ರೋಗಿಗಳಿಗೆ ಕೆಟ್ಟ ಸುದ್ದಿ!

Update: 2019-03-17 07:02 GMT

ಔಷಧಿಗಳ ಇಲಾಖೆಯು 2013ರ ಎನ್‌ಪಿಪಿಎಗೆ ಗೆಜೆಟ್ ತಿದ್ದುಪಡಿಗಳನ್ನು ಮಾಡುತ್ತ ಪುಂಡಾನೆೆಯಂತೆ ವರ್ತಿಸುತ್ತಿದೆ; ಪೇಟೆಂಟ್ ಮಾಡಲಾದ ಔಷಧಿಗಳ ಮೇಲೆ ಐದು ವರ್ಷಗಳವರೆಗೆ ಬೆಲೆ ನಿಯಂತ್ರಣ ಸಾಧ್ಯವಾಗದಂತೆ ಮಾಡುತ್ತಿದೆ. ಇದರಿಂದಾಗಿ ಟಿಆರ್‌ಐಪಿಎಸ್(ಟ್ರಿಪ್ಸ್) ಒಪ್ಪಂದದ ಅನ್ವಯ ಭಾರತಕ್ಕೆ ಔಷಧಿಗಳ ಬೆಲೆಗಳ ವಿಷಯದಲ್ಲಿ ನಮನೀಯತೆ (flexibility)ಸಾಧ್ಯವಿಲ್ಲವಾಗುತ್ತದೆ.

2013ರಲ್ಲಿ ಔಷಧಿಗಳ (ಬೆಲೆ ನಿಯಂತ್ರಣ) ಆಜ್ಞೆ(ಡ್ರಗ್ಸ್ ಪ್ರೈಸಸ್ ಕಂಟ್ರೋಲ್ ಆರ್ಡರ್) ಅಥವಾ ಡಿಪಿಸಿಒ ಜಾರಿಗೆ ಬಂದಂದಿನಿಂದ ಔಷಧಿ ಉದ್ಯಮ ಮತ್ತು ಭಾರತ ಸರಕಾರದ ಒಳಗಿನ ಕೆಲವು ಶಕ್ತಿಗಳು ಆ ಆಜ್ಞೆಯನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಲೇ ಬಂದಿವೆ. ತನ್ನ ಸರಕಾರವು ಹೇಗೆ ಔಷಧಿಗಳ ಹಾಗೂ ಸ್ಟೆಂಟ್‌ಗಳ ಬೆಲೆಯನ್ನು ಕಡಿಮೆ ಮಾಡಿದೆ ಎಂದು ಪ್ರಧಾನಿ ಮೋದಿ ಅವಕಾಶ ಸಿಕ್ಕಾಗೆಲ್ಲ ಡಂಗುರಬಾರಿಸುತ್ತ ಬರುತ್ತಿರುವಾಗಲೇ ಈ ಪ್ರಯತ್ನ ನಡೆಯುತ್ತಿದೆ. ಬೃಹತ್ ಪ್ರಮಾಣದ ಯಾವುದೇ ಆರೋಗ್ಯ ಸೇವಾ ಯೋಜನೆಯು ನ್ಯಾಯಬದ್ಧವಾದ ಬೆಲೆಗಳಿಗೆ ಔಷಧಿಗಳು ಹಾಗೂ ವೈದ್ಯಕೀಯ ಸೇವೆಗಳು ದೊರಕದೆ ಯಶಸ್ವಿಯಾಗಲಾರದು.
 ಔಷಧಿಗಳ ಬೆಲೆನಿಯಂತ್ರಣವನ್ನು ವಿಫಲಗೊಳಿಸುವ ಇತ್ತೀಚೆಗಿನ ಪ್ರಯತ್ನವೆಂದರೆ ಔಷಧಿಗಳ ಬೆಲೆಯನ್ನು ನಿಯಂತ್ರಿಸುವ ಪ್ರಾಧಿಕಾರವಾಗಿರುವ ರಾಷ್ಟ್ರೀಯ ಔಷಧಿ ಬೆಲೆ ನಿರ್ಧರಿಸುವ ಪ್ರಾಧಿಕಾರವನ್ನು (ನ್ಯಾಶನಲ್ ಫಾರ್ಮಸ್ಯೂಟಿಕಲ್ ಅಥಾರಿಟಿ ಅಥವಾ ಎನ್‌ಪಿಪಿಎ) ದುರ್ಬಲಗೊಳಿಸುವುದು. ಜನವರಿ 2ರಂದು ಔಷಧಿಗಳ ಇಲಾಖೆಯು ತಾನು ಒಂದು ಸಮಿತಿಯನ್ನು ರಚಿಸಿರುವುದಾಗಿ ಒಂದು ಅಧಿಸೂಚನೆ ಹೊರಡಿಸಿತ್ತು. ಸ್ಟಾಂಡಿಗ್ ಕಮಿಟಿ ಆಫ್ ಅಫೋರ್ಡಬಲ್ ಮೆಡಿಸಿನ್ಸ್ ಆ್ಯಂಡ್ ಹೆಲ್ತ್ ಪ್ರಾಡಕ್ಟ್ಸ್ ಅಥವಾ ಎಸ್‌ಸಿಎಎಮ್‌ಎಚ್‌ಪಿ ಎಂಬುದು ಆ ಸಮಿತಿಯ ಹೆಸರು. ಔಷಧಿಗಳ ಹಾಗೂ ಆರೋಗ್ಯ ಉತ್ಪನ್ನಗಳ ಬೆಲೆಗಳ ಬಗ್ಗೆ ಸಮಿತಿಯು ಎನ್‌ಪಿಪಿಎಗೆ ಶಿಫಾರಸುಗಳನ್ನು ಮಾಡುತ್ತದೆ ಎಂದು ಆ ಅಧಿಸೂಚನೆಯಲ್ಲಿ ಹೇಳಲಾಯಿತು. ಅಂದರೆ, ಇದರ ಪರಿಣಾಮವಾಗಿ, ಎನ್‌ಪಿಪಿಎಯ ಮತ್ತು ಸರಕಾರದ ಔಷಧಿ ಇಲಾಖೆಯ ಕಾರ್ಯನಿರ್ವಹಣೆಯನ್ನು ಈ ಸಮಿತಿಯೇ ಮಾಡುತ್ತದೆ.
ಎನ್‌ಪಿಪಿಎಯ ಮೇಲೆ ಒತ್ತ
ತಮ್ಮ ಕೆಲಸ ಮಾಡುವಾಗ ಎನ್‌ಪಿಪಿಎಯ ಅಧ್ಯಕ್ಷರುಗಳು ಔಷಧಿ ಕಂಪೆನಿಗಳ ಲಾಬಿಯಿಂದ ವಿಪರೀತ ಒತ್ತಡಕ್ಕೆ ಒಳಗಾಗುತ್ತಲೇ ಬಂದಿದ್ದಾರೆ. 2015ರಲ್ಲಿ ಎನ್‌ಪಿಪಿಎಯ ಅಧ್ಯಕ್ಷ ಇಂಜಿಟಿ ಶ್ರೀನಿವಾಸ್‌ರವರು ಮುಖ್ಯ ಔಷಧಿಗಳ ಬೆಲೆಗಳನ್ನು ನಿಯಂತ್ರಿಸಲು ತನಗೆ ನೀಡಲಾದ ಅಧಿಕಾರವನ್ನು ಬಳಸಿದಾಗ ಅವರು ಇಂತಹ ಒತ್ತಡಕ್ಕೊಳಗಾಗಬೇಕಾಯಿತು. ಅವರ ವಿರುದ್ಧ ಇಂಡಿಯನ್ ಫಾರ್ಮಸ್ಯೂಟಿಕಲ್ ಅಲಯನ್ಸ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು ಆದರೆ ಮುಂಬೈ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಎರಡರಲ್ಲೂ ಆದಕ್ಕೆ ಸೋಲಾಯಿತು.
ತರುವಾಯ ಶ್ರೀನಿವಾಸ್ ಅವರನ್ನು ಅವರ ಹುದ್ದೆಯಿಂದ ಕಿತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಮುಖ್ಯಸ್ಥರನ್ನಾಗಿ ವರ್ಗಾಯಿಸಲಾಯಿತು.


