ಮದರ್ ತೆರೇಸಾ ಭಾರತಕ್ಕೆ ಆಗಮನ

Update: 2019-01-05 18:34 GMT

1907: ಮೊಂಟೆಸ್ಸರಿ ಶಾಲಾ ಶಿಕ್ಷಣ ಪದ್ಧತಿಯ ಸ್ಥಾಪಕಿ ಇಟಲಿಯ ಮಾರಿಯಾ ಮೊಂಟೆಸ್ಸರಿ ತಮ್ಮ ಪ್ರಥಮ ಶಾಲೆ (ಮೊಂಟೆಸ್ಸರಿ)ಯನ್ನು ರೋಮ್‌ನಲ್ಲಿ ಆರಂಭಿಸಿದರು.

1912: ಅಮೆರಿಕದ 47ನೇ ರಾಜ್ಯವಾಗಿ ನ್ಯೂ ಮೆಕ್ಸಿಕೊ ಸೇರ್ಪಡೆ

1921: ಇರಾಕ್ ದೇಶದ ಸೈನ್ಯ ರಚನೆ

1929: ಮಹಾ ಮಾನವತಾವಾದಿ ಸನ್ಯಾಸಿನಿ ಮದರ್ ತೆರೇಸಾ ಭಾರತದ ಬಡವರ, ರೋಗಿಗಳ, ಅನಾಥರ ಸೇವೆಗಾಗಿ ಇಂದು ಕೋಲ್ಕತಾಗೆ ಆಗಮಿಸಿದರು.

1953: ಸಮಾಜವಾದಿ ಪಕ್ಷಗಳ ಏಶ್ಯದ ಪ್ರಥಮ ಸಮ್ಮೇಳನ ಬರ್ಮಾದ ರಂಗೂನ್‌ನಲ್ಲಿ ಆರಂಭವಾಯಿತು.

1980: ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಭರ್ಜರಿ ವಿಜಯ.

2000: ಇಂಗ್ಲೆಂಡ್‌ನಲ್ಲಿ ವ್ಯಾಪಕವಾಗಿ ಫ್ಲೂ ಹಬ್ಬಿತು. ಆಸ್ಪತ್ರೆಗಳಲ್ಲಿ ಬೆಡ್‌ಗಳು ರೋಗಿಗಳನ್ನು ಹಿಡಿಸಲಾಗದಷ್ಟು ತುಂಬಿಹೋದವು. ತುರ್ತಿಲ್ಲದ ಶಸ್ತ್ರಚಿಕಿತ್ಸೆಗಳನ್ನು ರದ್ದು ಮಾಡಲಾಯಿತು.

2006: ಪಶ್ಚಿಮ ಚೀನಾ 25 ವರ್ಷಗಳಲ್ಲೇ ಅತ್ಯಧಿಕವಾದ ಚಳಿಯಿಂದ ನಡುಗಿತು. ಸುಮಾರು -43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಅಷ್ಟೇ ಅಲ್ಲದೆ ಸಾವಿರಾರು ಜನರ ಮನೆಗಳು ಹಿಮಾವೃತಗೊಂಡ ಪರಿಣಾಮ 1,00,000 ಜನರನ್ನು ಸ್ಥಳಾಂತರಿಸಲಾಯಿತು.

2013: ಪಾಕಿಸ್ತಾನ್ ಡ್ರೋಣ್‌ವೊಂದರ ದಾಳಿಯಲ್ಲಿ ದಕ್ಷಿಣ ವಝೀರ್‌ಸ್ಥಾನ್‌ದಲ್ಲಿ 8 ಶಂಕಿತ ಉಗ್ರರು ಸಾವಿಗೀಡಾದ ವರದಿಯಾಗಿದೆ.

1847: ಕರ್ನಾಟಿಕ್ ಸಂಗೀತದ ಗಾಯಕ, ಸಂಯೋಜಕ ತ್ಯಾಗರಾಜ ಜನ್ಮದಿನ.

1967: ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರಹಮಾನ್ ಜನ್ಮದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