ಕಾಶ್ಮೀರ ಎಂಬ ಸ್ವರ್ಗದೊಳಗಿನ ನರಕ
ಜಮ್ಮುಕಾಶ್ಮೀರದಲ್ಲ್ಲಿ ಅಧಿಕಾರವನ್ನು ವಶಪಡಿಸಿ ಕೊಳ್ಳಲು ಬಿಜೆಪಿಯು ಅತಿಕ್ರಮಣಕಾರಿಯಾದ ರೀತಿಯಲ್ಲಿ ವರ್ತಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಮೊದಲಿಗೆ ಅದು ಮುಫ್ತಿ ಮುಹಮ್ಮದ್ ಸಯೀದ್ ಅವರನ್ನು ತನ್ನ ಜೊತೆ ಮೈತ್ರಿಯೇರ್ಪಡಿಸಿಕೊಳ್ಳುವಂತೆ ಒತ್ತಡ ಹೇರಿತು. ಆನಂತರ ಅವರ ಉತ್ತರಾಧಿಕಾರಿ ಮೆಹಬೂಬ ಮುಫ್ತಿ ಜೊತೆ ಅಧಿಕಾರದ ಹಗ್ಗಜಗ್ಗಾಟಕ್ಕಿಳಿಯಿತು. ಅಂತಿಮವಾಗಿ ಅದು ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆಯನ್ನು ಹೇರುವಂತೆ ಮಾಡಿತು.
ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರವರಿ 14, ಗುರುವಾರ ನಡೆದ ಕಾರ್‌ಬಾಂಬ್ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಕನಿಷ್ಠ 40 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಹತ್ತಿರಹತ್ತಿರ ಎರಡು ದಶಕಗಳಲ್ಲಿ ಕಾಶ್ಮೀರದಲ್ಲಿ ನಡೆದ ಅತ್ಯಂತ ಬೀಭತ್ಸ ಭಯೋತ್ಪಾದಕ ದಾಳಿ ಇದಾಗಿದೆ.
ಸಾವು ನೋವಿನ ಪ್ರಮಾಣವನ್ನು ಲೆಕ್ಕ ಹಾಕಿದಲ್ಲಿ, ಈ ಘಟನೆಯು 2016ರ ಸೆಪ್ಟಂಬರ್ 18ರಂದು ನಡೆದ ಉರಿ ದಾಳಿಗಿಂತಲೂ ಭೀಕರವಾದು ದಾಗಿದೆ. ಉರಿ ದಾಳಿಯಲ್ಲಿ, ಭಾರೀ ಶಸ್ತ್ರಾಸ್ತ್ರಗಳಿಂದ ಸಜ್ಜಿತರಾಗಿದ್ದ ಭಯೋತ್ಪಾದಕರು ಸೇನಾ ಬ್ರಿಗೇಡ್‌ನ ಮುಖ್ಯ ಕಾರ್ಯಾಲಯವನ್ನು ಗುರಿಯಿರಿಸಿ 19 ಮಂದಿ ಯೋಧರನ್ನು ಹತ್ಯೆಗೈದಿದ್ದರು.
