ಅನಿಶ್ಚಿತತೆ ನನ್ನ ಬರವಣಿಗೆಯ ಅನಿವಾರ್ಯ ಭಾಗ
ಕೇರಳದ ಖ್ಯಾತ ಯುವ ಲೇಖಕ ಅನೀಸ್ ಸಲೀಮ್ ಅವರು ಸಾಹಿತ್ಯ ಕಾರ್ಯಕ್ರಮಗಳಿಗೆ ಹಾಜರಾಗುವುದು ತೀರಾ ಅಪರೂಪ. ಕೆಲವೊಮ್ಮೆ ಅವರು ತನ್ನ ಸಾಹಿತ್ಯ ಕೃತಿಗಾಗಿ ನೀಡಲಾದ ಪ್ರಶಸ್ತಿಯನ್ನು ಸ್ವೀಕರಿಸಲೂ ಕೂಡಾ ಬಂದಿರಲಿಲ್ಲ. ತೀರಾ ಇತ್ತೀಚೆಗೆ ಸಲೀಮ್ ಅವರ ನಾಲ್ಕನೆ ಕೃತಿ, ‘ದಿ ಬ್ಲೈಂಡ್ ಲೇಡೀಸ್ ಡಿಸೆಂಡ್ಯಾಂಟ್’ (2014), 2018ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡಮಿಯ ಇಂಗ್ಲಿಷ್ ಭಾಷಾ ವಿಭಾಗದಲ್ಲಿ ಪ್ರಶಸ್ತಿ ಪಡೆದಿತ್ತು. ತನ್ನ ಹುಟ್ಟೂರಿನ ಹಿನ್ನೆಲೆಯಲ್ಲಿ ನಡೆಯುವ ಈ ಕೌಟುಂಬಿಕ ಕಾದಂಬರಿಯ ಕಥೆಯು ಶಿಥಿಲಗೊಂಡ ಮನೆಯೊಂದರಲ್ಲಿ ಸಾಗುತ್ತದೆ. ಅನೀಸ್ ಅವರು ಅಂತರ್ಜಾಲ ಸುದ್ದಿಸಂಸ್ಥೆಯೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ತನ್ನ ಬರವಣಿಗೆಯಲ್ಲಿ ಪ್ರಯಾಣದ ಅನುಭವಗಳು ವಹಿಸಿರುವ ಪಾತ್ರ, ತನ್ನ ತಂದೆಯ ಗ್ರಂಥಭಂಡಾರ, ಸಾಹಿತ್ಯ ಅಕಾಡಮಿ ಪ್ರಶಸ್ತಿಯ ಪ್ರಾಮುಖ್ಯತೆ, ತನ್ನ ಖಾಸಗಿತನದ ರಕ್ಷಣೆ, ಸಂದೇಹದ ಜೊತೆ ಬರಹಗಾರನ ಸಂಬಂಧ ಹಾಗೂ ವಯಸ್ಕನಾದ ಬಳಿಕ ಸಾಹಿತಿಯಾಗಿ ತನ್ನ ಕಷ್ಟಕರ ಬಾಲ್ಯದ ದಿನಗಳನ್ನು ವಿವಿಧ ದೃಷ್ಟಿಕೋನಗಳಲ್ಲಿ ನೋಡಲು ಹೇಗೆ ಸಾಧ್ಯವಾಯಿತು ಎಂಬೆಲ್ಲ ಅಂಶಗಳನ್ನು ವಿವರಿಸಿದ್ದಾರೆ. ಅವರ ಸಂದರ್ಶನದ ಸಂಕ್ಷಿಪ್ತ ಭಾವಾನುವಾದವನ್ನು ಇಲ್ಲಿ ನೀಡಲಾಗಿದೆ.
