ತೊಳೆದಷ್ಟೂ ಮುಗಿಯದ ಪಾಪ

Update: 2019-03-17 18:44 GMT

ಭಾಗ -1

ಭಾರತದಲ್ಲಿ ಸಫಾಯಿ ಕರ್ಮಚಾರಿಗಳಿಗಾಗಿ ಕೆಲಸ ಮಾಡುವ ಜನರು ಹೀರೋಗಳಲ್ಲ. ಬದಲಾಗಿ ಬಲಿಪಶುಗಳು. ಇನ್ನೊಂದು ದತ್ತಾಂಶದ ಪ್ರಕಾರ 2014ರಿಂದ 2016ರವರೆಗಿನ ಅವಧಿಯಲ್ಲಿ ಭಾರತದ 1,327 ಸಫಾಯಿ ಕರ್ಮಚಾರಿಗಳು ಮೃತಪಟ್ಟಿದ್ದಾರೆ. ಅವರನ್ನು ಯಾವುದೇ ಸುರಕ್ಷತಾ ಉಪಕರಣಗಳಿಲ್ಲದೆ ಚರಂಡಿಗಳಿಗೆ/ ಪಾಯಿಖಾನೆ ಗುಂಡಿಗಳಿಗೆ ಇಳಿಸಿದ್ದೇ ಅದಕ್ಕೆ ಕಾರಣ.