ಪುಲ್ವಾಮ ದಾಳಿಯನ್ನು 2001ರ ಅಕ್ಟೋಬರ್ 1ರಂದು ಶ್ರೀನಗರ ದಲ್ಲಿನ ಜಮ್ಮುಕಾಶ್ಮೀರ ವಿಧಾನಸಭಾ ಸಂಕೀರ್ಣದ ಮೇಲೆ ನಡೆದಿದ್ದ ಕಾರ್ ಬಾಂಬ್ ದಾಳಿಗೆ ಹೋಲಿಸಬಹುದಾಗಿದೆ. ಆ ದಾಳಿಯಲ್ಲಿ ಮೂವರುಭಯೋತ್ಪಾದಕರು ಸ್ಫೋಟಕಗಳನ್ನು ತುಂಬಿಸಿದ್ದ ಟಾಟಾ ಸುಮೊ ವಾಹನ ವನ್ನು ಜಮ್ಮುಕಾಶ್ಮೀರ ವಿಧಾನಸಭಾ ಸಂಕೀರ್ಣದ ಮುಖ್ಯದ್ವಾರಕ್ಕೆ ಢಿಕ್ಕಿ ಹೊಡೆಸಿದ್ದರಿಂದ 38 ಮಂದಿ ಸಾವನ್ನಪ್ಪಿದ್ದರು. ಉರಿ ಹಾಗೂ ಜಮ್ಮುಕಾಶ್ಮೀರ ವಿಧಾನಸಭೆಯ ಮೇಲಿನ ದಾಳಿಗಳನ್ನುಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶೆ ಮುಹಮ್ಮದ್ ನಡೆಸಿದ್ದಾಗಿ ಹೇಳಲಾಗುತ್ತಿದೆ. ಪುಲ್ವಾಮದಲ್ಲಿ ಸಿಆರ್‌ಪಿಎಫ್ ವಾಹನ ವ್ಯೆಹದ ಮೇಲೆ ನಡೆದ ದಾಳಿಯ ಹೊಣೆಯನ್ನು ಕೂಡಾ ಈ ಗುಂಪು ವಹಿಸಿಕೊಂಡಿದೆ. ಜೈಶೆ ಮುಹಮ್ಮದ್ ಈಗಲೂ ಸಕ್ರಿಯವಾಗಿದ್ದು, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಾಳಿಯನ್ನು ನಡೆಸುವ ಸಾಮರ್ಥ್ಯ ವನ್ನು ಹೊಂದಿರುವುದು ಭಾರತಕ್ಕೆ ನಿಜಕ್ಕೂ ಆತಂಕಕಾರಿಯಾದ ವಿಷಯ ಎಂಬುದು ವಾಸ್ತವವಾಗಿದೆ.
ಆದರೆ ಮೇಲೆ ಉಲ್ಲೇಖಿಸಲಾದ ಈ ಎರಡು ದಾಳಿಗಳಂತಲ್ಲದೆ, ಪುಲ್ವಾಮ ದಾಳಿಯನ್ನು ಸ್ಥಳೀಯ ಉಗ್ರಗಾಮಿ ಆದಿಲ್ ಅಹ್ಮದ್ ದಾರ್ ಎಂಬಾತ ನಡೆಸಿರುವುದು ಕೂಡಾ ಕಳವಳಕಾರಿಯಾದ ಸಂಗತಿಯಾಗಿದೆ. ಉರಿ ದಾಳಿಗಿಂತಲೂ ಹೆಚ್ಚಾಗಿ ಹಲವಾರು ವಿಧದಲ್ಲಿ, ಪುಲ್ವಾಮ ದಾಳಿಯುನರೇಂದ್ರ ಮೋದಿ ಸರಕಾರದ ಕಾಶ್ಮೀರ ನೀತಿಯ ವೈಫಲ್ಯವನ್ನು ಪ್ರತಿಬಿಂಬಿಸುತ್ತಿದೆ.
ಈ ಕುರಿತ ಅಂಕಿಅಂಶಗಳ ಬಗ್ಗೆ ಗಮನಹರಿಸೋಣ
ಲೋಕಸಭೆಯಲ್ಲಿ ಕೇಂದ್ರ ಸರಕಾರವು ನೀಡಿದ ಉತ್ತರವೊಂದರ ಪ್ರಕಾರ, ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳು ಕಳೆದ ಐದು ವರ್ಷಗಳಲ್ಲಿ ಶೇ.261ದಷ್ಟು ಏರಿಕೆಯಾಗಿದೆ. 2013ರಲ್ಲಿ 170 ಹಾಗೂ2018ರಲ್ಲಿ 614 ಭಯೋತ್ಪಾದಕ ಘಟನೆಗಳು ವರದಿಯಾಗಿದ್ದವು.
