‘ಭಾರತೀಯರ ಮಾತೆ’ ಕಸ್ತೂರ್ಬಾ, ಬೋಸ್ ಮತ್ತು ಸಂಘಪರಿವಾರ

Update: 2019-03-10 18:36 GMT

ಭಾಗ-1

ದೇಶವು ಕಸ್ತೂರ್ಬಾರವರ 75ನೇ ಪುಣ್ಯತಿಥಿಯನ್ನು ಹಾಗೂ 150ನೇ ಜನ್ಮದಿನವನ್ನು ಜ್ಞಾಪಿಸಿಕೊಳ್ಳುವ ಸಂದರ್ಭದಲ್ಲಿ ಅವರ 60ಕ್ಕೂ ಹೆಚ್ಚು ವರ್ಷಗಳ ಅವಧಿಯ ಸಾರ್ವಜನಿಕ ಬದುಕಿನ ಹಲವು ಮುಖಗಳು ನಮ್ಮೆದುರು ಬಂದು ನಿಲ್ಲುತ್ತವೆ. ಒಬ್ಬಳು ಸ್ವಾತಂತ್ರ ಹೋರಾಟಗಾರ್ತಿಯಾಗಿ ಹಲವಾರು ನಾಗರಿಕ ಪ್ರತಿಭಟನೆಗಳಲ್ಲಿ ಓರ್ವ ಕಾರ್ಯಕರ್ತೆಯಾಗಿ ಅವರು ಭಾಗವಹಿಸಿದ್ದರು.

