ಇಡೀ ವಿಶ್ವವೇ ನನ್ನ ಮಾತೃಭೂಮಿ ಎಲ್ಲ ಮನುಷ್ಯರು ದೇಶವಾಸಿಗಳು
‘‘ನಾನು ಹೇಳುವುದರಲ್ಲಿ ಅರ್ಧ ಅರ್ಥವಿಲ್ಲದ್ದು ಆದರೂ ಹೇಳುತ್ತೇನೆ. ಉಳಿದರ್ಧ ನಿನ್ನ ತಲುಪಬಹುದೆಂಬ ನಿರೀಕ್ಷೆಯಲ್ಲಿ’’
ಪ್ರೇಮಕ್ಕೆ ಅಕ್ಷರ ರೂಪ ನೀಡಿದ, ಅನುಭಾವಿ, ದಾರ್ಶನಿಕ, ಸಂತ, ಪ್ರೇಮಕವಿ, ಖಲೀಲ್ ಗಿಬ್ರಾನ್ ಹುಟ್ಟಿದ್ದು ಅಶಿಕ್ಷಿತ ತಾಯಿ ಕಮೀಲಾಳ 3ನೇ ಗಂಡನಿಗೆ 4ನೇ ಮಗನಾಗಿ ಹುಟ್ಟಿದ್ದು ಜನವರಿ 6, 1883ರಲ್ಲಿ. ಒಟೊಮನ್ ಬಿಸ್ಮಾರ್ಕನ ಚಕ್ರಾಧಿಪತ್ಯಕ್ಕೆ ಸೇರಿದ ಎತ್ತರ ಲೆಬನಾನ್‌ನ ಭಶ್ರೊಯಿ ಪಟ್ಟಣದಲ್ಲಿ.
ಬೇಜವಾಬ್ದಾರಿ, ಜೂಜುಕೋರ ತಂದೆ, ಕಷ್ಟಪಟ್ಟು ದುಡಿಯುವ ಛಲಗಾರ್ತಿ ತಾಯಿಯ ಆಶ್ರಯದಲ್ಲಿ ಬೆಳೆದು ನಿರಾಶ್ರಿತರ ಸ್ವರ್ಗ ಅಮೆರಿಕಗೆ ವಲಸೆ ಹೊರಡುತ್ತಾಳೆ. 12ನೇ ವಯಸ್ಸಿಗೆ ಶಾಲೆಗೆ ಸೇರಿಸುತ್ತಾಳೆ ತಾಯಿ. ಅವನ ಅರೇಬಿಕ್ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಪ್ರೊಫೆಟ್ ಪುಸ್ತಕ 40ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಕಟವಾಗಿದೆ. 700ಕ್ಕೂ ಹೆಚ್ಚು ವ್ಯಕ್ತಿಗಳ ಛಾಯಾಚಿತ್ರ ಬಿಡಿಸಿದ ದಾಖಲೆಯೊಂದಿಗೆ ಶೇಕ್ಸ್ ಪಿಯರ್, ಲಾವೋಟ್ಸೆ ಬಿಟ್ಟರೆ ಅತಿ ಹೆಚ್ಚು ಓದಲ್ಪಡುವ ಕವಿ ಖಲೀಲ್ ಗಿಬ್ರಾನ್. ಅವನು ಬದುಕಿದ್ದು ಕೇವಲ 48 ವರ್ಷಗಳ ಕಾಲ ಮಾತ್ರ. ಅವರ್ ಸಿರೋಸಿಸ್ ಕ್ಷಯರೋಗದಿಂದ ಸೇಟ್ ಬೆನಿಪೆಂಡ್ ಆಸ್ಪತ್ರೆ ನೂಯಾರ್ಕಿನಲ್ಲಿ ತೀರಿಕೊಂಡ.