►ನಿಮ್ಮ ತಂದೆಯ ಗ್ರಂಥಾಲಯದ ಬಗ್ಗೆ ನೀವು ಈ ಹಿಂದೆ ಮಾತನಾಡಿದ್ದೀರಿ. ಅದರ ಬಗ್ಗೆ ನೀವು ಒಂದಿಷ್ಟು ವಿವರಿಸಿದಲ್ಲಿ ನಮಗೆ ಸಂತಸವಾಗಲಿದೆ. ನಿಮ್ಮ ಹಾಲಿ ದಿನದ ಸಂಗ್ರಹವು ಯಾವುದೆಲ್ಲವನ್ನು ಒಳಗೊಂಡಿದೆ?.
-ಸುಮಾರು ಒಂದು ದಶಕದ ಹಿಂದೆ ನನ್ನ ತಂದೆ ನಿಧನರಾದ ಬಳಿಕ, ಆ ಗ್ರಂಥಾಲಯವು ಅಸ್ಥಿಪಂಜರದಂತಾಗಿಬಿಟ್ಟಿದೆ. ಅವರ ಪುಸ್ತಕ ಸಂಗ್ರಹಗಳು ಗಣನೀಯವಾಗಿ ಕಡಿಮೆಯಾಗಿದೆ. ಪುಸ್ತಕಗಳನ್ನು ಎರವಲು ಪಡೆದ ಬಳಿಕ ಅವುಗಳನ್ನು ಹಿಂದಿರುಗಿಸದ ಅವರ ಸ್ನೇಹಿತರು ಹಾಗೂ ಬಂಧುಗಳಿಗೆ ಇದಕ್ಕಾಗಿ ‘ಧನ್ಯವಾದ’ ಅರ್ಪಿಸಬೇಕು.
ಆ ಗ್ರಂಥ ಭಂಡಾರವು ತನ್ನ ಉಚ್ಛ್ರಾಯದ ದಿನಗಳಲ್ಲಿ ಇಂಗ್ಲಿಷ್ ಹಾಗೂ ಮಲಯಾಳಂ ಪುಸ್ತಕಗಳಿಂದ ತುಂಬಿ ತುಳುಕುತ್ತಿದ್ದವು.ಅಲ್ಲಿ ಕ್ಲಾಸಿಕ್ ಹಾಗೂ ಸಮಕಾಲೀನ ಕೃತಿಗಳ ಅಗಾಧ ಸಂಗ್ರಹ ವಿತ್ತು. ಆದರೆ ಅಲ್ಲಿ ಥ್ರಿಲ್ಲರ್ ಹಾಗೂ ಕಾಲ್ಪನಿಕ ವೈಜ್ಞಾನಿಕ ಕಾದಂಬರಿಗಳನ್ನು ಹುಡುಕುವುದು ಕಷ್ಟವಾಗಿತ್ತು. ನನ್ನ ಪೂರ್ವಿಕರ ಮನೆಯ ಮೊದಲ ಅಂತಸ್ತಿನಲ್ಲಿ ಈ ಗ್ರಂಥಾಲಯವಿತ್ತು. ಕಿಟಕಿ ಬಳಿಯಲ್ಲಿ ಆರಾಮಕುರ್ಚಿಯೊಂದಿದ್ದು, ಅದರಲ್ಲಿ ಕುಳಿತು ಕೆಳಗಿರುವ ಉದ್ಯಾನವನದ ವಿಹಂಗಮ ನೋಟವನ್ನು ಕಾಣಬಹುದಾಗಿತ್ತು. ಸಮೀಪವೇ ಇರುವ ಮಣ್ಣಿನ ರಸ್ತೆಯ ಆಚೆಗೆ ರೈಲು ಹಳಿಯೊಂದನ್ನು ಕಾಣಬಹುದಾಗಿತ್ತು.