‘‘ಕಸ್ತೂರ್ಬಾ ಗಾಂಧಿ ಇನ್ನಿಲ್ಲ. ಅವರು ತನ್ನ 74ರ ಹರೆಯದಲ್ಲಿ ಬ್ರಿಟಿಷ್ ಜೈಲಿನಲ್ಲಿ ನಿಧನರಾದರು... ಭಾರತೀಯರಿಗೆ ತಾಯಿಯಂತಿದ್ದ ಈ ಶ್ರೇಷ್ಠ ಮಹಿಳೆಗೆ ನಾನು ವಂದಿಸುತ್ತೇನೆ. ನಮ್ಮ ಮಾತೃಭೂಮಿಯ ಸ್ವಾತಂತ್ರ ಹೋರಾಟದ ಅವಧಿಯಲ್ಲಿ ಅವರು ಭೇಟಿಯಾದ ಮತ್ತು ಯಾವ ಮಿಲಿಯಗಟ್ಟಲೆ ಹುಡುಗಿಯರ ಜೊತೆ ಬದುಕಿದ್ದರೋ ಆ ಮಿಲಿಯಗಟ್ಟಲೆ ಭಾರತೀಯ ಹುಡುಗಿಯರಿಗೆ ಅವರು ಒಂದು ಸ್ಫೂರ್ತಿಯಾಗಿದ್ದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಸತ್ಯಾಗ್ರಹದ ದಿನಗಳ ಲಾಗಾಯ್ತು ಅವರು ಬದುಕಿನಲ್ಲಿ ಹಲವಾರು ಸಂಕಷ್ಟಗಳನ್ನು ಹಾಗೂ ಯಾತನೆಗಳನ್ನು ಅವರ ಮಹಾನ್ ಪತಿಯೊಂದಿಗೆ ಅನುಭವಿಸಿದವರು; ಬದುಕಿನ ಹಲವಾರು ಏರಿಳಿತಗಳಿಗೆ ಸಾಕ್ಷಿಯಾದವರು. ಅವರು ಹಲವು ಬಾರಿ ಜೈಲಿಗೆ ಹೋದರು. ಆ ಜೈಲುವಾಸ ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿತು. ಆದರೂ, ತನ್ನ 74ನೇ ವಯಸ್ಸಿನಲ್ಲಿ ಕೂಡ ಅವರು ಜೈಲಿಗೆ ಹೋಗಲು ಅಳುಕಲಿಲ್ಲ; ಅಂಜಲಿಲ್ಲ. ಮಹಾತ್ಮಾ ಗಾಂಧಿ ನಾಗರಿಕ ಅಸಹಕಾರ ಚಳವಳಿ ನಡೆಸಿದಾಗ, ಆಕೆ ಚಳವಳಿಯ ಮುಂಚೂಣಿಯಲ್ಲಿದ್ದರು.’’
1944ರ ಫೆಬ್ರವರಿ 22ರಂದು ಕಸ್ತೂರ್ಬಾ ಆಗಾ ಖಾನ್ ಅರಮನೆಯಲ್ಲಿ ನಿಧನರಾದಾಗ ಸುಭಾಶ್ಚಂದ್ರ ಬೋಸ್ ಬರೆದ ಮಾತುಗಳಿವು. ಆಗಾ ಖಾನ್ ಅರಮನೆಯನ್ನು ಆಗ ಒಂದು ಸೆರೆಮನೆಯಾಗಿ ಪರಿವರ್ತಿಸಲಾಗಿತ್ತು. ಕಸ್ತೂರ್ಬಾರವರ ಆರೋಗ್ಯ ತೀವ್ರವಾಗಿ ಹದಗೆಡುತ್ತಿದ್ದರೂ ಅವರನ್ನು ಬಂಧನದಿಂದ ಬಿಡುಗಡೆಗೊಳಿಸಲು ನಿರಾಕರಿಸಿದ್ದ ಕ್ರೂರ ವಸಾಹತುಶಾಹಿ ಬ್ರಿಟಿಷ್ ಸರಕಾರದ ನಿಲುವಿನಿಂದಾಗಿ ಸಂಭವಿಸಿದ್ದ ಸಾವು ಆಕೆಯದು ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಆಕೆ ಅದಾಗಲೇ ನಾಲ್ಕು ತಿಂಗಳುಗಳಿಂತಲೂ ಹೆಚ್ಚು ಸಮಯದಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಆ ಅವಧಿಯಲ್ಲಿ ಅವರಿಗೆ ಒಮ್ಮೆ ಹೃದಯಾಘಾತವೂ ಆಗಿತ್ತು.
‘‘ಕಸ್ತೂರ್ಬಾರವರು ಹುತಾತ್ಮರಾಗಿದ್ದಾರೆ’’ ಎಂದು ಸ್ಪಷ್ಟವಾದ ಮಾತುಗಳಲ್ಲಿ ಬರೆಯಲು ಮತ್ತು ಆ ಹುತಾತ್ಮ ಸಾವಿಗೆ, ಕ್ರೂರವಾದ ಕೊಲೆಗೆ ಬ್ರಿಟಿಷ್ ಸರಕಾರವೇ ಜವಾಬ್ದಾರಿ ಎಂದು ಬೋಸ್ ಬರೆಯಲು ಪ್ರಾಯಶಃ ಇದೇ ಕಾರಣವಿರಬೇಕು.
ಅವರು ಹೀಗೆ ಬರೆದಿದ್ದರು: ‘‘ ಸ್ವಾತಂತ್ರ ಮತ್ತು ನೀತಿಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ, ಆದರೆ ನಿಜವಾಗಿಯೂ ಈ ಬರ್ಬರ ಕೊಲೆಯ ಅಪರಾಧಿಗಳಾಗಿರುವ ಈ ರಣಹದ್ದುಗಳ ಬಗ್ಗೆ ನನಗೆ ಜಿಗುಪ್ಸೆಯಲ್ಲದೆ ಬೇರೆ ಯಾವ ಭಾವನೆಯೂ ಇಲ್ಲ’’
ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಕಸ್ತೂರ್ಬಾರವರನ್ನು ಅಲ್ಲಿ ಬಂಧನದಲ್ಲಿಡಲಾಗಿತ್ತು. ಸಾವಿರಾರು ಮಂದಿಯನ್ನು ಬಂಧಿಸಲಾಗಿತ್ತು, ಜನರ ಮೇಲೆ ಗುಂಡು ಹಾರಿಸಲಾಗಿತ್ತು, ಹಲವರನ್ನು ಹತ್ಯೆಗೈಯಲಾಗಿತ್ತು. ಜನ ಸಂದೋಹದ ಚಳವಳಿಯನ್ನು ಹತ್ತಿಕ್ಕಲು ಬ್ರಿಟಿಷ್ ಸರಕಾರ ಇಂತಹ ದಮನಕಾರಿ ಕ್ರಮಗಳಿಗೆ ಶರಣಾಗಿತ್ತು.

