ಕರ್ನಾಟಕದಲ್ಲೊಬ್ಬಳು ಮಲಾಲಾ
ಮಂಜುಳಾ ಮನವಳ್ಳಿ ಸಣ್ಣ ವಯಸ್ಸಿನಲ್ಲಿಯೇ ಮಕ್ಕಳ ಹಕ್ಕುಗಳ ಕುರಿತಾಗಿ ರಾಜ್ಯ, ಅಂತರ್‌ರಾಷ್ಟೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಮತ್ತು ಭಾಷಣ, ಉಪನ್ಯಾಸ ಕಲೆಯನ್ನು ಬೆಳೆಸಿಕೊಂಡಿದ್ದಾರೆ. ಸದ್ಯ ಮಕ್ಕಳ ಹಕ್ಕುಗಳ ಬಗ್ಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಶಾಲಾ ಕಾಲೇಜುಗಳ ಮಕ್ಕಳಿಗೆ, ಸಭೆ ಸಮಾರಂಭಗಳಲ್ಲಿ ಮಕ್ಕಳ ಹಕ್ಕುಗಳ ಕುರಿತಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ಮಕ್ಕಳು ಮತ್ತು ಮಕ್ಕಳ ಹಕ್ಕುಗಳು ಎಂದಾಕ್ಷಣ ನಮಗೆ ನೆನಪಾಗುವುದೇ ಪಾಕಿಸ್ತಾನದ ಬಾಲೆ ಮಲಾಲಾ. ಅಂತಹ ಒಬ್ಬಳು ಮಲಾಲಾ ನಮ್ಮ ರಾಜ್ಯದಲ್ಲಿ ಕೂಡ ಇದ್ದಾಳೆ. ಮಕ್ಕಳ ಹಕ್ಕುಗಳ ರಕ್ಷಣೆಗೆ ಧಕ್ಕೆಯಾದರೆ ಸಾಕು ದಿಟ್ಟೆಯಂತೆ ಬಂದು ಹೋರಾಟಮಾಡುವ ಇವಳನ್ನು ಕರ್ನಾಟಕದ ಮಲಾಲಾ ಎಂದೆ ಕರೆಯುತ್ತಾರೆ. ಇವಳು ಪುಟ್ಟ ಹುಡುಗಿ ಇದ್ದಾಗಲೇ ಕಾರ್ಯಕ್ರಮ ಒಂದರಲ್ಲಿ ಮಕ್ಕಳ ಹಕ್ಕುಗಳ ಕುರಿತು ಮಾತಾಡಿ ಎಲ್ಲರ ಗಮನಸೆಳೆದಿದ್ದಳು. 2013 ರಲ್ಲಿ ಜಿನೇವಾದಲ್ಲಿ ನಡೆದ ಮಕ್ಕಳ ಹಕ್ಕುಗಳ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದಳು. ಮಕ್ಕಳ ಕುರಿತು ಜಾರಿಗೆ ಬರಬೇಕಾದ ಕಾನೂನುಗಳ ಬಗ್ಗೆ 26 ಪುಟದ ವರದಿ ಸಹಿತ ಪ್ರಬಂಧವನ್ನು ಮಂಡಿಸಿದ್ದರು. ಅಂದು ಭಾರತವನ್ನು ಪ್ರತಿನಿಧಿಸಿ ಮಂಡಿಸಿದ ವರದಿ ಆಧರಿಸಿ ನರೇಂದ್ರ ಮೋದಿ ಅವರ ಭೇಟಿ ಬಚಾವೋ ಭೇಟಿ ಪಢಾವೋ ಯೋಜನೆಗೆ ಸ್ಫೂರ್ತಿ ಸಿಕ್ಕಿತು. 20ಕ್ಕೂ ಹೆಚ್ಚು ಬಾಲ್ಯ ವಿವಾಹಗಳನ್ನು ತಡೆದು ಸೈ ಎನಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಸದ್ಯ ಕಾನೂನು ವಿದ್ಯಾರ್ಥಿನಿ ಆಗಿರುವ ಇವರು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಹಕ್ಕುಗಳ ಬಗ್ಗೆ ಅಗಾಧ ತಿಳುವಳಿಕೆಯೊಂದಿಗೆ ಜನಜಾಗೃತಿ ಮೂಡಿಸುವ ಮೂಲಕ ಕರ್ನಾಟಕದಲ್ಲಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.
ಮಂಜುಳಾ ಯಾರು?
