗೆ ನಿಲ್ಲಿಸುತ್ತಾ ಬಂದಿದ್ದು, ಇದೀಗ ಅದು ಐಒಎಸ್ 7 ಹಾಗೂ ಹಳೆಯ ಅವತರಣಿಕೆಗಳು, ಆಂಡ್ರಾಯ್ಡ್ 2.3.7 ಜಿಂಜರ್ ಬ್ರೆಡ್ ಹಾಗೂ ನೋಕಿಯಾ ಸೀರೀಸ್ 40(ಎಸ್ 40)ಗೆ ತನ್ನ ಸೇವೆಯನ್ನು ಹೊಸ ವರ್ಷದಲ್ಲಿ ನಿಲ್ಲಿಸುತ್ತಿದೆ.

ನೋಕಿಯಾ ಸೀರೀಸ್ 40 ಮೊಬೈಲ್ ಹೊಂದಿರುವವರು ಹೊಸ ವಾಟ್ಸ್ಯಾಪ್ ಖಾತೆ ತೆರಯಲು ಸಾಧ್ಯವಿಲ್ಲ ಹಾಗೂ ವಾಟ್ಸ್ಯಾಪ್ ನ ಕೆಲ ಫೀಚರ್ ಗಳು ಈ ಫೋನುಗಳಲ್ಲಿ ಕಾರ್ಯಾಚರಿಸುವುದು ನಿಲ್ಲಬಹುದು.

ನೋಕಿಯಾ ಎಸ್40ಗೆ ವಾಟ್ಸ್ಯಾಪ್ ಸಪೋರ್ಟ್ ಇಂದು ಕೊನೆಯ ದಿನವಾಗಿದ್ದರೆ, ಆಂಡ್ರಾಯ್ಡ್ ವರ್ಷನ್ 2.3.7 ಹಾಗೂ ಹಳೆಯ ಫೋನುಗಳಲ್ಲಿ ಹಾಗೂ ಐಒಎಸ್7 ಹಾಗೂ ಹಳೆಯ ಸಿಸ್ಟಂ ಇರುವ ಫೋನುಗಳಲ್ಲಿ ಫೆಬ್ರವರಿ 1, 2020ರಲ್ಲಿ ವಾಟ್ಸ್ಯಾಪ್ ಸಪೋರ್ಟ್ ಅಂತ್ಯವಾಗಲಿದೆ.

ನೋಕಿಯಾ ಎಸ್40 ಓಎಸ್ ಫೋನುಗಳಾದ ನೋಕಿಯಾ ಆಶಾ 201, 205, 210, 230, 400, 501, 502, 503, ನೋಕಿಯಾ 206, 208, 301 ಹಾಗೂ 515 ಫೋನುಗಳಲ್ಲಿ ನಾಳೆಯಿಂದ ವಾಟ್ಸ್ಯಾಪ್ ಸಪೋರ್ಟ್ ನಿಲ್ಲಿಸಲಾಗುವುದು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News