ಭಾರತದ ಲೋಕಸಭೆ ಮತ್ತು ಮುಸ್ಲಿಮರ ಪ್ರತಿನಿಧಿತ್ವ

Update: 2019-04-08 18:33 GMT

ಭಾಗ-2

ನಮ್ಮ ದೇಶದ ಮುಸ್ಲಿಮರ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಲೋಕಸಭೆಯಲ್ಲಿ ಕನಿಷ್ಠ 70 ಸಂಸದರಿರಬೇಕು ಅಥವಾ ಮುಸ್ಲಿಮರ ಪ್ರತಿನಿಧಿತ್ವದ ಪ್ರಶ್ನೆ ಬಂದಾಗ ಕನಿಷ್ಠ 70 ಮುಸ್ಲಿಂ ಸಂಸದರಿರಬೇಕೆಂದು ವಾದಿಸಲಾಗುತ್ತದೆ. ಇದನ್ನು ರಾಜ್ಯವಾರು ವಿಂಗಡಿಸಲಾಗಿದ್ದು ಈ ಕೆಳಕಂಡ ರಾಜ್ಯಗಳಲ್ಲಿ ಮುಸ್ಲಿಂ ಸಂಸದರ ಸಂಖ್ಯೆಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಹೀಗೆ ವಿವರಿಸಬಹುದು. (ಮೊದಲನೇ ಕೋಷ್ಟಕ ನೋಡಿ)
ನಮ್ಮ ದೇಶದ ಲೋಕ ಸಭೆ ಯಲ್ಲಿ ಇದುವರೆಗೂ ಮುಸ್ಲಿಂ ಸಂಸದರ ಸಂಖ್ಯೆ 50 ದಾಟಿಲ್ಲ. 1980ರ ಲೋಕಸಭೆಯಲ್ಲಿ ಗರಿಷ್ಠ ಸಂಖ್ಯೆ 40 ಆಗಿದ್ದು ಸ್ವಾತಂತ್ರಾನಂತರದ ಚುನಾವಣೆಗಳಲ್ಲಿ ಇದುವರೆಗೂ ಈ ಮ್ಯಾಜಿಕ್ ನಂಬರಾದ 70ನ್ನು ಮುಟ್ಟಲೇ ಇಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಕನಿಷ್ಠ ಅಂದರೆ 23 ಮುಸ್ಲಿಂ ಸಂಸದರು ಆಯ್ಕೆಯಾಗಿದ್ದಾರೆ. ಪ್ರಮುಖ 18 ರಾಜ್ಯಗಳ ಮುಸ್ಲಿಂ ಪ್ರತಿನಿಧಿತ್ವವನ್ನು ಅವಲೋಕಿಸಿದರೆ; ಕರ್ನಾಟಕವೂ ಸೇರಿಕೊಂಡಂತೆ 10 ರಾಜ್ಯಗಳಲ್ಲಿ ಪ್ರತಿನಿಧಿತ್ವದ ಕೊರತೆ ಶೇ. 100 ಅಗಿದೆ ಅಂದರೆ ಈ ಹತ್ತು ರಾಜ್ಯಗಳಿಂದ ಮುಸ್ಲಿಮರ ಪ್ರತಿನಿಧಿತ್ವ ಶೂನ್ಯ. 5 ರಾಜ್ಯಗಳಲ್ಲಿ ಕೊರತೆಯ ಪ್ರಮಾಣ ಶೇ. 25-50ರ ವರೆಗಿದೆ.