ಶಿವಾಜಿ ಪಾರ್ಕ್‌ಲ್ಲಿ ನಡೆಯಲಿದ್ದ ಐತಿಹಾಸಿಕ ಸಭೆಗೆ ಹೊರಟಿದ್ದ ತನ್ನನ್ನು ತಡೆದು ಜೈಲಿಗಟ್ಟಬಹುದೆಂದು ಮೊದಲೇ ಊಹಿಸಿದ್ದ ಕಸ್ತೂರ್ಬಾ ಏನು ಮಾಡಿದರೆಂದು ಅವರ ಜೀವನ ಚರಿತ್ರೆ ಬರೆದಿರುವವರು ಹೇಳುತ್ತಾರೆ: ‘‘ಆಕೆ, ಆದ್ದರಿಂದ, ಸುಶೀಲಾ ನಾಯರ್‌ಗೆಹೇಳಿ ತಾನು ಜನತೆಗೆ ನೀಡುವ ಸಂದೇಶವನ್ನು ಬರೆಸಿದರು. ಕಳೆದ ರಾತ್ರಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಗಾಂಧೀಜಿ ತನ್ನ ಮನದಾಳದ ಮಾತುಗಳನ್ನು ನಿಮ್ಮ ಮುಂದೆ ಹೇಳಿದ್ದಾರೆ. ನಾನು ಇನ್ನೇನು ತಾನೆ ಹೇಳಲಿಕ್ಕಿದೆ, ನಾವು ಈಗ ಮಾಡಬೇಕಾದದೆಂದರೆ ಅವರ ಆದರ್ಶಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದು. ಭಾರತದ ಮಹಿಳೆಯರು ತಮ್ಮ ಶಕ್ತಿ ಸಾಮರ್ಥ್ಯವನ್ನು ಸಾಬೀತು ಪಡಿಸಿ ತೋರಿಸಬೇಕು. ಜಾತಿ ಅಥವಾ ಪಂಥವನ್ನು ಮರೆತು ಅವರೆಲ್ಲರೂ ಈಗ ಈ ಹೋರಾಟದಲ್ಲಿ ಸೇರಿಕೊಳ್ಳಬೇಕು. ಸತ್ಯ ಮತ್ತು ಅಹಿಂಸೆಯಿಂದ ನಾವು ವಿಚಲಿತರಾಗ ಕೂಡದು.’’