2016ರಲ್ಲಿ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ಬಳಿಕ ಹಾಗೂ ಆನಂತರ ಮತ್ತೊಮ್ಮೆ 2018 ರಲ್ಲಿ ಹೀಗೆಎರಡು ಬಾರಿ ಭಯೋತ್ಪಾದಕ ಘಟನೆಗಳಲ್ಲಿ ಅಗಾಧ ಏರಿಕೆಯಾಗಿತ್ತು. ನರೇಂದ್ರ ಮೋದಿ ಸರಕಾರದ ಆಡಳಿತಾವಧಿಯಲ್ಲಿ ಕಾಶ್ಮೀರದಲ್ಲಿ ಉಗ್ರವಾದದೆಡೆಗೆ ವಾಲುತ್ತಿರುವ ಯುವಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. 2013ರಲ್ಲಿ 16 ಮಂದಿ ಉಗ್ರಗಾಮಿಗಳಾಗಿದ್ದರೆ, 2018 ರಲ್ಲಿ ಆ ಸಂಖ್ಯೆ 191ಕ್ಕೇರಿದ್ದು, ಹತ್ತಿರಹತ್ತಿರ 12 ಪಟ್ಟು ಹೆಚ್ಚಳವಾದಂತಾಗಿದೆ. ದೇಶದಲ್ಲೇ ಸೃಷ್ಟಿಯಾದ ಹಾಗೂ ವಿದೇಶಿ ಮೂಲದ ವರು ಸೇರಿದಂತೆ ಸಕ್ರಿಯವಾಗಿರುವ ಉಗ್ರರ ಸಂಖ್ಯೆ ಕಳೆದ ವರ್ಷ 300ಕ್ಕೆ ಏರಿಕೆಯಾಗಿತ್ತು.2013ರಲ್ಲಿ 78ರಷ್ಟಿದ್ದ ಅವರ ಸಂಖ್ಯೆ ಈಗ ನಾಲ್ಕು ಪಟ್ಟು ಹೆಚ್ಚಳವನ್ನು ಕಂಡಿದೆ.
ಕಾಶ್ಮೀರವನ್ನು ಒಂದು ರಾಜಕೀಯ ಸಮಸ್ಯೆಯೆಂದು ಪರಿಗಣಿಸುವ ಬದಲು ಅದೊಂದು ಬಗೆಯ ಸೈದ್ಧಾಂತಿಕ ಸಮರದ, ರಣಭೂಮಿ ಯೆಂಬ ದೃಷ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್,ಹೀಗೆ ಈ ಮೂವರು ನೋಡುತ್ತಿರುವುದೇ ಮೂಲಭೂತ ಸಮಸ್ಯೆ ಯಾಗಿದೆ. ಬಿಜೆಪಿಯ ಇದೇ ರೀತಿಯ ಸೈದ್ಧಾಂತಿಕ ಪೂರ್ವ ಗ್ರಹವು, ಈಶಾನ್ಯ ಭಾರತದಲ್ಲಿ ಪೌರತ್ವ ತಿದ್ದುಪಡಿ ಮಸೂದೆಯಿಂದಾಗಿ ಗೊಂದಲಕ್ಕೆ ಕಾರಣವಾಗಿದೆ. ಆದರೆ ಆ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ನಡೆಯುವ ಅಗತ್ಯವಿದೆ.
ಕಾಶ್ಮೀರದ ಬಗ್ಗೆ ಬಿಜೆಪಿಯ ದೃಷ್ಟಿಕೋನವು ಶ್ಯಾಮಪ್ರಸಾದ್ ಮುಖರ್ಜಿಯವರ ಅಪೂರ್ಣಗೊಂಡ ಧ್ಯೇಯವನ್ನು ಪೂರ್ತಿ ಗೊಳಿಸುವ ಹಾಗೂ ಕಾಶ್ಮೀರ ಕಣಿವೆಯಲ್ಲಿ ಆ ಪಕ್ಷದ ಪಾರಮ್ಯವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ.