ಧಾರವಾಡ ಜಿಲ್ಲೆಯ ರಾಮನಾಥಪುರ ಗ್ರಾಮದ ಮಂಜುಳಾ ಮನವಳ್ಳಿ. ಕಿಡ್ಸ್ ಸಂಸ್ಥೆ ನೇತೃತ್ವದ ಗುಬ್ಬಚ್ಚಿ ಮಕ್ಕಳ ಮಹಾಸಂಘದ ಉಪಾಧ್ಯಕ್ಷೆಯಾಗಿ ಕೆಲಸಮಾಡಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರು ವೀರಾಪುರದಲ್ಲಿ ಮುಗಿಸಿಕೊಂಡು ಧಾರವಾಡದಲ್ಲಿನ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಮುಂದುವರಿಸಿದ್ದಾರೆ. ಸಮಾಜಮುಖಿ ಕೆಲಸ ಮಾಡುತ್ತಾ ಮಕ್ಕಳ ಶೇಯೋಭಿವೃದ್ಧಿಗಾಗಿ ಸುಮಾರು ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಪಕ್ಕಾ ರೈತ ಕುಟುಂಬದಲ್ಲಿ ಜನಿಸಿದ ಇವರು ಮಹಾಂತೇಶ್ ಮತ್ತು ಮಹಾದೇವಿ ಅವರ ಹಿರಿಯ ಪುತ್ರಿಯಾಗಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಮಕ್ಕಳ ಹಕ್ಕುಗಳ ಕುರಿತಾಗಿ ರಾಜ್ಯ, ಅಂತರ್‌ರಾಷ್ಟೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಮತ್ತು ಭಾಷಣ, ಉಪನ್ಯಾಸ ಕಲೆಯನ್ನು ಬೆಳೆಸಿಕೊಂಡಿದ್ದಾರೆ. ಸದ್ಯ ಮಕ್ಕಳ ಹಕ್ಕುಗಳ ಬಗ್ಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಶಾಲಾ ಕಾಲೇಜುಗಳ ಮಕ್ಕಳಿಗೆ, ಸಭೆ ಸಮಾರಂಭಗಳಲ್ಲಿ ಮಕ್ಕಳ ಹಕ್ಕುಗಳ ಕುರಿತಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಏಳೆಂಟು ವರ್ಷಗಳಿಂದ ಬಿಡುವಿನ ವೇಳೆಯಲ್ಲಿ ಮಕ್ಕಳ ಹಕ್ಕುಗಳು, ಸಂರಕ್ಷಣೆ ಪರಿಸರ ಸಂರಕ್ಷಣೆ, ಬಾಲ್ಯವಿವಾಹ ನಿಷೇಧ, ಬಾಲಕಾರ್ಮಿಕ ಪದ್ಧತಿ ನಿಷೇಧ, ಹೀಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುವ ಹತ್ತು ಹಲವಾರು ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಪ್ರಶಸ್ತಿಗಳ ಸರಮಾಲೆ
ಅವ್ವ ಪ್ರಶಸ್ತಿ, ಛಲಗಾರ ರತ್ನಶ್ರೀ, ಪ್ರೈಡ್ ಆಫ್ ಕೆ.ಎಲ್.ಇ (ಬಂಗಾರದ ಪ್ರಶಸ್ತಿ) ಬೇಂದ್ರೆ ಪ್ರಶಸ್ತಿ, ಯುವ ಸಾಧಕಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅಕ್ಕ ಮಹಾದೇವಿ ಸಿರಿ, ಪ್ರತಿಭಾ ಪುರಸ್ಕಾರ, ಕನಕಶ್ರೀ, ಪ್ರತಿಭಾ ಚೇತನ, ಅವರ ಕೆಲಸ ಕಾರ್ಯ ಮೆಚ್ಚಿ ಸಮಾಜದಲ್ಲಿ ಹಲವಾರು ಗಣ್ಯರು, ಸಂಘ ಸಂಸ್ಥೆಗಳು, ಇವರನ್ನು ಹುಡುಕಿ ಪ್ರಶಸ್ತಿಗಳನ್ನು ನೀಡಿವೆ. ಇತ್ತೀಚೆಗೆ 2018-19ರ ಸಾಲಿನ ರಾಜ್ಯ ಯುವ ಪ್ರಶಸ್ತಿ ಕೂಡಾ ಲಭಿಸಿದೆ. ಇನ್ನೂ ಹಲವಾರು ಪ್ರಶಸ್ತಿಗಳೂ ಇವರನ್ನ ಹುಡುಕಿಕೊಂಡು ಬಂದಿವೆ. ಸುಮಾರು 300 ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಕ್ಕುಗಳ ಕುರಿತು ಉಪನ್ಯಾಸ ನೀಡಿದ್ದಾರೆ