ಗಿಮಿಕ್‌ಗಳು ಮೋದಿಯವರ ರಾಜಕೀಯ ಶೈಲಿಯ ಒಂದು ಭಾಗವಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಗಿಮಿಕ್‌ಗಳು ಅವರ ತಂತ್ರಗಳ ತಿರುಳಾಗಿವೆೆ. ಐದು ಮಂದಿ ಸಫಾಯಿ ಕರ್ಮಚಾರಿಗಳ ಪಾದ ತೊಳೆದು ಬಳಿಕ ಅದನ್ನು ಟ್ವೀಟ್ ಮಾಡಿದ್ದು ಅಂತಹ ಗಿಮಿಕ್‌ಗಳಲ್ಲಿ ಇನ್ನೊಂದು ಗಿಮಿಕ್. ಅವರ ಈ ಗಿಮಿಕ್‌ನಿಂದ ರೇಜಿಗೆ ಗೊಳಗಾದ ಹಲವು ಸಾಮಾಜಿಕ ಕಾರ್ಯಕರ್ತರು ಟ್ವೀಟ್‌ಗಳ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ದಾಖಲಿಸಿದ್ದಾರೆ. ಮನುಷ್ಯರು ತಮ್ಮ ಕೈಗಳಿಂದ ಪಾಯಿಖಾನೆಗಳನ್ನು ಸ್ವಚ್ಛಗೊಳಿಸುವ ಮಲ ವಿಲೇವಾರಿ ಮಾಡುವ ಅಮಾನವೀಯ, ಬರ್ಬರ ಪದ್ಧತಿಯ ವಿರುದ್ಧ ಹೋರಾಡುತ್ತಿರುವ ಹಾಗೂ ಸಫಾಯಿ ಕಾಮ್‌ಗಾರ್ ಸಂಘಟನ್‌ನ ಕಾರ್ಯನಿರ್ವಾಹಕರಾಗಿರುವ ಬೆಜವಾಡ ವಿಲ್ಸನ್ ಹೀಗೆ ಟ್ವೀಟ್ ಮಾಡಿದ್ದಾರೆ: ‘‘2018ರ ಒಂದೇ ವರ್ಷದಲ್ಲಿ 105 ಮಂದಿ ಚರಂಡಿ ಹಾಗೂ ಪಾಯಿಖಾನೆ ಗುಂಡಿಗಳನ್ನು ಸ್ವಚ್ಛಗೊಳಿಸುವಾಗ ದುರ್ಮರಣ ಹೊಂದಿದ್ದಾರೆ. ಆಗ ಅವರು (ಮೋದಿ) ಮೌನವಾಗಿದ್ದರು. ಈಗ ಪಾದಗಳನ್ನು ತೊಳೆಯುತ್ತಿದ್ದಾರೆ. ನ್ಯಾಯ ಬೇಕು, ಆಚರಣೆಗಳಲ್ಲ. ಶ್ರೀಯುತ ಪ್ರಧಾನಿಯವರೇ ಎಂತಹ ಚಿಂತಾಜನಕ ಸ್ಥಿತಿ!.’’
ಮುಂದುವರಿಸಿ ವಿಲ್ಸನ್ ಟ್ವೀಟ್ ಮಾಡಿದುದು: ‘‘ಓರ್ವ ಪ್ರಧಾನ ಮಂತ್ರಿಯಾಗಿ ಅವರು ಪಾಯಿಖಾನೆ ಸ್ವಚ್ಛಗೊಳಿಸುವುದನ್ನು ಆಧ್ಯಾತ್ಮೀಕರಿಸಿದರು, ಈಗ ಪ್ರಧಾನಿಯಾಗಿ ಅನ್ಯಾಯವನ್ನು ವೈಭವೀಕರಿಸುತ್ತಿದ್ದಾರೆ!. ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಕ್ಕೇ ವಿರೋಧವಾದದ್ದು. -ಜಾಡು ಚೋಡೋ ಕಲಾಂ ಪಕ್‌ಡೋ (ಕಸಬರಿಕೆ ಬಿಡಿ, ಲೇಖನಿ ಕೈಗೆತ್ತಿಕೊಳ್ಳಿ ನಮ್ಮನ್ನು ಕೊಲ್ಲುವುದನ್ನು ನಿಲ್ಲಿಸಿ... ನಿಮ್ಮ ಮನಸ್ಸನ್ನು ತೊಳೆದುಕೊಳ್ಳಿ ನಮ್ಮ ಪದಗಳನ್ನಲ್ಲ, ಶ್ರೀಮಾನ್ ಪ್ರಧಾನಿಯವರೇ! ಅತ್ಯಂತ ಗರಿಷ್ಠ ಮಟ್ಟದ ಅವಮಾನ. 1.6 ಲಕ್ಷ ಮಹಿಳೆಯರನ್ನು ಇನ್ನೂ ಪಾಯಿಖಾನೆ ತೊಳೆಯುವಂತೆ ಬಲಾತ್ಕರಿಸಲಾಗಿದೆ, ಐದು ವರ್ಷಗಳಲ್ಲಿ ಈ ಬಗ್ಗೆ ಒಂದು ಶಬ್ದ ಮಾತನಾಡಿಲ್ಲ ನೀವು. ಎಷ್ಟೊಂದು ನಾಚಿಕೆಗೇಡು!’’
 ಈ ರೀತಿಯಾಗಿ ಪಾಯಖಾನೆ ತೊಳೆಸುವ ರೂಪದಲ್ಲಿ ಮನುಷ್ಯರನ್ನು ಅವಮಾನಿಸುತ್ತಿರುವ ಜಾತಿ ಪದ್ಧತಿಯ ಬಲಿಪಶುಗಳಾಗುವವರ ಯಾತನೆ ಮತ್ತು ಸಂಕಟವನ್ನು ವಿಲ್ಸನ್ ಅವರ ಮಾತುಗಳು ಸಾರಾಂಶ ರೂಪವಾಗಿ ಹೇಳಿವೆ.