ಆ ಮನೆಯು ಈಗ ನಮ್ಮ ಸಮೀಪದ ಬಂಧುವಿಗೆ ಸೇರಿದೆ. ನಾನೀಗ ನನ್ನ ಹುಟ್ಟೂರಿನಿಂದ 200 ಮೈಲು ದೂರದಲ್ಲಿರುವ ಇನ್ನೊಂದು ನಗರದಲ್ಲಿ ವಾಸವಾಗಿದ್ದೇನೆ. ನಾನು ಬಯಸಿದಾಗಲೆಲ್ಲಾ ಆ ಗ್ರಂಥಾಲಯಕ್ಕೆ ಭೇಟಿ ನೀಡಬಹುದಾಗಿದೆ. ಆದರೆ ಈಗ ಬಹಳ ಸಮಯದಿಂದ ನನಗದು ಸಾಧ್ಯವಾಗಿಲ್ಲ. ಈಗ ನನ್ನದೇ ಉತ್ತಮ ಗಾತ್ರದ ಗ್ರಂಥಾಲಯವನ್ನು ನಾನು ಹೊಂದಿದ್ದೇನೆ. ಆದರೆ ಅದು ನಮ್ಮ ಪೂರ್ವಿಕರ ಮನೆಯಲ್ಲಿರುವುದರ ಅರ್ಧದಷ್ಟೂ ಇಲ್ಲ. ಕೆಲವು ಬೆಳಗ್ಗಿನ ಹೊತ್ತುಗಳಲ್ಲಿ ನಾನು ಬರೆಯಲು ಕುಳಿತುಕೊಳ್ಳುವಾಗ ನನ್ನ ತಂದೆಯ ಗ್ರಂಥಾಲಯವನ್ನು ಹಾಗೂ ಅದರಲ್ಲಿನ ಕಪಾಟನ್ನು ತೆರೆದಾಗ ಮೂಗಿಗೆ ಬಡಿಯುವ ಪುಸ್ತಕಗಳ ವಾಸನೆ ನೆನಪಾಗುತ್ತಿರುತ್ತದೆ.
►ನೀವು ಬಹುತೇಕವಾಗಿ ವಿವಿಧ ಬಗೆಯ ಸಾಹಿತ್ಯ ಕಾರ್ಯ ಕ್ರಮಗಳಿಂದ ದೂರವಿರುತ್ತೀರಿ. ನಿಮ್ಮ ಪುಸ್ತಕಗಳಿಗೆ ತಾವಾಗಿಯೇ ಮಾತನಾಡಿ ಕೊಳ್ಳಲು ಅವಕಾಶ ನೀಡುವ ಜೊತೆಗೆ, ಈ ರೀತಿಯ ಅಂತರ ಕಾಯ್ದುಕೊಳ್ಳುವಿಕೆಯಿಂದಾಗಿ ನಿಮ್ಮ ಬರವಣಿಗೆಯ ಮೇಲೆ ಇದರಿಂದ ಆಗುವ ಪ್ರಯೋಜನಗಳೇನು?.
-ನಾನು ತೀರಾ ಖಾಸಗಿ ವ್ಯಕ್ತಿಯಾಗಿದ್ದೇನೆ ಹಾಗೂ ಜನಜಂಗುಳಿಯ ನ್ನು ಆಕರ್ಷಿಸುವ ಸಾಮರ್ಥ್ಯವಿರುವ ಯಾವುದೇ ಸ್ಥಳದಿಂದ ದೂರವಿರಲು ನಾನು ಯತ್ನಿಸುತ್ತಿರುತ್ತೇನೆ. ಇದು ಕೇವಲ ಸಾಹಿತ್ಯ ಕಾರ್ಯಕ್ರಮಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ನಾನು ಸ್ನೇಹ ಮಿಲನಗಳಲ್ಲಿ, ಸಂತೋಷ ಕೂಟಗಳಲ್ಲಿ, ಪುನರ್‌ಮಿಲನ ಕಾರ್ಯಕ್ರಮಗಳಲ್ಲಿ ಹಾಗೂ ಸಾಧ್ಯವಿದ್ದಷ್ಟು ವಿವಾಹ ಕಾರ್ಯ ಕ್ರಮಗಳಲ್ಲಿಯೂ ಪಾಲ್ಗೊಳ್ಳುವುದಿಲ್ಲ. ಸಾಹಿತ್ಯ ವೃತ್ತಗಳಲಿ ್ಲ ಹಾಗೂ ಪುಸ್ತಕ ಪ್ರಚಾರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲು ನನ್ನ ಇಷ್ಟವಿಲ್ಲದಿರುವಿಕೆಯು ನನ್ನ ಬರವಣಿಗೆ ವೃತ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆಯೇ ಎಂಬುದು ನನಗೆ ತಿಳಿದಿಲ್ಲ. ಆದರೆ ನಾನು ಸಾಧ್ಯವಾದಷ್ಟು ಅಲ್ಪ ಸ್ವಲ್ಪವಾಗಿ ಕಾಣಿಸಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತಿದ್ದೇನೆ.