ದೇಶದ ವಿವಿಧ ರಾಜ್ಯಗಳಿಗೆ ನಮ್ಮ ಕರ್ನಾಟಕವನ್ನು ಹೋಲಿಸಿದರೆ ಹಲವು ಪ್ರಗತಿಗಳನ್ನ ಸಾಧಿಸಿದೆ ಎಂದು ಸರಕಾರದ ವರದಿಗಳು ತೋರಿಸುತ್ತವೆ. ಬಹುತೇಕ ವರದಿಗಳು ನಮ್ಮಲ್ಲಿನ ಆರ್ಥಿಕ ಪ್ರಗತಿಗೆ ಹೆಚ್ಚು ಒತ್ತು ನೀಡುತ್ತವೆ ಮತ್ತು ನಮ್ಮಲ್ಲಿ ಆಗುತ್ತಿರುವ ಉನ್ನತ ಶಿಕ್ಷಣ ಕ್ರಾಂತಿಯನ್ನು ಮರೆಯಲಾಗದು.ಆದರೆ, ಮಾನವ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಮಕ್ಕಳ ಸ್ಥಿತಿಗತಿಯನ್ನು ಅವರ ಶಿಕ್ಷಣ, ಆರೋಗ್ಯ, ರಕ್ಷಣೆ, ಪ್ರೀತಿ ಮತ್ತು ಆರೈಕೆಯನ್ನುನೀಡುವುದು ಹಾಗೂ ಮಕ್ಕಳ ವಿಚಾರಗಳ ಕುರಿತು ಮಕ್ಕಳ ಭಾಗವಹಿಸುವಿಕೆಯ ಹಿನ್ನೆಲೆಯಲ್ಲಿ ಮಕ್ಕಳ ಸ್ಥಿತಿಗತಿಯನ್ನು ಅರ್ಥ ಮಾಡಿಕೊಳ್ಳುವುದು ಮಕ್ಕಳಿಗೂ ಅತ್ಯಾವಶ್ಯಕ.
ಮಕ್ಕಳ ಹಕ್ಕುಗಳು
1. ದೌರ್ಜನ್ಯ ಪ್ರಶ್ನಿಸುವ ಹಕ್ಕು
2. ಬದುಕುವ ಹಕ್ಕು, ರಕ್ಷಣೆಯ ಹಕ್ಕು
3. ವಿಕಾಸ ಹೊಂದುವ ಹಕ್ಕು
4. ಭಾಗವಹಿಸುವ ಹಕ್ಕು, 2013ರ ಜಿನೇವಾ ಸಮಾವೇಶದಲ್ಲಿ ಭಾಗಿ ಸ್ವಿಟ್ಸರ್‌ಲೆಂಡ್ ನಲ್ಲಿ 2013ರಲ್ಲಿ 66ನೇ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ ಭಾರತದಿಂದ 9 ಮಕ್ಕಳ ತಂಡ ಭಾಗವಹಿಸಿತ್ತು. ಆ ತಂಡದಲ್ಲಿ ಮಂಜುಳಾ ಕೂಡ ಒಬ್ಬರಾಗಿದ್ದರು. ಹಾಗೆ ಅಲ್ಲಿ ಮಕ್ಕಳ ಹಕ್ಕುಗಳು ಕುರಿತು ವರದಿಯನ್ನು ಮಂಡಿಸಿದರು. ಆ ವರದಿಯಲ್ಲಿ ಇಲ್ಲಿನ ಮಕ್ಕಳ ಕುರಿತಂತೆ ವಿಶ್ವದ ಎಲ್ಲ ರಾಷ್ಟ್ರಗಳು ಸರಕಾರದ ಪರವಾಗಿ ವಿಶ್ವಸಂಸ್ಥೆಗೆ ವರದಿ ಸಲ್ಲಿಸುವುದಾಗಿದೆ.
ಗುಬ್ಬಚ್ಚಿ ಮಹಾಸಂಸ್ಥೆ ಮತ್ತು ಮಕ್ಕಳ ಹಕ್ಕುಗಳ ಮೂಲಕ ಗುರುತಿಸಿಕೊಂಡ ನನಗೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಎನ್.ಜಿ.ಒ ಒಂದನ್ನು ಪ್ರಾರಂಭಿಸಬೇಕು ಎನ್ನುವುದು ನನ್ನ ಬಾಲ್ಯದ ಆಸೆಯಾಗಿದೆ. ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹದ ಕುರಿತು ನಾನು ಸಾಕಷ್ಟು ಕೆಲಸ ಮಾಡಿದ್ದೇನೆ.
- ಮಂಜುಳಾ ಮನವಳ್ಳಿ
ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಧಾರವಾಡ