ಮೂರು ಡಬ್ಬಲ್ ಡೆಕ್ಕರ್ ಬಸ್ಸುಗಳ ಉದ್ದದ ಗೊಂಬೆ!
ಮಿಕ್ಕಿ ಮೌಸ್ ಅನ್ನು ನೆನಪಿಗೆ ತರುವ ಗಾಳಿ ತುಂಬಬಹುದಾದ ತೇಲುತ್ತಿರುವ ಬೃಹತ್ ಕಲಾಕೃತಿ ಹಾಂಕಾಂಗ್‌ನ ವಿಕ್ಟೋರಿಯಾ ಹಾರ್ಬರ್‌ಗೆ ಬಂದಿದೆ. ಜನರು ಈ ಕಲಾಕೃತಿಯನ್ನು ಅಚ್ಚರಿಯಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ.
ಈ ಕಲಾಕೃತಿ 37 ಮೀಟರ್ (121 ಅಡಿ) ಉದ್ದದವಿದೆ. ಅಂದರೆ, ಮೂರು ಡಬ್ಬಲ್ ಡೆಕ್ಕರ್ ಬಸ್ಸುಗಳಷ್ಟು ಉದ್ದವಿದೆ. ಇದು ಅಮೆರಿಕದ ಕಲಾವಿದ ಕಾವ್ಸ್ ಅವರ ಸೃಷ್ಟಿ.
ಚಾಂಪಿಯನ್ ಹೆಸರಿನ ಈ ಕಲಾಕೃತಿಯನ್ನು ಟಗ್‌ಬೋಟ್ ಮೂಲಕ ಎಳೆದೊಯ್ಯಲಾಗುತ್ತಿದೆ. ಈ ಕಲಾಕೃತಿ ಬೋರಲು ಮಲಗಿದ ರೀತಿಯಲ್ಲಿ ಬಂದರಿನಲ್ಲಿ ತೇಲುತ್ತಿತ್ತು. ಆನಂತರ ಅದನ್ನು ಹಾಂಕಾಂಗ್‌ನ ಬ್ಯುಸಿ ಸೆಂಟ್ರಲ್ ಡಿಸ್ಟ್ರಿಕ್ಟ್‌ನಲ್ಲಿ ತೇಲುವಂತೆ ಪ್ರದರ್ಶಿಸಲಾಗಿದೆ. ಕಲಾ ಉತ್ಸವದ ಭಾಗವಾಗಿ ಈ ಕಲಾಕೃತಿ ಇಲ್ಲಿ ಈ ತಿಂಗಳ ಅಂತ್ಯದ ವರೆಗೆ ಇರಲಿದೆ.
ಬ್ರೈನ್ ಡೊನ್ನೆಲ್ಲಿ ಎಂಬ ನಿಜ ನಾಮಧೇಯದ ಕಾವ್ಸ್, ಈ ಕಲಾಕೃತಿ ಜನರ ಮನೋಲ್ಲಾಸಕ್ಕೆ ನೆರವಾಗಲಿದೆ ಎಂದು ಹೇಳಿದ್ದಾರೆ.
ಹಾಂಕಾಂಗ್‌ನಂತಹ ಈ ಬ್ಯುಸಿ ನಗರದ ಸಮೀಪವಿರುವ ವಿಕ್ಟೋರಿಯಾ ಹಾರ್ಬರ್‌ನಲ್ಲಿ ಈ ಕಲಾಕೃತಿಯನ್ನು ಇರಿಸುವುದು ಉತ್ತಮ ಎಂದು ನಾನು ಭಾವಿಸಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸ್ಥಳೀಯರು ಹಾಗೂ ಪ್ರವಾಸಿಗಳಲ್ಲಿ ಕೆಲವರು ಕಾವ್ಸ್ ಅವರು ವಿನ್ಯಾಸಗೊಳಿಸಿದ ಟಿ-ಶರ್ಟ್ ಹಾಕಿಕೊಂಡು ಇಲ್ಲಿಗೆ ಆಗಮಿಸುತ್ತಿದ್ದಾರೆ. ಫೋಟೊ ತೆಗೆದುಕೊಳ್ಳುತ್ತಾ ವಿಸ್ಮಯ ವ್ಯಕ್ತಪಡಿಸುತ್ತಿದ್ದಾರೆೆ.
ಈ ಕಲಾಕೃತಿಯನ್ನು 2013ರಲ್ಲಿ ಹಾಂಗ್‌ಕಾಂಗ್‌ನಲ್ಲಿ ಪ್ರದರ್ಶಿಸಲಾಗಿದ್ದ ಬೃಹದಾಕಾರದ ಹಳದಿ ಬಾತುಕೋಳಿಗೆ ಹೋಲಿಸಲಾಗುತ್ತಿದೆ. ‘‘ಹಳದಿ ಬಾತುಕೋಳಿಯೂ ತುಂಬಾ ಆಕರ್ಷಕವಾಗಿತ್ತು. ಈ ಗೊಂಬೆ ಯಾವುದನ್ನು ಹೋಲುತ್ತದೆ ಎಂದು ನನಗೆ ತಿಳಿದಿಲ್ಲ. ಅದು ಅಲ್ಲಿ ಮಲಗಿಕೊಂಡಿದೆ’’ ಎಂದು 67ರ ಹರೆಯದ ವೀಕ್ಷಕ ಫುಂಗ್ ಫೂನ್ ಯುಂಗ್ ಹೇಳುತ್ತಾರೆೆ.
‘‘ಬಹುಶ ಪ್ರಪಂಚದ ಕೆಲವು ನೋಡಬಾರದ ವಿಷಯಗಳನ್ನು ನೋಡಲು ಇಷ್ಟವಿಲ್ಲದಿರುವುದನ್ನು ಸೂಚಿಸುವಂತೆ ಈ ಗೊಂಬೆ ಬೋರಲು ಮಲಗಿರಬಹುದು’’ ಎನ್ನುತ್ತಾಳೆ ಒಬ್ಬಳು ವೀಕ್ಷಕಿ