►ಬರಹಯೇತರ ಚಟುವಟಿಕೆಯು ನಿಮ್ಮ ಬರವಣಿಗೆಗೆ ಮಾಹಿತಿಯನ್ನು ಒದಗಿಸುವುದೇ?.
-ನಾನು ಪ್ರವಾಸವನ್ನು ಇಷ್ಟಪಡುತ್ತೇನೆ ಹಾಗೂ ಪುಸ್ತಕವೊಂದರ ಕೆಲಸದಲ್ಲಿ ತೊಡಗಿದ್ದಾಗ ಅದು ನನಗೆ ತುಂಬಾನೇ ನೆರವಾ ಗುತ್ತದೆ. ಒಮ್ಮೆ ನನ್ನ ಹಸ್ತಪ್ರತಿಯೊಂದರ ಮೊದಲ ಕರಡು ಸಿದ್ಧಗೊಂಡಲ್ಲಿ, ನಾನು ಸಾಮಾನ್ಯವಾಗಿ ಯಾವುದಾದರೂ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿ ಸುಮಾರು 15 ದಿನಗಳ ಕಾಲ ಅಥವಾ ಎರಡನೆ ಕರಡು ಸಿದ್ಧವಾಗುವ ತನಕ ಇದ್ದು ಬಿಡುತ್ತೇನೆ.ನಾನು ಮೊದಲ ಎರಡು ದಿನಗಳವರೆಗೆ ನಗರದ ಸುತ್ತಲೂ ತಿರು ಗಾಡುತ್ತೇನೆ. ಆನಂತರ ನಾನು ಹೊಟೇಲೊಂದರ ಕೊಠಡಿಯಲ್ಲಿ ಬಾಗಿಲುಮುಚ್ಚಿಕೊಂಡು ಬರೆಯಲು ಕೂರುತ್ತೇನೆ ಹಾಗೂ ನನಗೆ ಇನ್ನು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅನಿಸುವ ತನಕ ಮತ್ತೆ ಮತ್ತೆ ಬರೆಯುತ್ತಲೇ ಇರು ತ್ತೇನೆ. ಈ ಅಪರಿಚಿತ ಸ್ಥಳಗಳಲ್ಲಿ, ನಾನು ಸಾಮಾನ್ಯವಾಗಿ ಪ್ರವಾಸಿ ಭೂಪಟದಲ್ಲಿ ಇರದಿರುವ ಸ್ಥಳವನ್ನು ಹೆಚ್ಚಾಗಿ ಪ್ರೀತಿಸುತ್ತೇನೆ. ಅದು ಪಾರ್ಕ್ ಅಥವಾ ತೋಟವಾಗಿರಬಹುದು, ಹಳೆಯ ರೈಲು ನಿಲ್ದಾಣ ವಾಗಿರಬಹುದು, ಇಲ್ಲವೇ ಪುರಾತನ ಸೇತುವೆಯಾಗಿರಬಹುದು. ಸಾಲುಮರಗಳಿರುವ ರಸ್ತೆಯೂ ಆಗಿರಬಹುದು. ನಗರದಲ್ಲಿ ನನ್ನ ವಾಸ್ತವ್ಯದ ಪ್ರತಿ ದಿನವೂ ಆ ನಿರ್ದಿಷ್ಟ ಸ್ಥಳಕ್ಕೆ ನಾನು ಭೇಟಿ ನೀಡುತ್ತೇನೆ. ನನ್ನ ನಿರ್ಗಮನದ ದಿನದಂದು ನಾನು ಬಹುತೇಕ ವಾಗಿ ಆ ಸ್ಥಳಕ್ಕೆ ಭಾವನಾತ್ಮಕ ಬೀಳ್ಕೊಡುಗೆಯನ್ನು ನೀಡುವೆ. ಮನೆಗೆ ಹಿಂದಿರುಗಿದ ಬಳಿಕವೂ ಆ ನೆಮ್ಮದಿಯ ಸ್ಥಳಗಳ ಬಗ್ಗೆ ನಾನು ಬೆರಗುಗೊಳ್ಳುತ್ತಿರುತ್ತೇನೆ
►ಭಾರತದ ಪುಟ್ಟ ನಗರಗಳ ಅನ್ವೇಷಣೆ ನಡೆಸುವ ಬರಹಗಾರರ ಪೈಕಿ ಯಾರ ಕೃತಿಗಳನ್ನು ನೀವು ಇಷ್ಟಪಡುತ್ತೀರಿ?.