ಜಮ್ಮುಕಾಶ್ಮೀರದಲ್ಲ್ಲಿ ಅಧಿಕಾರವನ್ನು ವಶಪಡಿಸಿಕೊಳ್ಳಲು ಬಿಜೆಪಿಯು ಅತಿಕ್ರಮಣಕಾರಿಯಾದ ರೀತಿಯಲ್ಲಿ ವರ್ತಿಸಿರುವುದು ಇದಕ್ಕೆ ಸಾಕ್ಷಿ ಯಾಗಿದೆ. ಮೊದಲಿಗೆ ಅದು ಮುಫ್ತಿ ಮುಹಮ್ಮದ್ ಸಯೀದ್ ಅವರನ್ನು ತನ್ನ ಜೊತೆ ಮೈತ್ರಿಯೇರ್ಪಡಿಸಿಕೊಳ್ಳುವಂತೆ ಒತ್ತಡ ಹೇರಿತು. ಆನಂತರ ಅವರ ಉತ್ತರಾಧಿಕಾರಿ ಮೆಹಬೂಬ ಮುಫ್ತಿ ಜೊತೆ ಅಧಿಕಾರದ ಹಗ್ಗಜಗ್ಗಾಟಕ್ಕಿಳಿಯಿತು. ಅಂತಿಮವಾಗಿ ಅದು ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆಯನ್ನು ಹೇರುವಂತೆ ಮಾಡಿತು.
ಮೋದಿಯವರ ನೀತಿಗೆ ವ್ಯತಿರಿಕ್ತವಾಗಿ, 2002ರಲ್ಲಿ ಆಗಿನ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರವು, ಕಾಶ್ಮೀರದಲ್ಲಿ ರಾಜಕೀಯ ಸ್ಥಿರತೆಯನ್ನು ಕಾಪಾಡುವ ಉದ್ದೇಶದಿಂದ ಮುಫ್ತಿ ಮುಹಮ್ಮದ್ ಸಯೀದ್ ನೇತೃತ್ವದಲ್ಲಿ ಪಿಡಿಪಿ-ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಆದರೆ ಮೋದಿ ಸರಕಾರದ ಸೈದ್ಧಾಂತಿಕತೆ ಪ್ರೇರಿತವಾದ ಹಠವಾದಿತ ನವು, ವಿನಾಶಕಾರಕ ವಾದ ಕಾಶ್ಮೀರ ನೀತಿಗೆ ಕಾರಣವಾಯಿತು. 2002 ರಿಂದೀಚೆಗೆ ಕಾಶ್ಮೀರದಲ್ಲಿ ಹೊಸದಿಲ್ಲಿ ಯು ಏನೆಲ್ಲಾ ಸದ್ಭಾವನೆಗಳನ್ನು ಸಂಪಾದಿಸಿತ್ತೋ ಅವೆಲ್ಲವನ್ನೂ ಅದು ಹಾಳುಗೆಡವಿದೆ.
ಈಗ ಹಿಂದಕ್ಕೆ ಅಂದರೆ 2014ನೇ ಇಸವಿಗೆ ಹೋಗೋಣ. ಆ ವರ್ಷ ನಡೆದ ಜಮ್ಮುಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಕಾಶ್ಮೀರದಲ್ಲಿ ಕಳೆದ 25 ವರ್ಷಗಳಲ್ಲೇ ಅತ್ಯಧಿಕ ಮಂದಿ ಮತ ಚಲಾಯಿಸಿದ್ದರು. ಪ್ರತ್ಯೇಕತಾವಾದಿಗಳ ಚುನಾವಣಾ ಬಹಿಷ್ಕಾರದ ಹಿನ್ನೆಲೆಯಲ್ಲಿ ಕಡಿಮೆಪ್ರಮಾಣದ ಮತದಾನದ ಇತಿಹಾಸ ಹೊಂದಿರುವ ಕಾಶ್ಮೀರ ಕಣಿವೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಆ ಸಲ ಮತದಾನದ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿತ್ತು.
