ಈ ದಿನ

Update: 2019-03-20 18:56 GMT

1349: ಜರ್ಮನಿಯ ಎಫುರ್ಟ್‌ನಲ್ಲಿ ನಡೆದ ಜನಾಂಗೀಯ ಕಲಹದಲ್ಲಿ ಸುಮಾರು 3,000 ಯಹೂದಿಗಳನ್ನು ಹತ್ಯೆಗೈದ ವರದಿಯಾಗಿದೆ.

1935: ಪರ್ಶಿಯಾ ಹೆಸರಿನಿಂದ ಕರೆಯಲಾಗುತ್ತಿದ್ದ ಇರಾನ್ ದೇಶದ ಹೆಸರನ್ನು ಅಧಿಕೃತವಾಗಿ ಇರಾನ್ ಎಂದು ಮರುನಾಮಕರಣ ಮಾಡಲಾಯಿತು.

1965: ಅಮೆರಿಕದ ಮಾನವ ಹಕ್ಕುಗಳ ಹೋರಾಟ ಗಾರ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ನೇತೃತ್ವದಲ್ಲಿ ಸುಮಾರು 3,000 ಪ್ರತಿಭಟನಾಕಾರರು ಅಮೆರಿಕದ ಅಲಬಾಮಾದಿಂದ ಸೆಲ್ಮಾದವರೆಗೆ ರ್ಯಾಲಿ ನಡೆಸಿದರು. ಆಫ್ರಿಕನ್-ಅಮೆರಿಕನ್ ಪ್ರಜೆಗಳ ಹಕ್ಕುಗಳ ದಮನದ ವಿರುದ್ಧ ಈ ಹೋರಾಟ ನಡೆಯಿತು.

1975: ಸುಮಾರು 3,000 ವರ್ಷಗಳ ನಂತರ ಇಥಿಯೋಪಿಯ ದೇಶದಲ್ಲಿ ಏಕಚಕ್ರಾಧಿಪತ್ಯಕ್ಕೆ ಅಂತ್ಯ ಹಾಡಲಾಯಿತು.

1980: ಅಫ್ಘಾನಿಸ್ತಾನ್ ಮೇಲೆ ರಶ್ಯ ನಡೆಸಿದ ದಾಳಿಯನ್ನು ವಿರೋಧಿಸಿ ಮಾಸ್ಕೊದಲ್ಲಿ ನಡೆಯುತ್ತಿದ್ದ 1980ರ ಒಲಿಂಪಿಕ್ಸ್‌ನ್ನು ಅಮೆರಿಕ ಬಹಿಷ್ಕರಿಸಿತು.

1990: ದ.ಆಫ್ರಿಕದ ಭಾಗವಾಗಿದ್ದ ನಮೀಬಿಯ ಸ್ವತಂತ್ರ ದೇಶವಾಯಿತು. ಸ್ಯಾಮ್ ನುಜೊಮಾ ಎಂಬವರು ಆ ದೇಶದ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದರು.

2013: ಪಾಕಿಸ್ತಾನದ ಪೇಶಾವರದಲ್ಲಿ ಕಾರ್ ಬಾಂಬ್ ಸ್ಫೋಟಗೊಂಡು 12 ಜನ ಮೃತಪಟ್ಟು, 30ಕ್ಕಿಂತ ಹೆಚ್ಚು ಜನ ಗಾಯಗೊಂಡರು.

2013: ನೈಜೀರಿಯಾದ ಹಡಗೊಂದು ಗಬಾನ್ ಎಂಬಲ್ಲಿ ನದಿಯಲ್ಲಿ ಮುಳುಗಿದ ಪರಿಣಾಮ 45ಕ್ಕೂ ಹೆಚ್ಚು ಜನ ಮುಳುಗಿ ಸಾವನ್ನಪ್ಪಿದರೆ 60 ಮಂದಿ ನಾಪತ್ತೆಯಾದ ವರದಿಯಾಗಿತ್ತು.

2013: ಯರೋಪಿಯನ್ ಬಾಹ್ಯಾಕಾಶ ಸಂಸ್ಥೆಯು ವಿಶ್ವದ ಉಗಮವು ಸುಮಾರು 13.82 ಬಿಲಿಯನ್ ವರ್ಷಗಳ ಹಿಂದೆ ಆಗಿದೆಯೆಂದು ಸೂಚಿಸುವ ಹೊಸ ಅಂಕಿ ಸಂಖ್ಯೆಯ ವರದಿಯೊಂದನ್ನು ಪ್ರಕಟಿಸಿತು.

1934: ಕೇಂದ್ರದ ಮಾಜಿ ಗೃಹ ಸಚಿವ ಬೂಟಾ ಸಿಂಗ್ ಹುಟ್ಟಿದ ದಿನ.

1937: ಭಾರತದ ಖ್ಯಾತ ಹಾಕಿ ಆಟಗಾರ ಮುಹಮ್ಮದ್ ಜಾಫರ್ ಜನ್ಮದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