2017ರ ಫೆಬ್ರವರಿಯಲ್ಲಿ ಎನ್‌ಪಿಪಿಎಯ ಅಧ್ಯಕ್ಷ ಭೂಪೇಂದ್ರ ಸಿಂಗ್ ಸ್ಟೆಂಟ್‌ಗಳು ಮತ್ತು ಮೊಣಕಾಲು ಇನ್‌ಪ್ಲಾಂಟ್‌ಗಳಿಂದ ಆರಂಭಿಸಿ ಹಲವಾರು ವೈದ್ಯಕೀಯ ಸಾಧನಗಳ ಬೆಲೆಗಳಿಗೆ ಮಿತಿಯನ್ನು ನಿಗದಿಪಡಿಸಿದಾಗ ವಿದೇಶಿ ಔಷಧಿ ಕಂಪೆನಿಗಳು ಕಂಗಾಲಾದವು. ಆದರೆ ಸರಕಾರದ ಔಷಧಿ ಇಲಾಖೆಯ ಕಾರ್ಯದರ್ಶಿ ಮತ್ತು ಅವರ ಜಂಟಿ ಕಾರ್ಯದರ್ಶಿಗಳು ಮಧ್ಯ ಪ್ರವೇಶಿಸಿ ಸಿಂಗ್‌ಅವರ ನಿರ್ಧಾರಗಳು ಕಾರ್ಯಗತಗೊಳ್ಳದಂತೆ ಮಾಡಿದರು. ಬಳಿಕ ಸಿಂಗ್ ಅವರನ್ನು ಕ್ಯಾಬಿನೆಟ್ ಸಚಿವಾಲಯದ ನ್ಯಾಶನಲ್ ಅಥಾರಿಟಿ ಫಾರ್ ಕೆಮಿಕಲ್ಸ್ ವೆಪನ್ಸ್ ಕನ್ವೆನ್ಶಸ್‌ಗೆ ವರ್ಗಾವಣೆ ಮಾಡಲಾಯಿತು.
 ಇದೇ ವೇಳೆ ಔಷಧಿಗಳ ಇಲಾಖೆಯು 2013ರ ಎನ್‌ಪಿಪಿಎಗೆ ಗೆಜೆಟ್ ತಿದ್ದುಪಡಿಗಳನ್ನು ಮಾಡುತ್ತ ಪುಂಡಾನೆೆಯಂತೆ ವರ್ತಿಸುತ್ತಿದೆ; ಪೇಟೆಂಟ್ ಮಾಡಲಾದ ಔಷಧಿಗಳ ಮೇಲೆ ಐದು ವರ್ಷಗಳವರೆಗೆ ಬೆಲೆ ನಿಯಂತ್ರಣ ಸಾಧ್ಯವಾಗದಂತೆ ಮಾಡುತ್ತಿದೆ. ಇದರಿಂದಾಗಿ ಟಿಆರ್‌ಐಪಿಎಸ್(ಟ್ರಿಪ್ಸ್) ಒಪ್ಪಂದದ ಅನ್ವಯ ಭಾರತಕ್ಕೆ ಔಷಧಿಗಳ ಬೆಲೆಗಳ ವಿಷಯದಲ್ಲಿ ನಮನೀಯತೆ (flexibility)ಸಾಧ್ಯವಿಲ್ಲವಾಗುತ್ತದೆ. ಉದಾಹರಣೆಗೆ ಒಂದು ಔಷಧಿಯ ಪೇಟೆಂಟ್ ಪಡೆದಿರುವ ಕಂಪೆನಿಯ ಅನುಮತಿಯಿಲ್ಲದೆ ಆ ಉತ್ಪನ್ನಗಳನ್ನು ಬಳಸುವ ಸರಕಾರದ ಅಧಿಕಾರ ಮೊಟಕುಗೊಳ್ಳುತ್ತದೆ. ಆದ್ದರಿಂದ ಬೆಲೆ ವಿನಾಯಿತಿಯು ಜನರಿಗಿರುವ ಆರೋಗ್ಯ ಸೇವೆಯ ಸವಲತ್ತು ಪಡೆಯುವ ಹಕ್ಕಿನ ಉಲ್ಲಂಘನೆಯಾದಂತಾಗುತ್ತದೆ.