ಮಾಹಿತಿಗಳ ಪ್ರಕಾರ ನಮ್ಮ ದೇಶದ ವಿವಿಧ ರಾಜ್ಯಗಳಿಗೆ ಸೇರಿದ 121 ಜಿಲ್ಲೆಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಮತ್ತು ಬೀದರ್ ಜಿಲ್ಲೆಗಳಲ್ಲಿ ಇವರ ಪ್ರಮಾಣ ಹೆಚ್ಚಿದೆ. ದೇಶದ ವಿವಿಧ ಜಿಲ್ಲೆಗಳಲ್ಲಿ ಹರಡಿರುವ ಧಾರ್ಮಿಕ ಅಲ್ಪಸಂಖ್ಯಾತ ಜನಸಂಖ್ಯೆ ಹೆಚ್ಚಿರುವ 90 ಜಿಲ್ಲೆಗಳನ್ನು ಗುರುತಿಸಲಾಗಿದ್ದು. ರಾಷ್ಟ್ರೀಯ ಸರಾಸರಿಗಿಂತ ಸಾಮಾಜಿಕ-ಆರ್ಥಿಕ ಮತ್ತು ಮೂಲ ಭೂತ ಸೌಲಭ್ಯಗಳಲ್ಲಿ ಹಿಂದುಳಿದಿರುವ ಜಿಲ್ಲೆಗಳನ್ನು ‘ಎ’ ವಿಭಾಗ ಎಂದೂ ಮತ್ತು ಮೇಲಿನ ಅಂಶಗಳಲ್ಲಿ ಯಾವುದಾದರೂ ಒಂದು ಅಂಶದಲ್ಲಿ ಹಿಂದುಳಿದಿರುವ ಜಿಲ್ಲೆಗಳನ್ನು ‘ಬಿ’ ಎಂದು ವಿಭಾಗಿಸಲಾಗಿದೆ. ಅವುಗಳ ವಿವರ ಹೀಗಿದೆ:(ಎರಡನೇ ಕೋಷ್ಟಕ ನೋಡಿ)


ಮೊದಲನೆಯದಾಗಿ ಈ ಎಲ್ಲಾ ಜಿಲ್ಲೆಗಳು ಅತ್ಯಂತ ಹಿಂದು ಳಿದ ಮತ್ತು ಹಿಂದುಳಿದ ಜಿಲ್ಲೆಗಳು ಹಾಗೆಯೇ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ದಲಿತರು ಹೆಚ್ಚಿರುವ ಜಿಲ್ಲೆಗಳು; ಉದಾಹರಣೆಗೆ ಕರ್ನಾಟಕದ ಬೀದರ್ ಮತ್ತು ಕಲಬುರಗಿಯನ್ನೇ ತೆಗೆದುಕೊಳ್ಳಬಹುದು. ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಕೆಲವು ಲೋಕಸಭಾ ಕ್ಷೇತ್ರಗಳು ಮೀಸಲು ಕ್ಷೇತ್ರಗಳಾಗಿದ್ದು ಸಾಮಾನ್ಯ ಅಥವಾ ಅಲ್ಪಸಂಖ್ಯಾತ ಸಮುದಾಯದ ಜನ ಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ. ಈ 90 ಜಿಲ್ಲೆಗಳು ಹಿಂದುಳಿ ಯಲು ಕಾರಣಗಳೇನು? ಅವರನ್ನು ಪ್ರತಿನಿಧಿಸುತ್ತಿರುವ ಸಂಸದರೇ ಅಥವಾ ಸರಕಾರಗಳೇ? ಹಾಗಾದರೆ ಈ ಜಿಲ್ಲೆಗಳ ಲೋಕಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನ ಸ್ಪರ್ಧಿಸಿ ಗೆದ್ದರೆ ಅಭಿವೃದ್ಧಿಯಾಗುತ್ತದೆಯೇ? ಅಲ್ಪಸಂಖ್ಯಾತ ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡಲು ಸಾಧ್ಯವೇ? ಉತ್ತರವನ್ನು ಎರಡೂ ರೀತಿಯಲ್ಲಿಯೂ ಕೊಡಬಹುದು.

ಮುಂದುವರಿಯುವುದು....

Writer - ಎಸ್. ಬಾಬುಖಾನ್

contributor

Editor - ಎಸ್. ಬಾಬುಖಾನ್

contributor

Similar News

ಜಗದಗಲ
ಜಗ ದಗಲ