ದೇಶವು ಕಸ್ತೂರ್ಬಾರವರ 75ನೇ ಪುಣ್ಯತಿಥಿಯನ್ನು ಹಾಗೂ 150ನೇ ಜನ್ಮದಿನವನ್ನು ಜ್ಞಾಪಿಸಿಕೊಳ್ಳುವ ಸಂದರ್ಭದಲ್ಲಿ ಅವರ 60ಕ್ಕೂ ಹೆಚ್ಚು ವರ್ಷಗಳ ಅವಧಿಯ ಸಾರ್ವಜನಿಕ ಬದುಕಿನ ಹಲವು ಮುಖಗಳು ನಮ್ಮೆದುರು ಬಂದು ನಿಲ್ಲುತ್ತವೆ. ಒಬ್ಬಳು ಸ್ವಾತಂತ್ರ ಹೋರಾಟಗಾರ್ತಿಯಾಗಿ ಹಲವಾರು ನಾಗರಿಕ ಪ್ರತಿಭಟನೆಗಳಲ್ಲಿ ಓರ್ವ ಕಾರ್ಯಕರ್ತೆಯಾಗಿ ಅವರು ಭಾಗವಹಿಸಿದ್ದರು. ಅಲ್ಲದೆ ಗಾಂಧೀಜಿ ಸ್ಥಾಪಿಸಿದ್ದ ಹಲವಾರು ಆಶ್ರಮಗಳನ್ನು ನಡೆಸುವುದರಲ್ಲಿ ಆಕೆೆ ತನ್ನ ವೈಯಕ್ತಿಕ ಜೀವನವನ್ನೂ ಕಡೆಗಣಿಸಿ ದುಡಿದಿದ್ದರು. ಅಂತಹ ಮೊದಲ ಆಶ್ರಮ 1904ರಲ್ಲಿ ದಕ್ಷಿಣ ಆಫ್ರಿಕದ ಡರ್ಬನ್‌ನಲ್ಲಿ ಸ್ಥಾಪಿಸಲ್ಪಟ್ಟ ಫೀನಿಕ್ಸ್ ಶಿಬಿರ. ಅಲ್ಲಿ ನಿವಾಸಿಗಳು ಆಶ್ರಮದ ಕೆಲಸಗಳನ್ನು ತಾವೇ ಮಾಡುತ್ತ ತಮ್ಮ ಆಹಾರವನ್ನು ತಾವೇ ಬೆಳೆಯಬೇಕಾಗಿತ್ತು. 1913ರಲ್ಲಿ ಜನಾಂಗೀಯ ಕಾನೂನುಗಳ ವಿರುದ್ಧ ಆಕೆ ಮಹಿಳೆಯರ ಮೆರವಣಿಗೆಯೊಂದನ್ನು ಮುನ್ನಡೆಸಿದಾಗ ಆಕೆ ಮೊದಲ ಬಾರಿಗೆ ಬಂಧನಕೊಳ್ಳಗಾಗಿ ಜೈಲಿಗೆ ಹೋದದ್ದು ಕೂಡ ಆಫ್ರಿಕದಲ್ಲೇ.
ಅವರ ಮರಿ ಮೊಮ್ಮಗಳು ತನ್ನ ಅಜ್ಜಿ ಲಕ್ಷ್ಮೀ 1927ರಲ್ಲಿ ಕಸ್ತೂರ್ಬಾ ಜತೆ ತನ್ನ ತಂದೆ ಸಿರಾಜ್ ಗೋಪಾಲಾಚಾರಿ ಯವರೊಂದಿಗೆ ಸಿಲೋನ್‌ಗೆ ಹೋಗಿದ್ದಾಗ ಕಸ್ತೂರ್ಬಾ ತನ್ನನ್ನು ಹೇಗೆ ನೋಡಿಕೊಂಡರು ಎಂಬುದನ್ನು ಹೇಳುತ್ತಾರೆ. ಲಕ್ಷ್ಮೀ ಕಸ್ತೂರ್ಬಾರವರ ಅತ್ಯಂತ ಕಿರಿಯ ಸೊಸೆ.
ಗುಜರಾತ್‌ನ ಬೋಸಾರ್ದ್ ನಲ್ಲಿ ಪೊಲೀಸ್ ಅತಿರೇಕಗಳ ವಿರುದ್ಧ ಪ್ರತಿಭಟಿಸುತ್ತಿದ್ದ ಮಹಿಳೆಯರನ್ನು ಕುರಿತು ಕಸ್ತೂರ್ಬಾ ಸ್ಫೂರ್ತಿದಾಯಕವಾದ ಭಾಷಣ ಮಾಡಿದ್ದರು. ಮಹಿಳೆಯರಿಗೆ ತನ್ನ ಬೆಂಬಲ ಘೋಷಿಸುವುದಕ್ಕಾಗಿ ಸಭೆ ಮುಗಿದ ಬಳಿಕ ಅವರು ಕೆಲವು ಹಳ್ಳಿಗಳಿಗೆ ಭೇಟಿ ನೀಡಿದರು. ಆ ಸಂದರ್ಭದಲ್ಲಿ ಅವರು ನೀಡಿದ ಪತ್ರಿಕಾ ಹೇಳಿಕೆ ಗಮನಾರ್ಹವಾಗಿದೆ.
 ‘‘ನಾನು ಹೋದಲ್ಲೆಲ್ಲ ಎದೆ, ತಲೆ, ಸೊಂಟ ಮತ್ತು ಕಾಲಿನ ಮೇಲೆ ಲಾಠಿ ಹೊಡೆತಗಳ ಕಲೆಗಳನ್ನು ನೋಡಿದೆ. ಪೊಲೀಸರು ಮಕ್ಕಳಿಗೆ ಹೊಡೆದರು, ಮಹಿಳೆಯರನ್ನು ಅವರ ತಲೆ ಕೂದಲು ಹಿಡಿದು ಎಳೆದರು, ಮಹಿಳೆಯರ ಸ್ತನಗಳ ಮೇಲೆ ಮುಷ್ಟಿಯಿಂದ ಗುದ್ದಿದರು ಮತ್ತು ಅವಾಚ್ಯ ಮಾತುಗಳನ್ನಾಡಿದರು ಎಂಬುದನ್ನು ಕೇಳಿ ನಾನು ದುಪ್ಪಟ್ಟು ಮರುಗಿದೆ... ಗುಜರಾತಿನಲ್ಲಿ ಮಹಿಳೆಯರನ್ನು ಅಷ್ಟೊಂದು ಅಮಾನವೀಯವಾಗಿ ನಡೆಸಿಕೊಂಡದ್ದನ್ನು ನಾನು ನನ್ನ ಜೀವನದಲ್ಲಿ ಮೊದಲ ಬಾರಿಗೆ ನೋಡಿದ್ದು ಆಗಲೇ. ಪೊಲೀಸರು ಮಹಿಳೆಯರ ಮೇಲೆ ಆ ರೀತಿಯಾದ ದೌರ್ಜನ್ಯ ನಡೆಸಿದ್ದನ್ನು ನಾನು ಬೇರೆ ಎಲ್ಲಿಯೂ ನೋಡಿಲ್ಲ’’
(ಮುಂದುವರಿಯುವುದು)
ಕೃಪೆ: countercurrents.org

Writer - ಸುಭಾಷ್ ಗಟಾಡೆ

contributor

Editor - ಸುಭಾಷ್ ಗಟಾಡೆ

contributor

Similar News

ಜಗದಗಲ
ಜಗ ದಗಲ