-ರಸ್ಕಿನ್ ಬಾಂಡ್ ಹಾಗೂ ಆರ್.ಕೆ. ನಾರಾಯಣ್
►ನಿಮಗೆ ದೊರೆತ ಹಲವು ಪ್ರಶಂಸನೆಗಳಲ್ಲಿ ಸಾಹಿತ್ಯ ಅಕಾಡಮಿ ಪ್ರಶಸ್ತಿಯು ಇತ್ತೀಚಿನದು. ನಿಮಗೆ ಈ ಪ್ರಶಸ್ತಿಯು ಯಾಕೆ ವಿಶಿಷ್ಟವಾದುದೆಂಬ ಬಗ್ಗೆ ನಮಗೆ ಸ್ವಲ್ಪ ಹೇಳುವಿರಾ?. ಈ ಪುರಸ್ಕಾರವನ್ನು ಪಡೆದಂತಹ ನಾಲ್ಕನೆ ಮಲಯಾಳಿ ಸಾಹಿತಿ ನೀವು ಎಂಬುದು ಗಮನಾರ್ಹ. ಅಂದರೆ ನಿಮಗಿದು ವಿಶಿಷ್ಟವಾದುದೇ?
-ಬಹಳಷ್ಟು ಮಟ್ಟಿಗೆ. ಇಂಗ್ಲಿಷ್ ಕಥಾ ಸಾಹಿತ್ಯಕ್ಕಾಗಿನ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ಏಕೈಕ ಮಲಯಾಳಿ ಸಾಹಿತಿ ನಾನೆಂಬು ದಾಗಿ ಹೇಳಿದ್ದಾರೆ. ಕಮಲಾ ದಾಸ್ ಹಾಗೂ ಜೀತ್ ತಯಿಲ್ ಈ ಪುರಸ್ಕಾರವನ್ನು ಕವಿತೆಗೆ ಹಾಗೂ ಅರುಂಧತಿ ರಾಯ್ ಪ್ರಬಂಧಗಳಿಗಾಗಿ ಗೆದ್ದುಕೊಂಡಿದ್ದಾರೆ. ಹೀಗಾಗಿ, ಇದು ನನಗೆ ತುಂಬಾ ವಿಶೇಷವಾದುದಾಗಿದೆ.
►ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆದಿ ರುವ ಹಾಗೂ ಪ್ರಶಸ್ತಿ ವಿಜೇತ ಪುಸ್ತಕಗಳನ್ನು ಬರೆದ ಬಳಿಕವೂ, ನಿಮಗೆ ಬರವಣಿಗೆಯಲ್ಲಿ ಅನಿಶ್ಚಿತತೆಯು ಕಾಡುವುದೇ?.