 ಚರಂಡಿ ಮತ್ತು ಪಾಯಿಖಾನೆ ಗುಂಡಿಗಳಲ್ಲಿ 2018ರಲ್ಲಿ ನೂರ ಐದು ಮಂದಿ ಹಾಗೂ 2019ರಲ್ಲಿ ಹನ್ನೊಂದು ಮಂದಿ ಸಫಾಯಿ ಕರ್ಮಚಾರಿಗಳು ದುರ್ಮರಣ ಹೊಂದಿದ್ದರೂ ನ್ಯಾಯಾಲಯದ ಆಜ್ಞೆಗಳ ಹೊರತಾಗಿಯೂ ಈ ಸಂತ್ರಸ್ತರ ಪರಿಸ್ಥಿತಿಯನ್ನು ಸುಧಾರಿಸಲು ಸರಕಾರ ಏನೂ ಮಾಡಿಲ್ಲ ಎಂದಿದ್ದಾರೆ ಸೀತಾರಾಮ್ ಯೆಚೂರಿ. ‘‘ಐತಿಹಾಸಿಕ ಅನ್ಯಾಯಗಳಿಗೆ ಗುರಿಯಾಗಿರುವವರ ಪಾಲಿಗೆ ಪ್ರಧಾನಿಯವರು ಸಫಾಯಿ ಕರ್ಮಚಾರಿಗಳ ಪಾದಗಳನ್ನು ತೊಳೆಯುವ ದೃಶ್ಯವನ್ನು ಹತ್ತಾರು ಕ್ಯಾಮರಾಗಳು ಶೂಟ್ ಮಾಡಿ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದೆಂದರೆ ಸಂತ್ರಸ್ತರ ಗಾಯಗಳಿಗೆ ಉಪ್ಪುಸವರಿದಂತಲ್ಲದೆ ಬೇರೆ ಏನೂ ಅಲ್ಲ. ಹಾಗೆಯೇ ಸಿಪಿಐ (ಎಂಎಲ್) ನಿಮ್ಮ ಗಮನವನ್ನು ಸಮಸ್ಯೆಯ ಇನ್ನೊಂದು ಮುಖದ ಕಡೆಗೂ ಸೆಳೆಯ ಬಯಸುತ್ತದೆ: ಭಾರತದ ಪ್ರಧಾನಿಯವರೇ, ಸಫಾಯಿ ಕರ್ಮಚಾರಿಗಳಿಗೆ ಕೊಡಲು ಇರುವ ವೇತನ ಬಾಕಿಯನ್ನು ಕೊಡುವುದು ನಿಮ್ಮ ಕರ್ತವ್ಯ. ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಕೊನೆಗಾಣಿಸುವುದು ಹಾಗೂ ಪಾಯಿಖಾನೆ/ ಚರಂಡಿ ಗುಂಡಿಗಳಲ್ಲಿ ಸಾವುಗಳು ಸಂಭವಿಸದಂತೆ ನೋಡಿಕೊಳ್ಳುವುದು ನಿಮ್ಮ ಕೆಲಸ. ಇದನ್ನು ಮಾಡುವುದಕ್ಕೆ ಬದಲಾಗಿ ನೀವು ಕ್ಯಾಮರಾಗಳಿಗೆ ಅವರ ಪಾದಗಳನ್ನು ತೊಳೆಯುವ ಪೋಸುಗಳನ್ನು ಕೊಡುತ್ತಿದ್ದೀರಿ.! ನಿರ್ಲಕ್ಷ್ಯತನದಿಂದಾಗಿ ಓರ್ವ ಸಫಾಯಿ ಕರ್ಮಚಾರಿ 2019ರ ಕುಂಭಮೇಳದಲ್ಲಿ ಮೃತಪಟ್ಟ ಆ ಬಗ್ಗೆ ನೀವು ಮಾತಾಡುತ್ತೀರಾ?’’
ಪರಿಸ್ಥಿತಿ ಹೀಗಿರುವಾಗ, ಸಫಾಯಿ ಕರ್ಮಚಾರಿಗಳ ಪಾದ ತೊಳೆಯುವುದು ಪಾಯಿಖಾನೆ ಗುಂಡಿ/ ಚರಂಡಿಯನ್ನು ನಮ್ಮ ಹಾಗೆ ಇರುವ ಮನುಷ್ಯರಿಂದ ಸ್ವಚ್ಛಗೊಳಿಸುವ ಕೆಲಸ ಮಾಡಿಸುವ ವ್ಯವಸ್ಥೆಯನ್ನು ಒಂದು ರೀತಿಯಲ್ಲಿ ವೈಭವೀಕರಿಸಿದಂತಾಗುತ್ತದೆ. ಭಾರತದಲ್ಲಿ ಸಫಾಯಿ ಕರ್ಮಚಾರಿಗಳಿಗಾಗಿ ಕೆಲಸ ಮಾಡುವ ಜನರು ಹೀರೋಗಳಲ್ಲ. ಬದಲಾಗಿ ಬಲಿಪಶುಗಳು. ಇನ್ನೊಂದು ದತ್ತಾಂಶದ ಪ್ರಕಾರ 2014ರಿಂದ 2016ರವರೆಗಿನ ಅವಧಿಯಲ್ಲಿ ಭಾರತದ 1,327 ಸಫಾಯಿ ಕರ್ಮಚಾರಿಗಳು ಮೃತಪಟ್ಟಿದ್ದಾರೆ. ಅವರನ್ನು ಯಾವುದೇ ಸುರಕ್ಷತಾ ಉಪಕರಣಗಳಿಲ್ಲದೆ ಚರಂಡಿಗಳಿಗೆ/ ಪಾಯಿಖಾನೆ ಗುಂಡಿಗಳಿಗೆ ಇಳಿಸಿದ್ದೇ ಅದಕ್ಕೆ ಕಾರಣ. ಈ ಅಮಾನವೀಯ ವ್ಯವಸ್ಥೆಯನ್ನು ಸಾವು ಮಾತ್ರ ಪ್ರತಿಫಲಿಸುವುದಿಲ್ಲ. ಮನುಷ್ಯರೇ ಮಲವನ್ನು ಹೊತ್ತು ಸಾಗಿಸುವುದು, ಗುಂಡಿಗಳನ್ನು ಸ್ವಚ್ಛಗೊಳಿಸುವುದು ಮನುಷ್ಯನ ಮೂಲಭೂತವಾದ ಘನತೆಯನ್ನೇ ಕುಗ್ಗಿಸುವ ಮತ್ತು ಮನುಷ್ಯನನ್ನು ತೀರಾ ಅವಮಾನಿಸುವ ಕೆಲಸ. ಈ ಕೆಲಸ ವ್ಯಕ್ತಿಯೊಬ್ಬರ ಮಾನವೀಯತೆಯನ್ನೇ ಅವನಿಂದ ಕಿತ್ತು ಎಸೆಯುತ್ತದೆ. ಭಾರತದಲ್ಲಿ ಸಫಾಯಿ ಕರ್ಮಚಾರಿಗಳ ಪಾರಂಪರಿಕ ಜಾತಿಗಳು ಅಸ್ತಿತ್ವದಲ್ಲಿ ಇರುವುದೇ ದೇಶದ ಮೇಲಿರುವ ಒಂದು ಕಪ್ಪುಚುಕ್ಕೆ. ಯಾಕೆಂದರೆ ಭಾರತಕ್ಕಿಂತಲೂ ಹೆಚ್ಚು ಬಡತನದಿಂದ ಕೂಡಿರುವ ತೀರಾ ಬಡ ರಾಷ್ಟ್ರಗಳು ಕೂಡ ಈ ಭಯಾನಕ ಬರ್ಬರ ಪದ್ಧತಿಯನ್ನು ನಿರ್ಮೂಲನ ಮಾಡಿವೆ.
 (ಮುಂದುವರಿಯುವುದು)

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News

ಜಗದಗಲ
ಜಗ ದಗಲ