►ಪ್ರೇಮವೆಂಬ ಮಧುರಾಕ್ಷರ
ಪ್ರೇಮ ಅಜರಾಮರ, ಈ ಜಗತ್ತಿನಲ್ಲಿ ಪ್ರೀತಿಗೆ, ಪ್ರೇಮಕ್ಕೆ ಸೋಲದ ಮನಸ್ಸಿಲ್ಲ, ಮನುಷ್ಯನಿಲ್ಲ, ಪ್ರೇಮಕ್ಕಾಗಿ ಜೀವವನ್ನು, ಇಡಿ ಜೀವಮಾನವನ್ನು ಸವೆಸಿದ, ಮುಡಿಪಾಗಿಟ್ಟ ಲಕ್ಷಾಂತರ ಮನಸ್ಸುಗಳನ್ನು ಒಮ್ಮೆ ಕೇಳಿ ನೋಡಿ, ನೀವು ಲವ್ ಮಾಡಿದ್ರ? ಅಂತ ತಟ್ಟನೆ ದಶಕಗಳ ಕಾಲ ಹಿಂದಕ್ಕೆ ಹೋಗಿ ಗತಕಾಲದ ಪ್ರೇಮವನ್ನು ನೆನೆದು ಒಮ್ಮೆ ಖುಷಿ, ನಿಟ್ಟುಸಿರು, ವಿಷಾದದ ಛಾಯೆಯಲ್ಲಿ ಅದೊಂದು ಅಮೂಲ್ಯ, ಅಮೃತಗಳಿಗೆ ಎಂದೇ ಉದ್ಗರಿಸುತ್ತಾರೆ.
ಗಿಬ್ರಾನನ ಸಾಲುಗಳನ್ನು ನೋಡಿ.
ಬದುಕಿನ ಸಿಹಿ ಹಾಗೂ ಪವಿತ್ರ ಭಾವದಿಂದ ನೀನೊಬ್ಬಳೇ ಜಗತ್ತಿನ ಭಾಗದಿಂದ ಬಂದ ಗೆಳತಿಯಾಗಿರುವೆ, ನೀನು ಎಲ್ಲ ಒಳ್ಳೆಯದಕ್ಕೂ ಒಡನಾಡಿ, ನಿನ್ನ ಇರುವಿಕೆಯ ಅಂತರ ಎಷ್ಟೇ ದೂರದ್ದಾದರೂ ಹೃದಯಕ್ಕೆ ಬಹಳ ಹತ್ತಿರ ಇರುವೆ, ಅವನ ಗೋರಿಕಲ್ಲಿನ ಮೇಲೆ ಬರೆದಿರುವ ಅಕ್ಷರ ಸಾಲುಗಳು..
‘ನಾನು ಸಜೀವ, ನಿಮ್ಮಂತೆ
ನಿಂತಿರುವೆ ನಿಮ್ಮ ಬಳಿಯೇ
ಒಂದರೆಕ್ಷಣ ಕಣ್ಮುಚ್ಚಿ ಸುತ್ತ ನೋಡಿ
ನಿಮ್ಮೆದುರೇ ನಿಂತ ನನ್ನ ಕಾಣುವಿರಿ’
ಗಿಬ್ರಾನನ ಕಾವ್ಯದ ಘನತೆಯನ್ನು ಅರಿಯಬೇಕಾದರೆ ಆತನ ಪ್ರವಾದಿ ಪುಸ್ತಕದ ಸಾಲುಗಳನ್ನು ಓದಬೇಕು.
ಪ್ರೇಮದ ದಿವ್ಯತೆಯಲ್ಲಿಯೂ ಚೆಲುವಿನ ಬೆಳಕಿನಲ್ಲಿಯೂ ಬದುಕಲೆಂದೆ ನಾನು ಬಂದೆ
‘ಮಾನವತೆಯೇ ಭುವಿಯ ಮೇಲಿನ ದೈವೀ ಆತ್ಮವಾಗಿದೆ’.
‘ನೀವು ನಿಮ್ಮ ನುಡಿಗಳಾಳಕ್ಕಿಂತಲೂ ಆಳವಾದ ತಳಕ್ಕಿಳಿಯುವಿರಿ, ಸಕಲ ನಾದಕ್ಕಿಂತಲೂ ಆಳವಾದ ಆಳವದು’
ಅದು ಭೂ ತಾಯಿಯ ಹೃದಯದಾಳದಲ್ಲಡಗಿದೆ. ಅಲ್ಲಿ ನೀವು ಅವನೊಡನೆ ಏಕಾಂಗಿಯಾಗುವಿರಿ, ಆ ‘ಅವ’ ಬಾನೊಳಗಿನ ಆಕಾಶಗಂಗೆ ಪಥದಲ್ಲಿಯೂ ನಡೆದಾಡಬಲ್ಲವ
‘ಯಾವುದನ್ನಿಂದ ನನ್ನೊಂದು ನಾಲಿಗೆಯು ನುಡಿಯುತ್ತಿರುವುದೋ ಅದನ್ನೆ ನಾಳಿನ ಅಸಂಖ್ಯ ನಾಲಗೆಗಳು ನುಡಿದಾವು!’
