ಫೇಸ್ ಬುಕ್ ಮೆಸೆಂಜರ್ ನಲ್ಲಿ ತಪ್ಪು ಮೆಸೇಜ್ ಕಳುಹಿಸಿದ್ದರೆ ಚಿಂತೆ ಬೇಡ: ಹೀಗೆ ಮಾಡಿ

Update: 2019-02-06 09:13 GMT

ಫೇಸ್ ಬುಕ್ ಮೆಸೆಂಜರ್ ಮೂಲಕ ನೀವು ಕಳುಹಿಸಿದ ಸಂದೇಶದಲ್ಲಿ ಏನಾದರೂ ತಪ್ಪಿದ್ದರೆ ಆ ಸಂದೇಶವನ್ನು ಡಿಲೀಟ್ ಮಾಡುವುದು ಇಲ್ಲಿಯ ತನಕ ಅಸಾಧ್ಯವಾಗಿತ್ತು. ಆದರೆ ಇದೀಗ ವಾಟ್ಸ್‍ ಆ್ಯಪ್ ಡಿಲೀಟ್ ಫೀಚರ್ ನಂತೆ ಫೇಸ್ ಬುಕ್ ಕೂಡ ಮೆಸೆಂಜರ್ ನಲ್ಲಿ ಡಿಲೀಟ್ ಫೀಚರ್ ಅಳವಡಿಸಿದೆ.

ಫೇಸ್ ಬುಕ್ ಮೆಸೆಂಜರ್ ನ ‘ಡಿಲೀಟ್ ಫಾರ್ ಎವ್ರಿವನ್ ಫೀಚರ್’ ಅನ್ವಯ ಕಳುಹಿಸಲಾದ ಸಂದೇಶವನ್ನು 10 ನಿಮಿಷಗಳೊಳಗೆ ನೀವು ಡಿಲೀಟ್ ಮಾಡಬಹುದು. ಆದರೆ ವಾಟ್ಸ್ ಅಪ್ ನಲ್ಲಿ ಒಂದು ಸಂದೇಶ ಡಿಲೀಟ್ ಮಾಡಲು ಒಂದು ಗಂಟೆಗೂ ಹೆಚ್ಚಿನ ಕಾಲಾವಕಾಶವಿದೆ.

ಫೇಸ್ ಬುಕ್ ಅನ್ ಸೆಂಡ್ ಫೀಚರ್ ಬಳಕೆ ಸುಲಭ. ನೀವು ಡಿಲೀಟ್ ಮಾಡಲು ಬಯಸುವ ಮೆಸೇಜ್ ಮೇಲೆ ಟ್ಯಾಪ್ ಮಾಡಿ  ‘ರಿಮೂವ್ ಫಾರ್ ಎವ್ರಿವನ್’ ಆಪ್ಶನ್ ಆಯ್ಕೆ ಮಾಡಿ. ಈ ಸಂದೇಶ ಡಿಲೀಟ್ ಮಾಡಲಾಗಿದೆ ಎಂಬುದು ಆಗ ಎಲ್ಲರಿಗೂ ತಿಳಿದು ಬಿಡುತ್ತದೆ.

ಅದೇ ಸಮಯ ಕೇವಲ ನಿಮಗಾಗಿ ಒಂದು ಸಂದೇಶ  ಡಿಲೀಟ್ ಮಾಡಬೇಕಿದ್ದರೆ ``ರಿಮೂವ್ ಫಾರ್ ಯೂ'' ಆಪ್ಶನ್ ಆಯ್ಕೆ ಮಾಡಿದರಾಯಿತು. ಈ ಆಪ್ಶನ್ ಆಯ್ಕೆ ಮಾಡಿದರೆ ಆ ಸಂದೇಶ ನಿಮಗೆ ಕಾಣಿಸದೇ ಇದ್ದರೂ ನಿಮ್ಮ ಚಾಟ್ ಭಾಗವಾಗಿರುವ ಇತರರಿಗೆ ಕಾಣಿಸುತ್ತದೆ.

ಈ ಡಿಲೀಟ್ ಫಾರ್ ಎವ್ರಿವನ್ ಫೀಚರ್ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ವಿಶ್ವದಾದ್ಯಂತ ಲಭ್ಯವಿದೆ. ಅದಕ್ಕಾಗಿ ನಿಮ್ಮ ಮೆಸೆಂಜರ್ ಆ್ಯಪ್ ಅಪ್ಡೇಟ್ ಮಾಡಿದರಷ್ಟೇ ಸಾಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News