2014ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಶ್ಮೀರ ಕಣಿವೆಯಲ್ಲಿ ಬಿಜೆಪಿಯು ಅಕ್ರಮಣಕಾರಿಯಾದ ರೀತಿಯಲ್ಲಿ ಚುನಾ ವಣಾ ಪ್ರಚಾರವನ್ನು ಕೈಗೊಂಡಿತ್ತು. ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ತಮ್ಮ ಅಸ್ಮಿತೆಗೆ ಹಾಗೂ ಜಮ್ಮುಕಾಶ್ಮೀರಕ್ಕೆ ನೀಡ ಲಾಗಿರುವ ವಿಶೇಷ ಸ್ಥಾನಮಾನಕ್ಕೆ ಅಪಾಯವುಂಟಾದೀತೆಂದು ಹಲವಾರು ಕಾಶ್ಮೀರಿಗಳು ಭಾವಿಸಿದ್ದರು.
1987ರ ವಿಧಾನಸಭಾ ಚುನಾವಣೆಯ ಬಳಿಕ ಅನೇಕ ಕಾಶ್ಮೀರಿ ಗಳು ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದು ಅದೇ ಮೊದಲ ಸಲವಾಗಿತ್ತು. ಬಿಜೆಪಿಯನ್ನು ಪರಾಭವಗೊಳಿಸುವುದೇ ಅವರ ಏಕೈಕ ಗುರಿಯಾಗಿತ್ತು.
2014ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಅವರು, ಪಿಡಿಪಿ ಪಕ್ಷದ ನಾಯಕ ತಾರೀಖ್ ಹಮೀದ್ ಕಾರಾ ಅವರ ಕೈಯಲ್ಲಿ ಸೋಲನುಭವಿಸಿದ್ದುದು, ಮತದಾ ರರು ಬದಲಾವಣೆಯನ್ನು ತರಲು ಬಯಸಿದ್ದರ ಸಂಕೇತ ಅದಾಗಿತ್ತು.
ಆದಾಗ್ಯೂ ಕಾಶ್ಮೀರದ ಬಿಜೆಪಿ ವಿರೋಧಿ ಜನಾದೇಶವನ್ನು ಮುಫ್ತಿ ಮುಹಮ್ಮದ್ ಸಯೀದ್ ಅವರು ಆ ಪಕ್ಷದ ಜೊತೆ ಕೈಜೋಡಿಸುವ ಮೂಲಕ ವಿಫಲಗೊಳಿಸಿದರು. ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ನಿಂದ ಬೆಂಬಲದ ಕೊಡುಗೆ ದೊರೆತರೂ ಅದನ್ನು ತಿರಸ್ಕರಿಸಿ ಅವರು ಬಿಜೆಪಿ ಬೆಂಬಲವನ್ನು ಆಶ್ರಯಿಸಿದರು.
ಜಮ್ಮುಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ಸರಕಾರ ರಚನೆಯಾದ ಬಳಿಕ ಉಗ್ರಗಾಮಿಗಳ ಗುಂಪಿಗೆ ಸೇರ್ಪಡೆಗೊಳ್ಳುವ ಸ್ಥಳೀಯ ಯುವಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ದಕ್ಷಿಣ ಕಾಶ್ಮೀರದಲ್ಲಿ ಪಿಡಿಪಿ ಪ್ರಭಾವ ವಿರುವ ಕ್ಷೇತ್ರಗಳು ಉಗ್ರವಾದದ ಮುಖ್ಯ ಕೇಂದ್ರಗಳಾಗಿ ಮಾರ್ಪಟ್ಟ ವೆಂಬುದು ಇಲ್ಲಿ ಗಮನಾರ್ಹವಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಹತ್ಯೆಗೀಡಾದ ಕಾಶ್ಮೀರ ಮೂಲದ ಉಗ್ರರಲ್ಲಿ ಬಹುತೇಕ ಮಂದಿ ದಕ್ಷಿಣ ಕಾಶ್ಮೀರದವರಾಗಿದ್ದಾರೆ. ಬುರ್ಹಾನ್ ವಾನಿ ಪುಲ್ವಾಮ ಜಿಲ್ಲೆಯ ತ್ರಾಲ್ ನಿವಾಸಿಯಾಗಿ ದ್ದರೆ, ರಿಯಾಝ್ ನೈಕೂ ಕೂಡಾ ಪುಲ್ವಾಮ ಜಿಲ್ಲೆಯ ಆವಂತಿ ಪೊರಾದವನು. ಸದ್ದಾಂ ಪದ್ದೆರ್ ಎಂಬಾತ ಶೋಪಿಯಾನ್ ಜಿಲ್ಲೆಯ ಹೆಫ್‌ನವ. ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಕಾರ್‌ಬಾಂಬ್ ದಾಳಿ ನಡೆಸಿದ ಅಲಿ ಅಹ್ಮದ್ ದಾರ್ ಪುಲ್ವಾಮ ಜಿಲ್ಲೆಯ ಕಾಕ್‌ಪೊರಾದವ.