‘ನಾನು ಹೇಳುವುದರಲ್ಲಿ ಅರ್ಧ ಅರ್ಥವಿಲ್ಲದ್ದು ಆದರೂ ಹೇಳುತ್ತೇನೆ.
ಉಳಿದರ್ಧ ನಿನ್ನ ತಲುಪಬಹುದೆಂಬ ನಿರೀಕ್ಷೆಯಲ್ಲಿ’.
ಪ್ರಸ್ತುತ ಪರಿಸ್ಥಿತಿಯಲ್ಲಿ ಕ್ರೈಸ್ತ ಹಿಂದೂ, ಮುಸ್ಲಿಂ, ಸಿಖ್, ದಲಿತ, ಜೈನ, ಬುದ್ಧ, ಪಾರ್ಸಿ ಜಗತ್ತಿನ ಅನೇಕ ಧರ್ಮ ಧರ್ಮಗಳ ನಡುವೆ ನಡೆಯುತ್ತಿರುವ ಧರ್ಮದ ಹೆಸರಿನ ಆಂತರಿಕ ಯುದ್ಧ ಮೇಲಾದ, ಹೋರಾಟಗಳು. ಕೇವಲ ಅಸ್ತಿತ್ವದ ಪ್ರಶ್ನೆಯಾಗಿ ತೋರುವುದಿಲ್ಲ.
ಈ ದೇಶ ಒಂದು ಧರ್ಮದ ಜನರಿಗಾಗಿ ಮಾತ್ರ, ಎನ್ನುತ್ತಾ ಇರುವಿಕೆ ಯನ್ನು ಕಲ್ಪಿಸಿಕೊಳ್ಳಲಾಗದ ಕೆಟ್ಟ ಮನಸ್ಥಿತಿಯ ಪ್ರಸ್ತುತ ಪರಿಸ್ಥಿತಿಗೆ ಉತ್ತರ ಪ್ರೇಮಕವಿ ಬರೆಯುತ್ತಾನೆ.
ಇಡೀ ವಿಶ್ವವೇ ನನ್ನ ಮಾತೃ ಭೂಮಿ ಮತ್ತು ಎಲ್ಲ ಮನುಷ್ಯರು ನನ್ನ ದೇಶಿವಾಸಿಗಳು.
ನೀನು ನನ್ನ ಸಹೋದರ, ನಾ ನಿನ್ನ ಪ್ರೀತಿಸುತ್ತೇನೆ, ಪ್ರೀತಿಸುತ್ತೇನೆ, ಯಾವಾಗ ನೀನು
ನಿನ್ನ ಮಸೀದಿಯಲ್ಲಿ ದೀರ್ಘದಂಡ ನಮಸ್ಕರಿಸುವೆಯೋ ನಿನ್ನ ಚರ್ಚಿನಲ್ಲಿ ಮೊಣಕಾಲೂರಿ ಕೂರುವೆಯೋ
ನಿನ್ನ ಸಿನಗಾಗಿನಲ್ಲಿ ಪ್ರಾರ್ಥನೆ ಸಲ್ಲಿಸುವೆಯೋ ಆಗ ನಾನು ನೀನು ಇಬ್ಬರೂ ಒಂದೇ ಧರ್ಮದವರು.
ವಿಶ್ವ ಚೈತನ್ಯದ ಮಕ್ಕಳು’
ಜಾತಿ, ಧರ್ಮ, ಸಂಸ್ಕೃತಿ, ವೇದ ಪುರಾಣ, ಬೈಬಲ್, ಕುರ್‌ಆನ್, ಗ್ರಂಥಸಾಹಿಂಬ್ ಯಾವುದಾದರೂ ಕೊನೆಗೆ ಉಳಿಯುವುದು ಬಾಳಬೇಕಾದ ನೆಲದ ಮೇಲಿನ ಬದುಕೇ ನಂಬಿಕೆ ಎಂದು ಪ್ರತಿಪಾದಿಸುವ ವಿಶ್ವ ಮಾನ್ಯ ಕವಿ ಖಲೀಲ್ ಗಿಬ್ರಾನ್.