ಕೆಟ್ಟ ಬೆಲೆ ನಿಯಂತ್ರಣ ವಿಧಾನ ತನ್ನಿಂದಾದ ತಪ್ಪನ್ನು ಮುಚ್ಚಿಹಾಕಲು ಧಾವಿಸಿದ ಸರಕಾರವು ಆಫರ್ನ್ ಔಷಧಿಗಳ ಮತ್ತು ಕ್ಯಾನ್ಸರ್ ಔಷಧಿಗಳ ಲಾಭಾಂಶ ಮಿತಿಗಳನ್ನು ನಿಗದಿಪಡಿಸಿ ಇಂತಹ ಔಷಧಿಗಳ ಒಂದು ಪಟ್ಟಿ ಮಾಡಲಾಗುವುದು ಎಂದು ಹೇಳಿತು. ಮಾರಾಟದ ಮೊದಲ ಹಂತದ ಪಾಯಿಂಟ್‌ನಲ್ಲಿ ಮಾರಾಟದ ಮಿತಿಯನ್ನು ನಿಗದಿಪಡಿಸುವ ಇಂತಹ ಒಂದು ಭ್ರಾಮಕ ಮಿತಿಯ ವಿಧಾನವೇ ಕೆಟ್ಟ ಯೋಚನೆ. ಮಾರಾಟದ ಮೊದಲ ಬಿಂದುವಿನಲ್ಲೇ ಔಷಧಿಯ ಬೆಲೆ ಭಾರೀ ದುಬಾರಿಯಾದಲ್ಲಿ ತುಂಬಾ ದುಬಾರಿಯಾದ ಆರ್ಫನ್ ಔಷಧಿಗಳನ್ನು ಬಳಸಲೇಬೇಕಾಗಿರುವ ಜನಸಾಮಾನ್ಯ ಬಡರೋಗಿಗಳ ಪಾಡೇನು?
ಒಂದು ಪ್ರಯೋಗವಾಗಿ, ಔಷಧಿಗಳ ಇಲಾಖೆಯು 42 ಕ್ಯಾನ್ಸರ್ ವಿರೋಧಿ ಔಷಧಿಗಳ ಬೆಲೆನಿಗದಿಪಡಿಸುವಿಕೆಯಲ್ಲಿ ಅನ್ವಯಿಸಬೇಕಾದ ಸೂತ್ರಗಳನ್ನು ಒಳಗೊಂಡ ಅಧಿಸೂಚನೆಯೊಂದನ್ನು ಫೆಬ್ರವರಿ 27ರಂದು ಹೊರಡಿಸಿತು. ಆದರೆ ಈಗಾಗಲೇ ತುಂಬ ದುಬಾರಿಯಾಗಿರುವ ಕ್ಯಾನ್ಸರ್ ವಿರೋಧಿ ಔಷಧಿಗಳ ಬೆಲೆಗಳನ್ನು ತಗ್ಗಿಸಲು ಇದರಿಂದ ಹೆಚ್ಚು ಉಪಯೋಗ ವಾಗುವುದಿಲ್ಲವೆಂದು ಈಗಾಗಲೇ ದೃಢಪಟ್ಟಿದೆ.
ಕೃಪೆ: scroll.in

Writer - ಶ್ರೀನಿವಾಸನ್

contributor

Editor - ಶ್ರೀನಿವಾಸನ್

contributor

Similar News

ಜಗದಗಲ
ಜಗ ದಗಲ