-ನನ್ನ ಪಾಲಿಗೆ, ಅನಿಶ್ಚಿತತೆಯು ಬರವಣಿಗೆ ಯ ಅನಿವಾರ್ಯ ಭಾಗವಾಗಿ ಬಿಟ್ಟಿದೆ. ನಾನು ಐದು ಪುಸ್ತಕ ಗಳು ಬರೆದಿರುವೆನಾದರೂ, ಅದರಿಂದ ನನ್ನ ಬರವಣಿಗೆ ಪ್ರಕ್ರಿಯೆ ಯೇನೂ ಸುಲಭಗೊಂಡಿಲ್ಲ. ಒಂದು ಕಥೆಯು ಮುಂದೆ ಸಾಗಲು ನಿರಾಕರಿಸಿದಾಗ, ನಾನು ಈಗಲೂ ಕೂಡಾ ಹತಾಶನಾಗಿ ಬಿಡುತ್ತೇನೆ.ಇದರಿಂದಾಗಿ ನಾನು ಸುಮಾರು ಒಂದು ಡಝನ್‌ನಷ್ಟು ಹಸ್ತಪ್ರತಿಗಳನ್ನು ಅರ್ಧದಲ್ಲೇ ಕೈಬಿಟ್ಟಿರುವೆ.
►ಬರಹಗಾರನಾಗಿ ಬಾಲ್ಯ ಹಾಗೂ ಕೌಮಾರವಸ್ಥೆಯ ಹಂತಗಳಲ್ಲಿ ಯಾವ ಸ್ವಾರಸ್ಯವನ್ನು ನೀವು ಕಂಡಿದ್ದೀರಿ ಎಂಬುದನ್ನು ನಮಗೆ ವಿವರಿಸುವಿರಾ?
-ನನ್ನದು ಸಂಕಷ್ಟಭರಿತವಾದ ಬಾಲ್ಯವಾಗಿತ್ತು. ಬಹಳಷ್ಟು ಮುಂಚಿತ ವಾಗಿಯೇ ಹಾಸಿಗೆಗೆ ತೆರಳುವಂತಹ ಸಣ್ಣ ಪಟ್ಟಣದ ದೊಡ್ಡ ಮನೆ ಯಲ್ಲಿ ನಾನು ಬೆಳೆದಿದ್ದೆ. ಕೊನೆಯ ರೈಲು ಪಟ್ಟಣವನ್ನು ಹಾದುಹೋ ಗುತ್ತಿದ್ದಂತೆಯೇ ನಮ್ಮ ಮನೆಯನ್ನು ಕತ್ತಲು ಆವರಿಸುತ್ತಿತ್ತು. ಆಗ ನನಗೆ ವಿಷಾದ ಹಾಗೂ ಭಯವೆರಡೂ ಉಂಟಾಗುತ್ತಿತ್ತು. ನಮ್ಮ ಊರಿ ನಲ್ಲಿ ಉತ್ತಮವಾದುದೆಂದರೆ ಅದು ಕಡಲ ಕಿನಾರೆಯಾಗಿದೆ. ಆದರೆ ಒಬ್ಬಂಟಿಯಾಗಿ ಅಲ್ಲಿಗೆ ಹೋಗಲು ನಾವು ಹೆದರುತ್ತಿದ್ದೆವು. ನನಗೆ ಹೆಚ್ಚು ಗೆಳೆಯರಿರಲಿಲ್ಲ ಹಾಗೂ ನಾನು ಶಾಲೆಯನ್ನು ದ್ವೇಷಿಸುತ್ತಿದ್ದೆ. ಹದಿಹರೆಯದ ದಿನಗಳು ಕೂಡಾ ಇದಕ್ಕಿಂತ ಭಿನ್ನವಾದು ದಾಗಿರಲಿಲ್ಲ. ಆದರೆ ನಾನು ಬರೆಯಲು ಆರಂಭಿಸಿದಾಗ ಬಾಲಕ ನಾಗಿ ಅಥವಾ ಹದೆಹರೆಯದವನಾಗಿದ್ದಾಗ ನನಗಿರದಿದ್ದಂತಹ ಧೈರ್ಯ ಹಾಗೂ ಸಾಹಸತನದೊದಿಗೆ ನನ್ನ ಭೂತ ಕಾಲವನ್ನು ಮರು ಜೀವಂತಗೊಳಿಸಲು ಬಯಸಿದ್ದೆ.
ಕೃಪೆ: ಸ್ಕ್ರಾಲ್.ಇನ್