2002 ಹಾಗೂ 2008ರ ವಿಧಾನಸಭಾ ಚುನಾವಣೆ ಗಳಲ್ಲಿ, ಜಮಾಅತೆ ಇಸ್ಲಾಮಿ ಕಾರ್ಯಕರ್ತರು, ಚುನಾವಣೆ ಗಳನ್ನು ಬಹಿಷ್ಕರಿಸಬೇಕೆಂಬ ಪ್ರತ್ಯೇಕತಾವಾದಿಗಳ ಕರೆಯನ್ನು ಧಿಕ್ಕರಿಸಿ, ತಮ್ಮ ಮನೆ ಗಳಿಂದ ಹೊರಬಂದು ಪಿಡಿಪಿ ಪರವಾಗಿ ಮತಚಲಾಯಿಸಿದ್ದರು.
ಇದಕ್ಕೆ ಪ್ರತಿಯಾಗಿ, ಜಮಾಅತೆ ಇಸ್ಲಾಮಿ ಪ್ರಭಾವ ವಿರುವ ಪ್ರದೇಶಗಳಲ್ಲಿ ಸಾಧಾರಣ ಮಟ್ಟದ ಶಾಂತಿ ನೆಲೆಸು ವಂತೆ ಮಾಡುವಲ್ಲಿ ಅವರು ಸಫಲರಾದರು. 1990ರ ದಶಕಗಳಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಆಡಳಿತದ ಕಾಲದಲ್ಲಿ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದ್ದ ಇಖ್ವಾನಿಗಳು (ಬಂಡುಕೋರರ ನಿಗ್ರಹ ತಂಡ) ತಮ್ಮ ಪ್ರದೇಶಗಳಿಂದ ನಿರ್ಗಮಿಸುವಂತೆ ಮಾಡುವಲ್ಲಿ ಸಫಲರಾದರು.
ಆದರೆ ಬಿಜೆಪಿ ಜೊತೆಗಿನ ಮೈತ್ರಿಯು, ಪಿಡಿಪಿಗೆ ಜಮಾಅತ್‌ನೊಂದಿಗೆ ನಂಟಿನಲ್ಲಿ ಬಿರುಕು ಮೂಡಿಸಿತು.ಜನಪ್ರಿಯ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ 2016ರಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತನಾದಾಗ, ಪಿಡಿಪಿಯ ವಿರುದ್ಧ ಆಕ್ರೋಶ ನಾಟಕೀಯವಾದ ರೀತಿಯಲ್ಲಿ ಉಲ್ಬಣಿಸಿತು.
