ಲೆನಿನ್‌ರ ‘ನ್ಯೂ ಇಕನಾಮಿಕ್ ಪಾಲಿಸಿ’ಯ ಘೋಷಣೆ

Update: 2019-03-16 18:31 GMT

1905: ಆಧುನಿಕ ಭೌತಶಾಸ್ತ್ರದ ತಳಹದಿಗಳಲ್ಲೊಂದಾದ ಬೆಳಕಿನ ಕುರಿತಾದ ಕ್ವಾಂಟಂ ಸಿದ್ಧಾಂತದ ವಿವರಣೆಯುಳ್ಳ ವೈಜ್ಞಾನಿಕ ದಾಖಲೆಗಳನ್ನು ಜಗದ್ವಿಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಪೂರ್ಣಗೊಳಿಸಿದರು.

1921: ರಶ್ಯನ್ ಕ್ರಾಂತಿಕಾರಿ ನಾಯಕ, ಮಾರ್ಕ್ಸ್‌ವಾದಿ ವ್ಲಾದಿಮಿರ್ ಲೆನಿನ್ ತಮ್ಮ ಜನಪ್ರಿಯ ಸಿದ್ಧಾಂತ ನ್ಯೂ ಇಕನಾಮಿಕ್ ಪಾಲಿಸಿಯನ್ನು ಘೋಷಿಸಿದರು.

1938: ಸ್ಪೇನ್‌ನಲ್ಲಿ ನಡೆದ ಸರಣಿ ವಾಯುದಾಳಿಗಳಲ್ಲಿ ಸುಮಾರು 1,300 ಜನರು ಬಲಿಯಾದ ವರದಿಯಾಗಿದೆ. ಬಾರ್ಸಿಲೋನಾ ನಗರದಲ್ಲಿ ನಡೆದ ಈ ದಾಳಿಯ ಹಿಂದೆ ಸ್ಪೇನ್‌ನ ಸೈನ್ಯಾಧಿಕಾರಿ ಫ್ರಾನ್ಸಿಸ್ಕೊ ಫ್ರಾಂಕೊ ಕೈವಾಡವಿರುವುದನ್ನು ಶಂಕಿಸಲಾಯಿತು.

1957: ಫಿಲಿಪ್ಪೀನ್ಸ್‌ನ ಸೆಬು ಎಂಬಲ್ಲಿನ ಮ್ಯಾನುಂಗಲ್ ಪರ್ವತ ಪ್ರದೇಶದಲ್ಲಿ ಫಿಲಿಪ್ಪೀನ್ಸ್‌ನ ಅಧ್ಯಕ್ಷರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನಗೊಂಡಿತು. ಪರಿಣಾಮ ಆ ದೇಶದ ಅಧ್ಯಕ್ಷ ರಾಮೋನ್ ಮ್ಯಾಗ್ಸೆಸ್ಸೆ ಸೇರಿದಂತೆ 25 ಜನ ಮೃತಪಟ್ಟರು. ಮಾನವತಾವಾದಿಯಾಗಿದ್ದ ರಾಮೋನ್ ಮ್ಯಾಗ್ಸೆಸ್ಸೆ ಅವರ ಸ್ಮರಣಾರ್ಥ ಪ್ರತೀವರ್ಷ ಅವರ ಹೆಸರಲ್ಲಿ ಅಂತರ್‌ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

1959: ಬೌದ್ಧ ಧರ್ಮಗುರು ದಲೈ ಲಾಮಾ ಚೀನಾ ಸೈನ್ಯದ ದಾಳಿಯಿಂದ ತಪ್ಪಿಸಿಕೊಂಡು ಟಿಬೆಟ್‌ನಿಂದ ಆಶ್ರಯ ಕೇಳಿ ಭಾರತಕ್ಕೆ ಬಂದರು.

1959: ಆಸ್ಟ್ರೇಲಿಯಾ ಹಾಗೂ ರಶ್ಯಾ ತಮ್ಮ ಮಧ್ಯೆ ನಿಂತುಹೋಗಿದ್ದ ರಾಜತಾಂತ್ರಿಕ ಸಂಬಂಧಗಳನ್ನು ಮರು ಆರಂಭಿಸಿದವು.

1987: ಭಾರತದ ಕ್ರಿಕೆಟ್‌ನ ಜೀವಂತ ದಂತಕಥೆ ಸುನೀಲ್ ಗವಾಸ್ಕರ್ ಪಾಕಿಸ್ತಾನದ ವಿರುದ್ಧದ ಟೆಸ್ಟ್ ಪಂದ್ಯದ ಇನಿಂಗ್ಸ್ ಒಂದರಲ್ಲಿ 96ರನ್ ಬಾರಿಸುವುದರೊಂದಿಗೆ ಟೆಸ್ಟ್ ಪಂದ್ಯಗಳಿಗೆ ವಿದಾಯ ಹೇಳಿದರು.

1993: ಕೋಲ್ಕತಾದ ಕೇಂದ್ರ ಭಾಗದಲ್ಲಿ ಸಂಭವಿಸಿದ ಪ್ರಬಲ ಬಾಂಬ್ ಸ್ಫೋಟದಲ್ಲಿ ಸುಮಾರು 45 ಜನರು ಬಲಿಯಾದ ವರದಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