ಕಾಂಗ್ರೆಸ್‌ನೊಂದಿಗೆ ಮೈತ್ರಿಯ ಯಾವುದೇ ಭರವಸೆ ಇಲ್ಲ: ಸಿಸೋಡಿಯಾ

Update: 2019-04-20 15:53 GMT

ಹೊಸದಿಲ್ಲಿ, ಎ. 20: ಮೈತ್ರಿ ಮಾತುಕತೆಯಲ್ಲಿ ಕಾಂಗ್ರೆಸ್ ಆಟ ಆಡುತ್ತಿದೆ ಎಂದು ಆಪ್ ಶನಿವಾರ ಆರೋಪಿಸಿದೆ. ಪಂಜಾಬ್‌ನಲ್ಲಿ ಯಾವುದೇ ಕ್ಷೇತ್ರ ನೀಡದೆ ಅನ್ಯಾಯ ಎಸಗುತ್ತಿದೆ ಹಾಗೂ ದಿಲ್ಲಿಯಲ್ಲಿ ಇನ್ನಷ್ಟು ಕ್ಷೇತ್ರಗಳನ್ನು ಕೇಳುತ್ತಿದೆ ಎಂದು ಆಪ್ ಹೇಳಿದೆ.

ದಿಲ್ಲಿಯಲ್ಲಿ ಕಾಂಗ್ರೆಸ್‌ಗೆ ಒಂದೇ ಒಂದು ಸ್ಥಾನ ಕೂಡ ಇಲ್ಲ. ಆದರೆ, ನಮ್ಮಿಂದ ಮೂರು ಕ್ಷೇತ್ರಗಳನ್ನು ಕೇಳುತ್ತಿದೆ. ಪಂಜಾಬ್‌ನಲ್ಲಿ ನಮಗೆ 4 ಸಂಸದರು ಹಾಗೂ 20 ಶಾಸಕರು ಇದ್ದಾರೆ. ಆದರೆ, ಅಲ್ಲಿಂದ ಸ್ಪರ್ಧಿಸಲು ಇದುವರೆಗೆ ಯಾವುದೇ ಕ್ಷೇತ್ರಗಳನ್ನು ನಮಗೆ ನೀಡಿಲ್ಲ ಎಂದು ಆಪ್ ನಾಯಕ ಹಾಗೂ ದಿಲ್ಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ದಿಲ್ಲಿಯಲ್ಲಿ ಕಾಂಗ್ರೆಸ್ ಸಂಸದರು ಹಾಗೂ ಶಾಸಕರನ್ನು ಒಳಗೊಳ್ಳದೇ ಇದ್ದರೂ ಹಾಗೂ ಕೇವಲ ಶೇ. 10 ಮತಗಳನ್ನು ಮಾತ್ರ ಪಡೆದಿದ್ದರೂ ಹೊಸದಿಲ್ಲಿಯಲ್ಲಿ ಮೂರು ಸ್ಥಾನಗಳನ್ನು ನೀಡಲು ಆಪ್ ಒಪ್ಪಿಕೊಂಡಿತ್ತು. ಆದರೆ, ಹರ್ಯಾಣದಲ್ಲಿ ಆಪ್, ಕಾಂಗ್ರೆಸ್ ಹಾಗೂ ಜನ ನಾಯಕ ಜನತಾ ಪಾರ್ಟಿಯೊಂದಿಗೆ ಸೇರಿ ಒಟ್ಟಾಗಿ ಸ್ಪರ್ಧಿಸಲು ಷರತ್ತು ವಿಧಿಸಿತ್ತು ಎಂದು ಅವರು ಹೇಳಿದರು.

 ಕಾಂಗ್ರೆಸ್ ನಮ್ಮೊಂದಿಗೆ ಆಟವಾಡುತ್ತಿದೆ ಹಾಗೂ ಎರಡೂ ರಾಜ್ಯಗಳಲ್ಲಿ ಮೈತ್ರಿ ಬಗ್ಗೆ ಗೊಂದಲವನ್ನು ಮುಂದುವರಿಸಿದೆ. ಆದರೆ, ಈಗ ಕಾಲ ಕೂಡಿ ಬಂದಿದೆ. ಆದುದರಿಂದ ಸ್ಥಾನ ಹಂಚಿಕೆ ಕುರಿತು ಇನ್ನೆಂದಿಗೂ ಮಾತನಾಡಲಾರೆವು ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News