ಆನಂತರ ಹಿಂಸೆಯ ಆವರ್ತನವೇ ಆರಂಭಗೊಂಡಿತು. ಪ್ರತಿಭಟನೆಗಳು ಹಾಗೂ ಭದ್ರತಾಪಡೆಗಳ ಕಾರ್ಯಾಚರಣೆ ಯು ನಾಗರಿಕ ಸಾವುನೋವುಗಳಿಗೆ ಕಾರಣವಾದವು. ಪ್ರತಿಯೊಂದು ನಾಗರಿಕ ಸಾವುನೋವು ಹಾಗೂ ಪೆಲೆಟ್ ಗುಂಡುಗಳ ಗಾಯಗಳು ಕಾಶ್ಮೀರಿಗಳ ನಡುವೆ ಆಕ್ರೋಶಕ್ಕೆ ಕಾರಣವಾದವು. ಹೆಚ್ಚು ಹೆಚ್ಚು ಉಗ್ರವಾದವನ್ನು ಕೈಗೆತ್ತಿ ಕೊಂಡರು. ಅಧಿಕ ಸಂಖ್ಯೆಯ ಸ್ಥಳೀಯರು, ಭದ್ರತಾಪಡೆಗಳಿಗೆ ನೆರವಾಗುವುದನ್ನು ನಿಲ್ಲಿಸಿದರು. ಪಿಡಿಪಿಯ ವಿಶ್ವಸನೀಯತೆ ಕುಸಿಯತೊಡಗಿತು. ಕಾಶ್ಮೀರದಲ್ಲಿ ಹೊಸದಿಲ್ಲಿಯ ಅತಿ ದೊಡ್ಡ ಆಸ್ತಿಯಂತಿದ್ದ ಪಿಡಿಪಿಯು, ಒಂದು ಹೊರೆಯಾಗತೊಡಗಿತು.
ಇನ್ನೊಂದೆಡೆ ನ್ಯಾಶನಲ್ ಕಾನ್ಫರೆನ್ಸ್ ಪಕ್ಷವು, ದಶಕಗಳ ಹಿಂದೆ ಶೇಖ್ ಅಬ್ದುಲ್ಲಾ ಅವರ ಭೂಸುಧಾರಣಾ ಕ್ರಮ ಗಳಿಂದ ಪ್ರಯೋಜನ ಪಡೆದಿರುವ ಉತ್ತರ ಕಾಶ್ಮೀರದ ಹಳೆಯ ತಲೆಮಾರಿನ ಮತದಾರರಲ್ಲಿ ಈಗಲೂ ಸದ್ಭಾವನೆಯನ್ನು ಉಳಿಸಿಕೊಂಡಿದೆ.
ಆದರೆ ಕಾಶ್ಮೀರಿಗಳಿಗೆ ಕಳೆದ ಎರಡು ದಶಕಗಳಲ್ಲಿ, ಹಿಂದೆಂಗಿಂತಲೂ ಈಗ ಹೊಸದಿಲ್ಲಿಯಿಂದ ತಾವು ದೂರ ಮಾಡಲ್ಪಟ್ಟಿದ್ದೇವೆ ಎಂಬ ಭಾವನೆ ಉಂಟಾಗಿದೆ.
ಇದರಿಂದಾಗಿ, ಭದ್ರತಾ ಪಡೆಗಳು ಅವಲಂಬಿಸಿರುವಂತಹ ಮಾನವಬೇಹುಗಾರಿಕಾ ಜಾಲ (ಹೆಚ್ಚು ಕಮ್ಮಿ ಸ್ಥಳೀಯ ಕಾಶ್ಮೀರಿ ಗಳನ್ನು ಅವಲಂಬಿಸಿದೆ)ವು ಸಂಪೂರ್ಣವಾಗಿ ಕುಸಿದುಬಿದ್ದಿದೆ.
ಈ ಮಾನವಬೇಹುಗಾರಿಕಾ ಜಾಲ ಮುರಿದುಬಿದ್ದಿರು ವುದು, ಭದ್ರತಾಪಡೆಗಳು, ಪುಲ್ವಾಮದಂತಹ ದಾಳಿಗಳಿಗೆ ತುತ್ತಾಗಲು ಕಾರಣಗಳಲ್ಲೊಂದಾಗಿದೆ.