​ಸಾಹಿತಿ ಎಲ್.ಎಸ್.ಶೇಷಗಿರಿರಾವ್ ಸೇರಿ ಐವರಿಗೆ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆ

Update: 2019-01-08 15:13 GMT

ಬೆಂಗಳೂರು, ಜ. 6: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ 2018-19ನೆ ಸಾಲಿನ ಐದು ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಅನುವಾದ ವಿದ್ವಾಂಸರುಗಳಿಗೆ ನೀಡಲು ಪ್ರಾಧಿಕಾರದ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯಿಸಲಾಗಿದ್ದು, ಗೌರವ ಪ್ರಶಸ್ತಿ ಮೊತ್ತ ತಲಾ 50 ಸಾವಿರ ರೂ.ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

ಪ್ರೊ.ಎಲ್.ಎಸ್.ಶೇಷಗಿರಿರಾವ್-ಬೆಂಗಳೂರು, ಜಿ.ಎಸ್.ಅಮೂರ- ಧಾರವಾಡ, ಶಾ.ಮಂ.ಕೃಷ್ಣರಾಯ-ಬೆಂಗಳೂರು, ಕಾಶೀನಾಥ ಅಂಬಲಗಿ- ಕಲಬುರಗಿ, ವೀಣಾಶಾಂತೇಶ್ವರ-ಧಾರವಾಡ ಇವರು 2018-19ನೆ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 2017ನೆ ಸಾಲಿನಲ್ಲಿ ಅನುವಾದಗೊಂಡಿರುವ ಐದು ಪುಸ್ತಕಗಳಿಗೆ 2017ನೆ ಸಾಲಿನ ಪುಸ್ತಕ ಬಹುಮಾನವನ್ನು ನೀಡಲಾಗಿದೆ.

ಈ ಕೆಳಕಂಡ ಅನುವಾದಕರು ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿರುತ್ತಾರೆ. ಅನುವಾದಕರ ಹೆಸರು ಮಮತಾ ಜಿ. ಸಾಗರ್-ಪ್ರೀತಿಯ ನಲವತ್ತು ನಿಯಮಗಳು, ಇಂಗ್ಲಿಷ್‌ನಿಂದ ಕನ್ನಡ; ಲಕ್ಷ್ಮಿ ಚಂದ್ರ ಶೇಖರ್ -ಶಿಖರ್‌ಸೂರ್ಯ, ಕನ್ನಡದಿಂದ ಇಂಗ್ಲಿಷ್; ಜಿ.ವಿ. ರೇಣುಕಾ- ಚಿಂತಾಮಣಿ, ಹಿಂದಿಯಿಂದ ಕನ್ನಡ; ಸೃಜನ್-ಜುಮ್ಮಾ, ಹಿಂದಿಯೇತರ ಭಾರತೀಯ ಭಾಷೆಗಳಿಂದ ಕನ್ನಡ; ಸ.ರಘುನಾಥ್-ಇಲಾ ಒಕಜೀವಿತಂ-ಕನ್ನಡದಿಂದ ಬೇರೆ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿರುವ ಕೃತಿಗಳಿಗೆ ಬಹುಮಾನ ನೀಡಲಾಗಿದೆ ಎಂದು ಪ್ರಾಧಿಕಾರ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News