ಪರಮಾಣು ಬಾಂಬ್ ಪರೀಕ್ಷೆ ರದ್ದುಗೊಳಿಸಲು ಒತ್ತಾಯ

Update: 2019-01-12 18:31 GMT

1610: ಇಟಲಿಯ ಖ್ಯಾತ ಖಗೋಳಶಾಸ್ತ್ರಜ್ಞ ಗೆಲಿಲಿಯೋ ಗೆಲಿಲಿ ಗುರುಗ್ರಹದ ನಾಲ್ಕನೇ ಉಪಗ್ರಹ ಕ್ಯಾಲ್ಲಿಸ್ಟೋವನ್ನು ಕಂಡುಹಿಡಿದರು.

1895: ವಿಶ್ವ ವಿಖ್ಯಾತ ಕವಿ, ನಾಟಕಕಾರ ಐರ್ಲೆಂಡ್‌ನ ಆಸ್ಕರ್ ವೈಲ್ಡ್‌ನ ನಾಟಕ ‘ಐಡಿಯಲ್ ಹಸ್ಬಂಡ್’ ತನ್ನ ಪ್ರಥಮ ಪ್ರದರ್ಶನ ಕಂಡಿತು.

1915: ಇಟಲಿಯಲ್ಲಿ ಪ್ರಬಲ ಭೂಕಂಪವೊಂದು ಸಾವಿರಾರು ಜನರ ಸಾವಿಗೆ ಕಾರಣವಾಯಿತು. ಸುಮಾರು 12,000 ಜನಸಂಖ್ಯೆ ಹೊಂದಿದ್ದ ಅವೆಜ್ಜಾನೊ ಎಂಬ ಪಟ್ಟಣ ಸಂಪೂರ್ಣ ನಾಶವಾಯಿತು.

1938: ಚಾರ್ಲ್ಸ್ ಡಾರ್ವಿನ್ ವಿಕಾಸವಾದ ಸಿದ್ಧಾಂತವನ್ನು ಮೊದಲು ತಿರಸ್ಕರಿಸಿದ್ದ ಇಂಗ್ಲೆಂಡ್‌ನ ಚರ್ಚ್ ಇಂದು ಅದನ್ನು ಸ್ವೀಕರಿಸಿತು.

1957: ಕವಿ ಅಲ್ಲೆನ್ ಟೇಟ್ ಅಮೆರಿಕದ ಪ್ರತಿಷ್ಠಿತ ಬೋಲಿಂಜೆನ್ ಪ್ರಶಸ್ತಿಗೆ ಭಾಜನರಾದರು.

1958: 43 ರಾಷ್ಟ್ರಗಳ 9,000 ವಿಜ್ಞಾನಿಗಳು ಪರಮಾಣು ಬಾಂಬ್ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ವಿಶ್ವಸಂಸ್ಥೆಗೆ ಅರ್ಜಿ ಸಲ್ಲಿಸಿದರು.

1964: ಕೋಲ್ಕತಾದಲ್ಲಿ ವ್ಯಾಪಕವಾಗಿ ಹಬ್ಬಿದ ಕೋಮುಹಿಂಸೆಗೆ 100ಕ್ಕಿಂತ ಹೆಚ್ಚು ಜನ ಸಾವಿಗೀಡಾದರು.

1985: ಇಥಿಯೋಪಿಯಾದಲ್ಲಿ ಎಕ್ಸ್‌ಪ್ರೆಸ್ ರೈಲೊಂದು ಹಳಿ ತಪ್ಪಿದ ಪರಿಣಾಮ ಕನಿಷ್ಠ 428 ಜನ ಸಾವನ್ನಪ್ಪಿದರು.

2001: ಕೇಂದ್ರ ಅಮೆರಿಕದ ಎಲ್ ಸಲ್ವಡಾರ್‌ನಲ್ಲಿ 7.6 ರಿಕ್ಟರ್ ಕಂಪನಾಂಕದ ತೀವ್ರತೆಯಲ್ಲಿದ್ದ ಪ್ರಬಲ ಭೂಕಂಪಕ್ಕೆ 840 ಜನ ಸಾವಿಗೀಡಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